ರಾಹುಲ್ ವಿಡಿಯೋ ಮೂಲಕ ಕಾಲೆಳೆದ ನಡ್ಡಾ!
ನವದೆಹಲಿ: ಹಳೆಯ ವಿಡಿಯೋ ಒಂದನ್ನು ತಮ್ಮ ಟ್ವೀಟಿಗೆ ಜೋಡಿಸಿ ’ಇದೆಂತಹ ಮ್ಯಾಜಿಕ್ ರಾಹುಲ್ ಜಿ’ ಎಂಬುದಾಗು ಪ್ರಶ್ನಿಸುವ ಮೂಲಕ ಬಿಜೆಪಿ ಅಧ್ಯಕ್ಷ ಜಗತ್ ಪ್ರಕಾಶ್ ನಡ್ಡಾ ಅರು 2020 ಡಿಸೆಂಬರ್ 27ರ ಭಾನುವಾರ ಕೃಷಿ ಸುಧಾರಣಾ ಮಸೂದೆಗಳ ವಿರುದ್ಧ ಧ್ವನಿ ಎತ್ತಿರುವ ರಾಹುಲ್ ಗಾಂಧಿಯವರ ಕಾಲೆಳೆದರು.
ಬಿಜೆಪಿ
ಅಧ್ಯಕ್ಷರು ಲೋಕಸಭೆಯಲ್ಲಿ ರಾಹುಲ್ ಗಾಂಧಿ ಅವರು ಮಾಡಿದ ಭಾಷಣದ ಹಳೆಯ ವಿಡಿಯೋವನ್ನು ಹಂಚಿಕೊಂಡರು. ಇದರಲ್ಲಿ
ರೈತರನ್ನು ಮಧ್ಯವರ್ತಿಗಳ ಮುಷ್ಠಿಯಿಂದ ಬಿಡಿಸಬೇಕಾದ ಮತ್ತು ರೈತರಿಗೆ ತಮ್ಮ ಉತ್ಪನ್ನಗಳನ್ನು ನೇರವಾಗಿ ಉದ್ಯಮಕ್ಕೆ ಮಾರಾಟ ಮಾಡುವ ಅವಕಾಶ ಒದಗಿಸಬೇಕಾದ ಅಗತ್ಯವನ್ನು ರಾಹುಲ್ ಗಾಂಧಿ ಪ್ರತಿಪಾದಿಸಿದ್ದರು.
"ರಾಹುಲ್
ಜಿ ಏನಾಗುತ್ತಿದೆ? ನೀವು ಈ ಹಿಂದೆ ಪ್ರತಿಪಾದಿಸಿದ್ದನ್ನು
ಈಗ ನೀವೇ ವಿರೋಧಿಸುತ್ತಿದ್ದೀರಿ. ನಿಮಗೆ ದೇಶದ ಅಥವಾ ರೈತರ ಹಿತಾಸಕ್ತಿಗಳೊಂದಿಗೆ ಯಾವುದೇ ಸಂಬಂಧವಿಲ್ಲ. ನಿಮಗೆ ರಾಜಕೀಯದ ಆಟ ಮಾತ್ರ ಬೇಕಾಗಿದೆ.
ಆದರೆ ನಿಮ್ಮ ಬೂಟಾಟಿಕೆ ಕೆಲಸ ಮಾಡುವುದಿಲ್ಲ. ದೇಶದ ಜನರು ಮತ್ತು ರೈತರು ನಿಮ್ಮ ಡಬಲ್ ಸ್ಟ್ಯಾಂಡರ್ಡ್ನ್ನು ಗುರುತಿಸಿದ್ದಾರೆ’ ಎಂದು
ಹಿಂದಿ ಭಾಷೆಯಲ್ಲಿ ಟ್ವೀಟ್ ಮಾಡಿರುವ ಜೆ.ಪಿ. ನಡ್ಡಾ
ಅದಕ್ಕೆ ರಾಹುಲ್ ಗಾಂಧಿ ಅವರು ಲೋಕಸಭೆಯಲ್ಲಿ ಮಾತನಾಡುತ್ತಿದ್ದ ವಿಡಿಯೋವನ್ನು ಜೋಡಿಸಿದ್ದಾರೆ.
ಮೂರು
ಕೃಷಿ-ಮಾರುಕಟ್ಟೆ ಕಾನೂನುಗಳ ವಿರುದ್ಧ ರೈತರ ಪ್ರತಿಭಟನೆಯನ್ನು ಕಾಂಗ್ರೆಸ್ ಬೆಂಬಲಿಸಿದೆ, ಇದು ಕೃಷಿಕರಿಗೆ ತಮ್ಮ ಉತ್ಪನ್ನಗಳನ್ನು ನೇರವಾಗಿ ಖಾಸಗಿ ಆಟಗಾರರಿಗೆ ಮಾರಾಟ ಮಾಡುವ ಆಯ್ಕೆಯನ್ನು ನೀಡುತ್ತದೆ. ಈ ಕಾನೂನುಗಳು ಕೃಷಿ
ಕ್ಷೇತ್ರಕ್ಕೆ ಅಸ್ತಿತ್ವದಲ್ಲಿರುವ ಸರ್ಕಾರದ ಬೆಂಬಲವನ್ನು ದುರ್ಬಲಗೊಳಿಸುವ ಗುರಿಯನ್ನು ಹೊಂದಿವೆ ಎಂದು ಆಕ್ರೋಶಗೊಂಡ ರೈತರು ವಾದಿಸಿದ್ದಾರೆ, ಇದನ್ನು ಕೇಂದ್ರ ನಿರಾಕರಿಸಿದೆ.
