Monday, October 5, 2020

ಪ್ರಧಾನಿ ಭೇಟಿಗಾಗಿ ಜಗನ್ ದೌಡು, ಎನ್ ಡಿಎಗೆ ವೈಎಸ್‌ಆರ್ ಕಾಂಗ್ರೆಸ್ ?

 ಪ್ರಧಾನಿ ಭೇಟಿಗಾಗಿ ಜಗನ್ ದೌಡು, ಎನ್ ಡಿಎಗೆ ವೈಎಸ್ಆರ್ ಕಾಂಗ್ರೆಸ್ ?

ಹೈದರಾಬಾದ್: ವೈಎಸ್ಆರ್ ಕಾಂಗ್ರೆಸ್ ಪಕ್ಷದ ಮುಖ್ಯಸ್ಥ ಮತ್ತು ಆಂಧ್ರಪ್ರದೇಶದ ಮುಖ್ಯಮಂತ್ರಿ ವೈ.ಎಸ್.ಜಗನ್ ಮೋಹನ್ ರೆಡ್ಡಿ ಅವರು 2020 ಅಕ್ಟೋಬರ್ 06ರ ಮಂಗಳವಾರ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿ ಮಾಡಲು ಸಜ್ಜಾಗಿದ್ದು, ಆಂಧ್ರಪ್ರದೇಶದ ಪಕ್ಷವು ಭಾರತೀಯ ಜನತಾ ಪಕ್ಷ ನೇತೃತ್ವದ ರಾಷ್ಟ್ರೀಯ ಪ್ರಜಾಪ್ರಭುತ್ವ ಮೈತ್ರಿಕೂಟವನ್ನು ಸೇರಬಹುದು ಎಂಬ ಊಹಾಪೋಹವನ್ನು ಹುಟ್ಟುಹಾಕಿದೆ.

ಕಳೆದ ವಾರವಷ್ಟೇ, ಎನ್ಡಿಎಯ ಹಳೆಯ ಮಿತ್ರ ಶಿರೋಮಣಿ ಅಕಾಲಿ ದಳ, ವಿವಾದಾತ್ಮಕ ಕೃಷಿ ಮಸೂದೆಗಳಿಗೆ ವಿರೋಧ ವ್ಯಕ್ತಪಡಿಸಿ ಮೈತ್ರಿಕೂಟದಿಂದ ಹೊರಬಂದಿತ್ತು. ಕಳೆದ ವರ್ಷ, ಮಹಾರಾಷ್ಟ್ರದಲ್ಲಿ ಮುಖ್ಯಮಂತ್ರಿ ಸ್ಥಾನದ ವಿವಾದದ ಹಿನ್ನೆಲೆಯಲ್ಲಿ ಶಿವಸೇನೆ ಮೈತ್ರಿಕೂಟವನ್ನು ತ್ಯಜಿಸಿತ್ತು.

ಜಗನ್ ರೆಡ್ಡಿ ಅವರು ವೈಎಸ್ಆರ್ ಕಾಂಗ್ರೆಸ್ ಎನ್ಡಿಎಗೆ ಸಂಜೆ ನವದೆಹಲಿಗೆ ತೆರಳಿದ್ದು, ಮಂಗಳವಾರ ಬೆಳಿಗ್ಗೆ ೧೦.೩೦ ಕ್ಕೆ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿ ಮಾಡಲಿದ್ದಾರೆ. "ಪ್ರಧಾನಿಯವರು ವೈಎಸ್ಆರ್ಸಿಪಿಯನ್ನು ಎನ್ಡಿಎಗೆ ಆಹ್ವಾನಿಸುವ ಸಾಧ್ಯತೆಯಿದೆ ಎಂದು ಪಕ್ಷದ ನಾಯಕರೊಬ್ಬರು ಹೇಳಿದರು.

