Saturday, November 28, 2020

ಶೈತ್ಯೀಕೃತ ಲಸಿಕೆ ಸಾಗಣೆ ಪೆಟ್ಟಿಗೆ: ಗುಜರಾತಿನಲ್ಲಿ ಲಕ್ಸೆಂಬರ್ಗ್ ಘಟಕ

 ಶೈತ್ಯೀಕೃತ ಲಸಿಕೆ ಸಾಗಣೆ ಪೆಟ್ಟಿಗೆ: ಗುಜರಾತಿನಲ್ಲಿ  ಲಕ್ಸೆಂಬರ್ಗ್  ಘಟಕ

ನವದೆಹಲಿ: ಕೊರೋನವೈರಸ್ ಕಾಯಿಲೆಯ (ಕೋವಿಡ್ -೧೯) ವಿರುದ್ಧದ ಲಸಿಕೆ ಬಿಡುಗಡೆಯ ಸನಿಹಕ್ಕೆ ಬರುತ್ತಿದ್ದಂತೆಯೇ ದೇಶಾದ್ಯಂತ ಹಳ್ಳಿಗಳಿಗೆ ಅದನ್ನು ತಲುಪಿಸುವ ಸಲುವಾಗಿ ಗುಜರಾತಿನಲ್ಲಿ ವಿಶೇಷ ಶೈತ್ಯೀಕೃತ ಲಸಿಕೆ ಸಾಗಣೆ ಘಟಕವನ್ನು ಸ್ಥಾಪಿಸಲು ಲಕ್ಸೆಂಬರ್ಗ್ ಪ್ರಧಾನಿ ಕ್ಸೇವಿಯರ್ ಬೆಟ್ಟೆಕ್ ಮುಂದಿಟ್ಟ ಪ್ರಸ್ತಾಪವನ್ನು ಪ್ರಧಾನಿ ನರೇಂದ್ರ ಮೋದಿ ಕೈಗೆತ್ತಿಕೊಂಡಿದ್ದಾರೆ.

ದೆಹಲಿ ಮತ್ತು ಅಹಮದಾಬಾದ್ ಮೂಲದ ಅಧಿಕೃತ ಮೂಲಗಳ ಪ್ರಕಾರ, ಸೌರ ಲಸಿಕೆ ರೆಫ್ರಿಜರೇಟರ್‌ಗಳು, ಫ್ರೀಜರ್‌ಗಳು ಮತ್ತು ಶೈತ್ಯೀಕೃತ ಸಾರಿಗೆ ಪೆಟ್ಟಿಗೆಗಳು ಸೇರಿದಂತೆ ಲಸಿಕೆ ಶೈತ್ಯಾಗಾರ ಸರಪಳಿ (ಕೋಲ್ಡ್ ಚೈನ್) ಸ್ಥಾಪಿಸಲು ಲಕ್ಸೆಂಬರ್ಗ್ ಸಂಸ್ಥೆ ಬಿ ಮೆಡಿಕಲ್ ಸಿಸ್ಟಮ್ಸ್ ಮುಂದಿನ ವಾರ ಗುಜರಾತ್‌ಗೆ ಉನ್ನತ ಮಟ್ಟದ ತಂಡವನ್ನು ಕಳುಹಿಸುತ್ತಿದೆ.

ಪೂರ್ಣ ಪ್ರಮಾಣದ ಸ್ಥಾವರವನ್ನು ಸ್ಥಾಪಿಸಲು ಸುಮಾರು ಎರಡು ವರ್ಷಗಳು ಬೇಕಾಗುವುದರಿಂದ, ಕಂಪೆನಿಯು ಲಕ್ಸೆಂಬರ್ಗ್‌ನಿಂದ ಶೈತ್ಯೀಕರಣ ಪೆಟ್ಟಿಗೆಗಳನ್ನು ಮಾತ್ರ ಪಡೆಯುವ ಮೂಲಕ ಪ್ರಾರಂಭಿಸಲು ನಿರ್ಧರಿಸಿದೆ ಮತ್ತುಆತ್ಮನಿರ್ಭರ ಭಾರತಕಾರ್ಯಕ್ರಮದಡಿ ದೇಶೀಯ ಮಾರುಕಟ್ಟೆಯಿಂದ ಅದಕ್ಕೆ ಬೇಕಾದ ಉತ್ತಮ ಸಲಕರಣೆಗಳನ್ನು ಪಡೆಯಲಿದೆ.

