ಕಮಲಾ ಹ್ಯಾರಿಸ್ ಪೂರ್ವಜರ ಹಳ್ಳಿಯಲ್ಲಿ ಹಬ್ಬದ ಸಡಗರ
ತುಲಸೇಂದ್ರಪುರಂ (ತಮಿಳುನಾಡು): ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ಡೆಮೋಕ್ರಾಟ್ ಸ್ಪರ್ಧಾ ಸಂಗಾತಿ ಜೋ ಬಿಡೆನ್ ಶ್ವೇತಭವನಕ್ಕೆ ಹತ್ತಿರವಾಗುತ್ತಿದ್ದಂತೆಯೇ, ಉಪಾಧ್ಯಕ್ಷ ಅಭ್ಯರ್ಥಿಯಾಗಿರುವ ಕಮಲಾ ಹ್ಯಾರಿಸ್ ಅವರ ಭಾರತೀಯ ಪೂರ್ವಜರ ಮನೆಯ ಗ್ರಾಮಸ್ಥರಲ್ಲಿ 2020 ನವೆಂಬರ್ 05ರ ಗುರುವಾರ ಹಬ್ಬದ ಸಡಗರ ಕಂಡು ಬಂತು. ಗ್ರಾಮಸ್ಥರು ಹ್ಯಾರಿಸ್ ವಿಜಯವನ್ನು ಬಯಸುವ ಘೋಷಣೆಗಳನ್ನು ರಸ್ತೆಗಳಲ್ಲಿ ಚಿತ್ರಿಸಿದರು.
ಚೆನ್ನೈಯ
ದಕ್ಷಿಣಕ್ಕೆ ಸುಮಾರು ೩೨೦ ಕಿ.ಮೀ (೨೦೦
ಮೈಲಿ) ದೂರದಲ್ಲಿರುವ ತುಲಸೇಂದ್ರಪುರಂ ಗ್ರಾಮದಲ್ಲಿ ಕಮಲಾ ಹ್ಯಾರಿಸ್ ಅವರ ಅಜ್ಜ ಒಂದು ಶತಮಾನಕ್ಕೂ ಹೆಚ್ಚು ಹಿಂದೆ ಜನಿಸಿದ್ದರು.
’ಅಂತಿಮ
ಫಲಿತಾಂಶದ ಬಗ್ಗೆ ನಾವು ಬುಧವಾರದಿಂದ ಉತ್ಸುಕರಾಗಿ ಕಾಯುತ್ತಿದ್ದೇವೆ’ ಎಂದು
ಗ್ರಾಮದ ನಿವಾಸಿ ಅಬಿರಾಮಿ ಹೇಳಿದರು.
‘ಈಗ,
ನಾವು ಧನಾತ್ಮಕ ಸುದ್ದಿಗಳನ್ನು ಕೇಳುತ್ತಿದ್ದೇವೆ. ಆಕೆಯ ವಿಜಯವನ್ನು ಆಚರಿಸಲು ನಾವು ಕಾಯುತ್ತಿದ್ದೇವೆ’ ಎಂದು
ಅವರು ನುಡಿದರು.
ಕಮಲಾ
ಹ್ಯಾರಿಸ್ ಪೂರ್ವಜರ ಕುಟುಂಬದ ನೆರೆಹೊರೆಯವರು ತಮ್ಮ ಮೊಬೈಲ್ ಫೋನ್‌ಗಳಲ್ಲಿ ಮತಗಳ ಎಣಿಕೆಯ ನವೀಕರಣಗಳನ್ನು ವೀಕ್ಷಿಸಿದರು.
ದೇಶದ
ದಕ್ಷಿಣದಲ್ಲಿರುವ ಹಚ್ಚ ಹಸಿರಿನ ಹಳ್ಳಿಯನ್ನು ಹ್ಯಾರಿಸ್ ಪೋಸ್ಟರ್‌ಗಳಿಂದ ಅಲಂಕರಿಸಲಾಗಿದೆ, ಸ್ಥಳೀಯ ಹಿಂದೂ ದೇವಾಲಯದಲ್ಲಿ ಪ್ರಾರ್ಥನೆ ಸಲ್ಲಿಸಲಾಗಿದೆ.
ಮತಗಳ
ಎಣಿಕೆಯಾಗುತ್ತಿದ್ದಂತೆಯೇ
ಬಿಡೆನ್ ಮುಂಚೂಣಿ ಸ್ಥಾನದಲ್ಲಿ ಇದ್ದಾರೆ ಮತ್ತು ತಾವು ಗೆಲ್ಲುವುದಾಗಿ ಅವರು ಊಹಿಸಿದ್ದಾರೆ. ಆದರೆ ಅರಿಝೋನಾ, ಜಾರ್ಜಿಯಾ, ನೆವಾಡಾ ಮತ್ತು ಉತ್ತರ ಕೆರೊಲಿನಾ ಸೇರಿದಂತೆ ನಿಕಟ ಸ್ಪರ್ಧೆ ಇರುವ ರಾಜ್ಯಗಳಲ್ಲಿ ಮತಗಳು ಇನ್ನೂ ಸಮವಾಗಿರುವುದು ಚುನಾವಣಾ ಫಲಿತಾಂಶವನ್ನು ಅನಿಶ್ಚಿತಗೊಳಿಸಿದೆ.
ಹ್ಯಾರಿಸ್
ಅವರ ಅಜ್ಜ ಪಿ.ವಿ. ಗೋಪಾಲನ್
ಮತ್ತು ಅವರ ಕುಟುಂಬ ಸುಮಾರು ೯೦ ವರ್ಷಗಳ ಹಿಂದೆ
ಚೆನ್ನೈಗೆ ತೆರಳಿತ್ತು. ಗೋಪಾಲನ್ ಅವರು ಅಲ್ಲಿ ಉನ್ನತ ಮಟ್ಟದ ಸರ್ಕಾರಿ ಅಧಿಕಾರಿಯಾಗಿ ನಿವೃತ್ತರಾದರು.
ಅಧ್ಯಯನದ
ಸಲುವಾಗಿ ಅಮೆರಿಕ್ಕೆ ವಲಸೆ ಹೋಗಿದ್ದ ಕಮಲಾ ಹ್ಯಾರಿಸ್ ಅವರ ಭಾರತೀಯ ತಾಯಿ ಮತ್ತು ಜಮೈಕಾದ ತಂದೆ ಹ್ಯಾರಿಸ್ ಐದು ವರ್ಷದವಳಿದ್ದಾಗ ತುಲಸೇಂದ್ರಪುರಂಗೆ ಭೇಟಿ ನೀಡಿದ್ದರು.
ಚೆನ್ನೈ
ಕಡಲತೀರಗಳಲ್ಲಿ ತನ್ನ ಅಜ್ಜನೊಂದಿಗೆ ಸುತ್ತಾಡಿದ್ದನ್ನು ಕಮಲಾ ಹ್ಯಾರಿಸ್ ಪದೇ ಪದೇ ನೆನಪಿಸಿಕೊಂಡಿದ್ದಾರೆ.
No comments:
Post a Comment