ಮೂರು ನಗರಗಳಿಗೆ ಪ್ರಧಾನಿ ಮೋದಿ ಲಸಿಕಾ ಭೇಟಿ
ನವದೆಹಲಿ: ಕೊರೋನಾವೈರಸ್ ಸಾಂಕ್ರಾಮಿಕದ ವಿರುದ್ಧ ಲಸಿಕೆ ಅಭಿವೃದ್ಧಿ ಪಡಿಸುತ್ತಿರುವ ಮೂರು ಸಂಸ್ಥೆಗಳಲ್ಲಿನ ಲಸಿಕೆ ಅಭಿವೃದ್ಧಿ ಮತ್ತು ಉತ್ಪಾದನಾ ಪ್ರಕ್ರಿಯೆಯನ್ನು ಸ್ವತಃ ವೀಕ್ಷಿಸುವ ಸಲುವಾಗಿ ಪ್ರಧಾನಿ ನರೇಂದ್ರ ಮೋದಿ ಅವರು 2020 ನವೆಂಬರ್ 28ರ ಶನಿವಾರ ಮೂರು ನಗರಗಳ ಮುಂಚೂಣಿಯ ಲಸಿಕಾ ತಯಾರಿಕೆ ಸಂಸ್ಥೆಗಳಿಗೆ ಭೇಟಿ ನೀಡಿದರು.
ಹೈದರಾಬಾದಿನಲ್ಲಿ
ಭಾರತ ಬಯೋಟೆಕ್ ಪಾರ್ಕಿನ ಭೇಟಿಯ ಬಳಿಕ ಪ್ರಧಾನಿಯವರು ಲಸಿಕಾ ಅಭಿವೃದ್ಧಿ ತಂಡದ ಕಾರ್ಯವನ್ನು ಶ್ಲಾಘಿಸಿದರು.
ಈ
ಭೇಟಿಯು "ತನ್ನ ನಾಗರಿಕರಿಗೆ ಲಸಿಕೆ ಹಾಕುವ ಭಾರತದ ಪ್ರಯತ್ನದಲ್ಲಿ ಸಿದ್ಧತೆಗಳು, ಸವಾಲುಗಳು ಮತ್ತು ಮಾರ್ಗಸೂಚಿಯ ಮೊದಲ ದೃಷ್ಟಿಕೋನವನ್ನು" ಪಡೆಯಲು ಸಹಾಯ ಮಾಡುತ್ತದೆ ಎಂದು ಪ್ರಧಾನಮಂತ್ರಿಯವರ ಕಚೇರಿ ತಿಳಿಸಿದೆ.
ಗುಜರಾತ್‌ನಲ್ಲಿರುವ
ಫಾರ್ಮಾ ಪ್ರಮುಖ ಝೈಡಸ್ ಕ್ಯಾಡಿಲಾ ಕಂಪೆನಿಯ ಸ್ಥಾವರಕ್ಕೆ ಭೇಟಿ ನೀಡುವ ಮೂಲಕ ಪ್ರಧಾನಿ
ಮೋದಿ ತಮ್ಮ ಮೂರು ನಗರ ಲಸಿಕೆ ಪ್ರವಾಸವನ್ನು ಪ್ರಾರಂಭಿಸಿದರು. ಪಿಪಿಇ ಕಿಟ್ ಧರಿಸಿದ ಪ್ರಧಾನಿ ಮೋದಿ ಅಹಮದಾಬಾದ್‌ನಿಂದ ೨೦ ಕಿ.ಮೀ
ದೂರದಲ್ಲಿರುವ ಚಂಗೋಡರ್ ಕೈಗಾರಿಕಾ ಪ್ರದೇಶದ ಝೈಡಸ್ ಕ್ಯಾಡಿಲಾ ಸಂಶೋಧನಾ ಕೇಂದ್ರದಲ್ಲಿ ಲಸಿಕೆ ಅಭಿವೃದ್ಧಿ ಪ್ರಕ್ರಿಯೆಯನ್ನು ಪರಿಶೀಲಿಸಿದರು.
ಔಷಧ
ತಯಾರಕ ಸಂಸ್ಥೆಯು ತನ್ನ ಕೋವಿಡ್ -೧೯ ಲಸಿಕೆಯಾಗಿರುವ ಝೈ-ಕೊವ್- ಡಿ ಯ ಮೊದಲ
ಹಂತದ ಕ್ಲಿನಿಕಲ್ ಪ್ರಯೋಗವನ್ನು ಪೂರ್ಣಗೊಳಿಸಿದೆ ಮತ್ತು ಆಗಸ್ಟ್ ತಿಂಗಳಲ್ಲಿ ಎರಡನೇ ಹಂತದ ಕ್ಲಿನಿಕಲ್ ಪ್ರಯೋಗಗಳನ್ನು ಪ್ರಾರಂಭಿಸಿದೆ ಎಂದು ಘೋಷಿಸಿದೆ.
