ರೈತರ ಜೊತೆ ಮಾತುಕತೆ: ಪ್ರಧಾನಿ ಮೇಲೆ ಒತ್ತಡ, ಪ್ರಭಾವ ಅಸಾಧ್ಯ
ನವದೆಹಲಿ: ಮೂರು ಕೃಷಿ ಕಾಯ್ದೆಗಳ ವಿರುದ್ಧ ಪ್ರತಿಭಟಿಸುತ್ತಿರುವ ೪೦ ಕೃಷಿ ಸಂಘಗಳನ್ನು ಮತ್ತೊಂದು ಸುತ್ತಿನ ಮಾತುಕತೆಗಾಗಿ ಆಹ್ವಾನಿಸಿದ್ದರೂ, ’ರೈತರ ಆರ್ಥಿಕ ಸುಧಾರಣೆಗಾಗಿ ಕಟಿಬದ್ಧರಾಗಿರುವ ಪ್ರಧಾನಿ ನರೇಂದ್ರ ಮೋದಿ ಅವರ ಮೇಲೆ ಯಾವುದೇ ಶಕ್ತಿಯೂ ಒತ್ತಡ ಅಥವಾ ಪ್ರಭಾವ ಬೀರಲು ಸಾಧ್ಯವಿಲ್ಲ’ ಎಂಬುದಾಗಿ ಕೇಂದ್ರ ಕೃಷಿ ಸಚಿವ ನರೇಂದ್ರ ತೋಮರ್ ಅವರು 2020 ಡಿಸೆಂಬರ್ 2020ರ ಮಂಗಳವಾರ ಹೇಳಿದರು.
ಪ್ರತ್ಯೇಕ ಕಾರ್ಯಕ್ರಮವೊಂದನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ ಅವರು ’ಸರ್ಕಾರವು ಭಾರತೀಯ ಕೃಷಿ ಮತ್ತು ರೈತರನ್ನು ಬಲಪಡಿಸುವ ಹಾದಿಯಲ್ಲಿ ನಿರಂತರವಾಗಿ ಸಾಗುತ್ತಲೇ ಇರುತ್ತದೆ’ ಎಂದು ಘೋಷಿಸಿದರು.
ಹೊಸ ಕೃಷಿ ಕಾನೂನುಗಳನ್ನು ಬೆಂಬಲಿಸುವ ರೈತರ ಗುಂಪಿನೊಂದಿಗೆ ಮಾತನಾಡಿದ ತೋಮರ್ ‘ಯುಪಿಎ ಸರ್ಕಾರದ ಸಮಯದಲ್ಲಿ, ಮನಮೋಹನ್ ಸಿಂಗ್‌ಜಿ ಮತ್ತು ಶರದ್ ಪವಾರ್ ಜಿ ಕೂಡಾ ಈ ಕಾನೂನುಗಳನ್ನು ಜಾರಿಗೆ ತರಲು ಬಯಸಿದ್ದರು, ಆದರೆ ಅವರಿಗೆ ಒತ್ತಡ ಮತ್ತು ಪ್ರಭಾವವನ್ನು ತಡೆದುಕೊಳ್ಳಲಾಗಲಿಲ್ಲ. ಆದ್ದರಿಂದ ಅವರು ಈ ಕಾನೂನುಗಳನ್ನು ಜಾರಿಗೊಳಿಸಲು ಸಾಧ್ಯವಾಗಲಿಲ್ಲ. ಆದರೆ ನರೇಂದ್ರ ಮೋದಿಜಿ ಇಂದು ನಮ್ಮ ಪ್ರಧಾನಿಯಾಗಿರುವುದು ನಮ್ಮ ಅದೃಷ್ಟ’ ಎಂದು ಹೇಳಿದರು.
