ಕಮಲನಾಥ್ ’ತಾರಾ’ಪ್ರಚಾರಕ ಸ್ಥಾನ ರದ್ದು, ವಿಜಯವರ್ಗೀಯಗೆ ತರಾಟೆ
ನವದೆಹಲಿ: ಮಾದರಿ ಚುನಾವಣಾ ನೀತಿ ಸಂಹಿತೆಯನ್ನು ಉಲ್ಲಂಘಿಸಿದ್ದಕ್ಕಾಗಿ ಮಧ್ಯಪ್ರದೇಶದ ಕಾಂಗ್ರೆಸ್ ನಾಯಕ ಮಾಜಿ ಮುಖ್ಯಮಂತ್ರಿ ಕಮಲನಾಥ್ ಅವರ ’ತಾರಾ ಪ್ರಚಾರಕ’ ಸ್ಥಾಮಾನವನ್ನು 2020 ಅಕ್ಟೋಬರ್ 30ರ ಶುಕ್ರವಾರ ರದ್ದು ಪಡಿಸಿದ ಚುನಾವಣಾ ಆಯೋಗವು, ಕಮಲನಾಥ್ ವಿರುದ್ಧ ’ಚುನ್ನುಮುನ್ನು’ ಪದ ಬಳಸಿದ್ದಕ್ಕಾಗಿ ಬಿಜೆಪಿ ನಾಯಕ ಕೈಲಾಶ್ ವಿಜಯವರ್ಗೀಯ ಅವರನ್ನು ತರಾಟೆಗೆ ತೆಗೆದುಕೊಂಡಿತು.
ಮಧ್ಯಪ್ರದೇಶದ ಸಚಿವೆ ಹಾಗೂ ಮಹಿಳಾ ಅಭ್ಯರ್ಥಿ ವಿರುದ್ಧ ‘ಐಟಂ’ ಪದವನ್ನು ಬಳಸಿದ್ದಕ್ಕಾಗಿ ಆಯೋಗವು ಕಮಲನಾಥ್ ವಿರುದ್ಧ ವಾಗ್ದಾಳಿ ನಡೆಸಿ, ಮಹಿಳೆಯ ವಿರುದ್ಧ ಇಂತಹ ಪದದ ಬಳಕೆಯು ಆಯೋಗವು ಹೊರಡಿಸಿರುವ ನೀತಿ ಸಂಹಿತೆಯ ಉಲ್ಲಂಘನೆಯಾಗಿದೆ ಎಂದು ಹೇಳಿತು.
ಪದ ಬಳಕೆ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತ ಪಡಿಸಿದ ಆಯೋಗ, ರಾಜಕೀಯ ಪಕ್ಷದ ನಾಯಕರಾಗಿದ್ದರು, ನಾಥ್ ಅವರು ನೀತಿ ಸಂಹಿತೆಯ ನಿಬಂಧನೆಗಳನ್ನು ಪದೇ ಪದೇ ಉಲ್ಲಂಘಿಸುತ್ತಿದ್ದಾರೆ. ಜೊತೆಗೇ ನೈತಿಕ ಮತ್ತು ಘನತೆಯುಕ್ತ ನಡವಳಿಕೆಯನ್ನು ಉಲ್ಲಂಘಿಸುತ್ತಿದ್ದಾರೆ ಎಂದು ಹೇಳಿತು.
ರಾಜ್ಯದ ಹಾಲಿ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ವಿರುದ್ಧ ಕಾಂಗ್ರೆಸ್ ಮುಖಂಡರು ಎಲ್ಲಿ ಮಾತನಾಡಿದ್ದಾರೆ ಎಂಬುದನ್ನು ಗಮನದಲ್ಲಿಟ್ಟುಕೊಂಡು ಆಯೋಗದ ವರದಿಯು ಮಾದರಿ ನೀತಿ ಸಂಹಿತೆಯ ಉಲ್ಲಂಘನೆಯನ್ನು ಖಚಿತಪಡಿಸಿತು.
