ಸಿಸ್ಟರ್ ಅಭಯಾ ಹತ್ಯೆ: ಪಾದ್ರಿ ಥಾಮಸ್ ಸಹಿತ ಇಬ್ಬರಿಗೆ ಜೀವಾವಧಿ ಸಜೆ
ತಿರುವನಂತಪುರ: ದೇಶವನ್ನೇ ಬೆಚ್ಚಿ ಬೀಳಿಸಿದ್ದ ಕೇರಳದ ಹದಿಹರೆಯದ ಕ್ರೈಸ್ತ ಸನ್ಯಾಸಿನಿ ಸಿಸ್ಟರ್ ಅಭಯಾ ಅವರ ಕೊಲೆಗಾಗಿ ಪಾದ್ರಿ ಥಾಮಸ್ ಕೊಟ್ಟೂರು ಮತ್ತು ಸಿಸ್ಟರ್ ಸೆಫಿ ಈ ಇಬ್ಬರು ಅಪರಾಧಿಗಳಿಗೆ ಕೇರಳದ ವಿಶೇಷ ಸಿಬಿಐ ನ್ಯಾಯಾಲಯವು 2020 ಡಿಸೆಂಬರ್ 23ರ ಬುಧವಾರ ಜೀವಾವಧಿ ಶಿಕ್ಷೆಯನ್ನು ವಿಧಿಸಿತು.
ಸುಮಾರು ೨೮ ವರ್ಷಗಳ ನಂತರ, ಸುದೀರ್ಘ ವಿಚಾರಣೆಯ ಬಳಿಕ ತಪ್ಪಿತಸ್ಥರೆಂದು ಸಾಬೀತಾದ ಇವರಿಬ್ಬರ ಶಿಕ್ಷೆಯನ್ನು ಸಿಬಿಐ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಕೆ ಸನಾಲ್ ಕುಮಾರ್ ಅವರು ಪ್ರಕಟಿಸಿದರು. ಜೀವಾವಧಿ ಸಜೆಯ ಜೊತೆಗೆ ಉಭಯ ಅಪರಾಧಿಗಳಿಗೂ ತಲಾ ಐದು ಲಕ್ಷ ರೂಪಾಯಿಗಳ ದಂಡವನ್ನೂ ನ್ಯಾಯಾಧೀಶರು ವಿಧಿಸಿದರು.
೧೯೯೨ರ ಮಾರ್ಚ್ ೨೭ರಂದು ಕೊಟ್ಟಾಯಂನ ಪಿಯಸ್ ಎಕ್ಸ್ ಕಾನ್ವೆಂಟ್‌ನ ಬಾವಿಯಲ್ಲಿ ಇಪ್ಪತ್ತೊಂದು ವರ್ಷದ ಸನ್ಯಾಸಿನಿ ಸಿಸ್ಟರ್ ಅಭಯಾ ಶವ ಪತ್ತೆಯಾಗಿತ್ತು. ಮೊದಲ ಆರೋಪಿ ಪಾದ್ರಿ ಥಾಮಸ್ ಕೊಟ್ಟೂರು ಮತ್ತು ಮೂರನೇ ಆರೋಪಿ ಸಿಸ್ಟರ್ ಸೆಫಿ ವಿಚಾರಣೆಯನ್ನು ಎದುರಿಸಿದರು.
ಎರಡನೇ ಆರೋಪಿ, ಪಾದ್ರಿ ಜೋಸ್ ಪೂತ್ರಿಕ್ಕಾಯಿಲ್ ಅವರ ಮನವಿಯನ್ನು ಅನುಸರಿಸಿ ಸಿಬಿಐ ನ್ಯಾಯಾಲಯವು ೨೦೧೮ರ ಮಾರ್ಚ್ ತಿಂಗಳಲ್ಲಿ ಬಿಡುಗಡೆ ಮಾಡಿತ್ತು.
