Saturday, December 19, 2020

ವೈಟಿಂಗ್ ಲಿಸ್ಟ್ ರದ್ದು: ವರದಿಗಳಿಗೆ ರೈಲ್ವೇ ಸಚಿವಾಲಯ ನಕಾರ

 ವೈಟಿಂಗ್ ಲಿಸ್ಟ್ ರದ್ದು: ವರದಿಗಳಿಗೆ ರೈಲ್ವೇ ಸಚಿವಾಲಯ ನಕಾರ

ನವದೆಹಲಿ: ರೈಲ್ವೆ ಇಲಾಖೆಯು ೨೦೨೪ ರಿಂದ ಕಾಯುವ ಪಟ್ಟಿಗಳನ್ನು (ವೈಟಿಂಗ್ ಲಿಸ್ಟ್) ರದ್ದು ಪಡಿಸಲು ಯೋಜಿಸುತ್ತಿದೆ ಎಂಬ ವರದಿಗಳನ್ನು ರೈಲ್ವೇ ಸಚಿವಾಲಯವು 2020 ಡಿಸೆಂಬರ್ 19ರ ಶನಿವಾರ ತಳ್ಳಿಹಾಕಿದೆ.

ಕಾಯುವ ಪಟ್ಟಿಗಳನ್ನು  (ವೈಟಿಂಗ್ ಲಿಸ್ಟ್) ತೆಗೆದುಹಾಕುತ್ತಿಲ್ಲ, ಇದಕ್ಕೆ ತದ್ವಿರುದ್ಧವಾಗಿ, ಕಾಯುವ ಪಟ್ಟಿಗೆ ಯಾವುದೇ ಪ್ರಯಾಣಿಕರನ್ನು ನಿಯೋಜಿಸದಂತೆ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ ಎಂದು ರೈಲ್ವೇ ಸಚಿವಾಲಯ ಸ್ಪಷ್ಟ ಪಡಿಸಿದೆ.

ಲಭ್ಯತೆಯ ನಿರ್ಬಂಧಗಳನ್ನು ಪರಿಹರಿಸಿ, ಬೇಡಿಕೆಯ ಮೇರೆಗೆ ರೈಲುಗಳನ್ನು ಲಭ್ಯಗೊಳಿಸುವ ಸಾಮರ್ಥ್ಯವನ್ನು ಹೆಚ್ಚಿಸಲು ಪ್ರಯತ್ನಿಸಲಾಗುತ್ತಿದೆ, ಅದು "ಪ್ರಯಾಣಿಕರನ್ನು ವೈಟ್ಲಿಸ್ಟ್ ಮಾಡುವ ಸಾಧ್ಯತೆಯನ್ನು ಕಡಿಮೆ ಮಾಡುತ್ತದೆ. ಆದರೆ ಕಾಯುವ ಪಟ್ಟಿಗಳಿಲ್ಲ ಎಂಬುದು ಇದರ ಅರ್ಥವಲ್ಲ ಎಂದು ರೈಲ್ವೇ ಸಚಿವಾಲಯ ಹೇಳಿದೆ.

ನಿರ್ದಿಷ್ಟ ರೈಲಿಗೆ ಪ್ರಯಾಣಿಕರ ಬೇಡಿಕೆಯು ರೈಲಿನಲ್ಲಿ ಲಭ್ಯವಿರುವ ಬರ್ತ್ಗಳು ಅಥವಾ ಆಸನಗಳ ಸಂಖ್ಯೆಯನ್ನು ಮೀರಿದಾಗ ವೈಟಿಂಗ್ ಲಿಸ್ಟ್ಗೆ ಅವಕಾಶವಿದೆ ಎಂದು ಸಚಿವಾಲಯದ ದಾಖಲೆ ವಿವರಿಸಿದೆ.

"ನಿಬಂಧನೆಯನ್ನು ದೂರ ಮಾಡಲಾಗುತ್ತಿಲ್ಲ. ವೈಟ್ ಲಿಸ್ಟ್ ಎಂಬುದು ಬೇಡಿಕೆ ಮತ್ತು ಲಭ್ಯತೆಯ ಏರಿಳಿತಗಳನ್ನು ತಗ್ಗಿಸಲು ಬಫರ್ ಆಗಿ ಕಾರ್ಯನಿರ್ವಹಿಸುತ್ತದೆ ಎಂದು ಸರ್ಕಾರದ ಸ್ಪಷ್ಟೀಕರಣ ಹೇಳಿದೆ.

ರಾಷ್ಟ್ರೀಯ ರೈಲು ಯೋಜನೆ ರೈಲ್ವೆಯ ಮೂಲಸೌಕರ್ಯ ಸಾಮರ್ಥ್ಯವನ್ನು ಹೆಚ್ಚಿಸುವ ಗುರಿಯನ್ನು ಹೊಂದಿರುವ ದೀರ್ಘಕಾಲೀನ ಕಾರ್ಯತಂತ್ರದ ಯೋಜನೆಯಾಗಿದೆ.

ಅಭಿಪ್ರಾಯಗಳಿಗಾಗಿ ಯೋಜನೆಯನ್ನು ಈಗ ವಿವಿಧ ಸಚಿವಾಲಯಗಳ ನಡುವೆ ಪ್ರಸಾರ ಮಾಡಲಾಗುತ್ತಿದೆ. ರೈಲ್ವೆ ೨೦೨೧ ಜನವರಿಯೊಳಗೆ ಯೋಜನೆಯನ್ನು ಅಂತಿಮಗೊಳಿಸಲು ಯೋಜಿಸಿದೆ.

ಯೋಜನೆಯನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಲು ಖಾಸಗಿ ವಲಯ, ಪಿಎಸ್ಯುಗಳು, ರಾಜ್ಯ ಸರ್ಕಾರಗಳು ಮತ್ತು ಮೂಲ ಸಲಕರಣೆಗಳ ತಯಾರಕರು (ಒಇಎಂ) / ಕೈಗಾರಿಕೆಗಳೊಂದಿಗೆ ತೊಡಗಿಸಿಕೊಳ್ಳಲು ಪ್ರಯತ್ನಿಸಲಾಗುವುದು ಎಂದು ಸಚಿವಾಲಯ ಹೇಳಿದೆ.

No comments:

Advertisement