Saturday, December 26, 2020

‘ಒಂದು ರಾಷ್ಟ್ರ, ಒಂದು ಚುನಾವಣೆ’: ಬಿಜೆಪಿಯಿಂದ 25 ವೆಬಿನಾರ್

 ‘ಒಂದು ರಾಷ್ಟ್ರ, ಒಂದು ಚುನಾವಣೆ’: ಬಿಜೆಪಿಯಿಂದ 25 ವೆಬಿನಾರ್

ನವದೆಹಲಿ: ದೇಶಾದ್ಯಂತ ಏಕಕಾಲದಲ್ಲಿ ನಡೆಸುವ ನಿಟ್ಟಿನಲ್ಲಿ ಒಮ್ಮತ ಮೂಡಿಸುವ ಸಲುವಾಗಿ ಮುಂಬರುವ ವಾರಗಳಲ್ಲಿಒಂದು ರಾಷ್ಟ್ರ, ಒಂದು ಚುನಾವಣೆ ಅನುಕೂಲಗಳ ಬಗ್ಗೆ ೨೫ ವೆಬಿನಾರ್‌ಗಳನ್ನು ಆಯೋಜಿಸಲು ಭಾರತೀಯ ಜನತಾ ಪಕ್ಷ (ಬಿಜೆಪಿ) ಸಿದ್ಧತೆ ನಡೆಸಿದೆ.

ಕಳೆದ ಕೆಲವು ವರ್ಷಗಳಿಂದ ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಿಗೆ ಏಕಕಾಲದಲ್ಲಿ ಚುನಾವಣೆ ನಡೆಸುವ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಪ್ರತಿಪಾದಿಸಿದ್ದಾರೆ.

ಆಗಾಗ್ಗೆ ನಡೆಯುವ  ಚುನಾವಣೆಗಳಿಗಾಗಿ ಅನುಷ್ಠಾನಗೊಳಿಸಲಾಗುವ ಚುನಾವಣಾ ನೀತಿ ಸಂಹಿತೆಗಳಿಂದ ಅಭಿವೃದ್ಧಿ ಕಾರ್ಯಗಳಿಗೆ ಆಗುತ್ತಿರುವ ಅಡಚಣೆಗಳನ್ನು ದೂರ ಮಾಡಲುಒಂದು ದೇಶ, ಒಂದು ಚುನಾವಣೆ ಅತ್ಯಗತ್ಯ ಎಂದು ಪ್ರಧಾನಿ ಹೇಳುತ್ತಲೇ ಬಂದಿದ್ದಾರೆ.

ಚುನಾವಣಾ ನೀತಿ ಸಂಹಿತೆಗೆ ಸಂಬಂಧಿಸಿದಂತೆ ಒಂದೇ ರೀತಿಯ ಆಟದ ಮೈದಾನ ರೂಪಿಸಲು ಸಾಧ್ಯವಾಗುವಂತೆ  ಮಾಡಲು ಇದು ಅಗತ್ಯವಾಗಿದೆ. ನೀತಿ ಸಂಹಿತೆ ಜಾರಿಯಾದಾಗ ರ್ಕಾರಗಳು ಯೋಜನೆ ಮತ್ತು ನೀತಿಗಳಿಗೆ ಸಂಬಂಧಿಸಿದ ಹೊಸ ಪ್ರಕಟಣೆ ಮಾಡಲು ನಿಷೇಧವಿರುವುzರಿಂದ ಅಭಿವೃದ್ಧಿ ಕಾರ್‍ಯಗಳಿಗೆ ಅಡ್ಡಿಯಾಗುತ್ತದೆ ಎಂದು ಪ್ರಧಾನಿ ಹೇಳಿದ್ದಾರೆ.

ಚುನಾವಣಾ ನೀತಿ ಸಂಹಿತೆ (ಎಂಸಿಸಿ) ಜಾರಿಯಲ್ಲಿದ್ದಾಗ ಹೊಸ ಯೋಜನೆ, ನೀತಿಗಳ ಪ್ರಕಟಣೆಗಳಿಗೆ ನಿಷೇಧವಿದ್ದರೂ, ನಡೆಯುತ್ತಿರುವ ಕೆಲಸಗಳನ್ನು ಪೂರ್ಣಗೊಳಿಸಲು ಯಾವುದೇ ನಿಷೇಧ ಇರುವುದಿಲ್ಲ.

ಏಕಕಾಲದಲ್ಲಿ ಚುನಾವಣೆಯ ಪ್ರಯೋಜನಗಳ ಬಗ್ಗೆ ಜಾಗೃತಿ ಮೂಡಿಸುವ ಗುರಿಯನ್ನು ಹೊಂದಿರುವ ವೆಬಿನಾರ್‌ಗಳನ್ನು ಉದ್ದೇಶಿಸಿ ಪಕ್ಷದ ಹಿರಿಯ ಮುಖಂಡರು ಮಾತನಾಡಲಿದ್ದು, ಶಿಕ್ಷಣ ತಜ್ಞರು ಮತ್ತು ಕಾನೂನು ತಜ್ಞರು ಭಾಗವಹಿಸಲಿದ್ದಾರೆ ಎಂದು ಬಿಜೆಪಿಯ ಹಿರಿಯ ಮುಖಂಡರೊಬ್ಬರು ತಿಳಿಸಿದ್ದಾರೆ.

