ಪಾಕಿಸ್ತಾನದಲ್ಲಿ ಹಿಂದೂ ದೇವಾಲಯ ನೆಲಸಮ: 14 ಜನರ ಸೆರೆ
ಪೇಶಾವರ: ಕಟ್ಟಾವಾದಿ ಇಸ್ಲಾಮಿಸ್ಟ್ ಪಕ್ಷದ ಬೆಂಬಲಿಗರ ನೇತೃತ್ವದ ಜನಸಮೂಹವೊಂದು ಹಿಂದೂ ದೇವಾಲಯಕ್ಕೆ ಬೆಂಕಿ ಹಚ್ಚಿ ನೆಲಸಮಗೊಳಿಸಿದ್ದನ್ನು ಅನುಸರಿಸಿ, ರಾತ್ರಿಯ ದಾಳಿ ಕಾರ್ಯಾಚರಣೆ ನಡೆಸಿದ ಪಾಕಿಸ್ತಾನಿ ಪೊಲೀಸರು ೧೪ ಜನರನ್ನು ಬಂಧಿಸಿದ್ದಾರೆ ಎಂದು ಅಧಿಕಾರಿಗಳು 2020 ಡಿಸೆಂಬರ್ 31ರ ಗುರುವಾರ ತಿಳಿಸಿದರು.
ವಾಯುವ್ಯ ಪಟ್ಟಣವಾದ ಕರಕ್ನಲ್ಲಿ ಬುಧವಾರ ದೇವಾಲಯದ ನಾಶ ಮಾನವ ಹಕ್ಕುಗಳ ಕಾರ್ಯಕರ್ತರು ಮತ್ತು ಅಲ್ಪಸಂಖ್ಯಾತ ಹಿಂದೂ ಸಮುದಾಯದಿಂದ ಖಂಡನೆಗೆ ಗುರಿಯಾಯಿತು.
ರಾತ್ರಿಯ ದಾಳಿ ಕಾರ್ಯಾಚರಣೆಯಲ್ಲಿ ಪೊಲೀಸರು ಕನಿಷ್ಠ ೧೪ ಜನರನ್ನು ವಶಕ್ಕೆ ಪಡೆದಿದ್ದಾರೆ ಮತ್ತು ದೇವಾಲಯವನ್ನು ಕೆಡವಲು ಜನಸಮೂಹದಲ್ಲಿ ಭಾಗವಹಿಸಿದ ಅಥವಾ ಪ್ರಚೋದಿಸಿದ ವ್ಯಕ್ತಿಗಳನ್ನು ಬಂಧಿಸಲು ಹೆಚ್ಚಿನ ದಾಳಿಗಳು ನಡೆಯುತ್ತಿವೆ ಎಂದು ಸ್ಥಳೀಯ ಪೊಲೀಸರು ತಿಳಿಸಿದ್ದಾರೆ.
ದೇವಾಲಯ ನವೀಕರಿಸಲು ಹಿಂದೂ ಸಮುದಾಯದ ಸದಸ್ಯರು ಸ್ಥಳೀಯ ಅಧಿಕಾರಿಗಳಿಂದ ಅನುಮತಿ ಪಡೆದ ನಂತರ ಈ ದಾಳಿ ನಡೆದಿದೆ.
ಸಾಕ್ಷಿಗಳ ಪ್ರಕಾರ, ಜನಸಮೂಹವನ್ನು
ಸ್ಥಳೀಯ ಧಾರ್ಮಿಕ ಮುಖ್ಯಸ್ಥ ಮತ್ತು ಪಾಕಿಸ್ತಾನದ ತೀವ್ರವಾದಿ ಜಮೀಯತ್ ಉಲೆಮಾ-ಇ-ಇಸ್ಲಾಂ ಪಕ್ಷದ ಬೆಂಬಲಿಗರು ಮುನ್ನಡೆಸಿದರು,
ಪಾಕಿಸ್ತಾನದ ಧಾರ್ಮಿಕ ವ್ಯವಹಾರಗಳ ಸಚಿವ ನೂರುಲ್ ಹಕ್ ಖಾದ್ರಿ ಅವರು ದೇವಾಲಯದ ಮೇಲಿನ ದಾಳಿಯನ್ನು "ಪಂಥೀಯ
ಸಾಮರಸ್ಯದ ವಿರುದ್ಧದ ಪಿತೂರಿ" ಎಂದು
ಟ್ವೀಟ್ ಮಾಡಿದರು.
ಅಲ್ಪಸಂಖ್ಯಾತ ಧಾರ್ಮಿಕ ಗುಂಪುಗಳ ಪೂಜಾ ಸ್ಥಳಗಳ ಮೇಲೆ ದಾಳಿ ನಡೆಸಲು ಇಸ್ಲಾಮಿನಲ್ಲಿ ಅವಕಾಶವಿಲ್ಲ ಮತ್ತು "ಅಲ್ಪಸಂಖ್ಯಾತರ
ಧಾರ್ಮಿಕ ಸ್ವಾತಂತ್ರ್ಯದ ರಕ್ಷಣೆ ನಮ್ಮ ಧಾರ್ಮಿಕ, ಸಾಂವಿಧಾನಿಕ,
ನೈತಿಕ ಮತ್ತು ರಾಷ್ಟ್ರೀಯ ಜವಾಬ್ದಾರಿಯಾಗಿದೆ" ಎಂದು
ಅವರು ಹೇಳಿದರು.
ಧಾರ್ಮಿಕ ಗುರುಗಳ ಪರಿಷತ್ತಿನ ಶಿಫಾರಸಿನ ಮೇರೆಗೆ ಹಿಂದೂ ನಿವಾಸಿಗಳಿಗೆ ಇಸ್ಲಾಮಾಬಾದಿನಲ್ಲಿ ಹೊಸ ದೇವಾಲಯ ನಿರ್ಮಿಸಲು ಸರ್ಕಾರ ಅನುಮತಿ ನೀಡಿದ ಕೆಲವೇ ವಾರಗಳಲ್ಲಿ ಈ ಘಟನೆ ನಡೆದಿದೆ.
ಪಾಕಿಸ್ತಾನದಲ್ಲಿ ಮುಸ್ಲಿಮರು ಮತ್ತು ಹಿಂದೂಗಳು ಸಾಮಾನ್ಯವಾಗಿ ಒಟ್ಟಿಗೆ ಶಾಂತಿಯುತವಾಗಿ ವಾಸಿಸುತ್ತಿದ್ದರೂ, ಇತ್ತೀಚಿನ
ವರ್ಷಗಳಲ್ಲಿ ಹಿಂದೂ ದೇವಾಲಯಗಳ ಮೇಲೆ ಇತರರ ದಾಳಿಗಳು ನಡೆದಿವೆ.
ಪಾಕಿಸ್ತಾನದ ಬಹುಪಾಲು ಅಲ್ಪಸಂಖ್ಯಾತ ಹಿಂದೂಗಳು ೧೯೪೭ ರಲ್ಲಿ ಭಾರತವನ್ನು ಬ್ರಿಟನ್ ಸರ್ಕಾರ ವಿಭಜಿಸಿದಾಗ ಭಾರತಕ್ಕೆ ವಲಸೆ ಬಂದಿದ್ದರು.
No comments:
Post a Comment