Friday, November 27, 2020

‘ಭಾರತ್ ಬಯೋಟೆಕ್’ ಫೆಸಿಲಿಟಿ ಕೇಂದ್ರಕ್ಕೆ ಶನಿವಾರ ಪ್ರಧಾನಿ ಭೇಟಿ

  ‘ಭಾರತ್ ಬಯೋಟೆಕ್ ಫೆಸಿಲಿಟಿ ಕೇಂದ್ರಕ್ಕೆ ಶನಿವಾರ ಪ್ರಧಾನಿ ಭೇಟಿ

ಹೈದರಾಬಾದ್: ‘ಕೋವಿಡ್ ೧೯ ಸಾಂಕ್ರಾಮಿಕದ ಚಿಕಿತ್ಸೆಗಾಗಿ ಲಸಿಕೆ ತಯಾರಿಸುತ್ತಿರುವ ಹೈದರಾಬಾದಿನ  ಭಾರತ್ ಬಯೋಟೆಕ್ಸ್ ಕೇಂದ್ರಕ್ಕೆ ಪ್ರಧಾನಿ ನರೇಂದ್ರ ಮೋದಿಯವರು  2020ರ ನವೆಂಬರ್  28ರ ಶನಿವಾರ ಭೇಟಿ ನೀಡಲಿದ್ದಾರೆ ಎಂದು ತೆಲಂಗಾಣ ಸರ್ಕಾರದ ಮುಖ್ಯ ಕಾರ್ಯದರ್ಶಿ ಸೋಮೇಶ್ ಕುಮಾರ್ ತಿಳಿಸಿದ್ದಾರೆ.

ಪುಣೆಯಿಂದ ಭಾರತೀಯ ವಾಯುಪಡೆ ವಿಮಾನದ ಮೂಲಕ ಪ್ರಯಾಣಿಸುವ ಮೋದಿಯವರು ಮಧ್ಯಾಹ್ನದ ನಂತರ ಇಲ್ಲಿನ ಹಾಕಿಂಪೇಟೆ ವಾಯುಪಡೆ ನಿಲ್ದಾಣದಲ್ಲಿ ಬಂದಿಳಿಯಲಿದ್ದಾರೆ ಎಂದು ಮುಖ್ಯ ಕಾರ್ಯದರ್ಶಿ 2020 ನವೆಂಬರ್ 27ರ ಶುಕ್ರವಾರ ಪ್ರಕಟಣೆಯಲ್ಲಿ ತಿಳಿಸಿದರು.

ಮೋದಿಯವರು ವಾಯುಪಡೆ ನಿಲ್ದಾಣದಿಂದ ನೇರವಾಗಿ ಜಿನೋಮ್ ವ್ಯಾಲಿಯಲ್ಲಿರುವ ಭಾರತ್ ಬಯೋಟೆಕ್ಸ್ ಫೆಸಿಲಿಟಿ ಕೇಂದ್ರಕ್ಕೆ ಭೇಟಿ ನೀಡುತ್ತಾರೆ. ಬಯೋಟೆಕ್ ಕೇಂದ್ರದಲ್ಲಿ ಒಂದು ಗಂಟೆ ಕಾಲ, ಲಸಿಕೆ ಉತ್ಪಾದನೆ ಸೇರಿದಂತೆ ವಿವಿಧ ಚಟುವಟಿಕೆಗಳನ್ನು ವೀಕ್ಷಿಸಿ, ಅದೇ ದಿನ ಸಂಜೆ ಹೊತ್ತಿಗೆ ನವದೆಹಲಿಗೆ ವಾಪಾಸಾಗಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಭಾರತ್ ಬಯೋಟೆಕ್ ಕಂಪೆನಿ ಕೋವಿಡ್ ೧೯ ವಿರುದ್ಧದ ಕೋವಾಕ್ಸಿನ್ ಲಸಿಕೆ ತಯಾರಿಸುತ್ತಿದ್ದು, ಅದು ಸದ್ಯ ಮೂರನೇ ಹಂತದ ಕ್ಲಿನಿಕಲ್ ಟ್ರೈಯಲ್ನಲ್ಲಿ ಇದೆ.

ಮೋದಿಯವರು ವಿಡಿಯೊ ಕಾನ್ಫರೆನ್ಸ್ ಮೂಲಕ ಭಾರತ್ ಬಯೋಟೆಕ್ನಲ್ಲಿನ  ಲಸಿಕೆ ತಯಾರಿಕೆ ಮತ್ತು ವಿತರಣೆ ಕುರಿತು ಚರ್ಚೆ ಮಾಡುತ್ತಾರೆ ಎಂದು ಇತ್ತೀಚೆಗೆ ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ ಹೇಳಿದ್ದರು.

No comments:

Advertisement