ಶುಕ್ರವಾರದಿಂದ ಕಮಲನಾಥ್ ಅವರು ಯಾವುದೇ ಪ್ರಚಾರ ಅಭಿಯಾನವನ್ನು ನಡೆಸಿದರೆ ಅದರ ಸಂಪೂರ್ಣ ಖರ್ಚುವೆಚ್ಚವನ್ನು ಆ ಕ್ಷೇತ್ರದ ಅಭ್ಯರ್ಥಿಯ ತಲೆಗೆ ಕಟ್ಟಲಾಗುತ್ತದೆ ಎಂದು ಚುನಾವಣಾ ಆಯೋಗದ ಆದೇಶ ಹೇಳಿದೆ.
ಬಿಜೆಪಿಗೆ ಎಚ್ಚರಿಕೆ
ಇದೇ ವೇಳೆಯಲ್ಲಿ ಕಾಂಗ್ರೆಸ್ ನಾಯಕರಾದ ದಿಗ್ವಿಜಯ್ ಸಿಂಗ್ ಮತ್ತು ಕಮಲನಾಥ್ ವಿರುದ್ಧ ಬಿಜೆಪಿಯ ಕೈಲಾಶ್ ವಿಜಯವರ್ಗೀಯ ಅವರು ನೀಡಿರುವ ’ಚುನ್ನ-ಮುನ್ನು’ ಟೀಕೆಯನ್ನು ಕೂಡಾ ಗಂಭೀರವಾಗಿ ಪರಿಗಣಿಸಿದ ಚುನಾವಣಾ ಆಯೋಗ ಇದು ನೀತಿ ಸಂಹಿತೆಯ ಉಲ್ಲಂಘನೆಯಾಗುತ್ತದೆ ಎಂದು ಬಿಜೆಪಿಗೆ ಹೇಳಿದೆ.
ಮಾದರಿ ನೀತಿ ಸಂಹಿತೆ ಜಾರಿಯಲ್ಲಿ ಇರುವಾಗ ಬಳಸಿರುವ ಈ ಪದ ಮತ್ತು ಸಾರ್ವಜನಿಕವಾಗಿ ಇಂತಹ ಬೇರೆ ಯಾವುದೇ ಪದ ಬಳಕೆ ಮಾಡುವುದು ಸಂಹಿತೆಯ ಉಲ್ಲಂಘನೆಯಾಗುತ್ತದೆ ಎಂದು ಆಯೋಗ ಬಿಜೆಪಿಯ ಹಿರಿಯ ನಾಯಕರಿಗೆ ತಿಳಿಸಿದೆ.
ನೋಟಿಸ್ ಪ್ರಕಾರ, ಇಂದೋರಿನ ಸ್ಯಾನ್ವೆನಿನ್ನಲ್ಲಿ ಅಕ್ಟೋಬರ್ ೧೪ ರಂದು ನಡೆದ ಚುನಾವಣಾ ಸಭೆಯಲ್ಲಿ ಕಾಂಗ್ರೆಸ್ಸಿನ ಉಭಯ ನಾಯಕರ ವಿರುದ್ಧ ನೀಡಿದ ಹೇಳಿಕೆಯು ಹೇಳಿಕೆ ಮಾದರಿ ಸಂಹಿತೆಯ ನಿಬಂಧನೆಗಳನ್ನು ಉಲ್ಲಂಘಿಸಿರುವುದು ಕಂಡುಬಂದಿದೆ. ಬಿಜೆಪಿ ನಾಯಕ ಅವರನ್ನು ಗದ್ದಾರ್ ಅಥವಾ ದೇಶದ್ರೋಹಿ ಎಂದು ಕೂಡ ಕರೆದಿದ್ದರು ಎಂದು ಹೇಳಲಾಗಿತ್ತು.
ನವೆಂಬರ್ ೩ ರಂದು ಮಧ್ಯಪ್ರದೇಶ ವಿಧಾನಸಭೆಯ ೨೮ ಸ್ಥಾನಗಳಿಗೆ ಉಪಚುನಾವಣೆ ನಡೆಯಲಿದ್ದು, ಇದಕ್ಕಾಗಿ ಪ್ರಚಾರ ನಡೆಯುತ್ತಿದೆ. ತಮ್ಮ ಪ್ರತಿಕ್ರಿಯೆಯಲ್ಲಿ, ವಿಜಯವರ್ಗೀಯ ಅವರು ನೋಟಿಸಿನಲ್ಲಿ ಉಲ್ಲೇಖಿಸಿರುವ ಹೇಳಿಕೆಗಳು ಅದರ ಸಂದರ್ಭದ ಸಂಪೂರ್ಣ ತಪ್ಪು ತಿಳುವಳಿಕೆಯಾಗಿದೆ ಎಂದು ಉತ್ತರಿಸಿದ್ದರು.
