Wednesday, December 9, 2020

ಆತ್ಮ ನಿರ್ಭರ ಭಾರತ ರೋಜ್ಗಾರ್ ಯೋಜನೆಗೆ ೨೨,೮೧೦ ಕೋಟಿ ರೂ

 ಆತ್ಮ ನಿರ್ಭರ ಭಾರತ ರೋಜ್ಗಾರ್ ಯೋಜನೆಗೆ ೨೨,೮೧೦ ಕೋಟಿ ರೂ

ನವದೆಹಲಿ: ಕೋವಿಡ್ -೧೯ ಸೋಂಕಿನಿಂದಾಗಿ ನೆಲಕಚ್ಚಿರುವ ಆರ್ಥಿಕ ಸ್ಥಿತಿಗೆ ಪುನಃಶ್ಚೇತನ ನೀಡುವ ಸಲುವಾಗಿ ಘೋಷಿಸಲಾಗಿರುವ ಆತ್ಮ ನಿರ್ಭರ ಭಾರತ ರೋಜ್ಗಾರ್ ಹೊಸ ಉದ್ಯೋಗ ಯೋಜನೆಗಾಗಿ ೨೨,೮೧೦ ಕೋಟಿ ರೂಪಾಯಿಗಳ ವಿನಿಯೋಗಕ್ಕೆ ಕೇಂದ್ರ ಸಚಿವ ಸಂಪುಟವು 2020 ಡಿಸೆಂಬರ್ 09ರ ಬುಧವಾರ ಅನುಮೋದನೆ ನೀಡಿತು.

ಆತ್ಮ ನಿರ್ಭರ ಭಾರತ ರೋಜ್ಗಾರ್ ಯೋಜನೆ ಅಡಿಯಲ್ಲಿ, ವ್ಯವಹಾgದೋದ್ಯಮ ಘಟಕಗಳಿಂದ ಮಾಡುವ ಹೊಸ ನೇಮಕಾತಿಗಳ ನಿವೃತ್ತಿ ನಿಧಿಗೆ ಉದ್ಯೋಗಿ ಮತ್ತು ಉದ್ಯೋಗದಾತರ ಕೊಡುಗೆಯನ್ನು ಸರ್ಕಾರವೇ ಎರಡು ವರ್ಷಗಳ ಕಾಲ ಒದಗಿಸುತ್ತದೆ ಎಂದು ಕಾರ್ಮಿಕ ಸಚಿವ ಸಂತೋಷ್ ಗಂಗ್ವಾರ್ ಹೇಳಿದರು.

ಯೋಜನೆಯ ಮತ್ತು ೨೦೨೩ ರವರೆಗೆ ೨೨,೮೧೦ ಕೋಟಿ ರೂಪಾಯಿಗಳಾಗುತ್ತದೆ ಮತ್ತು ಯೋಜನೆಯಿಂದ ಸುಮಾರು ೫೮. ಲಕ್ಷ ನೌಕರರಿಗೆ ಅನುಕೂಲವಾಗಲಿದೆ ಎಂದು ಅವರು ನುಡಿದರು.

No comments:

Advertisement