Wednesday, December 2, 2020

ಕೊರೋನಾ ವಿರುದ್ಧ ಫಿಜರ್ ಲಸಿಕೆ: ಇಂಗ್ಲೆಂಡ್ ಅಸ್ತು

 ಕೊರೋನಾ ವಿರುದ್ಧ ಫಿಜರ್ ಲಸಿಕೆ: ಇಂಗ್ಲೆಂಡ್ ಅಸ್ತು

ಲಂಡನ್: ಕೋವಿಡ್-೧೯ ಸಾಂಕ್ರಾಮಿಕದ ವಿರುದ್ಧದ ಬಳಕೆಗಾಗಿ ಫಿಜರ್ ಬಯೋ ಎನ್‌ಟೆಕ್ ಲಸಿಕೆಯನ್ನು ಇಂಗ್ಲೆಂಡ್ 2020 ಡಿಸೆಂಬರ್ 2ರ ಬುಧವಾರ ಅನುಮೋದಿಸಿದ್ದು, ಕೊರೋನಾ ವಿರೋಧಿ ಲಸಿಕೆ ಅನುಮೋದಿಸಿದ ವಿಶ್ವದ ಚೊಚ್ಚಲ ರಾಷ್ಟ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಯಿತು. ಲಸಿಕೆಯು ಮುಂದಿನ ವಾರ ಬಿಡುಗಡೆಯಾಗಲಿದೆ ಎಂಬ ಚಾರಿತ್ರಿಕ ಪ್ರಕಟಣೆಯನ್ನು ಇಂಗ್ಲೆಂಡ್ ಈದಿನ ಮಾಡಿತು.

"ಫಿಜರ್-ಬಯೋಎನ್‌ಟೆಕ್‌ನ  ಕೋವಿಡ್-೧೯ ಲಸಿಕೆಯನ್ನು ಬಳಕೆಗಾಗಿ ಅನುಮೋದಿಸಲು ಸ್ವತಂತ್ರ  ಔಷಧ ಮತ್ತು ಆರೋಗ್ಯ ಉತ್ಪನ್ನಗಳ ನಿಯಂತ್ರಣ ಸಂಸೆಯ್ಥ (ಎಂಎಚ್ ಆರ್‌ಎ) ಶಿಫಾರಸನ್ನು ಸರ್ಕಾರ ಬುಧವಾರ ಸ್ವೀಕರಿಸಿದೆ" ಎಂದು ಸರ್ಕಾರ ತಿಳಿಸಿತು.

"ಲಸಿಕೆ ಮುಂದಿನ ವಾರದಿಂದ ಇಂಗ್ಲೆಂಡಿನಾದ್ಯಂತ ಲಭ್ಯವಾಗಲಿದೆ. ಮುಂದಿನ ವಾರದಲ್ಲಿ ಲಸಿಕೆ ನೀಡುವ ಕಾರ್ಯಕ್ರಮ ಪ್ರಾರಂಭವಾಗಲಿದೆ ಎಂದು ಆರೋಗ್ಯ ಕಾರ್ಯದರ್ಶಿ ಮ್ಯಾಟ್ ಹ್ಯಾನ್‌ಕಾಕ್ ಹೇಳಿದರು. "ಇದು ತುಂಬಾ ಒಳ್ಳೆಯ ಸುದ್ದಿ" ಎಂದು ಹ್ಯಾನ್ಕಾಕ್ ನುಡಿದರು.

ಲಸಿಕೆಯನ್ನು ಬ್ರಿಟನ್ ಅನುಮೋದಿಸಿದ್ದು ಸಾಂಕ್ರಾಮಿಕ ರೋಗದ ವಿರುದ್ಧದ ಯುದ್ಧದಲ್ಲಿ ಇದೊಂದು "ಐತಿಹಾಸಿಕ ಕ್ಷಣ ವಾಗಿದೆ ಎಂದು ಯುಎಸ್ ಫಾರ್ಮಾ ಸಮೂಹದ ಮುಖ್ಯ ಕಾರ್ಯನಿರ್ವಾಹಕರು ಪಶ್ಚಿಮದಲ್ಲಿ ಲಸಿಕೆ ವಿತರಣೆಯ ಅಧಿಕಾರವನ್ನು ತಮ್ಮ ಕಂಪೆನಿಯು ಗೆದ್ದ ಬಳಿಕ ಹೇಳಿದರು.

