Tuesday, November 17, 2020

೧೨ ನೇ ಬ್ರಿಕ್ಸ್ ಶೃಂಗಸಭೆಯಲ್ಲಿ ಪ್ರಧಾನಿ ಮೋದಿ ಹೇಳಿದ್ದೇನು?

 ೧೨ ನೇ ಬ್ರಿಕ್ಸ್ ಶೃಂಗಸಭೆಯಲ್ಲಿ ಪ್ರಧಾನಿ ಮೋದಿ ಹೇಳಿದ್ದೇನು?

ನವದೆಹಲಿ: ಭಯೋತ್ಪಾದನೆಯನ್ನು ಬೆಂಬಲಿಸುವ ರಾಷ್ಟ್ರಗಳನ್ನು ಹೆಸರು ಹಿಡಿದು ಕರೆಯಬೇಕು ಮತ್ತು ಅಂತಹ ದೇಶಗಳನ್ನು ಶಿಕ್ಷಿಸಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಅವರು 2020 ನವೆಂಬರ್ 17ರ ಮಂಗಳವಾರ ಬ್ರಿಕ್ಸ್ ಪ್ರಭಾವಿ ಗುಂಪಿನ ವಾಸ್ತವ ಶೃಂಗಸಭೆಯನ್ನು ಉದ್ದೇಶಿಸಿ ಮಾತನಾಡುತ್ತಾ ಹೇಳಿದರು.

ಕೋವಿಡ್ -೧೯ ಸಾಂಕ್ರಾಮಿಕ ರೋಗದ ಮಧ್ಯೆ ಆರ್ಥಿಕ ಚೇತರಿಕೆಗೆ ಒತ್ತು ನೀಡುವ ಬ್ರೆಜಿಲ್-ರಷ್ಯಾ-ಭಾರತ-ಚೀನಾ-ದಕ್ಷಿಣ ಆಫ್ರಿಕಾ (ಬ್ರಿಕ್ಸ್) ಗುಂಪಿನ ವಾಸ್ತವ ಶೃಂಗಸಭೆಯನ್ನು ಉದ್ದೇಶಿಸಿ ಪ್ರಧಾನಿ ಮೋದಿ ಮಾತನಾಡಿದರು.

ಶೃಂಗಸಭೆಯು ಭಯೋತ್ಪಾದನೆ ನಿಗ್ರಹ, ವ್ಯಾಪಾರ, ಆರೋಗ್ಯ, ಇಂಧನ ಮತ್ತು ಕೊರೋನಾವೈರಸ್ ಸಾಂಕ್ರಾಮಿಕದ ಪರಿಣಾಮವನ್ನು ಸರಿದೂಗಿಸುವ ಮಾರ್ಗಗಳ ಬಗ್ಗೆ ಸಹಕಾರವನ್ನು ಕೇಂದ್ರೀಕರಿಸುವ ನಿರೀಕ್ಷೆಯಿದೆ.

ಬ್ರೆಜಿಲ್-ರಷ್ಯಾ-ಭಾರತ-ಚೀನಾ-ದಕ್ಷಿಣ ಆಫ್ರಿಕಾ (ಬ್ರಿಕ್ಸ್) ಗುಂಪಿನ ೧೨ ನೇ ಶೃಂಗಸಭೆಯಲ್ಲಿ ಚೀನಾ ಅಧ್ಯಕ್ಷ ಕ್ಸಿ ಜಿನ್ಪಿಂಗ್, ಬ್ರೆಜಿಲ್ ಅಧ್ಯಕ್ಷ ಜೈರ್ ಬೋಲ್ಸನಾರೊ ಮತ್ತು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಭಾಗವಹಿಸಿದ್ದಾರೆ.

