Thursday, December 3, 2020

ಪದ್ಮವಿಭೂಷಣ ಹಿಂತಿರುಗಿಸಿದ ಪ್ರಕಾಶ ಸಿಂಗ್ ಬಾದಲ್

 ಪದ್ಮವಿಭೂಷಣ ಹಿಂತಿರುಗಿಸಿದ ಪ್ರಕಾಶ ಸಿಂಗ್ ಬಾದಲ್

ಚಂಡೀಗಢ: ಐದು ಬಾರಿ ಪಂಜಾಬ್ ಮುಖ್ಯಮಂತ್ರಿಯಾಗಿದ್ದ ಶಿರೋಮಣಿ ಅಕಾಲಿ ದಳ (ಎಸ್ಎಡಿ) ಮುಖಂಡ, ಮಾಜಿ ಮುಖ್ಯಮಂತ್ರಿ ಪ್ರಕಾಶ್ ಸಿಂಗ್ ಬಾದಲ್ ಅವರು ಭಾರತ ಸರ್ಕಾರವು ರೈತರಿಗೆ ದ್ರೋಹ ಬಗೆದಿರುವುದನ್ನು  ವಿರೋಧಿಸಿ ಮತ್ತು ಮೂರು ಕೃಷಿ ಕಾಯ್ದೆಗಳ ವಿರುದ್ಧದ ರೈತರ ನಿರಂತರ ಶಾಂತಿಯುತ ಮತ್ತು ಪ್ರಜಾತಾಂತ್ರಿಕ ಆಂದೋಲನದ ಬಗೆಗಿನ ಆಘಾತಕಾರಿ ಉದಾಸೀನತೆ ಮತ್ತು ನಿರ್ಲಕ್ಷ್ಯವನ್ನು ಪ್ರತಿಭಟಿಸಿ ಪದ್ಮವಿಭೂಷಣ ಪ್ರಶಸ್ತಿಯನ್ನು  2020ರ ಡಿಸೆಂಬರ್ 3ರ ಗುರುವಾರ ಹಿಂದಿರುಗಿಸಿದರು.

‘ನಾನು ಏನಾಗಿದ್ದೇನೆಯೋ ಅದರು ಆಗಿರುವುದು ಜನರಿಂದ ವಿಶೇಷವಾಗಿ ಸಾಮಾನ್ಯ ರೈತನಿಂದ. ಇಂದು, ಅವರು (ರೈತರು) ತಮ್ಮ ಗೌರವಕ್ಕಿಂತ ಹೆಚ್ಚಿನದನ್ನು ಕಳೆದುಕೊಂಡಾಗ, ಪದ್ಮವಿಭೂಷಣ ಗೌರವವನ್ನು ಇಟ್ಟುಕೊಳ್ಳುವುದರಲ್ಲಿ ನನಗೆ ಯಾವುದೇ ಅರ್ಥ ಕಾಣುತ್ತಿಲ್ಲ ಎಂದು ಹಿರಿಯ ಅಕಾಲಿ ನಾಯಕ ಬಾದಲ್ ಅವರು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.

ಸರ್ಕಾರವು ರೈತರಿಗೆ ಮಾಡಿದ ದ್ರೋಹವನ್ನು "ಈಗಾಗಲೇ ತೊಂದರೆಗೊಳಗಾಗಿರುವ ರೈತರ ಮೇಲೆ ನೀಲಾಕಾಶದಿಂದ ಬಡಿದಿರುವ ಪೆಟ್ಟು ಎಂದು ವಿವರಿಸಿದ ಅವರು, ರೈತ ತನ್ನ ಮೂಲಭೂತ ಹಕ್ಕನ್ನು ಭದ್ರಪಡಿಸಿಕೊಳ್ಳಲು ತೀವ್ರ ಶೀತದಲ್ಲಿ ಕಹಿ ಹೋರಾಟಗಳನ್ನು ನಡೆಸುತ್ತಿದ್ದಾನೆ ಎಂದು ಹೇಳಿದರು.

ರಾಷ್ಟ್ರೀಯ ಪ್ರಜಾತಾಂತ್ರಿಕ ಮೈತ್ರಿಕೂಟದ  (ಎನ್ಡಿಎ) ಅತ್ಯಂತ ಹಳೆಯ ಘಟಕಗಳಲ್ಲಿ ಒಂದಾದ ಎಸ್ಎಡಿ ಕೇಂದ್ರ ಸರ್ಕಾರ ಜಾರಿಗೆ ತಂದ ಕೃಷಿ ಮಾರುಕಟ್ಟೆ ಕಾನೂನುಗಳನ್ನು ವಿರೋಧಿಸಿ ೨೦೨೦ ಸೆಪ್ಟೆಂಬರಿನಲ್ಲಿ ಬಿಜೆಪಿಯೊಂದಿಗಿನ ಸಂಬಂಧವನ್ನು ಕಡಿದುಕೊಂಡು ಮೈತ್ರಿಯಿಂದ ಹೊರಬಂದಿತ್ತು.

