Tuesday, November 24, 2020

ಲಸಿಕೆಗಾಗಿ ಕೋಲ್ಡ್ ಸ್ಟೋರೇಜ್: ರಾಜ್ಯಗಳಿಗೆ ಪ್ರಧಾನಿ ಸೂಚನೆ

 ಲಸಿಕೆಗಾಗಿ ಕೋಲ್ಡ್ ಸ್ಟೋರೇಜ್: ರಾಜ್ಯಗಳಿಗೆ ಪ್ರಧಾನಿ ಸೂಚನೆ

ನವದೆಹಲಿ: ಕೋವಿಡ್-೧೯ ಲಸಿಕೆಯ ಶೇಖರಣೆ, ನಿರ್ವಹಣೆಗಾಗಿ ಶೈತ್ಯಾಗಾರ (ಸ್ಟೋರೇಜ್) ಸೇರಿದಂತೆ ಅಗತ್ಯ ಸೌಲಭ್ಯಗಳ ಬಗ್ಗೆ ರಾಜ್ಯಗಳು ಕೆಲಸ ಪ್ರಾರಂಭಿಸಬೇಕು ಎಂದು ಮುಖ್ಯಮಂತ್ರಿಗಳ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು 2020 ನವೆಂಬರ್  24ರ ಮಂಗಳವಾರ ಸೂಚನೆ ನೀಡಿದರು.

ಕೊವಿಡ್ -೧೯ ಪರಿಸ್ಥಿತಿಯನ್ನು ಪರಿಶೀಲಿಸಲು ಪ್ರಧಾನಿಯವರು ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಮುಖ್ಯಮಂತ್ರಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ನಡೆಸಿದರು ಮತ್ತು ಕೊರೋನಾವೈರಸ್ ಲಸಿಕೆಗಾಗಿ ಕೋಲ್ಡ್ ಸ್ಟೋರೇಜ್ ಸೌಲಭ್ಯದ ನಿಟ್ಟಿನಲ್ಲಿ ಕೆಲಸ ಆರಂಭಿಸಬೇಕು ಎಂದು ಹೇಳಿದರು.

ಭಾರತೀಯ ನಾಗರಿಕರಿಗಾಗಿ ಪಡೆಯಲಾಗುವ ಕೋವಿಡ್ -೧೯ ವಿರೋಧೀ ಲಸಿಕೆಯುಎಲ್ಲಾ ವೈಜ್ಞಾನಿಕ ಮಾನದಂಡಗಳ ಪ್ರಕಾರ ಸುರಕ್ಷಿತವಾಗಿರುತ್ತದೆ ಎಂದು ಪ್ರಧಾನಿ ರಾಜ್ಯಗಳಿಗೆ ಭರವಸೆ ನೀಡಿದರು. "ಸುರಕ್ಷತೆಯು ನಮಗೆ ವೇಗದಷ್ಟೇ ಮುಖ್ಯವಾಗಿದೆ, ಭಾರತವು ತನ್ನ ನಾಗರಿಕರಿಗೆ ನೀಡುವ ಯಾವುದೇ ಲಸಿಕೆ ಎಲ್ಲ ವೈಜ್ಞಾನಿಕ ಮಾನದಂಡಗಳಿಗೆ ಅನುಸಾರವಾಗಿ ಸುರಕ್ಷಿತವಾಗಿರುತ್ತದೆ. ಲಸಿಕೆ ವಿತರಣಾ ಕಾರ್ಯತಂತ್ರವನ್ನು ರಾಜ್ಯಗಳೊಂದಿಗೆ ಸಾಮೂಹಿಕ ಸಮನ್ವಯದೊಂದಿಗೆ ರೂಪಿಸಲಾಗುತ್ತದೆ. ಶೈತ್ಯಾಗಾರ ಸೌಲಭ್ಯಗಳನ್ನು ಒದಗಿಸಿಕೊಳ್ಳುವ ಕೆಲಸವನ್ನು ರಾಜ್ಯಗಳು ಪ್ರಾರಂಭಿಸಬೇಕು ಎಂದು ಪ್ರಧಾನಿ ಹೇಳಿದರು.