ಕಳೆದ ಎರಡು ವಾರಗಳಲ್ಲಿ ಆಂಧ್ರಪ್ರದೇಶದ ಮುಖ್ಯಮಂತ್ರಿಯ ಎರಡನೇ ಭೇಟಿ ಇದು. ಸೆ.೨೨ರಂದು ಅವರು ದೆಹಲಿಗೆ ಎರಡು ದಿನಗಳ ಭೇಟಿ ನೀಡಿ, ಗೃಹ ಸಚಿವ ಅಮಿತ್ ಶಾ ಅವರ ಜೊತೆಗೆ ಮಾತನಾಡಿದ್ದರು. ಮಾತುಕತೆ ಪಕ್ಷವನ್ನು ಎನ್ ಡಿಎಗೆ ಸೇರ್ಪಡೆ ಮಾಡುವುದಕ್ಕೆ ಸಂಬಂಧಿಸಿದ್ದಾಗಿತ್ತು ಎಂಬ ಊಹಾಪೋಹಗಳಿದ್ದವು. ಆದರೆ, ಆಗ ಅವರಿಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಭೇಟಿಗೆ ಅವಕಾಶ ಲಭಿಸಿರಲಿಲ್ಲ.

ಬಿಜೆಪಿಯು ವೈಎಸ್ಆರ್ಸಿಪಿಗೆ ಸಂಪುಟದರ್ಜೆ ಮತ್ತು ರಾಜ್ಯ ಸಚಿವ (ಸ್ವತಂತ್ರ) ಸ್ಥಾನ ನೀಡುವ ಕೊಡುಗೆ ಮುಂದಿಟ್ಟಿದ್ದು, ಪ್ರಧಾನಿ ಮೋದಿ ಅವರೊಂದಿಗೆ ವಿಶೇಷ ಮಾತುಕತೆಗಾಗಿ ದೆಹಲಿಗೆ ಧಾವಿಸುವಂತೆ ಜಗನ್ ಅವರನ್ನು ಆಹ್ವಾನಿಸಿದ್ದಾರೆ ಎಂದು ಚುನಾವಣಾ ಸಮೀಕ್ಷೆಯಲ್ಲಿ ಭಾಗಿಯಾಗಿರುವ ಡೇಟಾ-ಅನಾಲಿಟಿಕ್ಸ್ ಸಂಸ್ಥೆಯಾದ ವಿಡಿಪಿ ಅಸೋಸಿಯೇಟ್ಸ್ ಸೋಮವಾರ ಟ್ವೀಟ್ ಮಾಡಿದೆ.

ಆದರೆ, ಮೇಲೆ ಉಲ್ಲೇಖಿಸಿದ ವೈಎಸ್ಆರ್ಸಿಪಿ ಮುಖಂಡರು ಪಿಎಂ ಮೋದಿ ಅವರು ಸರ್ಕಾರಕ್ಕೆ ಒಂದು ಸಂಪುಟ ದರ್ಜೆ ಮತ್ತು ಒಂದು ರಾಜ್ಯ ಸಚಿವ ಸ್ಥಾನವನ್ನು ಪಕ್ಷಕ್ಕೆ ನೀಡಬಹುದು ಎಂದು ಹೇಳಿದ್ದಾರೆ.

೨೨ ಸಂಸದ ಸ್ಥಾನಗಳನ್ನು ಹೊಂದಿರುವ ವೈಎಸ್ಆರ್ಸಿಪಿ ನಾಲ್ಕನೇ ಅತಿದೊಡ್ಡ ರಾಷ್ಟ್ರೀಯ ಪಕ್ಷವಾಗಿದೆ. ಇದು ರಾಜ್ಯಸಭೆಯಲ್ಲಿ ಆರು ಸಂಸದರನ್ನು ಸಹ ಹೊಂದಿದೆ. ಮೇ ೨೦೧೯ ರಲ್ಲಿ ಆಂಧ್ರಪ್ರದೇಶದಲ್ಲಿ ಅಧಿಕಾರಕ್ಕೆ ಬಂದ ಮೊದಲ ದಿನದಿಂದ ಜಗನ್ ಎನ್ಡಿಎ ಸರ್ಕಾರದೊಂದಿಗೆ ಸ್ನೇಹ ಸಂಬಂಧವನ್ನು ಉಳಿಸಿಕೊಂಡಿದ್ದಾರೆ.

ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಮೋದಿ ಸರ್ಕಾರದ ಪ್ರತಿಯೊಂದು ನಿರ್ಧಾರಕ್ಕೂ ವೈಎಸ್ಆರ್ಸಿಪಿ ಬೆಂಬಲ ನೀಡುತ್ತಿದೆ. ಎನ್ಡಿಎಯ ದೀರ್ಘಕಾಲದ ಮಿತ್ರ ಅಕಾಲಿ ದಳವು ಕೃಷಿ ಮಸೂದೆಗಳನ್ನು ಬಲವಾಗಿ ವಿರೋಧಿಸಿದರೆ, ವೈಎಸ್ಆರ್ಸಿಪಿ ಅದರ ಪರವಾಗಿ ಮತ ಚಲಾಯಿಸಿತು. ಕಳೆದ ವಾರ ರಾಜ್ಯಸಭೆಯ ಉಪಾಧ್ಯಕ್ಷರಾಗಿ ಹರಿವಂಶ್ ನಾರಾಯಣ್ ಸಿಂಗ್ ಅವರನ್ನು ಆಯ್ಕೆ ಮಾಡಲು ವೈಎಸ್ಆರ್ಸಿಪಿ ಸಂಸದರು ಬಿಜೆಪಿಗೆ ಬೆಂಬಲ ನೀಡಿದರು.

ಕೇಂದ್ರದ ಜಿಎಸ್ಟಿ ಪರಿಹಾರ ಪಾವತಿಯನ್ನು ಸರಿದೂಗಿಸಲು ಹೆಚ್ಚುವರಿ ಸಾಲ ಪಡೆಯಲು ಮೋದಿ ಸರ್ಕಾರ ನೀಡಿದ ಆಯ್ಕೆಯನ್ನು ಜಗನ್ ಸರ್ಕಾರ ಒಪ್ಪಿಕೊಂಡಿತು, ಆದರೆ ತೆಲಂಗಾಣ ಸೇರಿದಂತೆ ೧೨ ಕ್ಕೂ ಹೆಚ್ಚು ರಾಜ್ಯಗಳು ಇದನ್ನು ವಿರೋಧಿಸಿವೆ.

ಅತ್ಮ ನಿರ್ಭರ್ ಭಾರತ ಪ್ಯಾಕೇಜಿನ ಭಾಗವಾಗಿ ವಿದ್ಯುತ್ ಕ್ಷೇತ್ರದ ಸುಧಾರಣೆಗಳನ್ನು ಜಾರಿಗೆ ತರುವ ಮೋದಿ ಸರ್ಕಾರದ ಷರತ್ತನ್ನು ಜಗನ್ ಒಪ್ಪಿಕೊಂಡರು, ಇದರಲ್ಲಿ ಕೃಷಿ ಕ್ಷೇತ್ರಕ್ಕೆ ಮೀಟರ್ ನಿಗದಿಪಡಿಸುವುದು ಮತ್ತು ಅದರ ಸಾಲ ಮಿತಿಯನ್ನು ಹೆಚ್ಚಿಸುವುದು ಸೇರಿದೆ.

"ವೈಎಸ್ಆರ್ಸಿಪಿಯು ಎನ್ಡಿಎಗೆ  ಸೇರ್ಪಡೆಗೊಂಡರೆ, ಅದು ಜಗನ್ ಮತ್ತು ಬಿಜೆಪಿಗೆ ಗೆಲುವೇ-ಗೆಲುವಿನ ಸನ್ನಿವೇಶವಾಗುತ್ತದೆ ಎಂದು ವಿಶಾಖಪಟ್ಟಣಂ ರಾಜಕೀಯ ವಿಶ್ಲೇಷಕ ಮಲ್ಲು ರಾಜೇಶ್ ಹೇಳುತ್ತಾರೆ.