ಪೂರ್ವ ಲಡಾಖ್ನಲ್ಲಿ ಭಾರತ ಮತ್ತು ಚೀನಾವು ಆರು ತಿಂಗಳಿಗೂ ಹೆಚ್ಚು ಕಾಲ ಗಡಿಯಲ್ಲಿ ಮುಖಾಮುಖಿಯಾಗಿರುವ ಸಮಯದಲ್ಲೇ ಬ್ರಿಕ್ಸ್ ಶೃಂಗಸಭೆ  ನಡೆಯುತ್ತಿದ್ದು ಪ್ರಧಾನಿ ಮೋದಿ ಮತ್ತು ಚೀನಾದ ಅಧ್ಯಕ್ಷ ಕ್ಷಿ ಜಿನ್ ಪಿಂಗ್ ಒಂದೇ ವೇದಿಕೆಯಲ್ಲಿ ಬಂದಿದ್ದಾರೆ. ನವೆಂಬರ್ ೧೦ ರಂದು ನಡೆದ ಶಾಂಘೈ ಸಹಕಾರ ಸಂಸ್ಥೆ (ಎಸ್ಸಿಒ) ವಾರ್ಷಿಕ ಶೃಂಗಸಭೆಯಲ್ಲಿ ಕೂಡಾ ಮೋದಿ ಮತ್ತು ಕ್ಸಿ ಇಬ್ಬರೂ ಮುಖಾಮುಖಿಯಾಗಿದ್ದರು.

ಎಸ್ಸಿಒ ವರ್ಚುವಲ್ ಶೃಂಗದಲ್ಲಿ ಮೋದಿಯವರು ಚೀನಾ ಮತ್ತು ಅದರ ಸರ್ವಋತು ಸ್ನೇಹಿತ ಪಾಕಿಸ್ತಾನಕ್ಕೆ ವೇದಿಕೆಯಿಂದ ಕಠಿಣ ಸಂದೇಶ ಕಳುಹಿಸಿದ್ದರು. ಚೀನಾ ಮತ್ತು ಅದರ ವಿಸ್ತರಣಾ ನೀತಿಗೆ ಸಂಬಂಧಿಸಿದಂತೆ, "ಸಂಪರ್ಕವನ್ನು ಸುಧಾರಿಸಲು ಇತರರ ಸಾರ್ವಭೌಮತ್ವ ಮತ್ತು ಪ್ರಾದೇಶಿಕ ಸಮಗ್ರತೆಯನ್ನು ಗೌರವಿಸುವುದು ಮುಖ್ಯ ಎಂದು ಭಾರತ ನಂಬುತ್ತದೆಎಂದು ಅವರು ಹೇಳಿದ್ದರು.

ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರ ಆಹ್ವಾನದ ಮೇರೆಗೆ ಮೋದಿ ವರ್ಚುವಲ್ ಬ್ರಿಕ್ಸ್ ಶೃಂಗಸಭೆಯಲ್ಲಿಜಾಗತಿಕ ಸ್ಥಿರತೆ, ಹಂಚಿಕೆಯ ಭದ್ರತೆ ಮತ್ತು ನವೀನ ಬೆಳವಣಿಗೆಎಂಬ ವಿಷಯದೊಂದಿಗೆ ಭಾಗವಹಿಸಿದರು.

ಶೃಂಗಸಭೆಯ ಕಾರ್ಯಸೂಚಿಯಲ್ಲಿ ಇಂಟ್ರಾ-ಬ್ರಿಕ್ಸ್ ಸಹಕಾರ, ಬಹುಪಕ್ಷೀಯ ವ್ಯವಸ್ಥೆಯನ್ನು ಸುಧಾರಿಸುವಂತಹ ಪ್ರಮುಖ ಜಾಗತಿಕ ಸಮಸ್ಯೆಗಳು, ಸಾಂಕ್ರಾಮಿಕ, ಭಯೋತ್ಪಾದನೆ ನಿಗ್ರಹ ನಿಟ್ಟಿನ ಸಹಕಾರ, ವ್ಯಾಪಾರ, ಆರೋಗ್ಯ ಮತ್ತು ಶಕ್ತಿಯ ಪರಿಣಾಮವನ್ನು ತಗ್ಗಿಸುವ ಕ್ರಮಗಳು ಸೇರಿವೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಅನುರಾಗ್ ಶ್ರೀವಾಸ್ತವ ಟ್ವೀಟ್ ಮಾಡಿದ್ದಾರೆ.

ಭಾರತ-ಚೀನಾ ಗಡಿ ಮುಖಾಮುಖಿ ಮೇ ತಿಂಗಳಲ್ಲಿ ನಡೆದ ನಂತರ ಮೋದಿ ಮತ್ತು ಕ್ಸಿ ಒಂದೇ ವರ್ಚುವಲ್ ವೇದಿಕೆಯಲ್ಲಿ ಬಂದಿರುವುದು ಇದು ಎರಡನೇ ಬಾರಿ.