೨೦೧೪ ರಲ್ಲಿ ಅಧಿಕಾರಕ್ಕೆ ಬಂದಾಗಿನಿಂದ ಏಕಕಾಲದಲ್ಲಿ ಚುನಾವಣೆಯನ್ನು ಪ್ರತಿಪಾದಿಸಿರುವ ಪ್ರಧಾನಿ ಮೋದಿ ಅವರು ಇತ್ತೀಚೆಗೆ, ಶಾಸನಸಭೆಗಳ ಸಭಾಧ್ಯಕ್ಷರ ೮೦ ನೇ ಅಖಿಲ ಭಾರತ ಸಮ್ಮೇಳನದ ಸಮಾರೋಪ ಅಧಿವೇಶನವನ್ನುದ್ದೇಶಿಸಿ ಮಾತನಾಡುತ್ತಾಒಂದು ರಾಷ್ಟ್ರಕ್ಕೆ, ಒಂದು ಚುನಾವಣೆ ಬಗ್ಗೆ ಮತ್ತೊಮ್ಮೆ ಧ್ವನಿ ನೀಡಿದ್ದರು.

ಪ್ರತಿ ಕೆಲವು ತಿಂಗಳಿಗೊಮ್ಮೆ ಚುನಾವಣೆಗಳು ನಡೆಯುತ್ತಿರುವುದರಿಂದ ಇದು ಸಮಯದ ಅಗತ್ಯವಾಗಿದೆ ಎಂದು ತಿಳಿಸಿ, ಇದು ಅಭಿವೃದ್ಧಿ ಕಾರ್ಯಗಳ ಮೇಲೆ ಪರಿಣಾಮ ಬೀರುತ್ತದೆ ಎಂದು ಅವರು ಹೇಳಿದ್ದರು.

"ಪ್ರತಿ ಕೆಲವು ತಿಂಗಳಿಗೊಮ್ಮೆ ವಿವಿಧ ಸ್ಥಳಗಳಲ್ಲಿ ಚುನಾವಣೆಗಳು ನಡೆಯುತ್ತವೆ ಮತ್ತು ಅಭಿವೃದ್ಧಿ ಕಾರ್ಯಗಳ ಮೇಲೆ ಅದು ಬೀರುವ ಪರಿಣಾಮ ಎಲ್ಲರಿಗೂ ತಿಳಿದಿದೆ. ಆದ್ದರಿಂದ, ‘ಒಂದು ರಾಷ್ಟ್ರ, ಒಂದು ಚುನಾವಣೆ ಕುರಿತು ಆಳವಾದ ಅಧ್ಯಯನ ಮತ್ತು ಚರ್ಚೆಯನ್ನು ನಡೆಸುವುದು ಅತ್ಯಗತ್ಯ ಎಂದು ಮೋದಿ ಹೇಳಿದ್ದರು.

೨೦೧೬ ರಲ್ಲಿ, ಸರ್ಕಾರದ ಥಿಂಕ್ ಟ್ಯಾಂಕ್, ನೀತಿ ಆಯೋಗವು, ’ಏಕಕಾಲಿಕ ಚುನಾವಣೆಗಳ ವಿಶ್ಲೇಷಣೆ: ಏನು, ಏಕೆ ಮತ್ತು ಹೇಗೆ ಎಂಬ ಚರ್ಚಾ ಪ್ರಬಂಧದಲ್ಲಿ, ಏಕಕಾಲಿಕ ಚುನಾವಣೆಗಳ ಕಲ್ಪನೆಗೆ ಬೆಂಬಲ ನೀಡಿತ್ತು.

ಕಷ್ಟಕರವಾದ ರಚನಾತ್ಮಕ ಸುಧಾರಣೆಗಳಿಗಿಂತ "ಅಲ್ಪ ದೃಷ್ಟಿಯ ಜನಪ್ರಿಯವಾದಿ" ಮತ್ತು "ರಾಜಕೀಯವಾಗಿ ಸುರಕ್ಷಿತ" ಕ್ರಮಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ ಎಂದು ನೀತಿ ಆಯೋಗ ತನ್ನ ವರದಿಯಲ್ಲಿ ಹೇಳಿತ್ತು.

ಪ್ರತಿವರ್ಷ ಎರಡರಿಂದ ಐದು ರಾಜ್ಯಗಳಲ್ಲಿ ಚುನಾವಣೆ ನಡೆಸುವ ಬದಲು, ಎರಡು ಚಕ್ರಗಳಲ್ಲಿ ೩೦ ತಿಂಗಳ ಮಧ್ಯಂತರದೊಂದಿಗೆ ಚುನಾವಣೆಯನ್ನು ನಡೆಸುವ ಬಗ್ಗೆ ವರದಿ ಪ್ರಸ್ತಾಪಿಸಿತ್ತು. ಅದರಂತೆ ೧೪ ರಾಜ್ಯಗಳು ಒಂದು ಹಂತದಲ್ಲಿ ಲೋಕಸಭೆಯ ಜೊತೆಗೆ ಚುನಾವಣೆಗೆ ಹೋಗಬೇಕು, ಮುಂದಿನ ಚಕ್ರದಲ್ಲಿ ಎರಡೂವರೆ ವರ್ಷಗಳ ನಂತರ ಉಳಿದ ರಾಜ್ಯಗಳು ಮತದಾನಕ್ಕೆ ಹೋಗಬೇಕು ಎಂದು ವರದಿ ಶಿಫಾರಸು ಮಾಡಿತ್ತು.

No comments:

Advertisement