ಭಾರತದಲ್ಲಿ ರೂಪಾಂತರೀ ಕೊರೋನಾ ಸಂಖ್ಯೆ 25ಕ್ಕೆ
ನವದೆಹಲಿ: ರೂಪಾಂತರಿತ ಕೊರೊನಾವೈರಸ್ ಕಾಯಿಲೆಯ ಐದು ಹೊಸ ಪ್ರಕರಣಗಳನ್ನು ಭಾರತ 2020 ಡಿಸೆಂಬರ್ 31ರ ಗುರುವಾರ ದಾಖಲಿಸಿದ್ದು, ಒಟ್ಟು ಪ್ರಕರಣಗಳ ಸಂಖ್ಯೆ ೨೫ ಕ್ಕೆ ತಲುಪಿದೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.
ಐದು ಹೊಸ ಪ್ರಕರಣಗಳಲ್ಲಿ, ನಾಲ್ಕು
ಪ್ರಕರಣಗಳನ್ನು ಪುಣೆಯ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ವೈರಾಲಜಿ ಮತ್ತು ದೆಹಲಿಯ ಸಿಎಸ್ಐಆರ್-ಇನ್ಸ್ಟಿಟ್ಯೂಟ್ ಆಫ್ ಜೀನೋಮಿಕ್ಸ್ ಅಂಡ್ ಇಂಟಿಗ್ರೇಟಿವ್ ಬಯಾಲಜಿ ಪತ್ತೆ ಮಾಡಿವೆ.
ಸೋಂಕಿತ ವ್ಯಕ್ತಿಗಳನ್ನು ರಾಜ್ಯ ಆರೋಗ್ಯ ಸೌಲಭ್ಯಗಳಲ್ಲಿ ಪ್ರತ್ಯೇಕತಾವಾಸದಲ್ಲಿ ಇರಿಸಲಾಗಿದೆ.
"ಜೀನೋಮ್ ಅನುಕ್ರಮದ ನಂತರ ಭಾರತದಲ್ಲಿ ಒಟ್ಟು ೨೫ ಪ್ರಕರಣಗಳು ರೂಪಾಂತರಿತ ಇಂಗ್ಲೆಂಡ್ ವೈರಸ್ ಪತ್ತೆಯಾಗಿದೆ. ಪುಣೆಯ
ಎನ್ಐವಿ ಕಂಡುಹಿಡಿದ ನಾಲ್ಕು ಹೊಸ ಪ್ರಕರಣಗಳು ಮತ್ತು ದೆಹಲಿಯ ಐಜಿಐಬಿಯಲ್ಲಿ ಒಂದು ಹೊಸ ಪ್ರಕರಣ ಇವುಗಳಲ್ಲಿ ಸೇರಿವೆ. ಎಲ್ಲ
೨೫ ಜನರೂ ಆರೋಗ್ಯ ಸೌಲಭ್ಯಗಳಲ್ಲಿ ಪ್ರತ್ಯೇಕವಾಸದಲ್ಲಿ ಇದ್ದಾರೆ’
ಎಂದು ಆರೋಗ್ಯ ಸಚಿವಾಲಯದ ಅಧಿಕಾರಿಯನ್ನು ಉಲ್ಲೇಖಿಸಿ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಭಾರತ ಬುಧವಾರ ೧೪ ಹೊಸ ಪ್ರಕರಣಗಳನ್ನು ಪತ್ತೆ ಮಾಡಿದೆ, ಅದರಲ್ಲಿ
ಎಂಟು ಪ್ರಕರಣಗಳನ್ನು ದೆಹಲಿಯ ರಾಷ್ಟ್ರೀಯ ರೋಗ ನಿಯಂತ್ರಣ ಕೇಂದ್ರದಲ್ಲಿ (ಎನ್ಸಿಡಿಸಿ), ನಾಲ್ಕು
ಬೆಂಗಳೂರಿನ ಮಾನಸಿಕ ಆರೋಗ್ಯ ಮತ್ತು ನರ ವಿಜ್ಞಾನ ಸಂಸ್ಥೆಯಲ್ಲಿ (ನಿಮ್ಹಾನ್ಸ್)
ಮತ್ತು ತಲಾ ಒಂದು ಪ್ರಕರಣಗಳು ದೆಹಲಿಯ ಇನ್ಸ್ಟಿಟ್ಯೂಟ್ ಆಫ್ ಜೀನೋಮಿಕ್ಸ್ ಅಂಡ್ ಇಂಟಿಗ್ರೇಟಿವ್ ಬಯಾಲಜಿ (ಐಜಿಐಬಿ)
ಮತ್ತು ಪಶ್ಚಿಮ ಬಂಗಾಳದ ಕಲ್ಯಾಣಿಯ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಬಯೋಮೆಡಿಕಲ್ ಜೀನೋಮಿಕ್ಸ್ (ಎನ್ಐಬಿಜಿ) ನಲ್ಲಿ
ಪತ್ತೆಯಾಗಿವೆ.
ಮಂಗಳವಾರ, ಇಂಗ್ಲೆಂಡಿನಿಂದ
ಹಿಂದಿರುಗಿದ ಆರು ಜನರು - ಕರ್ನಾಟಕದಿಂದ
ಮೂವರು ಮತ್ತು ಆಂಧ್ರಪ್ರದೇಶ, ತೆಲಂಗಾಣ
ಮತ್ತು ಉತ್ತರ ಪ್ರದೇಶದ ತಲಾ ಒಬ್ಬರು ಹೊಸ ರೂಪಾಂತರೀ ವೈರಸ್ ಹೊಂದಿರುವುದು ಕಂಡು ಬಂದಿದೆ.