ಬ್ರಿಕ್ಸ್ ನಾಯಕತ್ವದಲ್ಲಿ, ಭಾರತವು ಬ್ರಿಕ್ಸ್ ದೇಶಗಳಲ್ಲಿ ಡಿಜಿಟಲ್ ಆರೋಗ್ಯ ಮತ್ತು ಸಾಂಪ್ರದಾಯಿಕ ಔಷಧವನ್ನು ಉತ್ತೇಜಿಸುತ್ತದೆ ಎಂದು ಹೇಳಿದ ಮೋದಿ, ತಮ್ಮ ಭಾಷಣದಲ್ಲಿಆತ್ಮನಿರ್ಭರ ಭಾರತಪರಿಕಲ್ಪನೆಯ ಬಗ್ಗೆ ಸಂಕ್ಷಿಪ್ತವಾಗಿ ಮಾತನಾಡಿದರು.

ಭಾರತ ಔಷಧ ಕ್ಷೇತ್ರದ ಬಲದಿಂದಾಗಿ, ಕೋವಿಡ್- ದಿಗ್ಬಂಧನ (ಲಾಕ್ಡೌನ್) ಯುಗದಲ್ಲಿ ನಾವು ೧೫೦ ಕ್ಕೂ ಹೆಚ್ಚು ದೇಶಗಳಿಗೆ ಔಷಧಗಳನ್ನು ಒದಗಿಸಲು ಸಾಧ್ಯವಾಯಿತು. ಭಾರತದ ಲಸಿಕೆ ಉತ್ಪಾದನೆ ಮತ್ತು ವಿತರಣಾ ಸಾಮರ್ಥ್ಯವು ಮಾನವಕುಲಕ್ಕೆ ಅದೇ ರೀತಿಯಲ್ಲಿ ಸಹಾಯ ಮಾಡಲಿದೆ ಎಂದು ಪ್ರಧಾನಿ ನುಡಿದರು.

ರಷ್ಯಾ ನಾಯಕತ್ವವನ್ನು ಶ್ಲಾಘಿಸಿದ ಪ್ರಧಾನಿ ಮೋದಿ ಬ್ರಿಕ್ಸ್ ಚಲನಚಿತ್ರೋತ್ಸವ, ಯುವ ವಿಜ್ಞಾನಿಗಳ ಸಭೆಗಳು ಮುಂತಾದವುಗಳ ಮೂಲಕ ಜನರ ನಡುವಣ ಸಂಪರ್ಕವನ್ನು ಸುಧಾರಿಸಲು ಹಲವಾರು ಉಪಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಹೇಳಿದರು.

ಇಂದು ಜಗತ್ತು ಎದುರಿಸುತ್ತಿರುವ ದೊಡ್ಡ ಸಮಸ್ಯೆ ಭಯೋತ್ಪಾದನೆ ಎಂದು ನುಡಿದ ಪ್ರಧಾನಿ, ಭಯೋತ್ಪಾದಕರನ್ನು ಬೆಂಬಲಿಸುವ ದೇಶಗಳೇ ಅದಕ್ಕೆ ಜವಾಬ್ದಾರಿ ಆಗುವಂತೆ ಮಾಡುವ ಅಗತ್ಯವಿದೆ. ಸಮಸ್ಯೆಯನ್ನು ಸಂಘಟಿತ ರೀತಿಯಲ್ಲಿ ನಿಭಾಯಿಸಲಾಗುತ್ತಿದೆಯೇ ಎಂದು ನಾವು ಖಚಿತಪಡಿಸಿಕೊಳ್ಳಬೇಕು ಎಂದು ಹೇಳಿದರು.

ಅಂತಾರಾಷ್ಟ್ರೀಯ ಹಣಕಸು ನಿಧಿ (ಐಎಂಎಫ್) ವಿಶ್ವ ವಾಣಿಜ್ಯ ಸಂಘಟನೆ (ಡಬ್ಲ್ಯುಟಿಒ), ವಿಶ್ವ ಆರೋಗ್ಯ ಸಂಸ್ಥೆಗಳಲ್ಲಿ (ಡಬ್ಲ್ಯುಎಚ್) ಸುಧಾರಣೆU ಅಗತ್ಯವಿದೆ ಎಂದು ಮೋದಿ ಪ್ರತಿಪಾದಿಸಿದರು.