ಝೈಡಸ್
ಕ್ಯಾಡಿಲಾ ಕಂಪೆನಿಯು ಅಭಿವೃದ್ಧಿಪಡಿಸುತ್ತಿರುವ ಸ್ಥಳೀಯ ಡಿಎನ್‌ಎ ಆಧಾರಿತ ಲಸಿಕೆ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು ಅಹಮದಾಬಾದಿನ ಝೈಡಸ್ ಬಯೋಟೆಕ್ ಪಾರ್ಕ್‌ಗೆ ಭೇಟಿ ನೀಡಿದ ಪ್ರಧಾನಿ ’ಅವರ ಕಾರ್ಯಕ್ಕಾಗಿ ಈ ಪ್ರಯತ್ನದ ಹಿಂದಿನ
ತಂಡವನ್ನು ನಾನು ಅಭಿನಂದಿಸುತ್ತೇನೆ. ಈ ಪ್ರಯಾಣದಲ್ಲಿ ಅವರನ್ನು
ಬೆಂಬಲಿಸಲು ಭಾರತ ಸರ್ಕಾರ ಅವರೊಂದಿಗೆ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದೆ"
ಎಂದು ಟ್ವೀಟ್ ಮಾಡಿದರು.
ವಿಜ್ಞಾನಿಗಳು
ಮತ್ತು ಕಂಪೆನಿ ಅಧಿಕಾರಿಗಳೊಂದಿಗಿನ ಸಂವಾದದಲ್ಲಿ ಲಸಿಕೆ ಅಭಿವೃದ್ಧಿ ಕಾರ್ಯಗಳು ಮತ್ತು ಸ್ಥಾವರದಲ್ಲಿ ಲಸಿಕೆ ಉತ್ಪಾದನಾ ವಿಧಾನದ ಬಗ್ಗೆ ಪ್ರಧಾನಿಯವರಿಗೆ ವಿವರಿಸಲಾಯಿತು ಎಂದು ಸುದ್ದಿ ಸಂಸ್ಥೆ ವರದಿ ತಿಳಿಸಿತು.
ಅಹಮದಾಬಾದಿನಿಂದ
ಪ್ರಧಾನಿಯವರು ತೆಲಂಗಾಣದ ಹೈದರಾಬಾದ್‌ಗೆ ಹಾರಿದರು, ಅಲ್ಲಿ ಅವರು ಕೊವಾಕ್ಸಿನ್‌ನಲ್ಲಿ ಕೆಲಸ ಮಾಡುತ್ತಿರುವ ಭಾರತ್ ಬಯೋಟೆಕ್‌ಗೆ ಭೇಟಿ ನೀಡಿದರು, ಇದು ಭಾರತದ ಮೊದಲ ಸ್ಥಳೀಯ ಲಸಿಕೆ ಅಭ್ಯರ್ಥಿಯಾಗಿ ಆಯ್ಕೆಯಾಗಿದೆ. ಈ ಸೌಲಭ್ಯವು ಹೈದರಾಬಾದ್‌ನಿಂದ
೫೦ ಕಿ.ಮೀ ದೂರದಲ್ಲಿದೆ.
"ಪ್ರಧಾನ
ಮಂತ್ರಿಯ ಭೇಟಿ ನಮ್ಮ ತಂಡಕ್ಕೆ ಉತ್ತಮ ಪ್ರೇರಣೆಯಾಗಿದೆ, ಮತ್ತು ವೈಜ್ಞಾನಿಕ ಅನ್ವೇಷಣೆ, ಸಾರ್ವಜನಿಕ ಆರೋಗ್ಯ ಸಮಸ್ಯೆಗಳನ್ನು ಪರಿಹರಿಸುವುದು ಮತ್ತು ಕೋವಿಡ್-೧೯ ವಿರುದ್ಧದ ರಾಷ್ಟ್ರದ
ಹೋರಾಟದ ಬಗೆಗಿನ ನಮ್ಮ ಬದ್ಧತೆಯನ್ನು ಮತ್ತಷ್ಟು ಬಲಪಡಿಸುತ್ತದೆ" ಎಂದು ಕಂಪೆನಿಯು ಹೇಳಿಕೆಯಲ್ಲಿ ತಿಳಿಸಿತು.
ಈ
ಸೌಲಭ್ಯಕ್ಕೆ ಒಂದು ಗಂಟೆ ಭೇಟಿ ನೀಡಿದ ನಂತರ, ಪ್ರಧಾನ ಮಂತ್ರಿ ಪುಣೆಗೆ ತೆರಳಿದರು, ಅಲ್ಲಿ ಕೋವಿಡ್-೧೯ ಲಸಿಕೆಗಾಗಿ ಜಾಗತಿಕ
ಔಷಧ ದೈತ್ಯ ಅಸ್ಟ್ರಾಜೆನೆಕಾ ಮತ್ತು ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದೊಂದಿಗೆ ಪಾಲುದಾರಿಕೆ ಹೊಂದಿರುವ ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ (ಎಸ್‌ಐಐ) ಔಷಧ ಅಭಿವೃದ್ಧಿ ಕಾರ್ಯದಲ್ಲಿ ತೊಡಗಿದೆ.