ಕೊಟ್ಟಾಯಂನ ಬಿಸಿಎಂ ಕಾಲೇಜಿನ ವಿದ್ಯಾರ್ಥಿನಿ ಮತ್ತು ಕ್ನಾನಯಾ ಕ್ಯಾಥೊಲಿಕ್ ಸಮುದಾಯದ ಸದಸ್ಯರಾದ ೧೯ ವರ್ಷದ ಸನ್ಯಾಸಿನಿ ಸಿಸ್ಟರ್ ಅಭಯಾ ೧೯೯೨ ರ ಮಾರ್ಚ್ ೨೭ ರಂದು ಆತ್ಮಹತ್ಯೆಯಿಂದ ಸಾವನ್ನಪ್ಪಿದರು ಎಂದು ರಾಜ್ಯ ಪೊಲೀಸರು ಮೊದಲಿಗೆ ತೀರ್ಮಾನಿಸಿದ್ದರು. ಅಭಯಾ ಅವರು ತಮ್ಮ ಹಾಸ್ಟೆಲ್ ಕೊಠಡಿಯಿಂದ ಹೋಗುತ್ತಿದ್ದಾಗ ಬೆಳಿಗ್ಗೆ ೪.೧೫ ಕ್ಕೆ ಅಡಿಗೆ ಕೋಣೆಗೆ ಹೋಗುತ್ತಿದ್ದಾಗ ಈ ಘಟನೆ ಸಂಭವಿಸಿದೆ ಎಂದು ಭಾವಿಸಲಾಗಿತ್ತು.
ಚರ್ಚ್ ಆರೋಪಿಗಳ ಪರವಾಗಿ ನಿಂತಿದ್ದರಿಂದ ಸನ್ಯಾಸಿನಿಗೆ ನ್ಯಾಯ ದೊರಕಿಸಿಕೊಡುವ ಅಭಿಯಾ ನಡೆಸಿದ ಸಾಮಾಜಿಕ ಕಾರ್ಯಕರ್ತ ಜೋಮನ್ ಪುಥನ್‌ಪುರಕ್ಕಲ್ ನೇತೃತ್ವದ ಪ್ರತಿಭಟನೆಗಳ ಬಳಿಕ ಈ ಪ್ರಕರಣವನ್ನು ಕೇಂದ್ರೀಯ ತನಿಖಾ ದಳಕ್ಕೆ (ಸಿಬಿಐ) ಹಸ್ತಾಂತರಿಸಲಾಗಿತ್ತು. ಕೊಟ್ಟಾಯಂನ ಕ್ನಾನಯಾ ಕ್ಯಾಥೊಲಿಕ್ ಆರ್ಕಿಯೋಪಾರ್ಕಿ ಎಂಬುದು ನ್ಯಾನಾಯ ಕ್ಯಾಥೊಲಿಕ್‌ಗಾಗಿ ಸಿರೋ ಮಲಬಾರ್ ಕ್ಯಾಥೊಲಿಕ್ ಚರ್ಚ್‌ನ ಒಂದು ಪ್ರಾಂತ ಗವರ್ನರ್ ವ್ಯಾಪ್ತಿಗೆ ಸೇರಿದೆ.
ಈ ಪ್ರಕರಣದಲ್ಲಿ ಸಿಬಿಐ ಮೂರು ವರದಿಗಳನ್ನು ಸಲ್ಲಿಸಿತ್ತು. ಮೊದಲ ವರದಿಯಲ್ಲಿ ಸನ್ಯಾಸಿನಿಯ ಸಾವು ’ನರಹತ್ಯಾ ಆತ್ಮಹತ್ಯೆ’ ಎಂದು ಹೇಳಿತ್ತು. ಆದರೆ ಸಿಬಿಐ ನ್ಯಾಯಾಲಯ ವರದಿಯನ್ನು ತಿರಸ್ಕರಿಸಿ ಹೊಸ ತನಿಖೆಗೆ ಆದೇಶಿಸಿತ್ತು. ತನ್ನ ಎರಡನೇ ವರದಿಯಲ್ಲಿ, ಇದು ಆತ್ಮಹತ್ಯೆಯೇ ಅಥವಾ ಕೊಲೆಯೇ ಎಂದು ಶಂಕಾತೀತವಾಗಿ ಹೇಳಲು ಸಾಧ್ಯವಿಲ್ಲ ಎಂದು ಸಿಬಿಐ ಹೇಳಿತ್ತು.
