Friday, December 4, 2020

ಫ್ರಾನ್ಸಿನಲ್ಲಿ ವಿಜಯ್ ಮಲ್ಯ ಆಸ್ತಿ ಇಡಿ ವಶಕ್ಕೆ

 ಫ್ರಾನ್ಸಿನಲ್ಲಿ ವಿಜಯ್ ಮಲ್ಯ ಆಸ್ತಿ ಇಡಿ ವಶಕ್ಕೆ

ನವದೆಹಲಿ: ಫ್ರಾನ್ಸಿನಲ್ಲಿ ಉದ್ಯಮಿ ವಿಜಯ ಮಲ್ಯ ಅವರಿಗೆ ಸೇರಿದ ೧೬ ಲಕ್ಷ (. ದಶಲಕ್ಷ) ಯೂರೋ ಮೌಲ್ಯದ ಆಸ್ತಿಯನ್ನು ಜಾರಿ ನಿರ್ದೇಶನಾಲಯ (ಇಡಿ) 2020 ಡಿಸೆಂಬರ್ 04ರ ಶುಕ್ರವಾರ ವಶಪಡಿಸಿಕೊಂಡಿತು. ಜಾರಿ ನಿರ್ದೇಶನಾಲಯದ ಕೋರಿಕೆಯ ಮೇರೆಗೆ ಫ್ರೆಂಚ್ ಅಧಿಕಾರಿಗಳು ಹಣ ವರ್ಗಾವಣೆ ವಿರೋಧಿ ಕಾನೂನಿನಡಿಯಲ್ಲಿ ಆಸ್ತಿಯನ್ನು ವಶಪಡಿಸಿಕೊಂಡಿದ್ದಾರೆ.

ಫ್ರೆಂಚ್ ಅಧಿಕಾರಿಗಳು "ಜಾರಿ ನಿರ್ದೇಶನಾಲಯದ ಕೋರಿಕೆಯ ಮೇರೆಗೆ" ಕ್ರಮವನ್ನು ಕೈಗೊಂಡಿದ್ದಾರೆ ಮತ್ತು ಆಸ್ತಿ ಫ್ರಾನ್ಸಿನ ೩೨ ಅವೆನ್ಯೂ ಫೋಚ್ನಲ್ಲಿದೆ ಎಂದು ಕೇಂದ್ರ ತನಿಖಾ ಸಂಸ್ಥೆ ಹೇಳಿಕೆಯಲ್ಲಿ ತಿಳಿಸಿದೆ.

ಭಾರತೀಯ ಕರೆನ್ಸಿಯಲ್ಲಿ, ವಶಪಡಿಸಿಕೊಂಡ ಆಸ್ತಿಯ ಮೌಲ್ಯ ಸುಮಾರು ೧೪ ಕೋಟಿ ರೂ. ಆಗುತ್ತದೆ.

ಪ್ರಸ್ತುತ ಸ್ಥಗಿತಗೊಂಡಿರುವ ಕಿಂಗ್ ಫಿಶರ್ ಏರ್ ಲೈನ್ಸ್ ವಿಮಾನಯಾನ ಸಂಸ್ಥೆಯು ಸರ್ಕಾರಿ ಸ್ವಾಮ್ಯದ ಭಾರತೀಯ ಬ್ಯಾಂಕುಗಳಿಂದ ತೆಗೆದುಕೊಂಡ ಸಾಲಗಳಿಗೆ ಸಂಬಂಧಿಸಿದಂತೆ ವಂಚನೆ ಮತ್ತು ಹಣ ವರ್ಗಾವಣೆ ಆರೋಕ್ಕೆ ಸಂಬಂಧಿಸಿದಂತೆ ಮಾಜಿ ಮದ್ಯ ಉದ್ಯಮಿ ವಿಜಯ ಮಲ್ಯ ಅವರು ಭಾರತಕ್ಕೆ ಬೇಕಾಗಿದ್ದಾರೆ. ಬ್ಯಾಂಕುಗಳ ಪ್ರತಿಪಾದನೆ ಪ್ರಕಾರ, ಮಲ್ಯ ಅವರು ಭಾರತದ ಬ್ಯಾಂಕುಗಳಿಗೆ ,೦೦೦ ಕೋಟಿ ರೂ.ಪಾವತಿಸಬೇಕಾಗಿದೆ.

ಭಾರತ ಸರ್ಕಾರವು ಪ್ರಸ್ತುತ ಮಲ್ಯ ಅವರನ್ನು ಇಂಗ್ಲೆಂಡಿನಿಂದ ಹಸ್ತಾಂತರಿಸಿಕೊಳ್ಳಲು ಪ್ರಯತ್ನಿಸುತ್ತಿದೆ, ಅಲ್ಲಿ ಅವರು ೨೦೧೬ರ ಮಾರ್ಚ್ನಿಂದ ವಾಸವಾಗಿದ್ದಾರೆ. ಗೌಪ್ಯ ಕಾನೂನು ಹಿನ್ನೆಲೆಯಲ್ಲಿ ಅವರನ್ನು ಹಸ್ತಾಂತರಿಸಲು ಬ್ರಿಟಿಷ್ ನ್ಯಾಯಾಲಯ ವಿಳಂಬ ಮಾಡಿದ್ದು, ಅವರು ಜಾಮೀನಿನಲ್ಲಿ ಇದ್ದಾರೆ.

ವರ್ಷದ ಅಕ್ಟೋಬರಿನಲ್ಲಿ ಇಂಗ್ಲೆಂಡ್ ಸರ್ಕಾರವು ಮಲ್ಯ ಅವರನ್ನು ಶೀಘ್ರದಲ್ಲಿಯೇ ಭಾರತಕ್ಕೆ ಹಸ್ತಾಂತರಿಸುವ ಸಾಧ್ಯತೆಯಿಲ್ಲ ಎಂದು ಸೂಚಿಸಿತ್ತು, ಕಾನೂನು ಹಸ್ತಕ್ಷೇಪ ಇದ್ದು, ಅದನ್ನು ಹಸ್ತಾಂತರದ ವ್ಯವಸ್ಥೆ ಮಾಡುವುದಕ್ಕೆ ಮುನ್ನ ಪರಿಹರಿಸಬೇಕಾಗಿದೆ.

ಮಲ್ಯ ಎಲ್ಲಾ ಕಾನೂನು ಪರಿಹಾರಗಳನ್ನು ಪಡೆಯಲು ಯತ್ನಿಸಿ ಸೋತ ನಂತರ ಹಸ್ತಾಂತರಕ್ಕೆ ಬ್ರಿಟಿಷ್ ನ್ಯಾಯಾಲಯ ಆದೇಶಿಸಿದೆ.

No comments:

Advertisement