"ಕೋವಿಡ್
-೧೯ ವಿರೋಧಿ ಹೋರಾಟದ ಒಂದು ನಿರ್ಣಾಯಕ ಹಂತಕ್ಕೆ ಭಾರತ ಪ್ರವೇಶಿಸುತ್ತಿದ್ದಂತೆಯೇ, ಪ್ರಧಾನಿ ನರೇಂದ್ರ ಮೋದಿಯವರ ಈ ಸೌಲಭ್ಯಗಳ ಭೇಟಿ
ಮತ್ತು ವಿಜ್ಞಾನಿಗಳೊಂದಿಗಿನ ಚರ್ಚೆಗಳು ತನ್ನ ನಾಗರಿಕರಿಗೆ ಲಸಿಕೆ ಹಾಕುವ ಪ್ರಯತ್ನದಲ್ಲಿ ಭಾರತದ ಸಿದ್ಧತೆಗಳು, ಸವಾಲುಗಳು ಮತ್ತು ಮಾರ್ಗಸೂಚಿಯ ಮೊದಲ ದೃಷ್ಟಿಕೋನವನ್ನು ಪಡೆಯಲು ಸಹಾಯ ಮಾಡುತ್ತದೆ. , "ಎಂದು ಪ್ರಧಾನಿ ಕಚೇರಿ ಶುಕ್ರವಾರ ಟ್ವೀಟ್ ಮಾಡಿತ್ತು.
ನವೆಂಬರ್
೨೪ ರಂದು, ಪ್ರಧಾನಿಯವರು ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳ ಮುಖ್ಯಮಂತ್ರಿಗಳ ಜೊತೆ ವಿಡಿಯೋ ಕಾನ್ಫರೆನ್ಸ್ ಮೂಲಕ ಆಯಾ ರಾಜ್ಯಗಳ ಕೋವಿಡ್-೧೯ ಸ್ಥಿತಿಗತಿ ವಿಚಾರಿಸಿದ್ದರು.
ಕೋವಿಡ್
೧೯ ಲಸಿಕೆಗಾಗಿ ಶೈತ್ಯಾಗಾರ ಸೌಲಭ್ಯಗಳನ್ನು ಮೊದಲೇ ಸ್ಥಾಪಿಸುವಂತೆ ಪ್ರಧಾನಿ ಸಭೆಯಲ್ಲಿ ರಾಜ್ಯಗಳಿಗೆ ಸಲಹೆ ನೀಡಿದರು ಮತ್ತು ಇದರ ವಿತರಣೆ ಬಗ್ಗೆ ಯೋಜನೆಯನ್ನು ಸಿದ್ಧಪಡಿಸಿ ಕೇಂದ್ರ ಸರ್ಕಾರಕ್ಕೆ ಕಳುಹಿಸಲು ಸೂಚಿಸಿದರು.
ಕೊರೋನಾ ಪ್ರಕರಣ
ಶೇ.೪ರಷ್ಟು
ಇಳಿಕೆ
ಶನಿವಾರ
ಬೆಳಿಗ್ಗೆ, ಭಾರತವು ೪೧,೩೨೨ ಹೊಸ
ಕೋವಿಡ್-೧೯ ಪ್ರಕರಣಗಳನ್ನು ವರದಿ
ಮಾಡಿದೆ, ಇದು ಶುಕ್ರವಾರಕ್ಕಿಂತ ಶೇಕಡಾ ೪ರಷ್ಟು ಕಡಿಮೆಯಾಗಿದೆ.
ದೇಶದಲ್ಲಿ
ಒಟ್ಟಾರೆ ಕೋವಿಡ್ ಪ್ರಕರಣಗಳ ಸಂಖ್ಯೆ ೯೩.೫೧ ಲಕ್ಷಕ್ಕೆ
ತಲುಪಿದ್ದು ಸಾವಿನ ಸಂಖ್ಯೆ ೧,೩೬,೨೦೦ಕ್ಕೆ
ಏರಿದೆ.
ಮಹಾರಾಷ್ಟ್ರ, ಕರ್ನಾಟಕ, ಆಂಧ್ರಪ್ರದೇಶ, ತಮಿಳುನಾಡು, ಮತ್ತು ಕೇರಳ ರಾಜ್ಯಗಳು ಹೆಚ್ಚು ಬಾಧಿತವಾಗಿದ್ದು, ಕಳೆದ ೨೪ ಗಂಟೆಗಳಲ್ಲಿ ೨೩ ರಿಂದ ೮೫ ರವರೆಗೆ ಸಾವು ಸಂಭವಿಸಿದೆ.
No comments:
Post a Comment