ಲಕ್ಸೆಂಬರ್ಗ್ ಮೂಲದ ಕಂಪೆನಿಯು ಲಸಿಕೆಯನ್ನು ಮೈನಸ್ ೮೦ ಡಿಗ್ರಿ ಸೆಲ್ಸಿಯಸ್‌ಗಿಂತ ಕಡಿಮೆ ತಾಪಮಾನದಲ್ಲಿ ಸಾಗಿಸುವ ತಂತ್ರಜ್ಞಾನವನ್ನು ಹೊಂದಿದ್ದರೂ, ಶೈತ್ಯೀಕರಿಸಿದ ಸಾರಿಗೆ ಪೆಟ್ಟಿಗೆU ಮೂಲಕ ನಾಲ್ಕು ಡಿಗ್ರಿ ಸೆಲ್ಸಿಯಸ್ ಮತ್ತು -೨೦ ಡಿಗ್ರಿ ಸೆಲ್ಸಿಯಸ್ ನಡುವಣ ತಾಪಮಾನದಲ್ಲಿ ಲಸಿಕೆಯನ್ನು ಸಾಗಿಲು ಸಾಧ್ಯವಿದೆ.


ಲಕ್ಸೆಂಬರ್ಗ್ ಪ್ರಸ್ತಾಪವನ್ನು ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ ವೈಯಕ್ತಿಕವಾಗಿ ಮೇಲ್ವಿಚಾರಣೆ ಮಾಡುತ್ತಿದ್ದು, ಐರೋಪ್ಯ ಒಕ್ಕೂಟದ ಭಾರತೀಯ ರಾಯಭಾರಿ ಸಂತೋಷ್ ಝಾ ಅವರು ಗುಜರಾತಿನಲ್ಲಿ ಘಟಕ ಸ್ಥಾಪನೆ  ವ್ಯವಸ್ಥೆಗಳನ್ನು ಅಂತಿಮಗೊಳಿಸುವ ಸಲುವಾಗಿ ನವೆಂಬರ್ ೨೦ ರಂದು ಕಂಪೆನಿಯ ಸಿಇಒ ಮತ್ತು ಉಪ ಸಿಇಒ ಅವರನ್ನು ಭೇಟಿ ಮಾಡಿದರು.

ಸೌರಶಕ್ತಿ, ಸೀಮೆಎಣ್ಣೆ, ಅನಿಲ ಮತ್ತು ವಿದ್ಯುಚ್ಛಕ್ತಿಯಿಂದ ಕಾರ್‍ಯನಿರ್ವಹಿಸುವ ಶೈತ್ಯೀಕರಿಸಿದ ಪೆಟ್ಟಿಗೆಗಳು ೨೦೨೧ರ ಮಾರ್ಚ್ ಒಳಗೆ ವಿತರಣೆಗೆ ಸಿದ್ಧವಾಗುವ ನಿರೀಕ್ಷೆಯಿದ್ದು,  ಬಿ ಮೆಡಿಕಲ್ ಸಿಸ್ಟಮ್ಸ್ ಕಂಪೆನಿಯು ಗುಜರಾತಿನಲ್ಲಿ  ಎರಡನೇ ಹಂತದ ಪೂರ್ಣ ಪ್ರಮಾಣದ ಸ್ಥಾವರವನ್ನು ಭಾರತೀಯರಿಗೆ ಲಸಿಕೆ ಪೂರೈಸುವುದಕ್ಕಾಗಿ ಸ್ಥಾಪಿಸಲಿದೆ. ಅಗತ್ಯ ಬಿದ್ದಲ್ಲಿ ಉತ್ಪನ್ನಗಳನ್ನು ಘಟಕವು ಇತರ ಇತರ ದೇಶಗಳಿಗೂ ರಫ್ತು ಮಾಡಲಿದೆ.

