Saturday, December 5, 2020

ಸರ್ಕಾರದ ಸ್ಥಿರತೆಗಾಗಿ ನಮ್ಮ ನಾಯಕತ್ವದ ಟೀಕೆ ನಿಲ್ಲಿಸಿ: ಕಾಂಗ್ರೆಸ್

 ಸರ್ಕಾರದ ಸ್ಥಿರತೆಗಾಗಿ ನಮ್ಮ ನಾಯಕತ್ವದ ಟೀಕೆ ನಿಲ್ಲಿಸಿ: ಕಾಂಗ್ರೆಸ್

ಮುಂಬೈ: ರಾಜ್ಯದಲ್ಲಿ "ಸ್ಥಿರ" ಸರ್ಕಾರವನ್ನು ಬಯಸುವುದಾದರೆ ಪಕ್ಷದ ನಾಯಕತ್ವದ ಬಗ್ಗೆ ಪ್ರತಿಕ್ರಿಯಿಸುವುದನ್ನು ನಿಲ್ಲಿಸಬೇಕು ಎಂದು ಕಾಂಗ್ರೆಸ್ ಪಕ್ಷವು 2020 ಡಿಸೆಂಬರ್ 05ರ ಶನಿವಾರ ಶಿವಸೇನೆ ನೇತೃತ್ವದ ಆಡಳಿತಾರೂಢ ಮಹಾರಾಷ್ಟ್ರ ವಿಕಾಸ್ ಅಘಾಡಿಯಲ್ಲಿನ (ಎಂವಿಎ) ತನ್ನ ಮಿತ್ರಪಕ್ಷಗಳಿಗೆ ಮನವಿ ಮಾಡಿತು.

ರಾಹುಲ್ ಗಾಂಧಿಯವರ ನಾಯಕತ್ವವು "ಸ್ಥಿರತೆಯನ್ನು ಹೊಂದಿಲ್ಲ ಎಂಬುದಾಗಿ ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷದ (ಎನ್ಸಿಪಿ) ಮುಖ್ಯಸ್ಥ ಶರದ್ ಪವಾರ್ ಹೇಳಿದ ನಂತರ ಕಾಂಗ್ರೆಸ್ ರಾಜ್ಯ ಕಾರ್ಯಕಾರಿಣಿ ಅಧ್ಯಕ್ಷೆ ಯಶೋಮತಿ ಠಾಕೂರ್ ಅವರು ಮನವಿಯನ್ನು ಮಾಡಿದರು.

ಯಶೋಮತಿ ಅವರು ಲೋಕಮತ ಮರಾಠಿ ದಿನಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ ಪವಾರ್ ಅವರ ಕುರಿತಾದ  ಹೇಳಿಕೆಗಳು ಬಂದವು.

ಇಂಗ್ಲಿಷ್ ಮತ್ತು ಮರಾಠಿ ಭಾಷೆಯ ಸರಣಿ ಟ್ವೀಟ್ಗಳಲ್ಲಿ ಠಾಕೂರ್ ಅವರು ಎಂವಿಎ ನಾಯಕರ ಸಂದರ್ಶನಗಳು ಮತ್ತು ಲೇಖನಗಳನ್ನು ಉಲ್ಲೇಖಿಸಿದರು.

ನೀವು ಮಹಾರಾಷ್ಟ್ರದಲ್ಲಿ ಸ್ಥಿರ ಸರ್ಕಾರವನ್ನು ಬಯಸಿದರೆ ನಾನು ಎಂವಿಎ ಸಹೋದ್ಯೋಗಿಗಳಿಗೆ ಕಾಂಗ್ರೆಸ್ ನಾಯಕತ್ವದ ಬಗ್ಗೆ ಪ್ರತಿಕ್ರಿಯಿಸುವುದನ್ನು ನಿಲ್ಲಿಸಿ ಎಂಬುದಾಗಿ ನಾನು ಎಂವಿಎ ನಾಯಕರಿಗೆ ಮನವಿ ಮಾಡಬೇಕಾಗಿದೆಎಂದು ಅವರು ಟ್ವೀಟ್ ಮಾಡಿದರು.

ಎಲ್ಲರೂ ಒಕ್ಕೂಟದ ಮೂಲ ನಿಯಮಗಳನ್ನು ಪಾಲಿಸಬೇಕು. ನಮ್ಮ ನಾಯಕತ್ವವು ತುಂಬಾ ಪ್ರಬಲವಾಗಿದೆ ಮತ್ತು ಸ್ಥಿರವಾಗಿದೆಎಂದು ಠಾಕೂರ್ ಬರೆದರು.

