ದೆಹಲಿ ವಿವಿ ಉಪಕುಲಪತಿ ಪ್ರೊ. ತ್ಯಾಗಿ ಅಮಾನತು
ನವದೆಹಲಿ: ’ಕರ್ತವ್ಯ ನಿರ್ವಹಿಸುವಲ್ಲಿ ವಿಫಲರಾದುದಕ್ಕಾಗಿ’ ಶಿಕ್ಷಣ ಸಚಿವಾಲಯವು ರಾಷ್ಟ್ರಪತಿಯವರ ಆದೇಶದ ಮೇರೆಗೆ ದೆಹಲಿ ವಿಶ್ವವಿದ್ಯಾಲಯದ ಉಪಕುಲಪತಿ ಪ್ರೊ. ಯೋಗೇಶ್ ತ್ಯಾಗಿ ಅವರನ್ನು ಅಮಾನತುಗೊಳಿಸಿದೆ ಎಂದು ಸಚಿವಾಲಯದ ಅಧಿಕಾರಿಗಳು 2020 ಅಕ್ಟೋಬರ್ 28ರ ಬುಧವಾರ ತಿಳಿಸಿದರು.
ಉಪಕುಲಪತಿಯವರು ತೆಗೆದುಕೊಂಡ ನಿರ್ಣಾಯಕ ನೇಮಕಾತಿಗಳ ಬಗ್ಗೆ ಇತ್ತೀಚಿನ ನಿರ್ಧಾರಗಳು ಮತ್ತು ವಿಶ್ವ ವಿದ್ಯಾಲಯ ಮಾನದಂಡಗಳ ಅನುಸರಣೆಯ ಕುರಿತು ವಿಶ್ವವಿದ್ಯಾಲಯದ ಎರಡು ವಿಭಾಗಗಳ ನಡುವೆ ಇತ್ತೀಚೆಗೆ ನಡೆದ ಅಧಿಕಾರದ ಜಗ್ಗಾಟದ ನಡುವೆ ತ್ಯಾಗಿ ಅವರನ್ನು ರಾಷ್ಟ್ರಪತಿಯವರು ಅಮಾನತುಗೊಳಿಸಿದ್ದಾರೆ.
ಈಗ ಅಮಾನತುಗೊಂಡಿರುವ ವಿಶ್ವ ವಿದ್ಯಾಲಯದ ಉಪಕುಲಪತಿ ವಿಸಿ ತ್ಯಾಗಿ ಅವರು ವೈದ್ಯಕೀಯ ನೆಲೆಯಲ್ಲಿ ಅನುಪಸ್ಥಿತಿಯ ಅವಧಿಯಲ್ಲಿ ಹೊರಡಿಸಿದ ಆದೇಶಗಳನ್ನು ಶೂನ್ಯ ಮತ್ತು ಅನೂರ್ಜಿತವೆಂದು ಪರಿಗಣಿಸಲಾಗುತ್ತದೆ ಎಂದು ಅಧಿಕಾರಿಗಳು ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.
ಉಪ ಕುಲಪತಿಯವರನ್ನು ಅಮಾನತುಗೊಳಿಸಲು ವಿಶ್ವವಿದ್ಯಾಲಯದ ಸಂದರ್ಶಕರಾಗಿರುವ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಮಂಗಳವಾರ ಒಪ್ಪಿಗೆ ನೀಡಿದ್ದರು.
ತ್ಯಾಗಿ ಅವರು ತುರ್ತು ವೈದ್ಯಕೀಯ ಸ್ಥಿತಿಯಲ್ಲಿ ಏಮ್ಸ್ ಗೆ ದಾಖಲಾದ ಜುಲೈ ೨ ರಿಂದ ರಜೆಯಲ್ಲಿದ್ದಾರೆ ಎಂದೂ ಆದೇಶ ತಿಳಿಸಿದೆ. ತ್ಯಾಗಿ ಅವರು ಮತ್ತೆ ಕಚೇರಿಗೆ ಹಾಜರಾಗುವವರೆಗೂ ಪ್ರೊ-ವಿಸಿ ಪಿ ಸಿ ಜೋಶಿ ಅವರಿಗೆ ಉಪ ಕುಲಪತಿ ಉಸ್ತುವಾರಿ ಹೊಣೆಯನ್ನು ವಹಿಸಿ ಸರ್ಕಾರ ಜುಲೈ ೧೭ ರಂದು ಆದೇಶ ನೀಡಿತ್ತು.
"ದುರ್ಬಳಕೆ ಸಂಬಂಧಿತ ಸಮಸ್ಯೆಗಳ ತನಿಖೆಗೆ ರಾಷ್ಟ್ರಪತಿಯವರು ತಮ್ಮ ಒಪ್ಪಿಗೆಯನ್ನು ನೀಡಿದ್ದಾರೆ.
ಕೇಂದ್ರ ಶಿಕ್ಷಣ ಸಚಿವಾಲಯವು ವಿಶ್ವ ವಿದ್ಯಾಲಯದ ಆಡಳಿತದ ಬಗ್ಗೆ ಪ್ರಶ್ನೆಗಳನ್ನು ಎತ್ತಿದ್ದು ಮತ್ತು ತನಿಖೆಗೆ ಸಮ್ಮತಿಯನ್ನು ಪಡೆದಿದೆ. ಸಚಿವಾಲಯವು ಈಗ ಸಮಿತಿಯೊಂದನ್ನು ರಚಿಸುತ್ತದೆ, ಅದು ಸಮಸ್ಯೆಗ ಬಗ್ಗೆ ತನಿಖೆ ಮಾಡುತ್ತದೆ’ ಎಂದು ಶಿಕ್ಷಣ ಸಚಿವಾಲಯದ ಅಧಿಕಾರಿಯೊಬ್ಬರು ಹೇಳಿದರು.
ದೆಹಲಿ ವಿಶ್ವವಿದ್ಯಾಲಯದಲ್ಲಿ ಮಂಗಳವಾರದಿಂದ ಹೈ-ವೋಲ್ಟೇಜ್ ನಾಟಕ ಆರಂಭವಾಗಿತ್ತು. ವಿಶ್ವವಿದ್ಯಾನಿಲಯದ ಎರಡು ಬಣಗಳು ಇಬ್ಬರು ರಿಜಿಸ್ಟ್ರಾರ್ಗಳು ಪರ, ಇಬ್ಬರು ಉಪಕುಲಪತಿUಳ ಪರ ಮತ್ತು ದಕ್ಷಿಣ ಕ್ಯಾಂಪಸ್ನ ಇಬ್ಬರು ನಿರ್ದೇಶಕರ ಪರ ಬೆಂಬಲ ನೀಡಿದ್ದವು.
No comments:
Post a Comment