ರಾಹುಲ್ ಗಾಂಧಿಗೆ ಅಧ್ಯಕ್ಷತೆ, ಶೇ.೯೯.೯ ಕಾಂಗ್ರೆಸ್ ಸದಸ್ಯರ ಬಯಕೆ
ನವದೆಹಲಿ: ಪಕ್ಷವು ಶೀಘ್ರದಲ್ಲೇ ಹೊಸ ಅಧ್ಯಕ್ಷರನ್ನು ಆಯ್ಕೆ ಮಾಡುವ ಪ್ರಕ್ರಿಯೆಯನ್ನು ಪ್ರಾರಂಭಿಸಲಿದೆ ಮತ್ತು ನಾನೂ ಸೇರಿದಂತೆ ಪಕ್ಷದ ಶೆ.೯೯.೯ ಸದಸ್ಯರು ರಾಹುಲ್ ಗಾಂಧಿಯವರು ಚುಕ್ಕಾಣಿ ಹಿಡಿಯಬೇಕೆಂದು ಬಯಸಿದ್ದಾರೆ ಎಂದು ಕಾಂಗ್ರೆಸ್ ಮುಖಂಡ ರಣದೀಪ್ ಸುರ್ಜೆವಾಲಾ 2020 ಡಿಸೆಂಬರ್ 18ರ ಶುಕ್ರವಾರ ಹೇಳಿದರು.
ಕಾಂಗ್ರೆಸ್ ಚುನಾವಣಾ ಕಾಲೇಜು, ಅಖಿಲ ಭಾರತ ಕಾಂಗ್ರೆಸ್ ಸಮಿತಿ (ಎಐಸಿಸಿ) ಸದಸ್ಯರು ಮತ್ತು ಕಾಂಗ್ರೆಸ್ ಕಾರ್ಯಕರ್ತರು ಮತ್ತು ಸದಸ್ಯರು ಈ ಪ್ರಕ್ರಿಯೆಯಲ್ಲಿ ಭಾಗಿಯಾಗಲಿದ್ದಾರೆ ಎಂದು ಸುರ್ಜೆವಾಲ ಹೇಳಿದರು.
ಪಕ್ಷದ ಹೊಸ ಅಧ್ಯಕ್ಷರನ್ನು ಆಯ್ಕೆ ಮಾಡುವ ವಿಧಾನವನ್ನು ಪಕ್ಷ ಶೀಘ್ರದಲ್ಲೇ ಪ್ರಾರಂಭಿಸುತ್ತದೆ. ಕಾಂಗ್ರೆಸ್ ಚುನಾವಣಾ ಕಾಲೇಜು, ಎಐಸಿಸಿ ಸದಸ್ಯರು, ಕಾಂಗ್ರೆಸ್ ಕಾರ್ಯಕರ್ತರು ಮತ್ತು ಸದಸ್ಯರು ಯಾರು ಹೆಚ್ಚು ಸೂಕ್ತವೆಂದು ಆಯ್ಕೆ ಮಾಡುತ್ತಾರೆ. ನಾನು ಸೇರಿದಂತೆ ಶೇ.೯೯.೯ ಮಂದಿ ರಾಹುಲ್ ಗಾಂಧಿಯವರನ್ನು ಪಕ್ಷದ ಅಧ್ಯಕ್ಷರಾಗಿ ಆಯ್ಕೆ ಮಾಡಬೇಕೆಂದು ಬಯಸುತ್ತಾರೆ’ ಎಂದು ಅವರು ಹೇಳಿದರು.
ಪಶ್ಚಿಮ ಬಂಗಾಳ, ಕೇರಳ, ಅಸ್ಸಾಂ ಮತ್ತು ತಮಿಳುನಾಡಿನ ನಿರ್ಣಾಯಕ ಚುನಾವಣೆಗಳಿಗೆ ಮುಂಚೆಯೇ ಪಕ್ಷವು ತನ್ನ ಹೊಸ ಅಧ್ಯಕ್ಷರನ್ನು ಆಯ್ಕೆ ಮಾಡಲಿದೆ. ಬಿಹಾರ ಮತ್ತು ಮಹಾರಾಷ್ಟ್ರದ ರಾಜ್ಯ ವಿಧಾನಸಭಾ ಚುನಾವಣೆಗಳಲ್ಲಿ ಪಕ್ಷದ ಇತ್ತೀಚಿನ ಕಳಪೆ ಸಾಧನೆಯು ಅದರ ಹಲವಾರು ಪ್ರಖ್ಯಾತ ನಾಯಕರನ್ನು ಭಿನ್ನಮತೀಯರನ್ನಾಗಿ ಮಾಡಿವೆ.