"ಇಂಗ್ಲೆಂಡಿನಲ್ಲ್ಲಿ ಇಂದಿನ ತುರ್ತು ಬಳಕೆ ದಢೀಕರಣವು ಕೋವಿಡ್ -೧೯ ವಿರುದ್ಧದ ಹೋರಾಟದಲ್ಲಿ ಒಂದು ಐತಿಹಾಸಿಕ ಕ್ಷಣವನ್ನು ಸೂಚಿಸುತ್ತದೆ" ಎಂದು ಫಿಜರ್ ಸಿಇಒ ಆಲ್ಬರ್ಟ್ ಬೌರ್ಲಾ ಹೇಳಿದರು, "ನಾವು ಉತ್ತಮ ಗುಣಮಟ್ಟದ ಲಸಿಕೆಯನ್ನು ಇದೇ ಗುಣಮಟ್ಟದೊಂದಿಗೆ ಸುರಕ್ಷಿತವಾಗಿ ಜಗತ್ತಿಗೆ ಪೂರೈಸುವತ್ತಲೂ ಗಮನ ಹರಿಸಿದ್ದೇವೆ ಎಂದು ಅವರು ನುಡಿದರು.

"ಮುಂಬರುವ ದಿನಗಳು ಮತ್ತು ವಾರಗಳಲ್ಲಿ" ಇತರ ದೇಶಗಳಿಂದ ಹೆಚ್ಚಿನ ನಿಯಂತ್ರಕ ನಿರ್ಧಾರಗಳನ್ನು ನಿರೀಕ್ಷಿಸಲಾಗಿದೆ ಎಂದು ಅಮೆರಿಕದ ಕಂಪೆನಿ ಮತ್ತು ಜರ್ಮನಿಯ ಬಯೋಎನ್ ಟೆಕ್ ಹೇಳಿತು.

ಇಂಗ್ಲೆಂಡಿಗೆ ಸೀಮಿತ ಸರಬರಾಜುಗಳನ್ನು ತತ್ ಕ್ಷಣವೇ ಪ್ರಾರಂಭಿಸುವುದಾಗಿ ಫಿಜರ್ ಹೇಳಿತು. ಅಮೆರಿಕದ ಆಹಾರ ಮತ್ತು ಔಷಧ qಳಿತವು ಇದೇ ರೀತಿಯ ಅನುಮತಿಯನ್ನು ನೀಡಿದರೆ ಇನ್ನೂ ಹೆಚ್ಚಿನ ಔಷಧ ವಿತರಣೆಗೆ ಸಜ್ಜಾಗಿದೆ. ಮುಂದಿನ ವಾರಗಳಲ್ಲಿ ಬಗೆಗಿನ ನಿರ್ಧಾರವನ್ನು ನಿರೀಕ್ಷಿಸಲಾಗಿದೆ ಎಂದು ಕಂಪೆನಿ ಹೇಳಿತು.

ಆದರೆ ಲಸಿಕೆ ಪ್ರಮಾಣಗಳು ವಿರಳವಾಗಿದ್ದು, ಮುಂದಿನ ವರ್ಷದ ಮೊದಲ ಹಲವಾರು ತಿಂಗಳುಗಳಲ್ಲಿ ಹೆಚ್ಚಿನ ಲಸಿಕೆ ತಯಾರಿಸುವವರೆಗೆ ಆರಂಭಿಕ ಸರಬರಾಜುಗಳನ್ನು ಪಡಿತರಗೊಳಿಸಲಾಗುತ್ತದೆ.

ಇಂಗ್ಲೆಂಡ್ ೨೦ ಮಿಲಿಯನ್ ಜನರಿಗಾಗಿ ಸಾಕಷ್ಟು ಫಿಜರ್ ಲಸಿಕೆಯನ್ನು ಆದೇಶಿಸಿದ್ದರೂ, ವರ್ಷಾಂತ್ಯದೊಳಗೆ ಎಷ್ಟು ಮಂದಿ ಲಸಿಕೆ ಪಡೆಯಲು ಬರುತ್ತಾರೆ ಎಂಬುದು ಸ್ಪಷ್ಟವಾಗಿಲ್ಲ. ಲಸಿಕೆಯನ್ನು ಅಲ್ಟ್ರಾಕೋಲ್ಡ್ ತಾಪಮಾನದಲ್ಲಿ ಸಂಗ್ರಹಿಸಿ ಇಡಬೇಕಾದ್ದರಿಂದ ವಿತರಣಾ ಸವಾಲುಗಳು ಹೆಚ್ಚಾಗಿವೆ.

