‘ಇವಿಎಂ ದೂಷಣೆ ಸರಿಯಲ್ಲ: ಕಾರ್ತಿ ಚಿದಂಬರಂ
ನವದೆಹಲಿ: ಬಿಹಾರ ಚುನಾವಣೆಗಳಲ್ಲಿ ಆರ್ಜೆಡಿ ನೇತೃತ್ವದ ಮಹಾ ಘಟಬಂಧನ್ ಮೈತ್ರಿಕೂಟದಲ್ಲಿ ಕಾಂಗ್ರೆಸ್ ದುರ್ಬಲ ಕೊಂಡಿಯಾಗಿ ಕಾಣಿಸಿಕೊಂಡಿದ್ದು, ಪಕ್ಷವನ್ನು ಆತಂಕಕ್ಕೆ ತಳ್ಳಿದೆ. ಈ ಹಿನ್ನೆಲೆಯಲ್ಲಿ ವಿದ್ಯುನ್ಮಾನ ಮತಯಂತ್ರಗಳ (ಎಲೆಕ್ಟ್ರಾನಿಕ್ ಮತದಾನ ಯಂತ್ರಗಳು ಅಥವಾ ಇವಿಎಂ) ವಿಶ್ವಾಸಾರ್ಹತೆಯ ಬಗ್ಗೆ ಕೆಲವು ಭಾಗಗಳಲ್ಲಿ ಎದ್ದಿರುವ ಪ್ರಶ್ನೆಗಳ ಮಧ್ಯೆ, ಕಾಂಗ್ರೆಸ್ ಮುಖಂಡ ಕಾರ್ತಿ ಚಿದಂಬರಂ ಅವರು ‘ವಿದ್ಯುನ್ಮಾನ ಮತಯಂತ್ರವನ್ನು (ಇವಿಎಂ) ದೂಷಿಸುವುದನ್ನು ನಿಲ್ಲಿಸಬೇಕಾದ ಸಮಯ ಬಂದಿದೆ’ ಎಂದು 2020 ನವೆಂಬರ್ 11ರ ಮಂಗಳವಾರ ದೃಢವಾಗಿ ಹೇಳಿದರು.
‘ಯಾವುದೇ ಚುನಾವಣೆಯ ಫಲಿತಾಂಶ ಏನೇ ಇರಲಿ, ಇವಿಎಂ ದೂಷಣೆಯನ್ನು ನಾವು ನಿಲ್ಲಿಸಬೇಕಾಗಿದೆ. ನನ್ನ ಅನುಭವದಲ್ಲಿ, ಇವಿಎಂ ವ್ಯವಸ್ಥೆಯು ದೃಢ, ನಿಖರ ಮತ್ತು ನಂಬಲರ್ಹವಾಗಿದೆ’ ’ಎಂದು ಹಿರಿಯ ನಾಯಕ ಪಿ ಚಿದಂಬರಂ ಅವರ ಪುತ್ರ ಕಾರ್ತಿ ಚಿದಂಬರಂ ನುಡಿದರು.
‘ರಾಜಕೀಯ ಪಕ್ಷಗಳಲ್ಲಿ ವಿಶೇಷವಾಗಿ ಫಲಿತಾಂಶಗಳು ಅವರ ಪರವಾಗಿ ಬಾರದೇ ಇದ್ದಾಗ, ಇವಿಎಂ ಬಗ್ಗೆ ಅನುಮಾನಗಳು ಮೂಡುತ್ತವೆ. ಆದರೆ, ಇಲ್ಲಿಯವರೆಗೆ ಯಾರೂ ತಮ್ಮ ಪ್ರತಿಪಾದನೆಯನ್ನು ವೈಜ್ಞಾನಿಕವಾಗಿ ಪ್ರದರ್ಶಿಸಿಲ್ಲ’ ಎಂದು ನಾಯಕ ಹೇಳಿದರು.
