ಉಗ್ರರಿಂದ ಗ್ರೆನೇಡ್ ದಾಳಿ: ೧೨ ನಾಗರಿಕರಿಗೆ ಗಾಯ
ಶ್ರಿನಗರ: ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾ ಜಿಲ್ಲೆಯಲ್ಲಿ 2020 ನವೆಂಬರ್ 18ರ ಬುಧವಾರ ಭದ್ರತಾ ಪಡೆ ಸಿಬ್ಬಂದಿ ತಂಡದ ಮೇಲೆ ಉಗ್ರರು ನಡೆಸಿದ ಗ್ರೆನೇಡ್ ದಾಳಿಯ ಸಂದರ್ಭದಲ್ಲಿ ೧೨ ಮಂದಿ ನಾಗರಿಕರು ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಪುಲ್ವಾಮಾದ ಕಾಕಪೋರಾ ಪ್ರದೇಶದಲ್ಲಿ ಈ ಘಟನೆ ನಡೆದಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಗ್ರೆನೇಡ್ ಉದ್ದೇಶಿತ ಗುರಿಯನ್ನು ತಪ್ಪಿಸಿಕೊಂಡು ರಸ್ತೆಯಲ್ಲಿ ಸ್ಫೋಟಗೊಂಡಿದೆ ಎಂದು ಅವರು ಹೇಳಿದರು. ಸ್ಫೋಟದಲ್ಲಿ ಹನ್ನೆರಡು ನಾಗರಿಕರಿಗೆ ಗಾಯಗಳಾಗಿದ್ದು, ಅವರನ್ನು ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.
ಈ ಪ್ರದೇಶವನ್ನು ಸುತ್ತುವರಿಯಲಾಗಿದೆ ಮತ್ತು ದಾಳಿಕೋರರನ್ನು ಬಂಧಿಸಲು ಬೇಟೆಯನ್ನು ಪ್ರಾರಂಭಿಸಲಾಗಿದೆ ಎಂದು ಅಧಿಕಾರಿ ಹೇಳಿದರು.
No comments:
Post a Comment