Wednesday, December 23, 2020

ಡಿಟಿಎಚ್ ಮಾರ್ಗಸೂಚಿ ಪರಿಷ್ಕರಣೆ, 20 ವರ್ಷಕ್ಕೆ ಲೈಸೆನ್ಸ್

 ಡಿಟಿಎಚ್ ಮಾರ್ಗಸೂಚಿ ಪರಿಷ್ಕರಣೆ, 20 ವರ್ಷಕ್ಕೆ ಲೈಸೆನ್ಸ್

ನವದೆಹಲಿ: ದೇಶದಲ್ಲಿ ನೇರ ಮನೆಗೆ ಟೆಲಿವಿಷನ್ (ಡೈರೆಕ್ಟ್-ಟು-ಹೋಮ್ ಟೆಲಿವಿಷನ್ -ಡಿಟಿಎಚ್) ಸೇವೆಗಳನ್ನು ಒದಗಿಸುವ ಮಾರ್ಗಸೂಚಿಗಳಲ್ಲಿ ಪರಿಷ್ಕರಣೆ ಮಾಡಲು ಕೇಂದ್ರ ಸಚಿವ ಸಂಪುಟವು ನಿರ್ಧರಿಸಿದೆ ಎಂದು ಕೇಂದ್ರ ಮಾಹಿತಿ ಮತ್ತು ಪ್ರಸಾರ ( ಮತ್ತು ಬಿ) ಸಚಿವ ಪ್ರಕಾಶ ಜಾವಡೇಕರ್ 2020 ಡಿಸೆಂಬರ್ 23ರ ಬುಧವಾರ ಹೇಳಿದರು.

ಸಂಪುಟ ಸಭೆಯ ಬಳಿಕ, ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಜಾವಡೇಕರ್, ಡಿಟಿಎಚ್‌ಗೆ ೨೦ ವರ್ಷಗಳವರೆಗೆ ಪರವಾನಗಿ ನೀಡಲಾಗುವುದು ಮತ್ತು ತ್ರೈಮಾಸಿಕ ಆಧಾರದ ಮೇಲೆ ಪರವಾನಗಿ ಶುಲ್ಕವನ್ನು ಸಂಗ್ರಹಿಸಲಾಗುವುದು ಎಂದು ಹೇಳಿದರು.

ಹಿಂದೆ, ಎಲ್ಲಾ ಸೇವಾ ಪೂರೈಕೆದಾರರಿಗೆ ೧೦ ವರ್ಷಗಳ ಅವಧಿಗೆ ಪರವಾನಗಿ ನೀಡಲಾಗಿತ್ತು ಎಂದು ಟೆಲಿಕಾಂ ರೆಗ್ಯುಲೇಟರಿ ಅಥಾರಿಟಿ ಆಫ್ ಇಂಡಿಯಾ (ಟ್ರಾಯ್) ತಿಳಿಸಿದೆ.

ದೇಶದಲ್ಲಿ ಡಿಟಿಎಚ್ ಸೇವೆಗಳನ್ನು ಒದಗಿಸುವ ಮಾರ್ಗಸೂಚಿಗಳಲ್ಲಿ ಪರಿಷ್ಕರಣೆ ಅನುಮೋದಿಸಲು ಸಚಿವ ಸಂಪುಟವು ಬುಧವಾರ ನಿರ್ಧರಿಸಿದೆ. ಈಗ, ಡಿಟಿಎಚ್ ಪರವಾನಗಿಯನ್ನು ೨೦ ವರ್ಷಗಳವರೆಗೆ ನೀಡಲಾಗುವುದು, ಪರವಾನಗಿ ಶುಲ್ಕವನ್ನು ತ್ರೈಮಾಸಿಕವಾಗಿ ಸಂಗ್ರಹಿಸಲಾಗುವುದು ಎಂದು ಕೇಂದ್ರ ಸಚಿವರು ವಿವರಿಸಿದರು.

ಇದಕ್ಕೂ ಮೊದಲು, ಡಿಟಿಎಚ್ ಸೇವೆಗಳಿಗೆ ಶಿಫಾರಸು ಮಾಡಲಾದ ನಿಯಂತ್ರಕ ಚೌಕಟ್ಟಿನ ಬಗ್ಗೆ ಅಭಿಪ್ರಾಯ/ ಟಿಪ್ಪಣಿಗಳನ್ನು ಕೋರಿ ಡಿಸೆಂಬರ್ ರಂದು ಸಮಾಲೋಚನಾ ಪತ್ರವನ್ನು ಬಿಡುಗಡೆ ಮಾಡಿತ್ತು. ಸಮಾಲೋಚನಾ ಪತ್ರದಲ್ಲಿ ಡಿಸೆಂಬರ್ ೧೪ ಮತ್ತು ಡಿಸೆಂಬರ್ ೧೯ ನಡುವಣ ಅವಧಿಯಲ್ಲಿ ಪಾಲುದಾರರಿಗೆ ಲಿಖಿತ ಪ್ರತಿಕ್ರಿಯೆ ಪಡೆಯಲಾಯಿತು.

