ರೈತರ ಪ್ರತಿಭಟನೆಗೆ ಬೆಂಬಲ: ಸಾರಿಗೆದಾರರ ಬೆಂಬಲ
ನವದೆಹಲಿ: ಕೃಷಿ ಕ್ಷೇತ್ರವನ್ನು ಉದಾರೀಕರಣಗೊಳಿಸಲು ಸೆಪ್ಟೆಂಬರಿನಲ್ಲಿ ಅಂಗೀಕರಿಸಲಾಗಿರುವ ಮೂರು ಕೃಷಿ ಕಾನೂನುಗಳ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ರೈತರ ಬೇಡಿಕೆಗಳನ್ನು ಈಡೇರಿಸದಿದ್ದರೆ ಮೊದಲಿಗೆ ಉತ್ತರ ಭಾರತ ಮತ್ತು ತರುವಾಯ ಇಡೀ ದೇಶದಾದ್ಯಂತ ಅಗತ್ಯ ವಸ್ತುಗಳ ಸಂಚಾರವನ್ನು ನಿಲ್ಲಿಸುವುದಾಗಿ ಸಾರಿಗೆದಾರರ ಉನ್ನತ ಸಂಸ್ಥೆ 2020 ಡಿಸೆಂಬರ್ 2ರ ಬುಧವಾರ ಬೆದರಿಕೆ ಹಾಕಿತು.
ಸುಮಾರು ೧ ಕೋಟಿ (೧೦ ಮಿಲಿಯನ್) ಟ್ರಕ್ಕರ್‌ಗಳನ್ನು ಪ್ರತಿನಿಧಿಸುವ ಸರಕುಗಳ ವಾಹನ ನಿರ್ವಾಹಕರ ಸಂಘಗಳ ಒಕ್ಕೂಟವಾದ ಅಖಿಲ ಭಾರತ ಮೋಟಾರು ಸಾರಿಗೆ ಕಾಂಗ್ರೆಸ್ (ಎಐಎಂಟಿಸಿ) ರೈತರ ಪ್ರತಿಭಟನೆಯನ್ನು ಬೆಂಬಲಿಸಿ ಡಿಸೆಂಬರ್ ೮ ರಿಂದ ಮುಷ್ಕರ ಆರಂಭಿಸಲು ಕರೆ ನೀಡಿತು.
"ಡಿಸೆಂಬರ್ ೮ ರಿಂದ, ನಾವು ಉತ್ತರ ಭಾರತದಾದ್ಯಂತ ನಮ್ಮ ಎಲ್ಲಾ ಕಾರ್ಯಾಚರಣೆಗಳನ್ನು ಸ್ಥಗಿತಗೊಳಿಸುತ್ತೇವೆ ಮತ್ತು ದೆಹಲಿ, ಹರಿಯಾಣ, ಉತ್ತರ ಪ್ರದೇಶ, ಪಂಜಾಬ್, ಹಿಮಾಚಲ, ಮತ್ತು ಜಮ್ಮು [ಮತ್ತು ಕಾಶ್ಮೀರ] ಸೇರಿದಂತೆ ಉತ್ತರ ಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ರಸ್ತೆಗಳಿಗೆ ಅಡ್ಡಲಾಗಿ ನಮ್ಮ ಎಲ್ಲಾ ವಾಹನಗಳನ್ನು ನಿಲ್ಲಿಸುತ್ತೇವೆ. ಪ್ರತಿಭಟನಾ ನಿರತ ರೈತರ ಬೇಡಿಕೆಗಳಿಗೆ ಸರ್ಕಾರ ಆಗಲೂ ಸಮ್ಮತಿಸದಿದ್ದರೆ, ನಾವು ಭಾರತದಾದ್ಯಂತ ಚಕ್ಕಾ ಜಾಮ್‌ಗೆ ಕರೆ ನೀಡುತ್ತೇವೆ ಮತ್ತು ನಮ್ಮ ಎಲ್ಲಾ ವಾಹನಗಳನ್ನು ಸ್ಥಗಿತಗೊಳಿಸಲು ನಾವು ನಿರ್ಧರಿಸಿದ್ದೇ’ ಎಂದು ಎಐಎಂಟಿಸಿ ಅಧ್ಯಕ್ಷ ಕುಲ್ತಾರನ್ ಸಿಂಗ್ ಅಟ್ವಾಲ್ ಹೇಳಿದ್ದಾರೆ.