ರಕ್ಷಣೆಗಾಗಿ ಮೂರು ವಾರಗಳ ಅಂತರದಲ್ಲಿ ಎರಡು ಪ್ರಮಾಣಗಳು ಬೇಕಾಗುತ್ತವೆ. ಮೊದಲ ಸಾಲಿನಲ್ಲಿ, ಇಂಗ್ಲೆಂಡ್ ಸರ್ಕಾರವು ಮುಂಚೂಣಿಯ ಆರೋಗ್ಯ ಕಾರ್ಯಕರ್ತರು ಮತ್ತು ನರ್ಸಿಂಗ್ ಹೋಮ್ ನಿವಾಸಿಗಳಿಗೆ ಲಸಿಕೆ ನೀಡಲಿದ್ದು ಬಳಿಕ ಹಿರಿಯರಿಗೆ ಅದನ್ನು ಒದಗಿಸಲಿದೆ.

ಆದರೆ ಸಾಕಷ್ಟು ಲಸಿಕೆ ಇರುವವರೆಗೂ ವೈgಸ್ಸನ್ನು ನಿಗ್ರಹಕ್ಕಾಗಿ ಪ್ರಯತ್ನಿಸಲು ನಾವು ಮೊದಲು ಕಠಿಣ ಚಳಿಗಾಲದ ನಿರ್ಬಂಧಗಳನ್ನು ಜಾರಿಗೆ ತರಬೇಕು ಎಂದು ಪ್ರಧಾನಿ ಬೋರಿಸ್ ಜಾನ್ಸನ್ ಎಚ್ಚರಿಸಿದ್ದಾರೆ.

ಪ್ರಾಯೋಗಿಕ ಲಸಿಕೆ ಸುರಕ್ಷಿತವಾಗಿದೆಯೇ ಮತ್ತು ಬಳಸಲು ಸಾಕಷ್ಟು ಪರಿಣಾಮಕಾರಿಯಾಗಿದೆಯೇ ಎಂಬುದನ್ನು ನಿರ್ಧರಿಸಲು ಪ್ರತಿಯೊಂದು ದೇಶಕ್ಕೂ ವಿಭಿನ್ನ ನಿಯಮಗಳಿವೆ.

ಯಾವುದೇ ಸಮಸ್ಯೆಯಾಗುವುದಿಲ್ಲ ಎಂಬುದಾಗಿ ಸಂಶೋಧಕರು ವಾಗ್ದಾನ ಮಾಡಿದರೂ ಸಹ, ಕಠಿಣವಾಗಿ ವೈಜ್ಞಾನಿಕವಾಗಿ ಪರೀಕ್ಷಿಸಿದ ಚುಚ್ಚುಮದ್ದಿನ ಬಿಡುಗಡೆಗೆ ಅಮೆರಿಕ ಮತ್ತು ಬ್ರಿಟನ್‌ನಲ್ಲಿ ತೀವ್ರ ರಾಜಕೀಯ ಒತ್ತಡವಿದೆ. ಇದಕ್ಕೆ ವ್ಯತಿರಿಕ್ತವಾಗಿ, ಚೀನಾ ಮತ್ತು ರಷ್ಯಾ ಕೊನೆಯ ಹಂತದ ಪರೀಕ್ಷೆಗೆ ಮುಂಚಿತವಾಗಿ ತಮ್ಮ ನಾಗರಿಕರಿಗೆ ವಿಭಿನ್ನ ವ್ಯಾಕ್ಸಿನೇಷನ್‌ಗಳನ್ನು ನೀಡಿವೆ.

ಫಿಜರ್ ಮತ್ತು ಬಯೋಟೆಕ್ ಅಭಿವೃದ್ಧಿ ಪಡಿಸಿದ ಲಸಿಕೆಯನ್ನು ಹತ್ತಾರು ಜನರಲ್ಲಿ ಪರೀಕ್ಷಿಸಲಾಗಿದೆ ಮತ್ತು ಅಧ್ಯಯನವು ಪೂರ್ಣಗೊಂಡಿಲ್ಲವಾದರೂ, ಲಘುವಾದ ಕೋವಿಡ್-೧೯ ರೋಗವನ್ನು ತಡೆಗಟ್ಟುವಲ್ಲಿ ಲಸಿಕ್ಯು ಶೇಕಡಾ ೯೫ರಷ್ಟು ಪರಿಣಾಮಕಾರಿ ಎಂದು ಆರಂಭಿಕ ಫಲಿತಾಂಶಗಳು ಸೂಚಿಸಿವೆ.