ಬಿಹಾರದಲ್ಲಿ ಆಡಳಿತಾರೂಢ ಪ್ರಜಾತಾಂತ್ರಿಕ ಮೈತ್ರಿಕೂಟವು (ಎನ್ಡಿಎ), ಆರ್ಜೆಡಿ, ಕಾಂಗ್ರೆಸ್ ಮತ್ತು ಮೂರು ಎಡಪಕ್ಷಗಳನ್ನು ಒಳಗೊಂಡ ಮಹಾ ಮೈತ್ರಿಕೂಟಕ್ಕಿಂತ (ಮಹಾ ಘಟಬಂಧನ್) ಹೆಚ್ಚು ಮತಗಳೊಂದಿಗೆ ಆರಂಭಿಕ ಮುನ್ನಡೆ ಸಾಧಿಸಿದ ನಂತರ ಕಾಂಗ್ರೆಸ್ ನಾಯಕ ಉದಿತ್ ರಾಜ್ ಇವಿಎಂಗಳ ವಿಶ್ವಾಸಾರ್ಹತೆಯ ಬಗ್ಗೆ ಪ್ರಶ್ನೆಗಳನ್ನು ಎತ್ತಿದರು. ಉಪಗ್ರಹಗಳನ್ನು ಭೂಮಿಯಿಂದ ನಿಯಂತ್ರಿಸಲು ಸಾಧ್ಯವಿರುವಾಗ ಇವಿಎಂಗಳನ್ನು ಹ್ಯಾಕ್ ಮಾಡಲು ಏಕೆ ಸಾಧ್ಯವಿಲ್ಲ ಎಂದು ಕೇಳಿದರು..
ಇವಿಎಂಗಳನ್ನು ಬಳಸಿದ್ದರೆ ಅಮೆರಿಕದ ಚುನಾವಣೆಯಲ್ಲಿ ಡೊನಾಲ್ಡ್ ಟ್ರಂಪ್ ಸೋಲಲು ಸಾಧ್ಯವೇ ಎಂದು ಅವರು ಪ್ರಶ್ನಿಸಿದರು.
"ಮಂಗಳ ಮತ್ತು ಚಂದ್ರನ ಉಪಗ್ರಹಗಳ ದಿಕ್ಕನ್ನು ಭೂಮಿಯಿಂದ ನಿಯಂತ್ರಿಸಬಹುದಾದರೆ, ಇವಿಎಂ ಅನ್ನು ಏಕೆ ಹ್ಯಾಕ್ ಮಾಡಲು ಸಾಧ್ಯವಿಲ್ಲ’ ಎಂದು ಉದಿತ್ ರಾಜ್ ಹಿಂದಿಯಲ್ಲಿ ಮಾಡಿದ ತಮ್ಮ ಟ್ವೀಟ್ನಲ್ಲಿ ತಿಳಿಸಿದರು.
"ಅಮೆರಿಕದಲ್ಲಿ ಇವಿಎಂಗಳೊಂದಿಗೆ ಚುನಾವಣೆ ನಡೆದಿದ್ದರೆ, ಟ್ರಂಪ್ ಸೋಲುತ್ತಿದ್ದರೇ? ಎಂದು ಅವರು ಕೇಳಿದರು.
ದಲಿತ ನಾಯಕ ಉದಿತ್ ರಾಜ್ ಅವರು ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ವಕ್ತಾರರಾಗಿದ್ದು, ದೆಹಲಿಯ ಮಾಜಿ ಬಿಜೆಪಿ ಸಂಸದ.
ಆದರೆ, ಮತದಾನ ಎಣಿಕೆಯ ಮೊದಲ ಕೆಲವು ಸುತ್ತಿನ ನಂತರ ಮತದಾನದಲ್ಲಿ ಸ್ಪರ್ಧಿಸಿದ ೨೯ ಸ್ಥಾನಗಳಲ್ಲಿ ೧೮ ಸ್ಥಾನಗಳಲ್ಲಿ ಎಡಪಕ್ಷಗಳು, ಮಹಾ ಘಟಬಂಧನದ ಮಿತ್ರ ಪಕ್ಷಗಳು ಮುನ್ನಡೆ ಸಾಧಿಸುತ್ತಿವೆ ಎಂದು ಚುನಾವಣಾ ಆಯೋಗ (ಇಸಿ) ವೆಬ್ಸೈಟ್ ತಿಳಿಸಿತ್ತು.