ನಿಯಂತ್ರಕ ಪ್ರಾಧಿಕಾರವು ೨೦೧೪ ರಲ್ಲಿ ಡಿಟಿಎಚ್ ಮತ್ತು ಮಲ್ಟಿ-ಸಿಸ್ಟಮ್ ಆಪರೇಟರ್ಸ್ (ಎಂಎಸ್‌ಒ) ಸೇವೆಗಳಿಗಾಗಿಪ್ಲಾಟ್‌ಫಾರ್ಮ್ ಸೇವೆಗಳಿಗಾಗಿ ನಿಯಂತ್ರಕ ಫ್ರೇಮ್‌ವರ್ಕ್ ಕುರಿತು ಶಿಫಾರಸುಗಳನ್ನು ಬಿಡುಗಡೆ ಮಾಡಿತು, ಇವುಗಳನ್ನು ೨೦೨೦ರ ಅಕ್ಟೋಬರಿನಲ್ಲಿ ಪ್ರಸಾರ ಸಚಿವಾಲಯವು ಉಲ್ಲೇಖಿಸಿತು. ತನ್ನ ಚಂದಾದಾರರಿಗೆ ಕೇಬಲ್ ಟಿವಿ ಸೇವೆಗಳನ್ನು ಒದಗಿಸುವ ಎಂಎಸ್‌ಒವನ್ನು ಅಧಿಕೃತ ಸೇವಾ ಪೂರೈಕೆದಾರ ಎಂದು ವ್ಯಾಖ್ಯಾನಿಸಲಾಗಿದೆ.

ಚಲನಚಿತ್ರ ವಿಭಾಗ, ಚಲನಚಿತ್ರೋತ್ಸವಗಳ ನಿರ್ದೇಶನಾಲಯ, ಭಾರತದ ರಾಷ್ಟ್ರೀಯ ಚಲನಚಿತ್ರ ಸಂಗ್ರಹಗಳು ಮತ್ತು ಭಾರತದ ಮಕ್ಕಳ ಚಲನಚಿತ್ರ ಸೊಸೈಟಿಯನ್ನು ರಾಷ್ಟ್ರೀಯ ಚಲನಚಿತ್ರ ಅಭಿವೃದ್ಧಿ ನಿಗಮದೊಂದಿಗೆ ವಿಲೀನಗೊಳಿಸಲು ಸಂಪುಟ ಅನುಮೋದನೆ ನೀಡಿದೆ ಎಂದು ಜಾವಡೇಕರ್ ಹೇಳಿದರು.

ಏತನ್ಮಧ್ಯೆ, ಐದು ವರ್ಷಗಳಲ್ಲಿ ಕೋಟಿ ಪರಿಶಿಷ್ಟ ಜಾತಿ (ಎಸ್‌ಸಿ) ವಿದ್ಯಾರ್ಥಿಗಳಿಗೆ ೫೯,೦೦೦ ಕೋಟಿ ರೂ.ಗಳ ಮೌಲ ಮೆಟ್ರಿಕ್ ಬಳಿಕದ ವಿದ್ಯಾರ್ಥಿವೇತನ ಯೋಜನೆಗೆ ಸಂಪುಟ ಅನುಮೋದನೆ ನೀಡಿದೆ ಎಂದು ಪತ್ರಿಕಾಗೋಷ್ಠಿಯಲ್ಲಿದ್ದ ಕೇಂದ್ರ ಸಚಿವ ತಾವರ್ ಚಂದ್ರ ಗೆಹ್ಲೋಟ್ ಹೇಳಿದರು.

ಕೇಂದ್ರವು ೩೫,೫೩೪ ರೂಗಳನ್ನು ಇದಕ್ಕಾಗಿ ಖರ್ಚು ಮಾಡುತ್ತದೆ ಮತ್ತು ಉಳಿದ ಹಣವನ್ನು ರಾಜ್ಯ ಸರ್ಕಾರಗಳು ಖರ್ಚು ಮಾಡುತ್ತವೆ ಎಂದು ಅವರು ಹೇಳಿದರು.

No comments:

Advertisement