‘ಮೋದಿಜಿಗೆ ಯಾವುದೇ ಸ್ವಾರ್ಥಿ ಆಸಕ್ತಿ ಇಲ್ಲ. ಅವರ ಏಕ-ಹಂತದ ಕಾರ್ಯಕ್ರಮವೆಂದರೆ ದೇಶದ ಅಭಿವೃದ್ಧಿ ಮತ್ತು ಜನರ ಕಲ್ಯಾಣ. ಕೃಷಿಯನ್ನು ಸಮೃದ್ಧವಾಗಿಸುವ ಮತ್ತು ರೈತರ ಆರ್ಥಿಕ ಸ್ಥಿತಿಯನ್ನು ಸುಧಾರಿಸುವ ಒಂದಂಶದ ಕಾರ್ಯಕ್ರಮಕ್ಕೆ ಅವರು ಸಂಪೂರ್ಣವಾಗಿ ಸಮರ್ಪಿಸಿಕೊಂಡಿದ್ದಾರೆ’ ಎಂದು ಅವರು ನುಡಿದರು.
‘ಜಬ್ ಉದ್ದೇಶ್ಯ ಪ್ರತಿ ಸಮರ್ಪಣ್ ಹೋ, ದೇಶಿ ಪ್ರತಿ ಸಮರ್ಪಣ್ ಹೋ, ತೋಹ್ ಕೊಯಿ ಭೀ ತಾಕತ್ ಅಪ್ನೆ ದಬಾವ್ ಔರ್ ಪ್ರಭಾವ್ ಕಾ ಇಸ್ತೇಮಾಲ್ ನೇತಾ ಪಾರ್ ನಹಿಂ ಕರ್ ಪಾತೆ (ಉದ್ದೇಶಕ್ಕಾಗಿ ಸಮರ್ಪಣೆ ಇದ್ದಾಗ, ದೇಶಕ್ಕೆ ಸಮರ್ಪಣೆ ಇದ್ದಾಗ, ಯಾವುದೇ ಶಕ್ತಿಯು ನಾಯಕನ ಮೇಲೆ ಒತ್ತಡ ಮತ್ತು ಪ್ರಭಾವವನ್ನು ಬೀರಲು ಸಾಧ್ಯವಿಲ್ಲ) ಎಂದು ತೋಮರ್ ನುಡಿದರು.
ತೋಮರ್ ಅವರ ಕಾಮೆಂಟ್‌ಗಳು ಸರ್ಕಾರವು ಕೃಷಿ ಸಂಘಗಳೊಂದಿಗೆ ಮಾತನಾಡಲು ಸಿದ್ಧವಿದೆ. ಆದರೆ ಮಾತುಕತೆಗಳು ಸಮಸ್ಯೆಗಳು, ತರ್ಕ ಮತ್ತು ವಾಸ್ತವಾಂಶಗಳನ್ನು ಆಧರಿಸಿರಬೇಕು’ ಎಂಬುದಾಗಿ ಪ್ರಧಾನಿ ಮೋದಿ ಅವರು ಈ ಹಿಂದೆ ನೀಡಿದ ಹೇಳಿಕೆಗೆ ಅನುಗುಣವಾಗಿ ತೋಮರ್ ಅವರಿಂದ ಮಂಗಳವಾರದ ಹೇಳಿಕೆ ಬಂದಿದೆ.
ಮಹಾರಾಷ್ಟ್ರದ ಸಂಗೋಲಾದಿಂದ ಪಶ್ಚಿಮ ಬಂಗಾಳದ ಶಾಲಿಮಾರ್‌ವರೆಗೆ ಕಿಸಾನ್ ರೈಲಿನ ೧೦೦ನೇ ಸಂಚಾರಕ್ಕೆ ಸೋಮವಾರ ವಿಡಿಯೋ ಕಾನ್ಫರೆನ್ಸ್ ಮೂಲಕ ಚಾಲನೆ ನೀಡಿದ ಪ್ರಧಾನಿ, ಇತ್ತೀಚಿನ ಸುಧಾರಣೆಗಳು ಕೃಷಿ ವ್ಯವಹಾರ ವಿಸ್ತರಣೆಗೆ ಕಾರಣವಾಗುತ್ತವೆ ಎಂದು ಹೇಳಿದ್ದರು.
