ಬಿಹಾರದಲ್ಲಿ ಅತಂತ್ರ ವಿಧಾನಸಭೆ: ಮತದಾನೋತ್ತರ ಸಮೀಕ್ಷೆ ಭವಿಷ್ಯ
ನವದೆಹಲಿ: ಬಿಹಾರ ವಿಧಾನಸಭೆಯ ಮೂರನೇ ಹಾಗೂ ಕೊನೆಯ ಹಂತದ ಮತದಾನ 2020ರ ನವೆಂಬರ್ 07ರ ಶನಿವಾರ ಮುಕ್ತಾಯವಾಗುತ್ತಿದ್ದಂತೆಯೇ ವಿವಿಧ ಸಂಸ್ಥೆಗಳು ನಡೆಸಿದ ಮತದಾನೋತ್ತರ ಸಮೀಕ್ಷೆಯ ಫಲಿತಾಂಶ ಹೊರಬಿದ್ದಿದ್ದು, ಆಡಳಿತಾರೂಢ ಎನ್ಡಿಎಗೆ ಪ್ರಬಲ ಆಡಳಿತ ವಿರೋಧೀ ಅಲೆಯ ಪೆಟ್ಟಿನ ಹಾಗೂ ಅಸ್ಥಿರ ವಿಧಾನಸಭೆಯ ಮುನ್ಸೂಚನೆ ನೀಡಿತು.
ಚುನಾವಣೆಯಲ್ಲಿ ಮುಖ್ಯಮಂತ್ರಿ ನಿತೀಶ ಕುಮಾರ್ ನೇತೃತ್ವದ ಬಿಹಾರದ ರಾಷ್ಟ್ರೀಯ ಪ್ರಜಾತಾಂತ್ರಿಕ ಮೈತ್ರಿಕೂಟ (ಎನ್ಡಿಎ) ಸ್ಪಷ್ಟ ಬಹುಮತದ ಕೊರತೆಯನ್ನು ಎದುರಿಸಬಹುದು, ರಾಷ್ಟ್ರೀಯ ಜನತಾದಳ ನೇತೃತ್ವದ ಮಹಾಘಟ ಬಂಧನ್ ಮುಖ್ಯಸ್ಥ ತೇಜಸ್ವಿ ಯಾದವ್ ಅವರು ೨೪೩ ಸದಸ್ಯ ಬಲದ ವಿಧಾನಸಭೆಯಲ್ಲಿ ಸುಮಾರು ೧೨೦ ಸ್ಥಾನಗಳನ್ನು ಮತ್ತು ಎನ್ಡಿಎ ಸುಮಾರು ೧೧೬ ಸ್ಥಾನಗಳನ್ನು ಗೆಲ್ಲುವ ನಿರೀಕ್ಷೆ ಇದೆ ಎಂದು ಟೈಮ್ಸ್ ನೌ-ಸಿ ವೋಟರ್ ಹಾಗೂ ರಿಪಬ್ಲಿಕ್ ಟಿವಿ- ಜನ್ ಕಿ ಬಾತ್ ನಡೆಸಿದ ಮತದಾನೋತ್ತರ ಸಮೀಕ್ಷೆಗಳು ಹೇಳಿದವು.
ಕೋವಿಡ್ -೧೯ ರ ಅಸಮರ್ಪಕ ನಿರ್ವಹಣೆ ಮತ್ತು ಮತ್ತು ವಲಸೆ ಬಿಕ್ಕಟ್ಟಿನಿಂದಾಗಿ ಸಾರ್ವಜನಿಕರ ಭಾವನೆ ನಿತೀಶ ಕುಮಾರ್ ಅವರ ವಿರುದ್ಧ ತಿರುಗಿಬಿದ್ದಿದ್ದರಿಂದ ಅವರ ವಿರುದ್ಧ ಆಡಳಿತ ವಿರೋಧಿ ಅಲೆ ಎದ್ದಿದೆ ಎಂದು ಸಮೀಕ್ಷೆಗಳು ಹೇಳಿದವು.
