ಪ್ರಧಾನಿ ನರೇಂದ್ರ ಮೋದಿಗೆ ಅಮೆರಿಕದ ಅತ್ಯುನ್ನತ ಸೇನಾ ಗೌರವ
ನವದೆಹಲಿ: ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಅಮೆರಿಕದ ಅತ್ಯುನ್ನತ ಮಿಲಿಟರಿ ಗೌರವಗಳಲ್ಲಿ ಒಂದಾದ ’ಲೀಜನ್ ಆಫ್ ಮೆರಿಟ್’ ಗೌರವವನ್ನು ಪ್ರಧಾನಿ ನರೇಂದ್ರ ಮೋದಿಯವರಿಗೆ ಭಾರತದ ನಾಯಕರಾಗಿ ಸಲ್ಲಿಸಿದ ‘ಅಸಾಧಾರಣ ಸೇವೆ’ಗಾಗಿ ಪ್ರದಾನ ಮಾಡಿದ್ದಾರೆ. ಇದಕ್ಕಾಗಿ 2020 ಡಿಸೆಂಬರ್ 22ರ ಮಂಗಳವಾರ ವಂದನೆ ಸಲ್ಲಿಸಿರುವ ಪ್ರಧಾನಿ ನರೇಂದ್ರ ಮೋದಿ ಅವರು ’ಅಪಾರ ಗೌರವ’ ಪಡೆದ ಅನುಭವವಾಗುತ್ತಿದೆ ಎಂದು ಟ್ವೀಟ್ ಮಾಡಿದರು.
ಟ್ರಂಪ್ ಪರವಾಗಿ ಪದವಿ ಮುಖ್ಯ ಕಮಾಂಡರ್ ’ಲೀಜನ್ ಆಫ್ ಮೆರಿಟ್’ ಪ್ರಶಸ್ತಿಯನ್ನು 2020 ಡಿಸೆಂಬರ್ 21ರ ಸೋಮವಾರ ಮೋದಿಯವರಿಗೆ ಪ್ರದಾನ ಮಾಡಲಾಯಿತು. ಈ ಪದಕವನ್ನು
ಅತ್ಯಂತ ವಿರಳವಾಗಿ ನೀಡಲಾಗುತ್ತದೆ ಮತ್ತು ಅದನ್ನು ಅಮೆರಿಕದ ಅಧ್ಯಕ್ಷರು ಮಾತ್ರ ನೀಡಬಹುದು. ಇದನ್ನು ಸಾಮಾನ್ಯವಾಗಿ ರಾಷ್ಟ್ರದ ಮುಖ್ಯಸ್ಥರಿಗೆ ಅಥವಾ ಸರ್ಕಾರದ ಮುಖ್ಯಸ್ಥರಿಗೆ ನೀಡಲಾಗುತ್ತದೆ.
ಪ್ರಧಾನಿ ಪರವಾಗಿ ಈ ಪ್ರಶಸ್ತಿಯನ್ನು ಅಮೆರಿಕದಲ್ಲಿನ ಭಾರತದ ರಾಯಭಾರಿ ತರಣ್ಜಿತ್ ಸಿಂಗ್ ಸಂಧು ಸ್ವೀಕರಿಸಿದ್ದಾರೆ. ಸೋಮವಾರ ನಡೆದ ಇದೇ ಸಮಾರಂಭದಲ್ಲಿ, ಪದವಿ ಮುಖ್ಯ ಕಮಾಂಡರ್ ಲೀಜನ್ ಆಫ್ ಮೆರಿಟ್ ಅನ್ನು ಆಸ್ಟ್ರೇಲಿಯಾದ ಪ್ರಧಾನಿ ಸ್ಕಾಟ್ ಮಾರಿಸನ್ ಮತ್ತು ಜಪಾನಿನ ಮಾಜಿ ಪ್ರಧಾನಿ ಶಿಂಜೊ ಅಬೆ ಅವರಿಗೂ ನೀಡಲಾಯಿತು.
ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಲೀಜನ್ ಆಫ್ ಮೆರಿಟ್ ಪದಕವನ್ನು ಪಡೆದ ಪ್ರಧಾನಿ ನರೇಂದ್ರ ಮೋದಿಯವರು ಮಂಗಳವಾರ "ನನಗೆ ಅಪಾರ ಗೌರವ ಪಡೆದ ಅನುಭವವಾಗುತ್ತಿದೆ’ ಎಂದು ಟ್ವೀಟ್ ಮಾಡಿದರು.
ದ್ವಿಪಕ್ಷೀಯ ಸಂಬಂಧಗಳನ್ನು ಸುಧಾರಿಸಲು ಉಭಯ ದೇಶಗಳ ಜನರು ಮಾಡಿದ ಪ್ರಯತ್ನವನ್ನು ಈ ಗೌರವವು ಗುರುತಿಸುತ್ತದೆ ಎಂದು ಪ್ರಧಾನಿ ಹೇಳಿದರು. ಉಭಯ ದೇಶಗಳ ನಡುವಣ ಬಾಂಧವ್ಯವನ್ನು ಬಲಪಡಿಸುವ ತಮ್ಮ ಸರ್ಕಾರದ “ದೃಢವಾದ ಬದ್ಧತೆಯನ್ನು” ಪ್ರಧಾನಿ ಮೋದಿ ಪುನರುಚ್ಚರಿಸಿದರು.
’ಟ್ರಂಪ್ ಅವರಿಂದ ಲೀಜನ್ ಆಫ್ ಮೆರಿಟ್ ಪ್ರಶಸ್ತಿಯನ್ನು ಪಡೆದಿರುವುದು ನನಗೆ ಆಳವಾದ ಗೌರವ ಪ್ರಾಪ್ತಿಯ ಅನುಭವವನ್ನು ನೀಡಿದೆ. ಇಂಡೋ-ಅಮೆರಿಕನ್ ಕಾರ್ಯತಂತ್ರದ ಸಹಭಾಗಿತ್ವದ ಬಗ್ಗೆ ಉಭಯ ದೇಶಗಳಲ್ಲಿನ ದ್ವಿಪಕ್ಷೀಯ ಒಮ್ಮತದಲ್ಲಿ ಪ್ರತಿಫಲಿಸುವ ದ್ವಿಪಕ್ಷೀಯ ಸಂಬಂಧಗಳನ್ನು ಸುಧಾರಿಸಲು ಭಾರತ ಮತ್ತು ಅಮೆರಿಕದ ಜನರು ಮಾಡಿದ ಪ್ರಯತ್ನಗಳನ್ನು ಇದು ಗುರುತಿಸುತ್ತದೆ’ ಎಂದು ಪ್ರಧಾನಿ ತಮ್ಮ ಟ್ವೀಟಿನಲ್ಲಿ ತಿಳಿಸಿದರು.
"೨೧ ನೇ ಶತಮಾನವು
ಅಭೂತಪೂರ್ವ ಸವಾಲುಗಳು ಮತ್ತು ಅವಕಾಶಗಳನ್ನು ಒದಗಿಸುತ್ತದೆ. ಭಾರತ-ಅಮೆರಿಕ ಸಂಬಂಧವು ಇಡೀ ಮಾನವೀಯತೆಯ ಅನುಕೂಲಕ್ಕಾಗಿ ಜಾಗತಿಕ ನಾಯಕತ್ವವನ್ನು ಒದಗಿಸಲು ನಮ್ಮ ಜನರ ಅನನ್ಯ ಸಾಮರ್ಥ್ಯಗಳ ವ್ಯಾಪಕ ಸಾಮರ್ಥ್ಯವನ್ನು ಬಳಸಿಕೊಳ್ಳುತ್ತದೆ’ ಎಂದು ಅವರು ಇನ್ನೊಂದು ಟ್ವೀಟಿನಲ್ಲಿ ತಿಳಿಸಿದ್ದಾರೆ.
No comments:
Post a Comment