ಸುವೇಂದು ಅಧಿಕಾರಿ ರಾಜೀನಾಮೆಗೆ ಸ್ಪೀಕರ್ ಅಸ್ತು
ಕೋಲ್ಕತ: ತೃಣಮೂಲ ಕಾಂಗ್ರೆಸ್ (ಟಿಎಂಸಿ) ಶಾಸಕ ಸ್ಥಾನವನ್ನು ಇತ್ತೀಚೆಗೆ ತ್ಯಜಿಸಿದ ಸುವೇಂದು ಅಧಿಕಾರಿ ಶಾಸಕ ಸ್ಥಾನಕ್ಕೆ ತಾವು ನೀಡಿದ ರಾಜೀನಾಮೆಯನ್ನು ವಿಧಾನಸಭಾಧ್ಯಕ್ಷ ಬಿಮನ್ ಬ್ಯಾನರ್ಜಿ ಅವರು ಅಂಗೀಕರಿಸಿದ್ದಾರೆ ಎಂದು 2020 ಡಿಸೆಂಬರ್ 21ರ ಸೋಮವಾರ ಹೇಳಿದರು.
ತಮ್ಮ ಮುಂದೆ ಸೋಮವಾರ ಹಾಜರಾಗುವಂತೆ ಅಧಿಕಾರಿ ಅವರಿಗೆ ವಿಧಾನಸಭಾಧ್ಯಕ್ಷರು ಸೂಚಿಸಿದ್ದರು.
‘ಸದನದ ಶಾಸಕ ಸ್ಥಾನಕ್ಕೆ ನೀಡಿದ ನನ್ನ ರಾಜೀನಾಮೆಗೆ ಸಂಬಂಧಿಸಿದಂತೆ ವಿಧಾನಸಭೆ ಸಭಾಧ್ಯಕ್ಷರು ನನ್ನನ್ನು ಕರೆದಿದ್ದರು. ಇಂದು, ನಾನು ಅವರನ್ನು ಭೇಟಿ ಮಾಡಿದೆ.... ನನ್ನ ರಾಜೀನಾಮೆಯನ್ನು ಅಂಗೀಕರಿಸಲಾಗಿದೆ ಎಂದು ನನಗೆ ತಿಳಿಸಲಾಯಿತು’ ಎಂದು ಭಾರತೀಯ ಜನತಾ ಪಕ್ಷಕ್ಕೆ (ಬಿಜೆಪಿ) ಹೊಸದಾಗಿ ಸೇರ್ಪಡೆಯಾದ ಅಧಿಕಾರಿ ಹೇಳಿದರು.
"ಸುವೇಂದು ಅಧಿಕಾರಿ ಅವರು ಈದಿನ ನನ್ನ ಮುಂದೆ ಹಾಜರಾಗಿದ್ದರು ಮತ್ತು ಬೇರೆಯವರ ಪ್ರಭಾವಕ್ಕೆ ಒಳಗಾಗದೆ ರಾಜೀನಾಮೆ ನೀಡಿರುವುದಾಗಿ ಖಚಿತ ಪಡಿಸಿದರು. ಅವರ ರಾಜೀನಾಮೆ ಸ್ವಯಂಪ್ರೇರಿತ ಮತ್ತು ನಿಜವಾದದ್ದು ಎಂದು ನನಗೆ ಮನವರಿಕೆಯಾಗಿದೆ. ಅವರ ರಾಜೀನಾಮೆಯನ್ನು ತಕ್ಷಣದಿಂದ ಜಾರಿಗೆ ಬರುವಂತೆ ಅಂಗೀಕರಿಸಿದ್ದೇನೆ’ ಎಂದು ಸಭಾಧ್ಯಕ್ಷರು ಹೇಳಿದರು.
ಮಾಜಿ ಟಿಎಂಸಿ ಸಚಿವರು ಮತ್ತು ಶಾಸಕರಾದ ಅಧಿಕಾರಿ ಅವರು ಪಕ್ಷದ ಎಲ್ಲ್ಲ ಹುದ್ದೆಗಳನ್ನು ತ್ಯಜಿಸಿ ಕಳೆದ ವಾರ ಕೇಸರಿ ಶಿಬಿರವನ್ನು ಸೇರಿದ್ದರು. ಅವರು ಡಿಸೆಂಬರ್ ೧೬ ರಂದು ವಿಧಾನಸಭಾ ಕಾರ್ಯದರ್ಶಿಯವರಿಗೆ ತಮ್ಮ ಶಾಸಕ ಸ್ಥಾನಕ್ಕೆ ನೀಡಿದ ರಾಜೀನಾಮೆಯನ್ನು ಸಲ್ಲಿಸಿದ್ದರು. ಆ ಸಮಯದಲ್ಲಿ ಸಭಾಧ್ಯಕ್ಷರು ಸದನದಲ್ಲಿ ಇರಲಿಲ್ಲ.
No comments:
Post a Comment