ರಿಪಬ್ಲಿಕ್ ಟಿವಿ-ಜಾನ್ ಕಿ ಬಾತ್ ಎನ್ಡಿಎಗೆ ೯೧ ರಿಂದ ೧೧೭ ಮತ್ತು ಆರ್ಜೆಡಿ ಮೈತ್ರಿಕೂಟಕ್ಕೆ ೧೧೮-೧೩೮, ಲೋಕ ಜನಶಕ್ತಿ ಪಕ್ಷಕ್ಕೆ (ಎಲ್‌ಜೆಪಿ) ೫ ರಿಂದ ೮ ಸ್ಥಾನಗಳನ್ನು ನಿರೀಕ್ಷಿಸಿದೆ, ಇತರರು ೩ ರಿಂದ ೬ ಸ್ಥಾನಗಳನ್ನು ಪಡೆಯಬಹುದು ಎಂದು ಹೇಳಿತು.
ಅಕ್ಟೋಬರ್ ೨೮ ರಂದು ಪ್ರಾರಂಭವಾದ ಮತ್ತು ಶನಿವಾರ ಕೊನೆಗೊಂಡ ಮೂರು ಹಂತದ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಉಭಯ ಕಡೆಯ ಪ್ರಮುಖ ಪ್ರಚಾರಕರು ಕಟುವಾದ ಆರೋಪಗಳನ್ನು ಮಾಡಿದ್ದರು. ಪ್ರಧಾನ ಮಂತ್ರಿ ನರೇಂದ್ರ ಮೋದಿ, ರಕ್ಷಣಾ ಸಚಿವ ರಾಜನಾಥ್ ಸಿಂಗ್, ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ ಮತ್ತು ಕಾಂಗ್ರೆಸ್ ನ ರಾಹುಲ್ ಗಾಂಧಿ ಸೇರಿದಂತೆ ಎಲ್ಲಾ ರಾಜಕೀಯ ಪಕ್ಷಗಳು ತಮ್ಮ ಸ್ಟಾರ್ ಪ್ರಚಾರಕರನ್ನು ಕರೆತಂದಿದ್ದವು. ಸಹಸ್ರಾರು ಗಣಕೀಕೃತ ಯಂತ್ರಗಳಲ್ಲಿ ದಾಖಲಾಗಿರುವ ಮತಗಳ ಎಣಿಕೆ ನವೆಂಬರ್ ೧೦ರಂದು ನಡೆಯಲಿದ್ದು, ಮಧ್ಯಾಹ್ನದ ವೇಳೆಗೆ ಫಲಿತಾಂಶ ನಿರೀಕ್ಷಿಸಲಾಗಿದೆ.
ಮತದಾನೋತ್ತರ ಸಮೀಕ್ಷಾ ವಿವರ ಹೀಗಿದೆ:
ಎಬಿಪಿ-ಸಿವೊಟರ್ ಸಮೀಕ್ಷೆಯು ಎನ್ಡಿಎಗೆ ೧೦೪-೧೨೮ ಸ್ಥಾನಗಳು, ಮಹಾಘಟ ಬಂಧನ್ಗೆ ೧೦೮-೧೩೧ ಮತ್ತು ಇತರ ಪಕ್ಷಗಳಿಗೆ ನಾಲ್ಕರಿಂದ ಎಂಟು ಸ್ಥಾನಗ ಮುನ್ಸೂಚನೆ ನೀಡಿದೆ.
ರಿಪಬ್ಲಿಕ್- ಜನ್ ಕಿ ಬಾತ್ ಪ್ರಕಾರ, ಎನ್ಡಿಎಗೆ ೯೧-೧೧೭, ಮಹಾಘಟ ಬಂಧನ್ಗೆ ೧೧೮-೧೩೮, ಎಲ್ ಜೆಪಿಗೆ ೫-೮, ಇತರರು: ೩-೬ ಸ್ಥಾನ ಗೆಲ್ಲಲಿದ್ದಾರೆ.