ಭಾರತದ ಕೋವಿಡ್ -೧೯ ಪ್ರಕರಣಗಳು .೧೭ ಮಿಲಿಯನ್ಗೆ (೯೧. ಲಕ್ಷ) ಏರಿರುವ ವೇಳೆಯಲ್ಲೇ ಪ್ರಧಾನಿಯವರು ಪರಿಶೀಲನಾ ಸಭೆ ನಡೆಸಿದ್ದಾರೆ. ದೇಶವು ಉತ್ತಮ  ಚೇತರಿಕೆಯ ಪ್ರಮಾಣವನ್ನು ದಾಖಲಿಸುತ್ತಿದ್ದರೂ, ಭಾರತದ ವಿವಿಧ ರಾಜ್ಯಗಳು ಕೋವಿಡ್ -೧೯ ಪ್ರಕರಣಗಳ ಹೆಚ್ಚಳಕ್ಕೆ ಸಾಕ್ಷಿಯಾಗಿವೆ.

"ಉತ್ತಮ ಚೇತರಿಕೆ ಪ್ರಮಾಣವನ್ನು ನೋಡಿದಾಗ, ವೈರಸ್ ದುರ್ಬಲವಾಗಿದೆ ಎಂದು ಹಲವರು ಭಾವಿಸುತ್ತಾರೆ. ಆದರೆ ಅವು ಶೀಘ್ರದಲ್ಲೇ ಚೇತರಿಸಿಕೊಳ್ಳುತ್ತವೆ, ಹೀಗಾಗಿ ರೀತಿ ಭಾವಿಸುವುದು ಅತಿರೇಕದ ಅಜಾಗರೂಕತೆಗೆ ಕಾರಣವಾಗಿದೆ ... ಲಸಿಕೆ ಕೆಲಸ ಮಾಡುವವರು ತಮ್ಮ ಕೆಲಸ ಮಾಡುತ್ತಿದ್ದಾರೆ ಆದರೆ ಜನರು ಜಾಗರೂಕರಾಗಿದ್ದಾರೆಯೇ ಮತ್ತು ಪ್ರಸರಣವನ್ನು ತಡೆಯಲಾಗುತ್ತಿದೆಯೇ ಎಂದು ನಾವು ಖಚಿತಪಡಿಸಿಕೊಳ್ಳಬೇಕು. ನಾವು ಸೋಂಕಿನ ಸಕಾರಾತ್ಮಕತೆ (ಪಾಸಿಟಿವಿಟಿ) ಪ್ರಮಾಣವನ್ನು ಶೇಕಡಾ ೫ಕ್ಕಿಂತ ಕೆಳಕ್ಕೆ ತರಬೇಕಾಗಿದೆ ಎಂದು ಪ್ರಧಾನಿ ಹೇಳಿದರು.

ಕೋವಿಡ್ -೧೯ ನಿಗ್ರಹ ಹೋರಾಟದಲ್ಲಿ ಸಡಿಲಿಕೆಯ ವಿರುದ್ಧ ಕಾವಲು ಅಗತ್ಯ ಎಂದು ಹೇಳಿದ ಪ್ರಧಾನಿ ಸಾವಿನ ಪ್ರಮಾಣವನ್ನು ಶೇಕಡಾ ೧ಕ್ಕಿಂತ ಕೆಳಕ್ಕೆ ತನ್ನಿ ಎಂದು ರಾಜ್ಯಗಳಿಗೆ ಸೂಚಿಸಿದರು.

