ಕೋವಿಡ್ ಲಸಿಕೆ ಪಡೆದ ಹರಿಯಾಣ ಸಚಿವರಿಗೆ ಸೋಂಕು
ನವದೆಹಲಿ: ಸ್ವಯಂ ಸೇವಕರಾಗಿ ಕೋವಿಡ್-೧೯ ವಿರುದ್ಧ ತಯಾರಿಸಲಾಗುತ್ತಿರುವ ಭಾರತದ ಮೊದಲ ಸ್ಥಳೀಯ ಲಸಿಕೆ ಕೋವಾಕ್ಸಿನ್ ತೆಗೆದುಕೊಂಡ ಹರಿಯಾಣದ ಸಚಿವ ಅನಿಲ್ ವಿಜ್ ಅವರಿಗೆ ಕೊರೋನಾವೈರಸ್ ಸೋಂಕು ತಗುಲಿದ್ದು ಅವರು ಆಸ್ಪತ್ರೆಗೆ ದಾಖಲಾಗಿದ್ದಾರೆ. ಬೆನ್ನಲ್ಲೇ ಔಷಧ ತಯಾರಿ ಸಂಸ್ಥೆಯು ವ್ಯಕ್ತಿಯು ಎರಡು ಡೋಸ್ ತೆಗೆದುಕೊಂಡರೆ ಪರಿಣಾಮಕಾರಿಯಾಗುವಂತೆ ಅದನ್ನು ವಿನ್ಯಾಸಗೊಳಿಸಲಾಗಿದೆ ಎಂದು 2020 ಡಿಸೆಂಬರ್ 05ರ ಶನಿವಾರ ತಿಳಿಸಿತು.
ಒಬ್ಬ
ವ್ಯಕ್ತಿಯು ಎರಡು ಡೋಸ್ ತೆಗೆದುಕೊಂಡರೆ ಪರಿಣಾಮಕಾರಿಯಾಗುವಂತೆ ಭಾರತದ ಮೊದಲ ಸ್ಥಳೀಯ ಲಸಿಕೆ ಕೋವಾಕ್ಸಿನ್ನ್ನು ವಿನ್ಯಾಸಗೊಳಿಸಲಾಗಿದೆ
ಎಂದು ಹೈದರಾಬಾದ್ ಮೂಲದ ಔಷಧ ಸಂಸ್ಥೆ ಭಾರತ್ ಬಯೋಟೆಕ್ ಶನಿವಾರ ಹೇಳಿಕೆಯಲ್ಲಿ ಸ್ಪಷ್ಟಪಡಿಸಿತು.
‘ಪರಿಣಾಮಕಾರಿತ್ವವನ್ನು
ಎರಡನೇ ಡೋಸ್ ಪಡೆದ ೧೪ ದಿನಗಳ ನಂತರ
ನಿರ್ಧರಿಸಬಹುದು’ ಎಂದು
ಸಂಸ್ಥೆ ಹೇಳಿತು.
ತಮ್ಮ
ರಾಜ್ಯದಲ್ಲಿ ಮೂರನೇ ಹಂತದ ಲಸಿಕೆ ಪ್ರಯೋಗಗಳಲ್ಲಿ ಸ್ವಯಂಸೇವಕರಾಗಿದ್ದ ಹರಿಯಾಣ ಆರೋಗ್ಯ ಸಚಿವ ಅನಿಲ್ ವಿಜ್ ಅವರು ತಮಗೆ ಕೋವಿಡ್-೧೯ ಪಾಸಿಟಿವ್ ವರದಿ
ಬಂದಿದೆ ಎಂದು ತಿಳಿಸಿದ ಕೂಡಲೇ ಔಷಧ ತಯಾರಿ ಸಂಸ್ಥೆ ಸ್ಪಷ್ಟೀಕರಣ ನೀಡಿತು. "ಲಸಿಕೆ ಅಭಿವೃದ್ಧಿಯಲ್ಲಿ ಸುರಕ್ಷತೆಯು ನಮ್ಮ ಪ್ರಾಥಮಿಕ ಮಾನದಂಡವಾಗಿದೆ’ ಎಂದು
ಫಾರ್ಮಾ ಸಂಸ್ಥೆ ಭರವಸೆ ನೀಡಿತು.
"ಕೊವಾಕ್ಸಿನ್
ಕ್ಲಿನಿಕಲ್ ಪ್ರಯೋಗಗಳು ೨-ಡೋಸ್ ವೇಳಾಪಟ್ಟಿಯನ್ನು
ಆಧರಿಸಿವೆ, ಇದನ್ನು ೨೮ ದಿನಗಳ ಅಂತರದಲ್ಲಿ
ನೀಡಲಾಗಿದೆ. ೨ ನೇ ಡೋಸ್
ಕೊಟ್ಟ ೧೪ ದಿನಗಳ ನಂತರ
ಲಸಿಕೆ ಪರಿಣಾಮಕಾರಿತ್ವವನ್ನು ನಿರ್ಧರಿಸಲಾಗುತ್ತದೆ’ ಎಂದು
ಹೈದರಾಬಾದ್ ಸಂಸ್ಥೆ ಹೇಳಿತು.
