ಮುಂಬೈ ದಾಳಿಯ ಸಂಚುಕೋರ ಹಫೀಜ್ ಸಯೀದ್ಗೆ ೧೦ ವರ್ಷ ಜೈಲು
ನವದೆಹಲಿ/ ಇಸ್ಲಾಮಾಬಾದ್: ಮುಂಬೈ ಮೇಲಿನ ೨೬/೧೧ರ ಭಯೋತ್ಪಾದಕ ದಾಳಿಯ ’ಮಾಸ್ಟರ್ ಮೈಂಡ್’ ಮತ್ತು ಜಮಾತ್-ಉದ್-ದವಾ (ಜೆಯುಡಿ) ಮುಖ್ಯಸ್ಥ ಹಫೀಜ್ ಸಯೀದ್ಗೆ ಭಯೋತ್ಪಾದನೆಗೆ ಹಣಕಾಸು ಒದಗಿಸಿದ ಎರಡು ಪ್ರಕರಣಗಳಲ್ಲಿ ಲಾಹೋರಿನ ಭಯೋತ್ಪಾದನಾ ನಿಗ್ರಹ ನ್ಯಾಯಾಲಯ 2020 ನವೆಂಬರ್ 19ರ ಗುರುವಾರ ೧೦ ವರ್ಷಗಳ ಜೈಲು ಶಿಕ್ಷೆ ವಿಧಿಸಿತು.
ಪ್ರಸ್ತುತ ವರ್ಷದ ಫೆಬ್ರುವರಿಯಿಂದ ಸಯೀದ್ ಸೆರೆಮನೆಯಲ್ಲಿದ್ದಾನೆ. ಇತರ ಎರಡು ಭಯೋತ್ಪಾದಕ-ಹಣಕಾಸು ಪ್ರಕರಣಗಳಲ್ಲಿ ೧೧ ವರ್ಷಗಳ ಜೈಲು ಶಿಕ್ಷೆಯನ್ನು ಆತನಿಗೆ ಈ ಮೊದಲೇ ವಿಧಿಸಲಾಗಿತ್ತು. ಪ್ರಸ್ತುತ ಸಯೀದನನ್ನು ಲಾಹೋರಿನ ಅತಿ ಭದ್ರತೆಯ ಕೋಟ್ ಲಖ್ಪತ್ ಜೈಲಿನಲ್ಲಿ ಇರಿಸಲಾಗಿದೆ.
"ಲಾಹೋರಿನ
ಭಯೋತ್ಪಾದನಾ ನಿಗ್ರಹ ನ್ಯಾಯಾಲಯ (ಎಟಿಸಿ) 2020 ನವೆಂಬರ್ 19ರ ಗುರುವಾರ
ಜಮಾತ್-ಉದ್-ದವಾ ಸಂಘಟನೆಯ ಮುಖ್ಯಸ್ಥ ಹಫೀಜ್ ಸಯೀದ್ ಸೇರಿದಂತೆ ಸಂಘಟನೆಯ ನಾಲ್ವರು ನಾಯಕರಿಗೆ ಇನ್ನೂ ಎರಡು ಪ್ರಕರಣಗಳಲ್ಲಿ ಶಿಕ್ಷೆ ವಿಧಿಸಿದೆ" ಎಂದು ನ್ಯಾಯಾಲಯದ ಅಧಿಕಾರಿಯೊಬ್ಬರು ತಿಳಿಸಿದರು.
ಸಯೀದ್
ಮತ್ತು ಆತನ ಇಬ್ಬರು ಆಪ್ತ ಸಹಾಯಕರಾದ ಜಾಫರ್ ಇಕ್ಬಾಲ್ ಮತ್ತು ಯಾಹ್ಯಾ ಮುಜಾಹಿದ್ ಅವರಿಗೆ ತಲಾ ೧೦ ಮತ್ತು ಒಂದೂವರೆ
ವರ್ಷಗಳ ಸೆರೆವಾಸದ ಶಿಕ್ಷೆ ವಿಧಿಸಲಾಗಿದ್ದು, ಜೆಯುಡಿ ಮುಖ್ಯಸ್ಥನ ಸೋದರ ಮಾವ ಅಬ್ದುಲ್ ರೆಹಮಾನ್ ಮಕ್ಕಿಗೆ ಆರು ತಿಂಗಳ ಜೈಲು ಶಿಕ್ಷೆ ವಿಧಿಸಲಾಗಿದೆ.
"ಎಟಿಸಿ
ಕೋರ್ಟ್ ನಂ ೧ ರ
ನ್ಯಾಯಾಧೀಶ ಅರ್ಷದ್ ಹುಸೇನ್ ಭುಟ್ಟಾ ಅವರು ಭಯೋತ್ಪಾದನಾ ನಿಗ್ರಹ ಇಲಾಖೆ ಸಲ್ಲಿಸಿದ ಪ್ರಕರಣ ಸಂಖ್ಯೆ ೧೬/೧೯ ಮತ್ತು
೨೫/೧೯ ಗಳ ವಿಚಾರಣೆ
ನಡೆಸಿದರು. ಇದರಲ್ಲಿ ಸಾಕ್ಷಿಗಳ ಹೇಳಿಕೆಗಳನ್ನು ವಕೀಲರಾದ ನಸೀರುದ್ದೀನ್ ನಯ್ಯರ್ ಮತ್ತು ಮೊಹಮ್ಮದ್ ಇಮ್ರಾನ್ ಫಜಲ್ ಗುಲ್ ಅವರು ಅಡ್ಡಪರಿಶೀಲನೆ ಮಾಡಿದ ಬಳಿಕ ತೀರ್ಪು ಪ್ರಕಟಿಸಲಾಗಿದೆ ಎಂದು ಅಧಿಕಾರಿ ಹೇಳಿದರು.