"ಎಂವಿಎ ರಚನೆಯು ಪ್ರಜಾಪ್ರಭುತ್ವ ಮೌಲ್ಯಗಳಲ್ಲಿನ ನಮ್ಮ ಬಲವಾದ ನಂಬಿಕೆಯ ಫಲಿತಾಂಶವಾಗಿದೆಎಂದೂ ಯಶೋಮತಿ ಹೇಳಿದರು.

ಏನಿದ್ದರೂ ಎನ್ಸಿಪಿ ಮತ್ತು ಶಿವಸೇನೆ ನಾಯಕರು ಪವಾರ್ ಹೇಳಿಕೆಯನ್ನು ನಿರ್ಲಕ್ಷಿಸಿದ್ದಾರೆ. ಮೂರು ಪಕ್ಷಗಳನ್ನು ಒಳಗೊಂಡ ಮೈತ್ರಿಕೂಟ ನೇತೃತ್ವದ ರಾಜ್ಯ ಸರ್ಕಾರದ ಸ್ಥಿರತೆಗೂ ಪವಾರ್ ಹೇಳಿಕೆಗೂ ಯಾವುದೇ ಸಂಬಂಧವಿಲ್ಲಎಂದು ಎನ್ಸಿಪಿ, ಶಿವಸೇನಾ ನಾಯಕರು ಹೇಳಿದರು.

ಎನ್ಸಿಪಿ ವಕ್ತಾರ ಉಮೇಶ್ ಪಾಟೀಲ್ ಅವರು, ಪವಾರ್ ಅವರ ಹೇಳಿಕೆಯನ್ನು ಅವರ ವಯಸ್ಸು ಮತ್ತು ಅನುಭವದ ಹಿನ್ನೆಲೆಯಲ್ಲಿ ಸಕಾರಾತ್ಮಕವಾಗಿ ನೋಡಬೇಕು. ಸರ್ಕಾರದ ಸ್ಥಿರತೆಯ ಬಗ್ಗೆ ಠಾಕೂರ್ ಅವರ ಅಭಿಪ್ರಾಯ ಅನಗತ್ಯ. ಎಂವಿಎ ಒಳಗೆ ಉತ್ತಮ ಸಮನ್ವಯವಿದೆ. ಇತ್ತೀಚೆಗಷ್ಟೇ, [ಸರ್ಕಾರದ] ಮೊದಲ ವಾರ್ಷಿಕೋತ್ಸವದಂದು ನಾವು ಆಚರಣೆಗಳನ್ನು ನೋಡಿದ್ದೇವೆ. [ಶುಕ್ರವಾರ] [ಶಾಸಕಾಂಗ] ಕೌನ್ಸಿಲ್ ಚುನಾವಣೆಗಳಲ್ಲಿ ಮೈತ್ರಿ ಗೆಲುವು ದಾಖಲಿಸಿದೆಎಂದು ಹೇಳಿದರು.

ರಾಹುಲ್ ಗಾಂಧಿಯವರ ಬಗ್ಗೆ ಪವಾರ್ ಏನು ಹೇಳಿದರೂ ಅದಕ್ಕೂ ಎಂವಿಎ ಸರ್ಕಾರದ ಸ್ಥಿರತೆಗೂ ಯಾವುದೇ ಸಂಬಂಧವಿಲ್ಲ ಎಂದು ಶಿವಸೇನೆ ಮುಖಂಡ ಸಂಜಯ್ ರೌತ್ ಹೇಳಿದರು.

"ರಾಹುಲ್ ಗಾಂಧಿ ಅವರ ನಾಯಕತ್ವಕ್ಕೆ ಧಕ್ಕೆ ಉಂಟಾದಾಗಲೆಲ್ಲ ನಾನು ಯಾವಾಗಲೂ ಅವರ ಹಿಂದೆ ನಿಂತಿದ್ದೇನೆ. ಶರದ್ ಪವಾರ್ ಎತ್ತರದ ನಾಯಕ. ದೇಶದ ವಿರೋಧ ಪಕ್ಷಗಳು ಪವಾರ್ ಅವರನ್ನು ತಮ್ಮ ನಾಯಕ ಎಂದು ಪರಿಗಣಿಸುತ್ತವೆ. ಅವರಂತಹ ಅನುಭವಿ ನಾಯಕ ಏನನ್ನಾದರೂ ಹೇಳಿದಾಗ, ಅದನ್ನು ನಿರ್ದೇಶನಗಳಾಗಿ ನೋಡಬೇಕುಎಂದು ರೌತ್ ನುಡಿದರು.

No comments:

Advertisement