Saturday, November 21, 2020

ಹತ ಜೈಶ್ ಉಗ್ರರಿಗೆ ಮಸೂದ್ ಅಜರ್ ಸೋದರನ ಆದೇಶ

 ಹತ ಜೈಶ್ ಉಗ್ರರಿಗೆ ಮಸೂದ್ ಅಜರ್ ಸೋದರನ ಆದೇಶ

ನವದಹಲಿ:  ಜಮ್ಮು-ಕಾಶ್ಮೀರ ನಾಗ್ರೋಟಾ ಬಳಿಯ ಬಾನ್ ಟೋಲ್ ಪ್ಲಾಜಾದಲ್ಲಿ ಗುರುವಾರ ನಸುಕಿನಲ್ಲಿ ಭದ್ರತಾ ಪಡೆಯೊಂದಿಗೆ ಸಂಭವಿಸಿದ ಗುಂಡಿನ ಘರ್ಷಣೆಯಲ್ಲಿ ಹತರಾದ ಜೈಶ್--ಮೊಹಮ್ಮದ್ ಉಗ್ರ ಸಂಘಟನೆಯ ಭಯೋತ್ಪಾದಕರು ಸಂಘಟನೆಯ ಕಾರ್ಯಾಚರಣಾ ಕಮಾಂಡರ್‌ಗಳಾದ ಮುಫ್ತಿ ರೌಫ್ ಅಸ್ಗರ್ ಮತ್ತು ಖಾರಿ ಜರಾರ್ ಅವರಿಂದ ಆದೇಶಗಳನ್ನು ಪಡೆಯುತ್ತಿದ್ದರು ಎಂಬುದು ಬೆಳಕಿಗೆ ಬಂದಿದೆ.

ನಾಗ್ರೋಟಾ ಬಳಿ ನಡೆದಿರುವ ಗುಂಡಿನ ಘರ್ಷಣೆಯು ಆಕಸ್ಮಿಕವಲ್ಲ, ಗುಪ್ತಚರ ಮಾಹಿತಿಯನ್ನು ಆಧರಿಸಿದ ಭದ್ರತಾ ಪಡೆಗಳ ಕಾರ್‍ಯಾಚರಣೆ ಇದಾಗಿದ್ದು, ಇದೊಂದು ದೊಡ್ಡ ಪ್ರಮಾಣದ ದಾಳಿ ಎಂಬುದಾಗಿ ಭದ್ರತಾ ಪಡೆಗಳು ಭಾವಿಸಿವೆ. ಗಡಿಯಾಚೆಯಿಂದ ದೊಡ್ಡ ಪ್ರಮಾಣದ ದಾಳಿ ನಡೆಯಬಹುದು ಎಂಬುದಾಗಿ ನಿರೀಕ್ಷಿಸಿರುವ ಭದ್ರತಾ ಪಡೆಗಳು ಕಾರ್ಯಾಚರಣೆಯ ಮೂಲಕ ಅದನ್ನು ವಿಫಲಗೊಳಿಸಿರುವುದಾಗಿ ತಿಳಿಸಿವೆ.

ನಂಬಲರ್ಹ ಮೂಲಗಳ ಪರಕಾರ ಜಾಗತಿಕ ಸ್ಥಾನಿಕ ವ್ಯವಸ್ಥೆ (ಜಿಪಿಎಸ್) ಸಾಧನ ಮತ್ತು ನಾಲ್ಕು ಭಯೋತ್ಪಾದಕರು ಹೊತ್ತೊಯ್ದಿದ್ದ ಮೊಬೈಲ್ ಫೋನ್‌ಗಳ ಆರಂಭಿಕ ಮಾಹಿತಿಯು ಕಣಿವೆಯಲ್ಲಿ ಭಾರೀ ಹಾನಿ ಉಂಟು ಮಾಡುವ ಗುರಿ ಹೊಂದಿದ ಪಾಕಿಸ್ತಾನ ಮೂಲದ ಭಯೋತ್ಪಾದಕ ಗುಂಪು ಜೈಶ್--ಮೊಹಮ್ಮದ್ (ಜೆಎಂ) ಕಾರ್ಯಾಚರಣಾ ಕಮಾಂಡರ್‌ಗಳಾದ ಮುಫ್ತಿ ಅವರೊಂದಿಗೆ ಸಂಪರ್ಕದಲ್ಲಿತ್ತು ಎಂಬುದನ್ನು ತೋರಿಸಿದೆ.