ಅಮೇಥಿಯಿಂದ
ಸಂಸದರಾಗಿದ್ದಾಗ ಕೊನೆಯ ಲೋಕಸಭೆಯಲ್ಲಿ ಮಾಡಿದ್ದೆನ್ನಲಾದ ತಮ್ಮ ಭಾಷಣದಲ್ಲಿ ರಾಹುಲ್ ಗಾಂಧಿಯವರು ಉತ್ತರ ಪ್ರದೇಶ ಪ್ರವಾಸದ ಸಮಯದಲ್ಲಿ ಒಬ್ಬ ರೈತ ೧೦ ರೂ.ಗಳ
ಬೆಲೆಯ ಆಲೂಗೆಡ್ಡೆ ಚಿಪ್ಸ್ ಪ್ಯಾಕೆಟಿನ ಹಿಂದಿನ "ಮ್ಯಾಜಿಕ್" ವಿವರಿಸಲು ಕೇಳಿಕೊಂಡರು ಎಂದು ರಾಹುಲ್ ಗಾಂಧಿ ಹೇಳುವುದು ಕೇಳುತ್ತದೆ. ರೈತರು ಆಲೂಗಡ್ಡೆಯಲ್ಲಿ ಕೆಜಿಗೆ ೨ ರೂಪಾಯಿಯಂತೆ ಮಾರಾಟ
ಮಾಡುವಾಗ ಅದರ ಚಿಪ್ಸ್ ಪ್ಯಾಕೆಟಿಗೆ ೧೦ ರೂಪಾಯಿ ಬೆಲೆ
ಹೇಗಾಗುತ್ತದೆ ಎಂದು ರೈತ ಪ್ರಶ್ನಿಸಿದ ಎಂದು ರಾಹುಲ್ ಹೇಳಿದ್ದಾರೆ. ಇದ್ದಕೇನು ಕಾರಣ ಎಂಬುದು ನಿಮ್ಮ ಯೋಚನೆ ಎಂದು ಕೇಳಿದಾಗ ರೈತ ’ಕಾರ್ಖಾನೆಗಳು ನಮ್ಮಿಂದ ಬಹಳ ದೂರದಲ್ಲಿವೆ. ನಮಗೆ ನಮ್ಮ ಉತ್ಪನ್ನಗಳನ್ನು ನೇರವಾಗಿ ಅಲ್ಲಿಯೇ ಮಾರಾಟ ಮಾಡಲು ಸಾಧ್ಯವಾದರೆ, ಯಾವುದೇ ಮಧ್ಯವರ್ತಿಗಳಿಂದ ಹಣ ಕಡಿತವಾಗದೆ ಪೂರ್ತಿ
ಹಣ ನಮಗೆ ಸಿಗುತ್ತದೆ’
ಎಂದು ರೈತ ಉತ್ತರಿಸಿದ ಎಂದು ಗಾಂಧಿ ವಿಡಿಯೋದಲ್ಲಿ ಹೇಳಿದ್ದಾರೆ.
"ಇದು
ಫುಡ್ ಪಾರ್ಕ್ ಹಿಂದಿನ ಆಲೋಚನೆಯಾಗಿತ್ತು, ಮತ್ತು ಇದು ಅಮೆಥಿ ಮತ್ತು ಉತ್ತರ ಪ್ರದೇಶದ ೧೦-೧೨ ಜಿಲ್ಲೆಗಳ
ರೈತರು ಮತ್ತು ಕಾರ್ಮಿಕರು ಇದಕ್ಕಾಗಿ ಹೋರಾಡುತ್ತಿದ್ದರು’ ಎಂದು
ವಿಡಿಯೋ ತುಣುಕಿನಲ್ಲಿ ಹೇಳಿದ್ದ ರಾಹುಲ್ ಗಾಂಧಿ ’ಅಮೆಥಿಯಲ್ಲಿನ ಫುಡ್ ಪಾರ್ಕ್ ಯೋಜನೆಯನ್ನು ಮೊದಲ ಅವಧಿಯಲ್ಲಿ ಮೋದಿ ಸರ್ಕಾರವನ್ನು ಕೈಬಿಟ್ಟಿತು’ ಎಂದು
ಆರೋಪಿಸಿದ್ದರು.
ಆದರೆ ಸರ್ಕಾರ ಈ ಆರೋಪವನ್ನು ನಿರಾಕರಿಸಿತ್ತು ಮತ್ತು ಫುಡ್ ಪಾರ್ಕಿಗಾಗಿ ಎಂದಿಗೂ ಭೂಮಿ ಇಟ್ಟಿರಲೇ ಇಲ್ಲ ಎಂದು ಹೇಳಿತ್ತು.
No comments:
Post a Comment