ಚೇತರಿಕೆ ಮತ್ತು ಸಾವಿನ ಪ್ರಮಾಣಕ್ಕೆ ಸಂಬಂಧಿಸಿದಂತೆ ಭಾರತದ ಕೊರೋನಾವೈರಸ್ ಪರಿಸ್ಥಿತಿ ಇತರ ದೇಶಗಳಿಗಿಂತ ಹೆಚ್ಚು ಸ್ಥಿರವಾಗಿದೆ ಎಂದು ಅವರು ಒತ್ತಿ ಹೇಳಿದರು. ಆದರೂ ಹೆಚ್ಚಿನ ಪ್ರಮಾಣದಲ್ಲಿ ಆರ್ಟಿ-ಪಿಸಿಆರ್ ಪರೀಕ್ಷೆಗಳನ್ನು ನಡೆಸುವಂತೆ ಅವರು ಕರೆ ನೀಡಿದರು.

"ವೈರಸ್ ಹರಡುವುದನ್ನು ಕಡಿಮೆ ಮಾಡುವ ನಮ್ಮ ಪ್ರಯತ್ನಗಳನ್ನು ನಾವು ವೇಗಗೊಳಿಸಬೇಕಾಗಿದೆ. ಪರೀಕ್ಷೆ, ದೃಢೀಕರಣ, ಸಂಪರ್ಕ ಪತ್ತೆಹಚ್ಚುವಿಕೆ ಮತ್ತು ದತ್ತಾಂಶಗಳಿಗೆ ಹೆಚ್ಚಿನ ಆದ್ಯತೆ ನೀಡಬೇಕು" ಎಂದು ಅವರು ಹೇಳಿದರು.

ಸಭೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಆರೋಗ್ಯ ಸಚಿವ ಹರ್ಷ್ ವರ್ಧನ್ ಭಾಗವಹಿಸಿದ್ದರು, ವರ್ಚುವಲ್ ಸಂವಾದದಲ್ಲಿ ಭಾಗವಹಿಸಿದ ಮುಖ್ಯಮಂತ್ರಿಗಳಲ್ಲಿ ದೆಹಲಿಯ ಅರವಿಂದ್ ಕೇಜ್ರಿವಾಲ್, ರಾಜಸ್ಥಾನದ ಅಶೋಕ್ ಗೆಹ್ಲೋಟ್, ಪಶ್ಚಿಮ ಬಂಗಾಳದ ಮಮತಾ ಬ್ಯಾನರ್ಜಿ, ಮಹಾರಾಷ್ಟ್ರದ ಉದ್ಧವ್ ಠಾಕ್ರೆ, ಛತ್ತೀಸ್ ಗಢದ ಭೂಪೇಶ್ ಬಘೆಲ್, ತೆಲಂಗಾಣದ ಕೆ ಚಂದ್ರಶೇಖರ್ ರಾವ್ ಮತ್ತು ಗುಜರಾತ್ ವಿಜಯ್ ರೂಪಾನಿ ಇದ್ದರು. ಚಿಕಿತ್ಸೆ ಮತ್ತು ಪರೀಕ್ಷೆಯ ಬೃಹತ್ ಜಾಲವು ಇಡೀ ದೇಶದಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ ಮತ್ತು ಇದನ್ನು ನಿಯಮಿತವಾಗಿ ವಿಸ್ತರಿಸಲಾಗುತ್ತಿದೆ ಎಂದು ಪ್ರಧಾನಿ ಹೇಳಿದರು.