ಚುನಾವಣೆಯ ಹಾದಿಯನ್ನು ಬದಲಾಯಿಸಲು ಕಾಂಗ್ರೆಸ್ ಪಕ್ಷದ ಚುನಾವಣಾ ಚಾಲಿತ ನಿರೂಪಣೆಯಂತೆ ಈ ದೂರು ನೀಡಲಾಗಿದೆ. ಚುನಾವಣಾ ಆಯೋಗದ ನಿರ್ದೇಶನಗಳು ಮತ್ತು ಮಾದರಿ ನೀತಿ ಸಂಹಿತೆಯ ನಿಬಂಧನೆಗಳನ್ನು ಪಾಲಿಸುವುದು ಅವರಿಗೆ ಮಾತ್ರವಲ್ಲದೆ ಬಿಜೆಪಿಯ ಪ್ರತಿಯೊಬ್ಬ ಪಕ್ಷದ ಕಾರ್ಯಕರ್ತರಿಗೂ ಅತ್ಯುನ್ನತವಾದುದು" ಎಂದು ಬಿಜೆಪಿ ಮುಖಂಡರು ಹೇಳಿದ್ದರು.
ಆಯೋಗವು ಈ ವಿಷಯವನ್ನು ಎಚ್ಚರಿಕೆಯಿಂದ ಪರಿಗಣಿಸಿದೆ ಮತ್ತು ರಾಜಕೀಯ ಪಕ್ಷಗಳು ಮತ್ತು ಅಭ್ಯರ್ಥಿಗಳ ಮಾರ್ಗದರ್ಶನಕ್ಕಾಗಿ ಸಾಮಾನ್ಯ ನಡವಳಿಕೆ ಮಾದರಿ ನೀತಿ ಸಂಹಿತೆಯ ಭಾಗ ೧ರ ಪ್ಯಾರಾ (೨) ನ್ನು ಕೈಲಾಶ್ ವಿಜಯವರ್ಗೀಯ ಉಲ್ಲಂಘಿಸಿದ್ದಾರೆ ಎಂದು ಪರಿಗಣಿಸಲಾಗಿದೆ ಎಂದು ಆದೇಶ ತಿಳಿಸಿದೆ.
ಆಯೋಗವು ವಿಜಯವರ್ಗೀಯ ಅವರಿಗೆ "ಸಾರ್ವಜನಿಕ ಮಾತುಗಳನ್ನು ಹೇಳುವಾಗ ಅವರು ಮಾದರಿ ನೀತಿ ಸಂಹಿತೆಯ ಅವಧಿಯಲ್ಲಿ ಅಂತಹ ಯಾವುದೇ ಪದ ಅಥವಾ ಹೇಳಿಕೆಯನ್ನು ಬಳಸಬಾರದು’ ಎಂದು ಸಲಹೆ ಮಾಡಿದೆ.
ಮಾದರಿ ನೀತಿ ಸಂಹಿತೆ ಹಲವಾರು ದಶಕಗಳಿಂದ ವಿಕಸನಗೊಂಡಿದ್ದು, ಚುನಾವಣೆಗೆ ಮುನ್ನ ಪ್ರಚಾರದ ಸಮಯದಲ್ಲಿ ಸಮಾನ ಮಟ್ಟದ ಆಟದ ಮೈದಾನವನ್ನು ಕಾಪಾಡಿಕೊಳ್ಳಲು ಮತ್ತು ನೈತಿಕ ಮತ್ತು ಘನತೆಯ ನಡವಳಿಕೆಯನ್ನು ರಕ್ಷಿಸಿಕೊಳ್ಳಲು ಎಲ್ಲಾ ರಾಜಕೀಯ ಪಕ್ಷಗಳ ಒಮ್ಮತದೊಂದಿಗೆ ವಿಕಸನಗೊಂಡಿದೆ.
No comments:
Post a Comment