ಮಹಾರಾಷ್ಟ್ರ ಪ್ರವೇಶಕ್ಕೆ ಕೋವಿಡ್ ನೆಗೆಟಿವ್ ವರದಿ ಕಡ್ಡಾಯ
ನವದೆಹಲಿ: ದೆಹಲಿ, ರಾಜಸ್ಥಾನ, ಗುಜರಾತ್ ಮತ್ತು ಗೋವಾದ ಈ ನಾಲ್ಕು ರಾಜ್ಯಗಳಿಂದ ಮಹಾರಾಷ್ಟ್ರ ಪ್ರವೇಶಿಸಲು ಕೋವಿಡ್- ನೆಗೆಟಿವ್ ವರದಿ ತರುವುದನ್ನು ಕಡ್ಡಾಯಗೊಳಿಸಿ ಮಹಾರಾಷ್ಟ್ರ ಸರ್ಕಾರವು 2020 ನವೆಂಬರ 23ರ ಸೋಮವಾರ ಅಧಿಸೂಚನೆ ಹೊರಡಿಸಿತು.
ದೆಹಲಿ, ರಾಜಸ್ಥಾನ, ಗುಜರಾತ್ ಮತ್ತು ಗೋವಾ - ಈ ನಾಲ್ಕು ರಾಜ್ಯಗಳಲ್ಲಿ ಅತ್ಯಂತ ಹೆಚ್ಚಿನ ಸಂಖ್ಯೆಯಲ್ಲಿ ಕೊರೋನಾವೈರಸ್ ಸಾಂಕ್ರಾಮಿಕ ಪ್ರಕರಣಗಳು ವರದಿಯಾಗುತ್ತಿವೆ. ಈ ಹಿನ್ನೆಲೆಯಲ್ಲಿ ಮಹಾರಾಷ್ಟ್ರ ಸರ್ಕಾರ ಈ ಕ್ರಮ ಕೈಗೊಂಡಿತು.
ವಾಸ್ತವವಾಗಿ, ರಾಷ್ಟ್ರ ರಾಜಧಾನಿ ದೆಹಲಿಯು ಕೋವಿಡ್ -೧೯ ರ ಮೂರನೇ ಅಲೆಗೆ ಸಾಕ್ಷಿಯಾಗಿದೆ ಮತ್ತು ಪ್ರಕರಣಗಳ ಸಂಖ್ಯೆಯು ಅಪಾಯಕಾರಿ ಪ್ರಮಾಣದಲ್ಲಿ ಏರುತ್ತಿವೆ.
ದೆಹಲಿ, ರಾಜಸ್ಥಾನ, ಗೋವಾ ಮತ್ತು ಗುಜರಾತಿನಿಂದ ವಿಮಾನಗಳಲ್ಲಿ ಆಗಮಿಸುವ ಪ್ರಯಾಣಿಕರು ಮಹಾರಾಷ್ಟ್ರದ ವಿಮಾನ ನಿಲ್ದಾಣಗಳಲ್ಲಿ ಇಳಿಯುವ ಮುನ್ನ ಆರ್‌ಟಿ-ಪಿಸಿಆರ್ ನೆಗೆಟಿವ್ ವರದಿಯನ್ನು ನೀಡಬೇಕಾಗುತ್ತದೆ. ನಿಗದಿತ ಪ್ರಯಾಣಕ್ಕೆ ೭೨ ಗಂಟೆಗಳ ಮುನ್ನ ಪರೀಕ್ಷೆಯನ್ನು ಮಾಡಿಸಿರಬೇಕು ಎಂದು ಮಹಾರಾಷ್ಟ್ರ ಸರ್ಕಾರ ಹೊರಡಿಸಿದ ಅಧಿಸೂಚನೆಯಲ್ಲಿ ತಿಳಿಸಲಾಯಿತು.
"ಈ ನಾಲ್ಕು ರಾಜ್ಯಗಳಿಂದ ರೈಲುಗಳಲ್ಲಿ ಆಗಮಿಸುವ ಪ್ರಯಾಣಿಕರು ಆಗಮನದ ಪ್ರಯಾಣಕ್ಕೆ ೯೬ ಗಂಟೆಗಳ ಮುನ್ನ ಪಡೆದ ಪಡೆದ ಕೋವಿಡ್ -ನೆಗೆಟಿವ್ ವರದಿಯನ್ನು ಹೊಂದಿರಬೇಕು ಎಂದು ಅಧಿಸೂಚನೆ ಹೇಳಿದತು.