ಕೊರೋನವೈರಸ್ ಪರಿಸ್ಥಿತಿ ಕುರಿತು ಮೋದಿ ರಾಜ್ಯಗಳೊಂದಿಗೆ ಹಲವಾರು ಸುತ್ತಿನ ವರ್ಚುವಲ್ ಸಭೆಗಳನ್ನು ನಡೆಸಿದ್ದಾರೆ. ರಾಷ್ಟ್ರೀಯ ದೈನಂದಿನ ಕೋವಿಡ್-೧೯ ಪ್ರಕರಣಗಳ ಸಂಖ್ಯೆಯು ಕೆಲ ಸಮಯದಿಂದ ೫೦,೦೦೦ ಕ್ಕಿಂತಲೂ ಕಡಿಮೆಯಿದ್ದರೆ, ಹಲವಾರು ನಗರ ಕೇಂದ್ರಗಳು ಉಲ್ಬಣಕ್ಕೆ ಸಾಕ್ಷಿಯಾಗಿವೆ, ಇದರ ಪರಿಣಾಮವಾಗಿ ಕೆಲವು ನಗರಗಳಲ್ಲಿ ಕರ್ಫ್ಯೂ ಸೇರಿದಂತೆ ಹಲವಾರು ಕ್ರಮಗಳನ್ನು ಜಾರಿಗೊಳಿಸಲಾಗಿದೆ.

ಭಾರತದಲ್ಲಿ ಮಂಗಳವಾರ ಒಂದೇ ದಿನದಲ್ಲಿ ೩೭,೯೭೫ ಹೊಸ ಕೊರೋನವೈರಸ್ ಸೋಂಕುಗಳು ವರದಿಯಾಗಿದ್ದು, ದೇಶದ ಕೋವಿಡ್-೧೯ ಪ್ರಕರಣಗಳ ಸಂಖ್ಯೆ  ೯೧.೭೭ ಲಕ್ಷಕ್ಕೆ ಏರಿದೆ. ಆದರೆ ಚೇತರಿಕೆ ಸಂಖ್ಯೆ ೮೬ ಲಕ್ಷವನ್ನು ದಾಟಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ನವೀಕರಿಸಿದ ಅಂಕಿಅಂಶಗಳು ತಿಳಿಸಿವೆ.

ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರು ತಮ್ಮ ಸರ್ಕಾರವು ಪರೀಕ್ಷೆಯನ್ನು ಹೆಚ್ಚಿಸಿದೆ ಮತ್ತು ಸೋಂಕನ್ನು ನಿಭಾಯಿಸಲು ಮೂಲಸೌಕರ್ಯಗಳನ್ನು ಬಲಪಡಿಸಿದೆ ಎಂದು ಹೇಳಿದರು. ಸೋಂಕನ್ನು ತಡೆಗಟ್ಟಲು ರಾಜ್ಯ ಸರ್ಕಾರ ಕೈಗೊಂಡಿರುವ ಕ್ರಮಗಳನ್ನು ಎತ್ತಿ ತೋರಿಸಿದ ಮುಖ್ಯಮಂತ್ರಿ, ಪಟಾಕಿ ಸಿಡಿಸುವಿಕೆ ನಿಷೇಧ, ಮುಖಗವಸು ಧರಿಸುವ ಕಾನೂನು, ಅತಿ ಪೀಡಿತ ಜಿಲ್ಲೆಗಳಲ್ಲಿ ರಾತ್ರಿ ಕರ್ಫ್ಯೂ ಮತ್ತು ಕೂಟಗಳ ಮೇಲಿನ ನಿರ್ಬಂಧಗಳ ಕುರಿತು ಮಾತನಾಡಿದರು. ಆಮ್ಲಜನಕ ಉತ್ಪಾದನಾ ಘಟಕಗಳಂತಹ ಮೂಲಸೌಕರ್ಯಗಳನ್ನು ಬಲಪಡಿಸುವುದು, ಐಸಿಯುಗಳ ಸಂಖ್ಯೆಯಲ್ಲಿ ಹೆಚ್ಚಳ ಮತ್ತು ಆಸ್ಪತ್ರೆಗಳಲ್ಲಿ ಆಮ್ಲಜನಕ ಹಾಸಿಗೆಗಳ ಬಗ್ಗೆ ಅವರು ಪ್ರಧಾನಮಂತ್ರಿಯವರ ಜೊತೆ ಮಾಹಿತಿಗಳನ್ನು ಹಂಚಿಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ಸೆಪ್ಟೆಂಬರ್ ಮತ್ತು ಅಕ್ಟೋಬರ್ ತಿಂಗಳಲ್ಲಿ ರಾಜ್ಯ ಸರ್ಕಾರವು ದಿನಕ್ಕೆ ೩೦,೦೦೦ ಮಾದರಿಗಳನ್ನು ಪರೀಕ್ಷಿಸುತ್ತಿದೆ ಎಂದು ಗೆಹ್ಲೋಟ್ ಹೇಳಿದರು.