೨೦೦೮ ರಲ್ಲಿ ಸಲ್ಲಿಸಿದ ಕೊನೆಯ ವರದಿಯಲ್ಲಿ, ಇದು ಕೊಲೆ ಪ್ರಕರಣ ಎಂದು ಸಿಬಿಐ ಹೇಳಿತು. ಜೊತೆಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪಾದ್ರಿ ಥಾಮಸ್ ಕೊಟ್ಟೂರು, ಇನ್ನೊಬ್ಬ ಪಾದ್ರಿ ಜೋಸ್ ಪೂತ್ರಿಕ್ಕಾಯಿಲ್ ಮತ್ತು ಸಿಸ್ಟರ್ ಸೆಫಿಯನ್ನು ಬಂಧಿಸಿತ್ತು. ಥಾಮಸ್ ಕೊಟ್ಟೂರು ಕೊಟ್ಟಾಯಂನ ಬಿಸಿಎಂ ಕಾಲೇಜಿನಲ್ಲಿ ಸಿಸ್ಟರ್ ಅಭಯಾ ಅವರಿಗೆ ಮನೋವಿಜ್ಞಾನವನ್ನು ಕಲಿಸಿದ್ದರು ಮತ್ತು ಅಂದಿನ ಬಿಷಪ್ ಕಾರ್ಯದರ್ಶಿಯಾಗಿದ್ದರು. ನಂತರ ಅವರು ಕೊಟ್ಟಾಯಂನ ಕ್ಯಾಥೊಲಿಕ್ ಡಯಾಸಿಸ್‌ನ ಕುಲಪತಿಯಾಗಿದ್ದರು.
ಸನ್ಯಾಸಿನಿಯ ಕೊಲೆ, ಸಾಕ್ಷ್ಯಗಳ ನಾಶ ಮತ್ತು ಕ್ರಿಮಿನಲ್ ಪಿತೂರಿ ಆರೋಪಗಳನ್ನು ಸಿಬಿಐ ಈ ಮೂವರ ಮೇಲೆ ಹೊರಿಸಿತು. ಜೋಸ್ ಪೂತ್ರಿಕ್ಕಾಯಿಲ್ ಅವರನ್ನು ಆರೋಪ ಸಾಬೀತು ಪಡಿಸುವ ಯಾವುದೇ ಪುರಾವೆ ಸಲ್ಲಿಸದ ಕಾರಣ ನ್ಯಾಯಾಲಯ ಕಳೆದ ವರ್ಷ ಆರೋಪಮುಕ್ತರನ್ನಾಗಿ ಮಾಡಿತ್ತು.
ಕಾನ್ವೆಂಟಿನ ಅಡುಗೆಮನೆಗೆ ಪ್ರವೇಶಿಸಿದಾಗ ಆರೋಪಿಯು ಲೈಂಗಿಕ ಚಟುವಟಿಕೆಯಲ್ಲಿ ಮಗ್ನನಾಗಿದ್ದುದನ್ನು ನೋಡಿದ್ದ ಸಿಸ್ಟರ್ ಅಭಯಾಳ ತಲೆಗೆ ಮೊಂಡಾದ ವಸ್ತುವಿನಿಂದ ಮಾರಣಾಂತಿಕ ಹೊಡೆತ ನೀಡಲಾಗಿತ್ತು. ಬಳಿಕ ಇದು ಆತ್ಮಹತ್ಯೆಯಂತೆ ಕಾಣಲು ಆಕೆಯನ್ನು ಕಾನ್ವೆಂಟಿನ ಬಾವಿಗೆ ಎಸೆಯಲಾಗಿತ್ತು.
ಆರೋಪಿಗಳ ವಿರುದ್ಧ ಸಿಬಿಐ ಐಪಿಸಿ ೩೦೨ (ಕೊಲೆ) ಮತ್ತು ಐಪಿಸಿ ೨೦೧ (ಸಾಕ್ಷ್ಯಗಳನ್ನು ನಾಶಪಡಿಸುವುದು) ಅಡಿ ಸಿಬಿಐ ಪ್ರಕರಣ ದಾಖಲಿಸಿತ್ತು. ಪ್ರಕರಣದ ಒಂಬತ್ತು ಸಾಕ್ಷಿಗಳು ಬಳಿಕ ತಿರುಗಿ ಬಿದ್ದು ಪ್ರತಿಕೂಲರಾಗಿದ್ದರು. ಇವರಲ್ಲಿ ಅನೇಕರು ಸನ್ಯಾಸಿನಿಯ ಸಹಪಾಠಿಗಳಾಗಿದ್ದು, ಮೃತ ಸನ್ಯಾಸಿನ ಅಡುಗೆಮನೆಯಲ್ಲಿ ತೊಂದರೆಗೆ ಒಳಗಾದ್ದನ್ನು ಕಂಡಿದ್ದೇವೆ ಎಂದು ಮೊದಲಿಗೆ ಹೇಳಿಕೆ ನೀಡಿದ್ದರು. ಪ್ರಕರಣದಲ್ಲಿ ಒಟ್ಟು ೪೯ ಸಾಕ್ಷಿಗಳನ್ನು ನ್ಯಾಯಾಲಯ ಪರೀಕ್ಷಿಸಿತ್ತು.