ರಸ್ತೆಗಳ ಮೂಲಕ ಬರುವವರು ಗಡಿ ಚೆಕ್‌ಪೋಸ್ಟ್‌ಗಳಲ್ಲಿ ತಪಾಸಣೆಗೆ ಒಳಗಾಗಬೇಕಾಗುತ್ತದೆ. ‘ರೋಗಲಕ್ಷಣಗಳನ್ನು ಹೊಂದಿರುವ ಜನರು ಪ್ರತಿಜನಕ ಪರೀಕ್ಷೆಗೆ ಒಳಗಾಗಬೇಕಾಗುತ್ತದೆ. ಸಕಾರಾತ್ಮಕ (ಪಾಸಿಟಿವ್) ಎಂದು ಕಂಡುಬಂದಲ್ಲಿ, ಪ್ರಯಾಣಿಕನು ಚಿಕಿತ್ಸೆಯ ವೆಚ್ಚವನ್ನು ಸ್ವತಃ ಭರಿಸಿ ಕೋವಿಡ್ ಕೇಂದ್ರಕ್ಕೆ ಪ್ರವೇಶ ಪಡೆಯಬೇಕು’ ಎಂದು ಮುಖ್ಯ ಕಾರ್ಯದರ್ಶಿ ಸಂಜಯ್ ಕುಮಾರ್ ಹೊರಡಿಸಿದ ಅಧಿಸೂಚನೆ ತಿಳಿಸಿತು.
ಕಳೆದ ೨೪ ಗಂಟೆಗಳಲ್ಲಿ ದೆಹಲಿಯಲ್ಲಿ ಸರಾಸರಿ ಪ್ರತಿ ಗಂಟೆಗೆ ಕೋವಿಡ್ -೧೯ ಕಾರಣ ಕನಿಷ್ಠ ಐವರು ಸಾವನ್ನಪ್ಪಿದ್ದಾರೆ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಮಾಹಿತಿಯ ವಿಶ್ಲೇಷಣೆಯು ತೋರಿಸಿದೆ. ದೇಶಾದ್ಯಂತ ಇಂತಹ ಸಾವುನೋವುಗಳಲ್ಲಿ ಇದು ಅತಿದೊಡ್ಡ ಭಾಗವಾಗಿದೆ.
ಕಳೆದ ೨೪ ಗಂಟೆಗಳಲ್ಲಿ ದೇಶಾದ್ಯಂತ ಒಟ್ಟು ೫೧೧ ಕೋವಿಡ್ -೧೯ ಸಾವುಗಳು ದಾಖಲಾಗಿದ್ದರೆ, ದೆಹಲಿಯಲ್ಲಿ ೧೨೧ ಸಾವುನೋವುಗಳು ಸಂಭವಿಸಿವೆ ಎಂದು ಸೋಮವಾರ ಬೆಳಗ್ಗೆ ೮ ಗಂಟೆಗೆ ನವೀಕರಿಸಿದ ಮಾಹಿತಿ ತಿಳಿಸಿದೆ.
ದೆಹಲಿ ಆರೋಗ್ಯ ಇಲಾಖೆ ಬಿಡುಗಡೆ ಮಾಡಿದ ಇತ್ತೀಚಿನ ಬುಲೆಟಿನ್ ಪ್ರಕಾರ, ರಾಷ್ಟ್ರ ರಾಜಧಾನಿ ಭಾನುವಾರ ೬,೭೪೬ ಹೊಸ ಕೋವಿಡ್ -೧೯ ಪ್ರಕರಣಗಳನ್ನು ದಾಖಲಿಸಿದೆ ಮತ್ತು ಶೇಕಡಾ ೧೨.೨೯ ರಷ್ಟು ಸಕಾರಾತ್ಮಕ ಪ್ರಮಾಣವನ್ನು ದಾಖಲಿಸಿದೆ ಮತ್ತು ೧೨೧ ಹೆಚ್ಚಿನ ಸಾವುಗಳೊಂದಿಗೆ ಒಟ್ಟು ಕೋವಿಡ್ ಸಾವಿನ ಸಂಖ್ಯೆ ೮,೩೯೧ ಕ್ಕೆ ಏರಿದೆ.
No comments:
Post a Comment