ಪ್ರಧಾನಿಗೆ ಸಹಕಾರದ ಭರವಸೆ ನೀಡಿದ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ರಾಜ್ಯದಲ್ಲಿ ಕೋವಿಡ್ -೧೯ ಲಸಿಕೆ ಕಾರ್ಯಕ್ರಮವನ್ನು ತ್ವರಿತವಾಗಿ ಅನುಷ್ಠಾನಗೊಳಿಸಲು ಕೇಂದ್ರ ಮತ್ತು ಇತರ ಎಲ್ಲ ಪಾಲುದಾರರೊಂದಿಗೆ ಕೆಲಸ ಮಾಡಲು ತಮ್ಮ ಸರ್ಕಾರ ಸಂಪೂರ್ಣ ಸಿದ್ಧವಾಗಿದೆ ಎಂದು ಹೇಳಿದರು.

ಪಶ್ಚಿಮ ಬಂಗಾಳವು ಕೋವಿಡ್-೧೯ ಸಕಾರಾತ್ಮಕತೆ ಮತ್ತು ಸಾವಿನ ಪ್ರಮಾಣವನ್ನು ಯಶಸ್ವಿಯಾಗಿ ಕಡಿಮೆ ಮಾಡಿದೆ ಎಂದು ಬೊಟ್ಟು ಮಾಡಿದ ಬ್ಯಾನರ್ಜಿ, ದೇಶದ ಇತರ ಭಾಗಗಳಿಗೆ ಹೋಲಿಸಿದರೆ ರಾಜ್ಯದ ರೋಗಿಗಳಲ್ಲಿ ಚೇತರಿಕೆಯ ಪ್ರಮಾಣವು ಸುಧಾರಿಸಿದೆ ಎಂದರು.

ಗುಜರಾತ್ನಲ್ಲಿನ ಕೋವಿಡ್-೧೯ ಪರಿಸ್ಥಿತಿ ನಿಯಂತ್ರಣದಲ್ಲಿದೆ ಮತ್ತು ರೋಗಿಗಳಿಗೆ ಸಾಕಷ್ಟು ಸಂಖ್ಯೆಯ ಹಾಸಿಗೆಗಳು ಲಭ್ಯವಿದೆ ಎಂದು ಮುಖ್ಯಮಂತ್ರಿ ವಿಜಯ್ ರೂಪಾನಿ ವಾಸ್ತವ ಸಂವಾದದ ಸಂದರ್ಭದಲ್ಲಿ ಹೇಳಿದರು. ಸಭೆಯಲ್ಲಿ  ಕೊರೋನವೈರಸ್ ಹರಡುವಿಕೆಯನ್ನು ತಡೆಯಲು ವಿವಿಧ ಉಪಕ್ರಮಗಳ ಬಗ್ಗೆ ರೂಪಾನಿ ಮಾಹಿತಿ ನೀಡಿದರು.

ಏತನ್ಮಧ್ಯೆ, ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ರಾಷ್ಟ್ರ ರಾಜಧಾನಿಯಲ್ಲಿ ಕೋವಿಡ್ -೧೯ ಮೂರನೇ ಅಲೆಯ ತೀವ್ರತೆಗೆ ಅನೇಕ ಅಂಶಗಳು ಕಾರಣವಾಗಿದು, ವಾಯುಮಾಲಿನ್ಯವು ಒಂದು ಪ್ರಮುಖ ಅಂಶವಾಗಿದೆ ವಿವರಿಸಿದರು.

No comments:

Advertisement