"ನಾವು ಭಾರತೀಯ ಕೃಷಿಯನ್ನು ಮತ್ತು ರೈತರನ್ನು ಪೂರ್ಣ ಭಕ್ತಿಯಿಂದ, ಪೂರ್ಣ ಬಲದಿಂದ ಬಲಪಡಿಸುವ ಹಾದಿಯಲ್ಲಿ ಸಾಗುತ್ತೇವೆ’ ಎಂದು ಮೋದಿ ಹೇಳಿದ್ದರು. ಕಿಸಾನ್ ರೈಲು ಸೇವೆಯು ರೈತರ ಆದಾಯವನ್ನು ಹೆಚ್ಚಿಸುವ ಪ್ರಮುಖ ಹೆಜ್ಜೆಯಾಗಿದೆ ಎಂದು ಅವರು ಹೇಳಿದರು.
ಏತನ್ಮಧ್ಯೆ, ಕೇಂದ್ರ ಕೃಷಿ ಕಾರ್ಯದರ್ಶಿ ಸಂಜಯ್ ಅUರವಾಲ್ ಅವರು ಡಿಸೆಂಬರ್ ೩೦ ರಂದು ಮುಂದಿನ ಸುತ್ತಿನ ಮಾತುಕತೆಗೆ ಆಹ್ವಾನಿಸಿ ಕೃಷಿ ಸಂಘಗಳ ೪೦ ಪ್ರತಿನಿಧಿಗಳಿಗೆ ಸೋಮವಾರ ಪತ್ರವೊಂದನ್ನು ಕಳುಹಿಸಿದ್ದರು.
"ಶುದ್ಧವಾದ ಉದ್ದೇಶ ಮತ್ತು ಮುಕ್ತ ಮನಸ್ಸಿನೊಂದಿಗೆ ಸಂಬಂಧಿತ ಸಮಸ್ಯೆಗಳನ್ನು ತರ್ಕಬದ್ಧವಾಗಿ ಪರಿಹರಿಸಲು ಸರ್ಕಾರ ಬದ್ಧವಾಗಿದೆ’ ಎಂದು ಅವರು ಹೇಳಿದರು.
ಮೂರು ಕೃಷಿ ಕಾನೂನುಗಳು, ಎಂಎಸ್‌ಪಿ ಆಧಾರಿತ ಖರೀದಿ, ರಾಷ್ಟ್ರೀಯ ರಾಜಧಾನಿ ಪ್ರದೇಶ ಮತ್ತು ಅಕ್ಕ ಪಕ್ಕದ ಪ್ರದೇಶಗಳಲ್ಲಿನ ವಾಯು ಗುಣಮಟ್ಟ ನಿರ್ವಹಣೆ ಆಯೋಗ ಸುಗ್ರೀವಾಜ್ಞೆ, ೨೦೨೦, ಮತ್ತು ವಿದ್ಯುತ್ ತಿದ್ದುಪಡಿ ಮಸೂದೆ ೨೦೨೦ ಸೇರಿದಂತೆ ರೈತರಿಗೆ ಸಂಬಂಧಿಸಿದ ಎಲ್ಲಾ ವಿಷಯಗಳನ್ನು ವಿವರವಾಗಿ ಚರ್ಚಿಸಲಾಗುವುದು ಎಂದು ಅಗರವಾಲ್ ಪತ್ರದಲ್ಲಿ ತಿಳಿಸಿದ್ದರು.
ಕೃಷಿ ಒಕ್ಕೂಟದ ಮುಖಂಡರು ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ. "ನಾವು ಸಭೆಗೆ ಹೋಗುತ್ತೇವೆ, ಆದರೆ ಕಾರ್ಯಸೂಚಿಯಲ್ಲಿನ ವಿಷಯಗಳ ಚರ್ಚೆಯ ಅನುಕ್ರಮವು ನಮ್ಮ ಡಿಸೆಂಬರ್ ೨೬ ರ ಪತ್ರದಲ್ಲಿ ನೀಡಲಾಗಿರುವಂತೆಯೇ ಇರುತ್ತದೆ" ಎಂದು ಜಮ್ಹುರಿ ಕಿಸಾನ್ ಸಭಾ ಪ್ರಧಾನ ಕಾರ್ಯದರ್ಶಿ ಕುಲ್ವಂತ್ ಸಿಂಗ್ ಸಂಧು ಅವರು ಹೇಳಿದರು.