ಜೆಯುಡಿ
ನಾಯಕರ ವಿರುದ್ಧ ಒಟ್ಟು ೪೧ ಪ್ರಕರಣಗಳನ್ನು ಸಿಟಿಡಿ
ದಾಖಲಿಸಿದ್ದು, ಈ ಪೈಕಿ ೨೪
ಪ್ರಕರಣಗಳನ್ನು ನಿರ್ಧರಿಸಲಾಗಿದೆ. ಉಳಿದ ಪ್ರಕರಣಗಳು ಎಟಿಸಿ ನ್ಯಾಯಾಲಯಗಳಲ್ಲಿ ಬಾಕಿ ಉಳಿದಿವೆ. ಸಯೀದ್ ವಿರುದ್ಧ ಈವರೆಗೆ ನಾಲ್ಕು ಪ್ರಕರಣಗಳನ್ನು ನಿರ್ಧರಿಸಲಾಗಿದೆ.
ಸಯೀದ್
ನೇತೃತ್ವದ ಜೆಯುಡಿಯು ಲಷ್ಕರ್-ಎ-ತೋಯ್ಬಾ
(ಎಲ್ಇಟಿ)
ಯ ಮುಂಚೂಣಿ ಸಂಸ್ಥೆಯಾಗಿದ್ದು, ೨೦೦೮ ರ ಮುಂಬೈ ದಾಳಿಯನ್ನು
ಇದೇ ಸಂಘಟನೆ ಪ್ರಾಯೋಜಿಸಿತ್ತು. ಆರು ಅಮೆರಿಕನ್ನರು ಸೇರಿದಂತೆ ೧೬೬ ಜನರು ಈ ದಾಳಿಯಲ್ಲಿ ಸಾವನ್ನಪ್ಪಿದ್ದರು.
ಅಮೆರಿಕದ
ಖಜಾನೆ ಇಲಾಖೆಯು ಸಯೀದನನ್ನು ವಿಶೇಷವಾಗಿ ಗೊತ್ತುಪಡಿಸಿದ ಜಾಗತಿಕ ಭಯೋತ್ಪಾದಕ ಎಂಬುದಾಗಿ ಹೆಸರಿಸಿದೆ. ೨೦೦೮ರ ಡಿಸೆಂಬರಿನಲ್ಲಿ ವಿಶ್ವಸಂಸ್ಥೆ ಭದ್ರತಾ ಮಂಡಳಿಯು ನಿರ್ಣಯ ೧೨೬೭ ರ ಅಡಿಯಲ್ಲಿ ಸಯೀದನನ್ನು
ಘೋಷಿತ ಭಯೋತ್ಪಾದಕ ಪಟ್ಟಿಗೆ ಸೇರ್ಪಡೆ ಮಾಡಿತ್ತು.
ಸಯೀದ್
ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಬೇಕೆಂದೂ ನ್ಯಾಯಾಲಯ ಆದೇಶ ನೀಡಿದೆ.
ಮುಂಬೈ
ಭಯೋತ್ಪಾದಕ ದಾಳಿಯ ಮಾಸ್ಟರ್ ಮೈಂಡ್ ಸಯೀದನನ್ನು ವಿಶ್ವಸಂಸ್ಥೆಯ ನಿರ್ಣಯವು ಘೋಷಿತ
ಜಾಗತಿಕ ಭಯೋತ್ಪಾದಕ ಎಂಬುದಾಗಿ ಘೋಷಿಸಲ್ಪಟ್ಟಿರುವ ಭಯೋತ್ಪಾದಕನ ತಲೆಗೆ ಅಮೆರಿಕವು ೧೦
ಮಿಲಿಯನ್ ಡಾಲರ್ ಬಹುಮಾನ ಘೋಷಿಸಿದೆ.
ಕಳೆದ
ವರ್ಷ ಜುಲೈ ೧೭ ರಂದು ಎರಡು
ಭಯೋತ್ಪಾದಕ ಹಣಕಾಸು ಪ್ರಕರಣಗಳಿಗೆ ಸಂಬಂಧಿಸಿದಂತೆ ಸಯೀದ ಮತ್ತು ಇತರರನ್ನು ಬಂಧಿಸಲಾಗಿತ್ತು. ಕಳೆದ ಫೆಬ್ರುವರಿಯಲ್ಲಿ ಭಯೋತ್ಪಾದನಾ ನಿಗ್ರಹ ನ್ಯಾಯಾಲಯವು ೧೧ ವರ್ಷಗಳ ಜೈಲು
ಶಿಕ್ಷೆಯನ್ನು ಸಯೀದನಿಗೆ ವಿಧಿಸಿತು. ಬಳಿಕ ಆತನನ್ನು ಲಾಹೋರಿನ ಉನ್ನತ ಭದ್ರತೆಯ ಕೋಟ್ ಲಖ್ಪತ್
ಜೈಲಿನಲ್ಲಿ ಇರಿಸಲಾಯಿತು.
No comments:
Post a Comment