ಭಾರತದಲ್ಲಿ
ಪರೀಕ್ಷಿಸಲ್ಪಡುತ್ತಿರುವ
ಮೂರು ಕೋವಿಡ್ ಲಸಿಕೆಗಳಲ್ಲಿ ಒಂದಾಗಿರುವ ಕೊವಾಕ್ಸಿನ್ನ್ನು ೨೫
ಸ್ಥಳಗಳಲ್ಲಿ ನಡೆಯುತ್ತಿರುವ ಮೂರನೇ ಹಂತದ ಪ್ರಯೋಗಗಳಲ್ಲಿ ೨೬,೦೦೦ ಮಂದಿಗೆ
ನೀಡಲಾಗುವುದು ಎಂದು ಹೇಳಿಕೆ ತಿಳಿಸಿದೆ.
"ಹಂತ
೩ರ ಪ್ರಯೋಗಗಳು ಡಬಲ್ ಬ್ಲೈಂಡ್ ಮತ್ತು ಯಾದೃಚ್ಛಿಕವಾಗಿದ್ದು, ಅಲ್ಲಿ ಶೇಕಡಾ ೫೦ರಷ್ಟು ಮಂದಿ ಲಸಿಕೆ
ಪಡೆಯುತ್ತಾರೆ ಮತ್ತು ಶೇಕಡಾ ೫೦ ಮಂದಿ ಪ್ಲಸೀಬೊವನ್ನು
ಪಡೆಯುತ್ತಾರೆ’ ಎಂದು
ಸಂಸ್ಥೆ ಒತ್ತಿಹೇಳಿತು.
ಇದಕ್ಕೆ
ಮುನ್ನ ಶನಿವಾರ, ಅನಿಲ್ ವಿಜ್ ಅವರು ಟ್ವೀಟ್ ಮಾಡಿ "ನನಗೆ ಪರೀಕ್ಷೆಯಲ್ಲಿ ಕೊರೋನಾ ಪಾಸಿಟಿವ್ ಬಂದಿದೆ. ನನ್ನನ್ನು ಅಂಬಾಲಾ ಕಂಟೋನ್ಮೆಂಟ್ ಸಿವಿಲ್ ಹಾಸ್ಪಿಟಲ್ಗೆ ದಾಖಲಿಸಲಾಗಿದೆ.
ನನ್ನೊಂದಿಗೆ ನಿಕಟ ಸಂಪರ್ಕಕ್ಕೆ ಬಂದವರೆಲ್ಲರೂ ತಮ್ಮನ್ನು ಕರೋನಾ ಪರೀಕ್ಷೆಗೆ ಒಳಪಡಿಸಿಕೊಳ್ಳುವಂತೆ ಸೂಚಿಸಲಾಗಿದೆ’ ಎಂದು
ಟ್ವೀಟ್ ಮಾಡಿದ್ದರು. ಈ ಮೊದಲು ಅವರಿಗೆ
ಲಸಿಕೆಯ ಒಂದು ಪ್ರಯೋಗ ಪ್ರಮಾಣವನ್ನು ನೀಡಲಾಗಿತ್ತು.
ಈ
ಮಧ್ಯೆ, ಹೇಳಿಕೆಯೊಂದನ್ನು ಬಿಡುಗಡೆ ಮಾಡಿದ ಆರೋಗ್ಯ ಸಚಿವಾಲಯವು "ಲಸಿಕೆಯ ಎರಡನೇ ಡೋಸ್ ತೆಗೆದುಕೊಂಡ ಬಳಿಕ ನಿರ್ದಿಷ್ಟ ಸಂಖ್ಯೆಯ ದಿನಗಳು ಕಳೆದ ನಂತರವೇ ಮನುಷ್ಯನಲ್ಲಿ ಸೋಂಕಿನ ವಿರುದ್ಧದ ಪ್ರತಿಕಾಯಗಳು ನಿರ್ಮಾಣಗೊಳ್ಳುತ್ತವೆ. ಇದು ಎರಡು-ಡೋಸ್ ಲಸಿಕೆ. ಸದರಿ ಪ್ರಕರಣದಲ್ಲಿ ಲಸಿಕೆಯ ಒಂದು ಪ್ರಮಾಣವನ್ನು ಮಾತ್ರ ತೆಗೆದುಕೊಳ್ಳಲಾಗಿದೆ’ ಎಂದು
ತಿಳಿಸಿದೆ.
"ಭಾರತ್
ಬಯೋಟೆಕ್ ೮೦ ಕ್ಕೂ ಹೆಚ್ಚು
ದೇಶಗಳಿಗೆ ೪೦೦ ಕೋಟಿ (೪ ಬಿಲಿಯನ್) ಡೋಸ್ಗಳನ್ನು ಪೂರೈಸಿದೆ.
ಭಾರತದ ಜನರಿಗೆ ಸೂಕ್ತತೆಯನ್ನು ನಿರ್ಧರಿಸುವ ದೃಷ್ಟಿಯಿಂದ ಕೋವಿಡ್-೧೯ ಲಸಿಕೆಗಳಿಗಾಗಿ ಸುರಕ್ಷತೆಯ
ಅತ್ಯುತ್ತಮ ಟ್ರ್ಯಾಕ್ ವರದಿಯೊಂದಿಗೆ, ನಡೆದಿರುವ ಕೊವಾಕ್ಸಿನ್‌ನ ಹಂತ
-೩ರ ಪ್ರಯೋUಗಳು ಭಾರತದಲ್ಲಿ ನಡೆಸುತ್ತಿರುವ ಏಕೈಕ ಪರಿಣಾಮಕಾರಿ ಪ್ರಯೋಗವಾಗಿದೆ.
No comments:
Post a Comment