ಜಾಗತಿಕ ಸಂಸ್ಥೆಗಳ ಪರಿಣಾಮಕಾರಿತ್ವದ ಬಗ್ಗೆ ಪ್ರಶ್ನೆಗಳು ಏಳುತ್ತಿವೆ. ಇದಕ್ಕೆ ಖ್ಯ ಕಾರಣ ಅವುಗಳ ಕಾಲಕ್ಕೆ ತಕ್ಕಂತೆ ಬದಲಾಗದೇ ಇರುವುದುಎಂದು ಪ್ರಧಾನಿ ಹೇಳಿದರು.

ಭಾರತವು ಬಹುಪಕ್ಷೀಯತೆಯ ದೃಢ ಬೆಂಬಲಿಗ. ವಿಶ್ವಸಂಸ್ಥೆಯ ಮೌಲ್ಯಗಳಿಗೆ ನಾವು ದೃಢವಾಗಿ ಬದ್ಧರಾಗಿದ್ದೇವೆ ಎಂದು ಮೋದಿ ಹೇಳಿದರು.

ಇದು ವಿಶ್ವಸಂಸ್ಥೆಯ ೭೫ ನೇ ವಾರ್ಷಿಕೋತ್ಸವ ವರ್ಷ. ಭಾರತವು ಬಹುತ್ವ ಸಿದ್ಧಾಂತದ ಪ್ರಮುಖ ಬೆಂಬಲಿಗ ರಾಷ್ಟ್ರವಾಗಿದೆ. ಭಾರತೀಯ ಕಲ್ಪನೆಯಲ್ಲಿ ಇಡೀ ಜಗತ್ತನ್ನು ಒಂದು ಕುಟುಂಬವೆಂದು ಪರಿಗಣಿಸಲಾಗಿದೆ. ವಿಶ್ವಸಂಸ್ಥೆ ಮೌಲ್ಯಗಳ ಬಗೆಗಿನ ನಮ್ಮ ಬದ್ಧತೆಯು ಅತ್ಯುನ್ನತವಾಗಿದೆ ಎಂದು ಪ್ರಧಾನಿ ಮೋದಿ ನುಡಿದರು.

ಬ್ರಿಕ್ಸ್ ಶೃಂಗಸಭೆಯ ವಿಷಯವಾಗಿರುವ ಜಾಗತಿಕ ಸ್ಥಿರತೆ, ಹಂಚಿಕೆಯ ಭದ್ರತೆ ಮತ್ತು ನವೀನ ಬೆಳವಣಿಗೆ ಕೇವಲ ಸಮಕಾಲೀನ ಮಾತ್ರವಲ್ಲದೆ ಭವಿಷ್ಯವೂ ಆಗಿದೆ. ಜಗತ್ತು ಪ್ರಮುಖ ಜಿಯೋಸ್ಟ್ರಾಟೆಜಿಕ್ ಬದಲಾವಣೆಗಳನ್ನು ನೋಡುತ್ತಿದೆ, ಇದರ ಪರಿಣಾಮಗಳು ಸ್ಥಿರತೆ, ಸುರಕ್ಷತೆ ಮತ್ತು ಬೆಳವಣಿಗೆಯ ಮೇಲೆ ಮುಂದುವರೆಯುತ್ತದೆ ಎಂದು ಪ್ರಧಾನಿ ಹೇಳಿದರು.

ಕ್ಷಿ ಜಿನ್ ಪಿಂಗ್, ಪುಟಿನ್ ಹೇಳಿಕೆ

ವೇದಿಕೆಯನ್ನು ಉದ್ದೇಶಿಸಿ ಮಾತನಾಡಿದ ಚೀನಾದ ಅಧ್ಯಕ್ಷ ಕ್ಷಿ ಜಿನ್ ಪಿಂಗ್ ಅವರು ’"ನಾವೆಲ್ಲರೂ ಒಂದೇ ದೋಣಿಯ ಪಯಣಿಗರಾಗಿದ್ದೇವೆ. ಆದರೆ ಗಾಳಿಯು ಪ್ರತಿಕೂಲವಾಗಿದೆಎಂದು ಹೇಳಿದರು.

ಕುಟುಂಬದಲ್ಲಿ ಯಾವಾಗಲೂ ಕಪ್ಪು ಕುರಿ ಇರುತ್ತದೆ, ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಭಯೋತ್ಪಾದನೆ ಕುರಿತ ಮೋದಿಯವರ ಹೇಳಿಕೆಗೆ ಪ್ರತಿಕ್ರಿಯಿಸಿದರು.

No comments:

Advertisement