ನವೆಂಬರ್ ೧೯ ರಂದು ನಡೆದ ಮೊದಲ ದ್ವಿಪಕ್ಷೀಯ ಶೃಂಗಸಭೆಯಲ್ಲಿ ಬೆಟ್ಟೆಲ್ ಅವರು ಪ್ರಧಾನಿ ಮೋದಿ ಅವರಿಗೆ  ಪ್ರಸ್ತಾಪವನ್ನು ಮಾಡಿದ್ದಾರೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

ಭಾರತದಲ್ಲಿ ಕೊನೆಯ ಮೈಲಿವರೆಗೂ ಲಸಿಕೆಗಳನ್ನು ವಿತರಿಸುವ ಬಗ್ಗೆ ಕಾತರದಲ್ಲಿದ್ದ ಪ್ರಧಾನಿ ಮೋದಿಯವರು ತತ್ ಕ್ಷಣವೇ ಅವಕಾಶವನ್ನು ಬಾಚಿಕೊಂಡರು ಮತ್ತು ಪ್ರಸ್ತಾಪವನ್ನು ಎರಡೂ ತುದಿಗಳಲ್ಲಿ ಮುನ್ನುಗ್ಗಿಸಿದರು. ಕಂಪೆನಿಯು ಕೂಡಲೇ ಗುಜರಾತ್ ಸರ್ಕಾರದೊಂದಿಗೆ ನಿಟ್ಟಿನಲ್ಲಿ ಸಂಪರ್ಕವನ್ನು ಸ್ಥಾಪಿಸಿತು.

ಬಿ ಮೆಡಿಕಲ್ ಸಿಸ್ಟಮ್ಸ್ ವೈದ್ಯಕೀಯ ಸಲಕರಣೆಗಳ ಉದ್ಯಮದಲ್ಲಿ ಲಕ್ಸೆಂಬರ್ಗ್ ಮೂಲದ ಮುಂಚೂಣಿಯ ಕಂಪೆನಿಯಾಗಿದೆ.

ವಿಶ್ವಾದ್ಯಂತ ಲಸಿಕೆಗಳನ್ನು ಸುರಕ್ಷಿತವಾಗಿ ಸಂಗ್ರಹಿಸಲು ಮತ್ತು ಸಾಗಿಸಲು ಸೂಕ್ತ ಆರೋಗ್ಯ ಪರಿಹಾರವನ್ನು ಒದಗಿಸುವಂತೆ ವಿಶ್ವ ಆರೋಗ್ಯ ಸಂಸ್ಥೆಯು (ಡಬ್ಲ್ಯುಎಚ್‌ಒ) ವಿಯಾಂಡೆನ್‌ನಲ್ಲಿರುವ ಮೂಲ ಕಂಪೆನಿಯಾದ ಎಲೆಕ್ಟ್ರೋಲಕ್ಸ್ ಕಂಪೆನಿಯನ್ನು ಸಂಪರ್ಕಿಸಿದಾಗ ೧೯೭೯ರಲ್ಲಿ ಇದನ್ನು ಸ್ಥಾಪಿಸಲಾಗಿತ್ತು. ಕಂಪೆನಿಯ ಬ್ಲಡ್ ಬ್ಯಾಂಕ್ ಮತ್ತು ಪ್ಲಾಸ್ಮಾ ಶೇಖರಣಾ ರೆಫ್ರಿಜರೇಟರ್‌ಗಳು ವಿಶ್ವದಲ್ಲೇ ಅಗ್ರಗಣ್ಯವಾಗಿದೆ.

No comments:

Advertisement