ರೂಪಾಂತರಿತ ವೈರಸ್ ಪತ್ತೆಯಾದವರನ್ನು ರಾಜ್ಯಗಳು ಗೊತ್ತುಪಡಿಸಿದ ಆರೋಗ್ಯ ಸೌಲಭ್ಯಗಳಲ್ಲಿ ಏಕ-ಕೋಣೆಯ ಪ್ರತ್ಯೇಕತೆಯಲ್ಲಿ ಇರಿಸಲಾಗುತ್ತದೆ. ಸಹ-ಪ್ರಯಾಣಿಕರು, ಕುಟುಂಬ
ಸಂಪರ್ಕಗಳು ಮತ್ತು ಇತರರಿಗಾಗಿ ಸಮಗ್ರ ಸಂಪರ್ಕ-ಪತ್ತೆಹಚ್ಚುವಿಕೆಯನ್ನು ಪ್ರಾರಂಭಿಸಲಾಗಿದೆ. ಅವರ
ನಿಕಟ ಸಂಪರ್ಕಕ್ಕೆ ಬಂದವರನ್ನು ಸಹ ಸಂಪರ್ಕತಡೆಯಲ್ಲಿ ಇರಿಸಲಾಗುತ್ತಿದೆ ಎಂದು ಸರ್ಕಾರ ತಿಳಿಸಿದೆ.
ಬ್ರಿಟನ್ನಲ್ಲಿ ಪತ್ತೆಯಾದ ವೈರಸ್ನ ಹೊಸ ರೂಪಾಂತರವು ಪ್ರಪಂಚದಾದ್ಯಂತ ವ್ಯಾಪಕ ಕಳವಳಕ್ಕೆ ಕಾರಣವಾಗಿದ್ದು ವಿಶ್ವಾದ್ಯಂತ ಹಲವೆಡೆ ಪ್ರಯಾಣ ನಿರ್ಬಂಧಗಳನ್ನು ವಿಧಿಸಲಾಗಿದೆ.
ಕೊರೋನಾವೈರಸ್ಸಿನ ರೂಪಾಂತರವು ಶೇಕಡಾ ೭೦ಕ್ಕಿಂತಲೂ ಹೆಚ್ಚು ಹರಡಬಲ್ಲದು, ಇದು
ಬ್ರಿಟನ್ನಲ್ಲಿ ವೇಗವಾಗಿ ಹರಡುತ್ತಿದೆ, ಆದರೂ
ಇದು ಹೆಚ್ಚು ಮಾರಕ ಅಥವಾ ಹೆಚ್ಚು ಗಂಭೀರ ಕಾಯಿಲೆಗೆ ಕಾರಣವಾಗಬಹುದು ಎಂದು ಭಾವಿಸಲಾಗಿಲ್ಲ ಎಂದು ಪ್ರಧಾನಿ ಬೋರಿಸ್ ಜಾನ್ಸನ್ ಮತ್ತು ಅವರ ವೈಜ್ಞಾನಿಕ ಸಲಹೆಗಾರರ ಮಂಡಳಿ ತಿಳಿಸಿದೆ.
ನವೆಂಬರ್ ೨೫ ರಿಂದ ಡಿಸೆಂಬರ್ ೨೩ ರವರೆಗೆ ಸುಮಾರು ೩೩,೦೦೦ ಪ್ರಯಾಣಿಕರು ಇಂಗ್ಲೆಂಡಿನಿಂದ ವಿವಿಧ ಭಾರತೀಯ ವಿಮಾನ ನಿಲ್ದಾಣಗಳಿಗೆ ಆಗಮಿಸಿದ್ದಾರೆ ಎಂದು ಸರ್ಕಾರದ ಅಂಕಿಅಂಶಗಳು ತಿಳಿಸಿವೆ. ಅಧಿಕಾರಿಗಳು
ಈ ಪ್ರಯಾಣಿಕರ ಮೇಲೆ ಅತ್ಯುತ್ತಮ ಗುಣಮಟ್ಟದ ಆರ್ಟಿ-ಪಿಸಿಆರ್ (ರಿವರ್ಸ್
ಟ್ರಾನ್ಸ್ಸ್ಕ್ರಿಪ್ಷನ್ ಪಾಲಿಮರೇಸ್ ಚೈನ್ ರಿಯಾಕ್ಷನ್) ಪರೀಕ್ಷೆಯನ್ನು
ತಂಡಗಳಲ್ಲಿ ನಡೆಸಲು ಪ್ರಾರಂಭಿಸಿದ್ದಾರೆ, ಆದರೆ
ನೂರಾರು ಮಂದಿ ಅಸ್ಪಷ್ಟ ವಿಳಾಸಗಳನ್ನು ಒದಗಿಸಿರುವುದು ಮತ್ತು ಫೋನ್ಗಳನ್ನು ಸ್ವಿಚ್ ಆಫ್ ಮಾಡಿಕೊಂಡಿರುವುದರಿಂದ
ಅವೆಲ್ಲವನ್ನೂ ಪತ್ತೆಹಚ್ಚುವುದು ಕಷ್ಟಕರ ಕಾರ್ಯವಾಗಿದೆ.
No comments:
Post a Comment