ಭಾರತದಲ್ಲಿ ರಸ್ತೆ ಸಾರಿಗೆಯು ಸುಮಾರು ಶೇಕಡಾ ೬೦ರಷ್ಟು ಸರಕು ಸಾಗಣೆ ಮತ್ತು ಶೇಕಡಾ ೮೭ರಷ್ಟು ಪ್ರಯಾಣಿಕರ ದಟ್ಟಣೆಯನ್ನು ಹೊಂದಿದೆ ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ತಿಳಿಸಿದೆ.
ಈ ಮೂರು ಕಾನೂನುಗಳ ವಿರುದ್ಧ ವಿಶೇಷವಾಗಿ ಪಂಜಾಬ್ ಮತ್ತು ಹರಿಯಾಣದ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ,
ಸರ್ಕಾರವು ತಮ್ಮ ಆದಾಯವನ್ನು ಹೆಚ್ಚಿಸುತ್ತದೆ ಎಂದು ಹೇಳುತ್ತದೆ. ಕಾನೂನುಗಳು ಕೃಷಿಗೆ ಸರ್ಕಾರದ ಬೆಂಬಲವನ್ನು ಹಿಂತೆಗೆದುಕೊಳ್ಳುವ ಪೂರ್ವಸೂಚಕವಾಗಿವೆ ಮತ್ತು ಅಸ್ತಿತ್ವದಲ್ಲಿರುವ ಮಧ್ಯವರ್ತಿಗಳ ಬದಲಿಗೆ ಹೆಚ್ಚು ಶಕ್ತಿಶಾಲಿ ಕಾರ್ಪೋರೇಟ್ ಘಟಕಗಳು ಬರಲಿವೆ ಎಂದು ರೈತ ಚಳವಳಿಗಾರರು ಪ್ರತಿಪಾದಿಸುತ್ತಾರೆ.
ರೈತರ ಆಂದೋಲನಕ್ಕೆ ಸಾರಿಗೆದಾರರು ನಿರಂತರ ಬೆಂಬಲವನ್ನು ನೀಡುತ್ತಿದ್ದಾರೆ ಎಂದು ಎಐಎಂಟಿಸಿ ಹೇಳಿಕೆಯಲ್ಲಿ ತಿಳಿಸಿದೆ.
‘ಅವರು ತಮ್ಮ ನ್ಯಾಯಸಮ್ಮತ ಹಕ್ಕುಗಳಿಗಾಗಿ ಹೋರಾಡುತ್ತಿದ್ದಾರೆ. ಭಾರತದ ರಸ್ತೆ ಸಾರಿಗೆ ಕ್ಷೇತ್ರದಂತೆಯೇ, ಕೃಷಿ ಕ್ಷೇತ್ರವು ನಿಜಕ್ಕೂ ರಾಷ್ಟ್ರದ ಬೆನ್ನೆಲುಬು ಮತ್ತು ಜೀವನಾಡಿಯಾಗಿದೆ. ಶೇಕಡಾ ೭೦ ರಷ್ಟು ಗ್ರಾಮೀಣ ಕುಟುಂಬಗಳು ಕೃಷಿಯನ್ನು ಅವಲಂಬಿಸಿವೆ. ಇಡೀ ಉತ್ತರ ಭಾರತದ ಮೇಲೆ ರೈತ ಚಳವಳಿಯು ಪರಿಣಾಮ ಬೀರಿದೆ ಮತ್ತು ಪಂಜಾಬ್, ಹರಿಯಾಣ, ಹಿಮಾಚಲ ಪ್ರದೇಶ ಉತ್ತರ ಪ್ರದೇಶ, ಉತ್ತರಾಖಂಡ, ಜೆ & ಕೆ [ಜಮ್ಮು ಮತ್ತು ಕಾಶ್ಮೀರ] ದಿಂದ ಬರುವ ಆಹಾರ, ತರಕಾರಿಗಳು ಮತ್ತು ಇತರ ಹಾಳಾಗುವ ಮತ್ತು ನಾಶವಾಗದ ವಸ್ತುಗಳನ್ನು ಸಾಗಿಸುವ ಸಾವಿರಾರು ಟ್ರಕ್‌ಗಳು ಸ್ಥಗಿತಗೊಂಡಿವೆ. ಆದರೂ ನಾವು ರೈತರ ಚಳವಳಿಯನ್ನು ಬೆಂಬಲಿಸುತ್ತೇವೆ. ಏಕೆಂದರೆ ನಮ್ಮ ಶೇಕಡಾ ೬೫ರಷ್ಟು ಟ್ರಕ್ಕುಗಳು ಕೃಷಿ ಉತ್ಪನ್ನಗಳ ಸಾಗಣೆಯಲ್ಲಿ ತೊಡಗಿವೆ’ ಎಂದು ಹೇಳಿಕೆ ತಿಳಿಸಿದೆ.