ರಾಷ್ಟ್ರಪತಿಗೆ ಮಿಂಚಂಚೆ (-ಮೇಲ್) ಮೂಲಕ ಕಳುಹಿಸಿದ ಪತ್ರದಲ್ಲಿ ಬಾದಲ್ ಅವರು ಸರ್ಕಾರದ ವರ್ತನೆ ಮತ್ತು ರೈತರ ವಿರುದ್ಧದ ಕ್ರಮಗಳಿಂದನೋವು ಮತ್ತು ದ್ರೋಹ ಅನುಭವ ತಮಗೆ ಆಗುತ್ತಿರುವುದಕ್ಕೆ ಕಾರಣಗಳನ್ನು ಪಟ್ಟಿ ಮಾಡಿದ್ದಾರೆ.

ಭಾರತ ಸರ್ಕಾರವು ಸುಗ್ರೀವಾಜ್ಞೆಗಳನ್ನು ತಂದಾಗ, ಸಂಬಂಧಿತ ಮಸೂದೆಗಳನ್ನು ತರುವಾಗ ಮತ್ತು ನಂತರ ಕಾಯ್ದೆಗಳನ್ನು ತರುವಾಗ ರೈತರರಿಗೆ ತೃಪ್ತಿಯಗುವಂತೆ ಅವರ ಆತಂಕಗಳನ್ನು ನಿವಾರಿಸಲಾಗುವುದು ಎಂಬ ಭರವಸೆಯನ್ನು ನೀಡಿತ್ತು. ಆಶ್ವಾಸನೆಗಳನ್ನು ನಂಬಿ, ನಾನು ಸರ್ಕಾರದ ಮಾತನ್ನು ನಂಬುವಂತೆ ರೈತರಿಗೆ ಮನವಿ ಮಾಡಿದೆ. ಆದರೆ ಸರ್ಕಾರವು ತನ್ನ ಮಾತನ್ನು ತಪ್ಪಿದಾಗ ನನಗೆ ಆಘಾತವಾಯಿತು ಎಂದು ಬಾದಲ್ ಬರೆದಿದ್ದಾರೆ.

ಮಾಜಿ ಮುಖ್ಯಮಂತ್ರಿ, ಅವಧಿಯನ್ನು ತಮ್ಮ ಸುದೀರ್ಘ ರಾಜಕೀಯ ಜೀವನದಲ್ಲಿ ಅತ್ಯಂತ ನೋವಿನ ಮತ್ತು ಮುಜುಗರದ ಕ್ಷಣ ಎಂದು ಬಣ್ಣಿಸಿದರು. "ಅಂದಿನಿಂದ ನಾನು ಅನುಭವಿಸುತ್ತಿರುವ ನೋವು ಮತ್ತು ಭಾವನಾತ್ಮಕ ಒತ್ತಡವನ್ನು ನಾನು ಪದಗಳಲ್ಲಿ ಹೇಳಲಾರೆ. ದೇಶದ ಸರ್ಕಾರವು ಏಕೆ ಹೃದಯಹೀನ, ಸಿನಿಕತನದ ಮತ್ತು ರೈತರ ಬಗ್ಗೆ ಕೃತಘ್ನವಾಗಿ ಮಾರ್ಪಟ್ಟಿದೆ ಎಂದು ನಾನು ನಿಜವಾಗಿಯೂ ಆಶ್ಚರ್ಯ ಪಡುತ್ತಿದ್ದೇನೆ ಎಂದು ಅವರು ಹೇಳಿದರು.

ಶಾಂತಿಯುತವಾಗಿ ಮತ್ತು ಪ್ರಜಾಸತ್ತಾತ್ಮಕವಾಗಿ ಪ್ರತಿಭಟಿಸುತ್ತಿರುವ ರೈತರ ಮೇಲೆ ಕೋಮು ಪ್ರಚೋದನೆಗಳು ಎಸೆಯಲ್ಪಟ್ಟಿದ್ದರಿಂದ ಅವರು ತೀವ್ರವಾಗಿ ನೋವು ಅನುಭವಿಸಿದ್ದಾರೆ ಎಂದು ಬಾದಲ್ ಹೇಳಿದರು.