ಆರ್ಜೆಡಿಯೊಂದಿಗಿನ ಮೈತ್ರಿಯಲ್ಲಿ ಮೂರು ಎಡಪಕ್ಷಗಳಿಗೆ ೨೯ ಸ್ಥಾನಗಳನ್ನು ತೇಜಸ್ವಿ ಯಾದವ್ ನೀಡಿದ್ದರು, ಪಕ್ಷಗಳ ಸದಸ್ಯರಿಗೆ ಇದು ಇಷ್ಟವಿರಲಿಲ್ಲ. ಸಿಪಿಐ (ಎಂ) ಗೆ ನಾಲ್ಕು ಸ್ಥಾನಗಳು, ಸಿಪಿಐಗೆ ಆರು ಮತ್ತು ಸಿಪಿಐ-ಎಂಎಲ್ (ವಿಮೋಚನೆ) ೧೯ ಸ್ಥಾನಗಳನ್ನು ನೀಡಲಾಗಿತ್ತು.
ಕೋವಿಡ್ -೧೯ ಶಿಷ್ಟಾಚಾರದ ಹಿನ್ನೆಲೆಯಲ್ಲಿ ಹೆಚ್ಚುವರಿ ಮತದಾನ ಕೇಂದ್ರಗಳು ಬೇಕಾಗಿದ್ದುದರಿಂದ ೨೦೧೫ ರ ಬಿಹಾರ ಚುನಾವಣೆಗಳಿಗಿಂತ ಶೇಕಡಾ ೬೩ ರಷ್ಟು ಹೆಚ್ಚು ಇವಿಎಂಗಳ ವ್ಯವಸ್ಥೆ ಮಾಡಲಾಗಿದ್ದು. ಹೀಗಾಗಿ ಬಿಹಾರದಲ್ಲಿ ಮತ ಎಣಿಕೆ ಹೆಚ್ಚುವರಿ ಸಮಯ ತೆಗೆದುಕೊಳ್ಳುತ್ತದೆ ಎಂದು ಇಸಿಐ ಅಧಿಕಾರಿಗಳು ತಿಳಿಸಿದ್ದಾರೆ. ಎಣಿಕೆ ತಡರಾತ್ರಿಯವರೆಗೂ ಹೋಗಬಹುದು ಎಂದು ಚುನಾವಣಾ ಆಯೋಗ ತಿಳಿಸಿದೆ.
ಮಧ್ಯಪ್ರದೇಶದಲ್ಲಿ, ಹಿರಿಯ ಕಾಂಗ್ರೆಸ್ ಮುಖಂಡ ದಿಗ್ವಿಜಯ ಸಿಂಗ್ ಕೂಡ ಇವಿಎಂಗಳು "ಫೂಲ್ - ಪ್ರೂಫ್ ಅಲ್ಲ’ ಎಂದು ಹೇಳಿದ್ದಾರೆ.
‘ಇವಿಎಂಗಳು ಟ್ಯಾಂಪರ್-ಪ್ರೂಫ್ ಅಲ್ಲ, ಮತ್ತು ಆಯ್ದ ಟ್ಯಾಂಪರಿಂಗ್ ಮಾಡಲಾಗುತ್ತದೆ. ಯಾವುದೇ ಪರಿಸ್ಥಿತಿಯಲ್ಲಿ ನಾವು ಕಳೆದುಕೊಳ್ಳದ ಕ್ಷೇತ್ರಗಳಿವೆ. ಆದರೆ ನಾವು ಸಾವಿರಾರು ಮತಗಳಿಂದ ಹಿಂದಿದ್ದೇವೆ. ನಾವು ನಾಳೆ ಸಭೆ ನಡೆಸಿ ಫಲಿತಾಂಶಗಳನ್ನು ವಿಶ್ಲೇಷಿಸುತ್ತೇ’ ಎಂದು ದಿಗ್ವಿಜಯ ಸಿಂಗ್ ಅವರನ್ನು ಉಲ್ಲೇಖಿಸಿ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ನೇತೃತ್ವದ ಬಿಜೆಪಿ ಉಪಚುನಾವಣೆ ನಡೆದ ೨೮ ವಿಧಾನಸಭಾ ಕ್ಷೇತ್ರಗಳ ಪೈಕಿ ೨೦ ರಲ್ಲಿ ಮುನ್ನಡೆ ಸಾಧಿಸಿತ್ತು. ಎಣಿಕೆ ದಿನದ ಪ್ರವೃತ್ತಿಗಳ ಪ್ರಕಾರ ಕಾಂಗ್ರೆಸ್ ಏಳು ಸ್ಥಾನಗಳಲ್ಲಿ ಮುಂದಿದೆ ಎಂದು ವರದಿಗಳು ಈ ವೇಳೆಗೆ ತಿಳಿಸಿದ್ದವು.
No comments:
Post a Comment