ಮುಫ್ತಿ ಅಸ್ಗರ್ ರೌಫ್ ಜೆಇಎಂ ಮುಖ್ಯಸ್ಥ ಮತ್ತು ವಿಶ್ವಸಂಸ್ಥೆಯು ಜಾಗತಿಕ ಭಯೋತ್ಪಾದಕ ಎಂಬುದಾಗಿ ಘೋಷಿಸಿರುವ ಮಸೂದ್ ಅಜರನ ಕಿರಿಯ ಸಹೋದರ.

ಪ್ರಧಾನಿ ನರೇಂದ್ರ ಮೋದಿ ಅವರಿಗೆ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರು ಗೃಹ ಸಚಿವ ಅಮಿತ್ ಶಾ, ವಿದೇಶಾಂಗ ಕಾರ್ಯದರ್ಶಿ ರ್ಷ ಶ್ರೀಂಗ್ಲಾ ಮತ್ತು ಇಬ್ಬರು ಗುಪ್ತಚರ ಮುಖ್ಯಸ್ಥರ ಸಮ್ಮುಖದಲ್ಲಿ ಸಂಪೂರ್ಣ ಕಾರ್ಯಾಚರಣೆಯ ಬಗ್ಗೆ ಶುಕ್ರವಾರ ಮಾಹಿತಿ ನೀಡಿದರು.

ಇದನ್ನು ಅನುಸರಿಸಿ, ಪ್ರಧಾನಿಯವರು "ಪಾಕಿಸ್ತಾನ ಮೂಲದ ಭಯೋತ್ಪಾದಕ ಸಂಘಟನೆಗಳಾದ ಜೆಇಎಂಗೆ ಸೇರಿದ ನಾಲ್ಕು ಭಯೋತ್ಪಾದಕರನ್ನು ಮಟ್ಟ ಹಾಕಿರುವುದು ಮತ್ತು ಅವರ ಬಳಿ ಇದ್ದ ದೊಡ್ಡ ಪ್ರಮಾಣದ ಸ್ಫೋಟಕಗಳ ಸಂಗ್ರಹವು, ಹಾನಿ ಮತ್ತು ವಿನಾ ಎಸಗುವ ಪ್ರಯತ್ನಗಳನ್ನು ಮತ್ತೊಮ್ಮೆ ವಿಫಲಗೊಳಿಸಿದೆ ಎಂಬುದನ್ನು ಸೂಚಿಸುತ್ತದೆ ಎಂದು ಟ್ವೀಟ್ ಮಾಡಿದರು.

ಕೆಚ್ಚೆದೆಯ ಕ್ರಮಕ್ಕಾಗಿ ಭದ್ರತಾ ಪಡೆಗಳಿಗೆ ಧನ್ಯವಾದ ಅರ್ಪಿಸಿದ ಪ್ರಧಾನಿ ಮೋದಿ, ಕಾಶ್ಮೀರದಲ್ಲಿ ತಳಮಟ್ಟದ ಪ್ರಜಾಪ್ರಭುತ್ವ ಕಸರತ್ತನ್ನು (ಪಂಚಾಯತ್ ಚುನಾವಣೆ) ಗುರಿಯಾಗಿಸಲು ಅಸಹ್ಯಕರ ಸಂಚು ರೂಪಿಸಲಾಗಿದೆ ಎಂದು ಪ್ರಧಾನಿ ಬರೆದರು.

ಪಾಕಿಸ್ತಾನವು ಜೆಇಎಂನಂತಹ ಇಸ್ಲಾಮೀ ಜಿಹಾದಿ ಗುಂಪುಗಳನ್ನು ಬಳಸಿ, ಆತ್ಮಹತ್ಯಾ ದಾಳಿಕೋರರನ್ನು ಗಡಿ ದಾಟಿಸಿ ಕಳುಹಿಸುವ ಮೂಲಕ ಭಾರತವನ್ನು ಗುರಿಯಾಗಿಸಿಕೊಂಡಿದೆ ಎಂದು ಸುದ್ದಿ ಮೂಲಗಳು ಹೇಳಿದವು.

ಭಾರತೀಯ ವಾಯುಪಡೆ ವಿಮಾನಗ ಬಾಂಬ್ ದಾಳಿಯಲ್ಲಿ ಧ್ವಂಸಗೊಂಡ ಒಂದೂವರೆ ವರ್ಷಗಳ ನಂತರ ಬಾಲಕೋಟ್ ಭಯೋತ್ಪಾದಕ ತರಬೇತಿ ಸೌಲಭ್ಯವನ್ನು ಮತ್ತೆ  ಜೆಇಎಂಗೆ  ಹಸ್ತಾಂತರಿಸಲು ಪಾಕಿಸ್ತಾನ ಏಜೆನ್ಸಿಗಳು ನಿರ್ಧರಿಸಿವೆ ಎಂದು ಸುದ್ದಿ ಮೂಲಗಳು ಹೇಳಿವೆ.