ಅಧ್ಯಯನಕ್ಕೆ ಒಳಪಟ್ಟ ಸ್ವಯಂಸೇವಕರಲ್ಲಿ ಸೋಂಕು ಪತ್ತೆಯಾದ ಮೊದಲ ೧೭೦ ಜನರಲ್ಲಿ ಎಂಟು ಮಂದಿ ಮಾತ್ರ ನಿಜವಾದ ಲಸಿಕೆ ಪಡೆದಿದ್ದು ಉಳಿದವರು ಮತ್ತು ಡಮ್ಮಿ ಶಾಟ್ ಪಡೆದಿದ್ದಾರೆ ಎಂದು ಕಂಪೆನಿಗಳು ನಿಯಂತ್ರಕರಿಗೆ ತಿಳಿಸಿವೆ.

"ಇದು ಅಸಾಧಾರಣವಾದ ಬಲವಾದ ರಕ್ಷಣೆಯಾಗಿದೆ" ಎಂದು ಬಯೋಟೆಕ್ ಸಿಇಒ ಡಾ. ಉಗುರ್ ಸಾಹಿನ್ ಇತ್ತೀಚೆಗೆ ಹೇಳಿದ್ದಾರೆ.

ಲಸಿಕೆ ಸ್ವೀಕರಿಸುವವರು ಚುಚ್ಚುಮದ್ದಿನ ನಂತರ ತಾತ್ಕಾಲಿಕ ನೋವು ಮತ್ತು ಜ್ವರ ತರಹದ ಪ್ರತಿಕ್ರಿಯೆಗಳನ್ನು ಅನುಭವಿಸಬಹುದು. ಅದರೆ  ಯಾವುದೇ ಗಂಭೀರ ಅಡ್ಡಪರಿಣಾಮಗಳು ಕಂಡು ಬಂದಿಲ್ಲ ಎಂದು ಎಂದು ಕಂಪೆನಿಗಳು ತಿಳಿಸಿವೆ.

ಆದಾಗ್ಯೂ, ತುರ್ತು ಬಳಕೆಗಾಗಿ ತೆರವುಗೊಳಿಸಿದ ಲಸಿಕೆ ಇನ್ನೂ ಪ್ರಾಯೋಗಿಕವಾಗಿದೆ ಮತ್ತು ಅಂತಿಮ ಪರೀಕ್ಷೆಯನ್ನು ಪೂರ್ಣಗೊಳಿಸಬೇಕು ಎಂದು ತಜ್ಞರು ಎಚ್ಚರಿಸಿದ್ದಾರೆ. ರೋಗಲಕ್ಷಣಗಳನ್ನು ತೋರಿಸದೆ ಕೊರೋನವೈರಸ್ ಹರಡುವ ಜನರನ್ನು ಫಿಜರ್-ಬಯೋಎನ್ ಟೆಕ್ ಚುಚ್ಚುಮದ್ದುಗಳು ರಕ್ಷಿಸುತ್ತವೆಯೇ ಎಂಬುದು ಇನ್ನೂ ನಿರ್ಧರವಾಗಬೇಕಾಗಿದೆ. ರಕ್ಷಣೆ ಎಷ್ಟು ಕಾಲ ಇರುತ್ತದೆ ಎಂಬುದು ಕೂಡಾ ಇನ್ನೊಂದು ಪ್ರಶ್ನೆ.

ಲಸಿಕೆಯನ್ನು ಕಡಿಮೆ ಸಂಖ್ಯೆಯ ಮಕ್ಕಳಲ್ಲಿ ಮಾತ್ರ ಪರೀಕ್ಷಿಸಲಾಗಿದೆ, ೧೨ ವರ್ಷಕ್ಕಿಂತ ಕಡಿಮೆ ವಯಸ್ಸಿನವರಲ್ಲ, ಮತ್ತು ಗರ್ಭಿಣಿ ಮಹಿಳೆಯರಲ್ಲಿ ಇದರ ಪರಿಣಾಮಗಳ ಬಗ್ಗೆ ಯಾವುದೇ ಮಾಹಿತಿ ಇಲ್ಲ ಎಂದು ವರದಿಗಳು ಹೇಳಿವೆ.

No comments:

Advertisement