ಆರೋಪಿಗಳಾದ ಕ್ಯಾಥೊಲಿಕ್ ಪಾದ್ರಿಗಳು ಮತ್ತು ಸನ್ಯಾಸಿನಿಯನ್ನು ನಾರ್ಕೊ ವಿಶ್ಲೇಷಣಾ ಪರೀಕ್ಷೆಗೆ ಒಳಪಡಿಸಲಾಗಿತ್ತು. ೨೦೦೯ರ ಜುಲೈ ೧೭ರಂದು ಮುಖ್ಯವಾಗಿ ನಾರ್ಕೊ ಅನಾಲಿಸಿಸ್ ಪರೀಕ್ಷೆಯಂತಹ ವೈಜ್ಞಾನಿಕ ಸಾಕ್ಷ್ಯಗಳ ಆಧಾರದ ಮೇಲೆ ಸಿಬಿಐ ದೋಷಾರೋಪ ಪಟ್ಟಿ (ಚಾರ್ಜ್‌ಶೀಟ್) ಸಲ್ಲಿಸಿತ್ತು.
ಸಿಬಿಐ ಸಲ್ಲಿಸಿದ್ದ ಹಿಂದಿನ ಎರಡು ವರದಿಗಳನ್ನು ಈ ಹಿಂದೆ ತಿರಸ್ಕರಿಸಿದ್ದ ನ್ಯಾಯಾಲಯ ಅನುಮಾನಾಸ್ಪದ ಸಂದರ್ಭಗಳ ಬಗ್ಗೆ ಹೆಚ್ಚಿನ ತನಿಖೆ ನಡೆಸಲು ಬಯಸಿತ್ತು.
ಸಿಬಿಐ ಚಾರ್ಜ್-ಶೀಟ್ ಪ್ರಕಾರ, ಹತ್ಯೆಗೀಡಾದ ಸನ್ಯಾಸಿನಿ "ಕೆಲವು ಲೈಂಗಿಕ ಚಟುವಟಿಕೆಗಳಿಗೆ" ಸಾಕ್ಷಿಯಾಗಿದ್ದಳು ಮತ್ತು ಅವಳು ಈ ದೃಶ್ಯವನ್ನು ಬಹಿರಂಗಪಡಿಸಬಹುದು ಎಂಬ ಭಯದಿಂದ ಆಕೆಯನ್ನು ಕೊಲ್ಲಲಾಯಿತು. ಆರೋಪಿಯು ಸಿಸ್ಟರ್ ಅಭಯಾಗೆ ಮೊಂಡಾದ ವಸ್ತುವಿನಿಂದ ಹೊಡೆದಿದ್ದಾನೆ ಮತ್ತು ನಂತರ ೧೯೯೨ರ ಮಾರ್ಚ್ ೨೭ರಂದು ಬೆಳಗ್ಗೆ ೪:೧೫ ರಿಂದ ಳಗ್ಗೆ ೫ ರ ನಡುವೆ ಬಾವಿಗೆ ಎಸೆದಿದ್ದಾನೆ ಎಂದು ದೋಷಾರೋಪ ಪಟ್ಟಿ ಹೇಳಿತ್ತು.
ಪ್ರಕರಣದ ತನಿಖೆ ನಡೆಸಿದ ಡಿವೈಎಸ್ಪಿ ವರ್ಗೀಸ್ ಪಿ ಥಾಮಸ್, ಇದು ಆತ್ಮಹತ್ಯೆ ಎಂದು ತೀರ್ಮಾನಿಸಲು ತನ್ನ ಹಿರಿಯರಿಂದ ಭಾರೀ ಒತ್ತಡಕ್ಕೆ ಒಳಗಾಗಿರುವುದಾಗಿ ಆಪಾದಿಸಿ ಸಿಬಿಐಗೆ ರಾಜೀನಾಮೆ ನೀಡಿದ್ದರು. ಅವರ ಪ್ರಕಾರ, ಸನ್ಯಾಸಿಗಳು ತಲೆಗೆ ಮೊಂಡಾದ ವಸ್ತುವಿನಿಂದ ಹೊಡೆದಿದ್ದಾರೆ. "ಚರ್ಚ್ ಮತ್ತು ರಾಜಕಾರಣಿಗಳ ಹಸ್ತಕ್ಷೇಪದಿಂದಾಗಿ ತೀರ್ಪು ವಿಳಂಬವಾಗಿದೆ" ಎಂದು ಅವರು ಮಂಗಳವಾರ ಮಾಧ್ಯಮಗಳಿಗೆ ತಿಳಿಸಿದರು.
No comments:
Post a Comment