ರೈತರ ನೋವುಗಳ ಬಗ್ಗೆ ಸರ್ಕಾರ ಅಸಡ್ಡೆ ತೋರುತ್ತಿದೆ ಎಂದು ಬಾದಲ್ ವಿಷಾದಿಸಿದರು. "ರಾಷ್ಟ್ರ ರಾಜಧಾನಿಯಲ್ಲಿ ಏಕಸ್ವರದಲ್ಲಿ ನ್ಯಾಯಕ್ಕಾಗಿ ಕೂಗುತ್ತಿರುವ ಲಕ್ಷಾಂತರ ರೈತರ ಪ್ರದರ್ಶನವು ಬೇರೆ ಯಾವುದೇ ರಾಷ್ಟ್ರ ಅಥವಾ ಅದರ ಸರ್ಕಾರದ ಮನಸ್ಸನ್ನು ಕರಗಿಸುತ್ತಿತ್ತು ಎಂದು ಅವರು ಹೇಳಿದರು.

ರೈತರ ನೋವು ಮತ್ತು ಕೋಪದ ಬಗ್ಗೆ ಅಂತಹ ಯಾವುದೇ ಸಂವೇದನೆ ಇಲ್ಲಿ ಗೋಚರಿಸುವುದಿಲ್ಲ, ದೇಶದ ಮೊದಲ ಪ್ರಜೆಯಾಗಿ ಮತ್ತು ಆತ್ಮಸಾಕ್ಷಿಯ ಸಾರ್ವಜನಿಕ ವ್ಯಕ್ತಿಯಾಗಿ, ರಾಷ್ಟ್ರಪತಿಯೂ ಸಹ ಬೆಳವಣಿಗೆಗಳ ಬಗ್ಗೆ ಸಂಪೂರ್ಣವಾಗಿ ತಿಳಿದಿರುತ್ತಾರೆ ಮತ್ತು ತೀವ್ರ ಕಾಳಜಿ ವಹಿಸುವರು ಎಂದು ಬಾದಲ್ ಹಾರೈಸಿದರು.

ಶಿರೋಮಣಿ ಅಕಾಲಿ ದಳದಂತಹ ರೈತ ಸ್ನೇಹಿ ಪಕ್ಷಗಳ ಮನವಿಯನ್ನು ಅಪಹಾಸ್ಯ ಮಾಡಲಾಗಿದೆ ಎಂದು ಬಾದಲ್ ಬೇಸರಿಸಿದರು. "ರೈತರು ಕೇವಲ ಐಷಾರಾಮೀ ಜೀವನಶೈಲಿಗಾಗಿ ಸಾಲ ತೆಗೆದುಕೊಳ್ಳುತ್ತಾರೆ ಎಂಬ ಸಿನಿಕ ಹೇಳಿಕೆಗಳನ್ನು ನೀಡಲಾಗಿದೆ. ದೇಶದಲ್ಲಿ ಸಾವಿರಾರು ರೈತರು ಆತ್ಮಹತ್ಯೆಗಳನ್ನು ಮಾಡಿದ ಸಂದರ್ಭದಲ್ಲಿ ಕೂಡಾ ಅವರ ವಿರುದ್ಧ ಇಂತಹ ಕ್ರೂರ ಸಿನಿಕತನದ ಹೇಳಿಕೆಗಳು ನಿಲ್ಲಲಿಲ್ಲ ಎಂದು ಅವರು ನುಡಿದರು.

"ಸರ್ಕಾರದ ಪೆನ್ನಿನ ಒಂದೇ ಒಂದು ಆಲೋಚನಾ ಪೆಟ್ಟಿನಿಂದ ಲಕ್ಷಾಂತರ ಕೋಟಿ ಮೌಲ್ಯದ ಕಾರ್ಪೋರೇಟ್ ಸಾಲಗಳನ್ನು ಮನ್ನಾ ಮಾಡಲಾಗಿದ್ದರೂ, ಕೃಷಿ ಸಾಲಗಳನ್ನು ತಗ್ಗಿಸುವ ಬಗ್ಗೆ ಯಾರೂ ಯೋಚಿಸಿಲ್ಲ, ಸಂಪೂರ್ಣ ಮನ್ನಾವನ್ನು ಮರೆತುಬಿಡಿ ಎಂದು ಬಾದಲ್ ಹೇಳಿದರು.

No comments:

Advertisement