ನಸುಕಿನ .೫೦ ಕ್ಕೆ ಗುಂಡಿನ ದಾಳಿ ಪ್ರಾರಂಭವಾದ ತತ್ ಕ್ಷಣ ಎನ್‌ಎಸ್‌ಎ ದೋವಲ್ ಅವರಿಗೆ ಬಾನ್ ಟೋಲ್ ಪ್ಲಾಜಾ ಗುಂಡಿನ ಘರ್ಷಣೆ ಬಗ್ಗೆ ಮಾಹಿತಿ ನೀಡಲಾಗಿತ್ತು.

ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ನಾಲ್ವರು ಭಯೋತ್ಪಾದಕರು ಶಕಾರ್‌ಗಢ ಹಳ್ಳದಿಣ್ಣೆಗಳ ಮೂಲಕ  ಸಂಬಾ ವಲಯದಲ್ಲಿ ಭಾರತಕ್ಕೆ ದಾಟಿದ್ದಾರೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.

ಭಯೋತ್ಪಾದನೆ ನಿಗ್ರಹದ ಉನ್ನತ ತಜ್ಞರು ಇನ್ನೂ ಭಯೋತ್ಪಾದಕರ ಗುರಿಗಳ ಬಗ್ಗೆ ತನಿಖೆ ನಡೆಸುತ್ತಿದ್ದರೆ, ಅವರು ಹೊತ್ತೊಯ್ದಿರುವ ಶಸ್ತ್ರಾಸ್ತ್ರಗಳು, ಮದ್ದುಗುಂಡುಗಳು, ಗ್ರೆನೇಡ್‌ಗಳು ಮತ್ತು ಸ್ಫೋಟಕಗಳು (ಆರ್‌ಡಿಎಕ್ಸ್) ಅವರು ಕಣಿವೆಯಲ್ಲಿ ದೊಡ್ಡ ಪ್ರಮಾಣದ ದಾಳಿಯ ಗುರಿ ಹೊಂದಿದ್ದಾರೆಂದು ಸ್ಪಷ್ಟವಾಗಿ ಸೂಚಿಸುತ್ತದೆ. ಅವರ ಬಳಿ ಇದ್ದ ಹನ್ನೊಂದು ಎಕೆ-ಸರಣಿ ರೈಫಲ್‌ಗಳು, ೩೦ ಚೀನೀ ಗ್ರೆನೇಡ್‌ಗಳು, ೧೬ ಎಕೆ ಮದ್ದುಗುಂಡು ತುಣುಕುಗಳು ಮತ್ತು ೨೦ ಕಿಲೋಗ್ರಾಂಗಳಷ್ಟು ಆರ್‌ಡಿಎಕ್ಸ್ ಅನ್ನು ವಶಪಡಿಸಿಕೊಳ್ಳಲಾಗಿದೆ. ಅವರಲ್ಲಿ ಒಬ್ಬನನ್ನು ಜೀವಂತವಾಗಿ ಸೆರೆಹಿಡಿಯಲು ಜಮ್ಮು ಕಾಶ್ಮೀರ  ಪೊಲೀಸರು ಪದೇ ಪದೇ ಪ್ರಯತ್ನಿಸಿದರೂ ಸಮರ ತರಬೇತಿ ಪಡೆದಿದ್ದ ಭಯೋತ್ಪಾದಕರು ಶರಣಾಗತರಾಗಲು ನಿರಾಕರಿಸಿ ಕೊನೆಯವರೆಗೂ ಘರ್ಷಣೆ ನಡೆಸಿದರು.

ಪ್ರದೇಶದಲ್ಲಿ ನಡೆಯುತ್ತಿರುವ ಚುನಾವಣಾ ಕಸರತ್ತನ್ನು ಹಾಳುಮಾಡುವ ಪ್ರಯತ್ನದ ಜೊತೆಗೆ, ವಿಶ್ವದ ಗಮನವನ್ನು ಪುನಃ ಕಾಶ್ಮೀರದತ್ತ ಹರಿಸುವಂತೆ ಪ್ರತಿಪಕ್ಷಗಳು ಹೇರಿದ ಒತ್ತಡಕ್ಕೆ ಮಣಿದು ಪಾಕಿಸ್ತಾನಿ ಸೇನೆ ಮತ್ತು ಐಎಸ್‌ಐ ಮುಖ್ಯಸ್ಥರು ರೂಪಿಸಿದ್ದ ತಂತ್ರ ಇದಾಗಿರಬಹುದು ಎಂದು ಭಾರತೀಯ ಗುಪ್ತಚರ ಅಧಿಕಾರಿಗಳು ಶಂಕಿಸಿದ್ದಾರೆ.

No comments:

Advertisement