ಟೈಮ್ಸ್ ನೌ ಸಿ-ವೋಟರ್ ಸಮೀಕ್ಷೆಯ ಪ್ರಕಾರ ಎನ್ಡಿಎ: ೧೧೬ (ಬಿಜೆಪಿ: ೭೦, ಜೆಡಿಯು: ೪೨, ಎಚ್ ಎಎಂ: ೨, ವಿಐಪಿ: ೨) ಸ್ಥಾನ ಗೆಲ್ಲಲಿವೆ. ಮಹಾಘಟ ಬಂಧನ್: ೧೨೦ (ಆರ್ಜೆಡಿ: ೮೫, ಕಾಂಗ್ರೆಸ್: ೨೫, ಎಡ: ೧೦, ಎಲ್ಜೆಪಿ: ೧
ಇತರರು: ೬ ಸ್ಥಾನ ಪಡೆಯಲಿವೆ.
ಎಬಿಪಿ - ಸಿವೊಟರ್ ಎಕ್ಸಿಟ್ ಪೋಲ್:
ಎನ್ಡಿಎ: ೧೦೪ -೧೨೮
ಆರ್ ಜೆಡಿ +: ೧೦೮ – ೧೩೧
ಎಬಿಪಿ ನ್ಯೂಸ್ ಸಿವೊಟರ್ ಎಕ್ಸಿಟ್ ಪೋಲ್: ಪಕ್ಷವಾರು ವಿವರ:
ಎನ್ಡಿಎ
ಜೆಡಿಯು: ೩೮-೪೬,
ಬಿಜೆಪಿ: ೬೬
ವಿಐಪಿ: ೦-೪
ಎಚ್ಎಎಂ: ೦-೪
ಮಹಾಘಟ ಬಂಧನ್
ಆರ್ಜೆಡಿ: ಡಿ: ೮೧-೮೯
ಕಾಂಗ್ರೆಸ್: ೨೧- ೨೯
ಎಡ: ೬-೧೩
ಟಿವಿ ೯ - ಭರತವರ್ಷ
ಮಹಾಘಟ್ ಬಂಧನ್- ೧೧೫- ೧೨೫
ಎನ್ಡಿಎ ೧೧೦- ೧೨೦
ಎಲ್ಜೆಪಿ ೦೩-೦೫
ಇತರೆ ೧೦-೧೫
ಮಧ್ಯಪ್ರದೇಶ ಉಪಚುನಾವಣೆ
ಮಧ್ಯಪ್ರದೇಶ ಉಪಚುನಾವಣೆಯಲ್ಲಿ ಆಜ್ ತಕ್ ಮತ್ತು ಇಂಡಿಯಾ ಟುಡೆ - ಮೈ ಇಂಡಿಯಾ ಆಕ್ಸಿಸ್ ಮತದಾನೋತ್ತರ ಸಮೀಕ್ಷೆ ಪ್ರಕಾರ ೨೮ ಸ್ಥಾನಗಳಲ್ಲಿ ಕಾಂಗ್ರೆಸ್ ೧೦-೧೨ ಸ್ಥಾನಗಳನ್ನು ಪಡೆಯಬಹುದು, ಆದರೆ ಬಿಜೆಪಿ ಶೇಕಡಾ ೪೬ ಮತಗಳನ್ನು ಪಡೆಯಬಹುದು ಮತ್ತು ೧೬-೧೮ ಸ್ಥಾನಗಳನ್ನು ಪಡೆಯಬಹುದು.
ಗುಜರಾತ್ ಉಪಚುನಾವಣೆ
ಆಜ್ ತಕ್ / ಇಂಡಿಯಾ ಟುಡೆ - ಮೈ ಇಂಡಿಯಾ ಆಕ್ಸಿಸ್ ಮತದಾನೋತ್ತರ ಸಮೀಕ್ಷೆ ಪ್ರಕಾರ ಗುಜರಾತ್ ೮ ಕ್ಷೇತ್ರಗಳ ಉಪಚುನಾವಣೆಗಳಿಲ್ಲಿ ಬಿಜೆಪಿ: ೬-೭, ಕಾಂಗ್ರೆಸ್: ೦ -೧ ಸ್ಥಾನ ಗಳಿಸಬಹುದು.
No comments:
Post a Comment