'ಪಿಎಂ-ವಾಣಿ’ ಅಡಿಯಲ್ಲಿ ಸಾರ್ವಜನಿಕ ವೈಫೈ ನೆಟ್ ವರ್ಕ್
ನವದೆಹಲಿ: ಪಿಎಂ-ವಾಣಿ’ ಅಡಿಯಲ್ಲಿ ಸಾರ್ವಜನಿಕ ವೈಫೈ ನೆಟ್ ವರ್ಕ್ಗಳನ್ನು ಸ್ಥಾಪಿಸಲು ಕೇಂದ್ರ ಸಂಪುಟವು 2020 ಡಿಸೆಂಬರ್ 09ರ ಬುಧವಾರ ಅನುಮೋದನೆ ನೀಡಿತು.
ಸಾರ್ವಜನಿಕ ವೈಫೈ ಸೇವೆಯನ್ನು ಬಲಪಡಿಸುವ ಉದ್ದೇಶದಿಂದ ದೇಶಾದ್ಯಂತ ಸಾರ್ವಜನಿಕ ವೈಫೈ ನೆಟ್ವರ್ಕ್ಗಳನ್ನು ಸ್ಥಾಪಿಸಲು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸಚಿವ ಸಂಪುಟ ಒಪ್ಪಿಗೆ ನೀಡಿತು.
ಇದನ್ನು ಪಬ್ಲಿಕ್ ಡಾಟಾ ಆಫೀಸ್ ಅಗ್ರಿಗೇಟರ್ಸ್ (ಪಿಡಿಒಎ) ಮಾಡಲಿದ್ದು, ಇದು ದೇಶಾದ್ಯಂತ ಹರಡಿರುವ ಪಬ್ಲಿಕ್ ಡಾಟಾ ಆಫೀಸ್ (ಪಿಡಿಒ) ಮೂಲಕ ಸಾರ್ವಜನಿಕ ವೈಫೈ ಸೇವೆಯನ್ನು ಒದಗಿಸುತ್ತದೆ.
ಇದರೊಂದಿಗೆ, ದೇಶದ ಸಾರ್ವಜನಿಕ ವೈಫೈ ನೆಟ್ವರ್ಕ್ಗಳ ಮೂಲಕ ಬ್ರಾಡ್ಬ್ಯಾಂಡ್ ಇಂಟರ್ನೆಟ್ ಸೇವೆಗಳ ಪ್ರಸರಣವನ್ನು ವೇಗಗೊಳಿಸಲು ಸರ್ಕಾರ ಉದ್ದೇಶಿಸಿದೆ.
ಈ ಸಾರ್ವಜನಿಕ ವೈಫೈ ನೆಟ್ವರ್ಕ್ಗಳ ಮೂಲಕ ಬ್ರಾಡ್ಬ್ಯಾಂಡ್ ಇಂಟರ್ನೆಟ್ ಒದಗಿಸಲು ಯಾವುದೇ ಪರವಾನಗಿ ಶುಲ್ಕವಿರುವುದಿಲ್ಲ ಎಂದು ಸರ್ಕಾರ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ಸಾರ್ವಜನಿಕ ವೈಫೈ ಆಕ್ಸೆಸ್ ನೆಟ್ವರ್ಕ್ ಇಂಟರ್ಫೇಸ್ನ್ನು ’ಪಿಎಂ-ವಾಣಿ’ ಎಂಬುದಾಗಿ ಕರೆಯಲಾಗುತ್ತದೆ’ ಎಂದು ಮಾಹಿತಿ ಮಾಹಿತಿ ತಂತ್ರಜ್ಞಾನ (ಐಟಿ) ಮತ್ತು ಸಂವಹನ ಸಚಿವ ರವಿಶಂಕರ್ ಪ್ರಸಾದ್ ಪ್ರಕಟಿಸಿದರು. ಇದು ದೇಶದ ಸಾರ್ವಜನಿಕ ವೈಫೈ ನೆಟ್ವರ್ಕ್ಗಳ ಬೆಳವಣಿಗೆಯನ್ನು ಉತ್ತೇಜಿಸುತ್ತದೆ ಮತ್ತು ವೈಫೈ ಕ್ರಾಂತಿಯನ್ನು ಬೃಹತ್ ಪ್ರಮಾಣದಲ್ಲಿ ರಳಗೊಳಿಸುತ್ತದೆ’ ಎಂದು ಅವರು ಹೇಳಿದರು.
’ಪಿಡಿಒಗಳಿಗೆ ಯಾವುದೇ ಪರವಾನಗಿ ಇಲ್ಲ, ನೋಂದಣಿ ಇಲ್ಲ, ಮತ್ತು ಯಾವುದೇ ಶುಲ್ಕ ಅನ್ವಯಿಸುವುದಿಲ್ಲ, ಅದು ಸಣ್ಣ ಅಂಗಡಿಗಳು ಅಥವಾ ಸಾಮಾನ್ಯ ಸೇವಾ ಕೇಂದ್ರಗಳಾಗಿರಬಹುದು’ ’ಎಂದು ಸಚಿವರು ಸುದ್ದಿಗಾರರಿಗೆ ತಿಳಿಸಿದರು.
ಇದು ಪಿಡಿಒ, ಪಿಡಿಒಎಗಳು ಮತ್ತು ಅಪ್ಲಿಕೇಶನ್ ಪೂರೈಕೆದಾರರನ್ನು ಒಳಗೊಂಡ ಸಂಪೂರ್ಣ ಚೌಕಟ್ಟನ್ನು ಒಳಗೊಂಡಿರುತ್ತದೆ.
ಲಕ್ಷದ್ವೀಪಕ್ಕೆ ಹೆಚ್ಚಿನ ವೇಗದ ಬ್ರಾಡ್ಬ್ಯಾಂಡ್ ಒದಗಿಸಲು ಸಾಗರದೊಳಗಿನ ಜಲಾಂತರ್ಗಾಮಿ ಆಪ್ಟಿಕಲ್ ಫೈಬರ್ ಕೇಬಲ್ ಹಾಕಲು ಕೂಡಾ ಕ್ಯಾಬಿನೆಟ್ ಅನುಮೋದನೆ ನೀಡಿದೆ ಎಂದು ಅವರು ನುಡಿದರು.
No comments:
Post a Comment