ಶಿವಸೇನೆ ಮತ್ತು ಅಕಾಲಿ ದಳವನ್ನು ತ್ಯಜಿಸಿದ ನಂತರ ಬಿಜೆಪಿ ಹೊಸ ರಾಜಕೀಯ ಮಿತ್ರಪಕ್ಷಗಳನ್ನು  ಹುಡುಕುತ್ತಿದೆ ಮತ್ತು ವೈಎಸ್ಆರ್ಸಿಪಿ ನಿರ್ಣಾಯಕ ಮಸೂದೆಗಳನ್ನು ಅಂಗೀಕರಿಸುವಲ್ಲಿ ವಿಶೇಷವಾಗಿ ರಾಜ್ಯಸಭೆಯಲ್ಲಿ ಸೂಕ್ತ ಬೆಂಬಲ ನೀಡಬಹುದು. ಮತ್ತೊಂದೆಡೆ, ರಾಜ್ಯದ ಆರ್ಥಿಕ ಸ್ಥಿತಿಯನ್ನು ಉಳಿಸಿಕೊಳ್ಳಲು ವೈಎಸ್ಆರ್ಸಿಪಿಗೆ ಕೇಂದ್ರದಲ್ಲಿ ಮೋದಿ ಸರ್ಕಾರದ ಬೆಂಬಲ ಬೇಕಾಗಿದೆ.

"ಇದೇ ಸಮಯದಲ್ಲಿ, ಜಗನ್ ಇನ್ನೂ ಸಿಬಿಐ ಪ್ರಕರಣ ಒಂದನ್ನು ಎದುರಿಸುತ್ತಿದ್ದಾರೆ, ಆದರೆ ಅವರ ಸಂಬಂಧಿ ಮೇಲೆ ಸಿಬಿಐ ನಿಗಾ ಇದೆ. ಅವರ ಚಿಕ್ಕಪ್ಪ ವೈ.ಎಸ್. ವಿವೇಕಾನಂದ ಕೊಲೆಗೆ ಸಂಬಂಧಿಸಿದಂತೆ ಸಿಬಿಐ ಕಣ್ಣಿದೆ. ಅಮರಾವತಿಯಲ್ಲಿ ಚಂದ್ರಬಾಬು ನಾಯ್ಡು ಸಂಬಂಧಿತ ನಡೆದ ಭೂ ಹಗರಣವನ್ನು ಬಗ್ಗೆ ಸಿಬಿಐ ತನಿಖೆಗೆ ಒಪ್ಪಿಸಲು ಜಗನ್ ಉತ್ಸುಕರಾಗಿದ್ದಾರೆ. ಹೀಗಾಗಿ ಎನ್ಡಿಎಗೆ ಸೇರ್ಪಡೆಗೊಳ್ಳುವುದರಿಂದ ಅವರಿಗೆ ಅನುಕೂಲವಾಗುತ್ತದೆ ಎಂದು ರಾಜೇಶ್ ಹೇಳಿದರು.

ಕಳೆದ ತಿಂಗಳು ಸಂದರ್ಶನ ಒಂದರಲ್ಲಿ ಜಗನ್ ತಮ್ಮ ಪಕ್ಷವು ರಾಜ್ಯದ ಹಿತಾಸಕ್ತಿಗಳನ್ನು ಎಲ್ಲಕ್ಕಿಂತ ಹೆಚ್ಚಾಗಿ ಪರಿಗಣಿಸುತ್ತದೆ ಎಂದು ಸ್ಪಷ್ಟಪಡಿಸಿದ್ದರು.

"ನಮ್ಮ ಬೆಂಬಲವು ಸಮಸ್ಯೆಯನ್ನು ಆಧರಿಸಿರುತ್ತದೆ ಮತ್ತು ಪ್ರತಿಯೊಂದು ವಿಷಯದಲ್ಲೂ ನಮ್ಮ ರಾಜ್ಯದ ಸುಧಾರಣೆಯನ್ನು ಒಳಗೊಂಡಿರುತ್ತದೆ" ಎಂದು ಅವರು ಹೇಳಿದರು.

No comments:

Advertisement