ಪಕ್ಷದ ಹಾಲಿ ಅಧ್ಯಕ್ಷೆ ಸೋನಿಯಾ ಗಾಂಧಿ ಶನಿವಾರ ಕಾರ್ಯತಂತ್ರ ಸಭೆ ಕರೆದಿದ್ದಾರೆ ಮತ್ತು ಈ ಭಿನ್ನಮತೀಯರಲ್ಲಿ ಕೆಲವರು ಹಾಜರಾಗುವ ನಿರೀಕ್ಷೆಯಿದೆ. ಈ ಗುಂಪಿನಲ್ಲಿ ರಾಜ್ಯಸಭೆಯಲ್ಲಿ ವಿರೋಧ ಪಕ್ಷದ ನಾಯಕರಾಗಿರುವ ಗುಲಾಮ್ ನಬಿ ಆಜಾದ್, ಹರಿಯಾಣದ ಮಾಜಿ ಮುಖ್ಯಮಂತ್ರಿ ಭೂಪಿಂದರ್ ಸಿಂಗ್ ಹೂಡಾ ಮತ್ತು ಕೇಂದ್ರದ ಮಾಜಿ ಸಚಿವ ಶಶಿ ತರೂರ್ ಅವರಂತಹ ಪ್ರಖ್ಯಾತ ಹೆಸರುಗಳಿವೆ.
ರಾಜ್ಯಗಳಲ್ಲಿ ಉನ್ನತ ಹುದ್ದೆಗಳಿಗೆ ಸೂಕ್ತ ಅಭ್ಯರ್ಥಿಗಳಿಗಾಗಿ ಪಕ್ಷವು ಬ್ಲಾಕ್ ಮತ್ತು ಜಿಲ್ಲಾ ಮಟ್ಟದ ನಾಯಕರ ಸಲಹೆಯನ್ನು ಸಹ ಪಡೆದಿದೆ. ಈ ಕ್ರಮವು ಮುಖ್ಯವಾಗಿ ರಾಜ್ಯಗಳಲ್ಲಿನ ಒಳನೋಟವನ್ನು ಪರಿಶೀಲಿಸುವುದು ಮತ್ತು ಕಾದಾಡುತ್ತಿರುವ ಬಣಗಳನ್ನು ಒಂದುಗೂಡಿಸುವ ಗುರಿಯನ್ನು ಹೊಂದಿದೆ ಎಂದು ಹೆಸರಿಸಲು ಇಚ್ಛಿಸದ ಕಾಂಗ್ರೆಸ್ ಕಾರ್ಯಕರ್ತರೊಬ್ಬರು ಹೇಳಿದರು.
೨೦೦೮ ರಲ್ಲಿ ಪಕ್ಷದ ಅಧ್ಯಕ್ಷ ರಾಹುಲ್ ಗಾಂಧಿ ಅವರನ್ನು ಅಧಿಕಾರಕ್ಕೆ ತರಲು ಮಾಜಿ ಅಧ್ಯಕ್ಷರು ಮತ್ತು ಹಾಲಿ ಅಭಿಮಾನಿ ಹಿಂಬಾಲಕರು ಪ್ರಾರಂಭಿಸಿದ್ದ ಆಂತರಿಕ ಮತದಾನ ವ್ಯವಸ್ಥೆಯನ್ನು ಕಾಂಗ್ರೆಸ್ಸಿನ ಯುವ ವಿಭಾಗವು ರದ್ದುಗೊಳಿಸಿದೆ. ಯುವ ಕಾಂಗ್ರೆಸ್ ತನ್ನ ರಾಜ್ಯ ಘಟಕವನ್ನು ಮುಖ್ಯಸ್ಥರನ್ನು ಆಯ್ಕೆ ಮಾಡಲು ಸದಸ್ಯತ್ವ ದಾಖಲಾತಿಯನ್ನು ಆಧರಿಸಿ ಹೊಸ ಸ್ವರೂಪವನ್ನು ರೂಪಿಸಿದೆ.
ಈ ವ್ಯವಸ್ಥೆಯನ್ನು ಹಿಮಾಚಲ ಪ್ರದೇಶದ ಆಯ್ಕೆಯಲ್ಲಿ ಅಳವಡಿಸಲಾಗಿದ್ದು, ಗುಜರಾತ್, ತೆಲಂಗಾಣ ಮತ್ತು ಮುಂಬೈಗಳಲ್ಲಿ ಆಯ್ಕೆ ಪ್ರಕ್ರಿಯೆಗೆ ಬಳಸಲಾಗುತ್ತದೆ. ಆದರೆ, ಕರ್ನಾಟಕ ಮತ್ತು ಮಧ್ಯಪ್ರದೇಶದ ಆಯ್ಕೆ ಹಳೆಯ ವಿಧಾನವನ್ನು ಅನುಸರಿಸುತ್ತದೆ.
ಇತ್ತೀಚೆಗೆ ಸ್ಪರ್ಧಿಸಿದ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ೭೦ ಕ್ಕೆ ಸ್ಪರ್ಧಿಸಿದ ನಂತರ ಕೇವಲ ೧೯ ಸ್ಥಾನಗಳನ್ನು ಗೆದ್ದಿದೆ.
No comments:
Post a Comment