‘... ಇದು ಆಲೂಗಡ್ಡೆ, ಈರುಳ್ಳಿ ಮತ್ತು ಇತರ ಹಣ್ಣುಗಳು ಮತ್ತು ತರಕಾರಿಗಳು ಮತ್ತು ಇತರ ಅಗತ್ಯ ಸರಕುಗಳಾದ ಔಧಗಳು, ಹಾಲು ಇತ್ಯಾದಿಗಳ ಹೊರತಾಗಿ ವ್ಯರ್ಥವಾಗುತ್ತಿರುವ ಸೇಬುಗಳ ಋತುವಾಗಿದೆ, ಅವುಗಳ ಚಲನೆಗೆ ಅಡ್ಡಿಯಾಗಿದೆ. ಇದು ದೆಹಲಿ ಮತ್ತು ಇತರ ಉತ್ತರದ ರಾಜ್ಯಗಳಲ್ಲಿ ಆಹಾರ ದಾನ್ಯಗಳ ಕೊರತೆಗೆ ಕಾರಣವಾಗಿದೆ. ರೈತರ ಕಳವಳಗಳನ್ನು ನಿವಾರಿಸಲು ಸರ್ಕಾರ ವಿವೇಕಯುತ ಮತ್ತು ಪ್ರಾಯೋಗಿಕ ಕ್ರಮಗಳನ್ನು ತೆಗೆದುಕೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ಪರಿಸ್ಥಿತಿ ಇನ್ನಷ್ಟು ತೀವ್ರಗೊಳ್ಳುತ್ತದೆ ... [ರೈತರು] ತಮ್ಮ ಏಕೈಕ ಸಮರವನ್ನು ನಡೆಸುತ್ತಿದ್ದಾರೆ’ ಎಂದು ಹೇಳಿಕೆ ತಿಳಿಸಿದೆ.
ಸರ್ಕಾರಿ ನಿಯಂತ್ರಿತ ಮಂಡಿ ವ್ಯವಸ್ಥೆಯ ಹೊರತಾಗಿ ಕೃಷಿ ಉತ್ಪನ್ನಗಳನ್ನು ಮುಕ್ತವಾಗಿ ವ್ಯಾಪಾರ ಮಾಡಲು ವ್ಯಾಪಾರಗಳಿಗೆ ಅವಕಾಶ ನೀಡುವ ಕಾನೂನುಗಳ ಬಗ್ಗೆ ರೈತರು ಒಂದು ವಾರದಿಂದ ಪ್ರತಿಭಟನೆ ನಡೆಸುತ್ತಿದ್ದಾರೆ. ಭವಿಷ್ಯದ ಮಾರಾಟಕ್ಕಾಗಿ ಹೆಚ್ಚಿನ ಪ್ರಮಾಣದ ಅಗತ್ಯ ಸರಕುಗಳನ್ನು ಸಂಗ್ರಹಿಸಲು ಮತ್ತು ಗುತ್ತಿಗೆ ಕೃಷಿಗೆ ಹೊಸ ನಿಯಮಗಳನ್ನು ರೂಪಿಸಲು ಖಾಸಗಿ ವ್ಯಾಪಾರಿಗಳಿಗೆ ಕಾನೂನುಗಳು ಅನುಮತಿ ನೀಡುತ್ತವೆ. ಕೃಷಿಕರು ಖಾಸಗಿ ಖರೀದಿದಾರರ ಕರುಣೆಗೆ ಬಿದ್ದು ಶೋಷಣೆಗೆ ಗುರಿಯಾಗುತ್ತಾರೆ ಎಂದು ರೈತ ನಾಯಕರು ಪ್ರತಿಪಾದಿಸುತ್ತಿದ್ದಾರೆ.
ಕಾನೂನುಗಳನ್ನು ವಿರೋಧಿಸಿ ವಿವಿಧ ರಾಜ್ಯಗಳಿಂದ ರಾಷ್ಟ್ರ ರಾಜಧಾನಿಯತ್ತ ಮೆರವಣಿಗೆ ನಡೆಸುತ್ತಿರುವ ಸಾವಿರಾರು ರೈತರು, ಕಾನೂನುಗಳನ್ನು ರದ್ದುಗೊಳಿಸುವಂತೆ ಒತ್ತಾಯಿಸಿ ನವದೆಹಲಿಯ ಎಲ್ಲಾ ಪ್ರಮುಖ ಪ್ರವೇಶ ಕೇಂದ್ರಗಳನ್ನು ನಿರ್ಬಂಧಿಸಿದ್ದಾರೆ.
No comments:
Post a Comment