"ಮಾತುಕತೆಯಲ್ಲಿ ನಮ್ಮ ಪಾಲ್ಗೊಳ್ಳುವಿಕೆಯನ್ನು ದೃಢೀಕರಿಸಿ ನಾವು ಸರ್ಕಾರಕ್ಕೆ ಇಮೇಲ್ ಕಳುಹಿಸಿದ್ದೇವೆ" ಎಂದು ಅವರು ಹೇಳಿದರು.
ಪ್ರತಿಭಟನಾ ನಿರತ ಕೃಷಿ ಸಂಘಗಳು ಸರ್ಕಾರದೊಂದಿಗೆ ಮಾತುಕತೆ ಪುನಾರಂಭಿಸುವ ನಿರ್ಧಾರವನ್ನು ಘೋಷಿಸಿ ಮಾತುಕತೆಯ ಮುಂದಿನ ದಿನಾಂಕವಾಗಿ ಡಿಸೆಂಬರ್ ೨೯ರ ದಿನಾಂಕವನ್ನು ಪ್ರಸ್ತಾಪಿಸಿದ ಎರಡು ದಿನಗಳ ನಂತರ ಸರ್ಕಾರದ ಪತ್ರ ಬಂದಿದೆ.
ಸರ್ಕಾರ ಮತ್ತು ಕೃಷಿ ಸಂಘಗಳ ನಡುವೆ ಕೊನೆಯ ಸುತ್ತಿನ ಮಾತುಕತೆ ಡಿಸೆಂಬರ್ ೮ ರಂದು ನಡೆದಿದ್ದು, ಗೃಹ ಸಚಿವ ಅಮಿತ್ ಶಾ ಅವರು ಕೃಷಿ ಒಕ್ಕೂಟದ ೧೩ ಪ್ರತಿನಿಧಿಗಳನ್ನು ಭೇಟಿ ಮಾಡಿದ್ದರು. ಈ ಸಭೆಯ ಒಂದು ದಿನದ ನಂತರ, ಕೇಂದ್ರವು ರಿಯಾಯಿತಿಗಳ ಲಿಖಿತ ಪ್ರಸ್ತಾಪವನ್ನು ಪ್ರತಿಭಟನಾ ಸಂಘಗಳಿಗೆ ಕಳುಹಿಸಿತ್ತು, ಅದನ್ನು ಅವರು ಡಿಸೆಂಬರ್ ೧೬ ರಂದು ಕಳುಹಿಸಿದ ಇಮೇಲ್‌ನಲ್ಲಿ ತಿರಸ್ಕರಿಸಿದ್ದರು.
ಉಭಯ ಕಡೆಯವರು ತಮ್ಮ ಸ್ಥಾನಗಳಿಗೆ ಅಂಟಿಕೊಂಡಿರುವುದರಿಂದ ಸರ್ಕಾರ ಮತ್ತು ಕೃಷಿ ಸಂಘಗಳ ನಡುವಣ ಮಾತುಕತೆ ಅನಿಶ್ಚಿತವಾಗಿದೆ.
ಕಾನೂನು ಸಂಬಂಧಿತ ವಿಭಾಗಗಳಲ್ಲಿನ ಬದಲಾವಣೆಗಳನ್ನು ಒಳಗೊಂಡಂತೆ ರಿಯಾಯಿತಿಗಳನ್ನು ನೀಡುವುದಾಗಿ ಸರ್ಕಾರ ಹೇಳಿದರೆ, ರೈತರು ಮೂರು ಕಾನೂನುಗಳನ್ನು ರದ್ದುಗೊಳಿಸುವ ಬೇಡಿಕೆಗೆ ಅಂಟಿಕೊಂಡಿದ್ದಾರೆ.
No comments:
Post a Comment