ಡಾ. ಬಿಎಂ ಹೆಗ್ಡೆ, ಎಸ್ ಪಿಬಿ, ಶಿಂಜೋ ಅಬೆ, ಕಂಬಾರ: ಪದ್ಮ ಗೌರವ
ನವದೆಹಲಿ: ೨೦೨೧ನೇ ಸಾಲಿನ ಪದ್ಮ ಪ್ರಶಸ್ತಿಗಳಿಗೆ ಡಾ. ಬಿಎಂ ಹೆಗ್ಡೆ, ಗಾಯಕ ಎಸ್.ಪಿ. ಬಾಲಸುಬ್ರಹ್ಮಣ್ಯಂ, ಜಪಾನ್ ಪ್ರಧಾನಿ ಶಿಂಜೋ ಅಬೆ, ಸಾಹಿತಿ ಚಂದ್ರ ಶೇಖರ ಕಂಬಾರ ಸೇರಿದಂತೆ ಒಟ್ಟು 119 ಮಂದಿ 2021ರ ಸಾಲಿನ ‘ಪದ್ಮ’ ಗೌರವಕ್ಕೆ ಆಯ್ಕೆಯಾಗಿದ್ದಾರೆ.
2021 ಜನವರಿ
25ರ ಸೋಮವಾರ ‘ಪದ್ಮ’ ಪುರಸ್ಕೃತರ ಪಟ್ಟಿ ಬಿಡುಗಡೆಯಾಗಿದ್ದು ಏಳು ಜನರಿಗೆ ಪದ್ಮವಿಭೂಣ, ೧೦ ಜನರಿಗೆ ಪದ್ಮಭೂಷಣ ಹಾಗೂ ೧೦೨ ಜನರಿಗೆ
ಪದ್ಮಶ್ರೀ ಪ್ರಶಸ್ತಿಯ ಗೌರವ ಲಭಿಸಿದೆ.
ಪದ್ಮವಿಭೂಷಣ ಪ್ರಶಸ್ತಿ
* ಜಪಾನಿನ ಮಾಜಿ ಪ್ರಧಾನಿ ಶಿಂಜೊ ಅಬೆ
* ವೈದ್ಯಕೀಯ ಕ್ಷೇತ್ರದಲ್ಲಿ ಕರ್ನಾಟಕದ ಡಾ.ಬಿ.ಎಂ.ಹೆಗ್ಡೆ (ಡಾ.ಬೆಳ್ಳೆ ಮೋನಪ್ಪ ಹೆಗ್ಡೆ)
* ಗಾಯಕ ಎಸ್.ಪಿ.ಬಾಲಸುಬ್ರಹ್ಮಣ್ಯಂ (ಮರಣೋತ್ತರ)
* ವಿಜ್ಞಾನ ಮತ್ತು ಎಂಜಿನಿಯರಿಂಗ್ ಕ್ಷೇತ್ರದಲ್ಲಿ ನರಿಂದರ್ ಸಿಂಗ್ ಕಪಾನಿ (ಮರಣೋತ್ತರ)-ಅಮೆರಿಕ
* ಆಧ್ಯಾತ್ಮ: ಮೌಲಾನಾ ವಹೀದುದ್ದೀನ್ ಖಾನ್-ದೆಹಲಿ
* ಪುರಾತತ್ವ ಶಾಸ್ತ್ರ:
ಬಿ.ಬಿ.ಲಾಲ್-ದೆಹಲಿ
* ಕಲೆ: ಸುದರ್ಶನ್ ಸಾಹೋ-ಒಡಿಶಾ
ಪದ್ಮಭೂಷಣ ಪ್ರಶಸ್ತಿ
* ಕಲೆ: ಕೃಷ್ಣನ್ ನಾಯರ್ ಶಾಂತಾಕುಮಾರಿ ಚಿತ್ರಾ-ಕೇರಳ
* ಸಾರ್ವಜನಿಕ ಕ್ಷೇತ್ರ: ತರುಣ್ ಗೊಗೊಯ್ (ಮರಣೋತ್ತರ)-ಅಸ್ಸಾಂ
* ಸಾಹಿತ್ಯ ಮತ್ತು ಶಿಕ್ಷಣ: ಚಂದ್ರಶೇಖರ ಕಂಬಾರ- ಕರ್ನಾಟಕ
* ಸಾರ್ವಜನಿಕ ಕ್ಷೇತ್ರ:
ಸುಮಿತ್ರಾ ಮಹಾಜನ್-ಮಧ್ಯಪ್ರದೇಶ
* ನಾಗರಿಕ ಸೇವೆ:
ನೃಪೇಂದ್ರ ಮಿಶ್ರಾ-ಉತ್ತರ ಪ್ರದೇಶ
* ಸಾರ್ವಜನಿಕ ಕ್ಷೇತ್ರ:
ರಾಮ್ ವಿಲಾಸ್ ಪಾಸ್ವಾನ್(ಮರಣೋತ್ತರ)- ಬಿಹಾರ
* ಸಾರ್ವಜನಿಕ ಕ್ಷೇತ್ರ:
ಕೇಶುಭಾಯ್ ಪಟೇಲ್(ಮರಣೋತ್ತರ)-ಗುಜರಾತ್
* ಆಧ್ಯಾತ್ಮ: ಕಲ್ಬೆ ಸಾದಿಕ್(ಮರಣೋತ್ತರ)-ಉತ್ತರ ಪ್ರದೇಶ
* ವಾಣಿಜ್ಯ ಮತ್ತು ಕೈಗಾರಿಕೆ:
ರಜನಿಕಾಂತ್ ದೇವಿದಾಸ್ ಶ್ರಾಫ್- ಮಹಾರಾಷ್ಟ್ರ
* ಸಾರ್ವಜನಿಕ ಕ್ಷೇತ್ರ:
ತರ್ಲೋಚನ್ ಸಿಂಗ್- ಹರಿಯಾಣ
ಪದ್ಮಶ್ರೀ ಪ್ರಶಸ್ತಿ ಪಡೆದ ಕರ್ನಾಟಕದವರು
* ಮಾತಾ ಬಿ.ಮಂಜಮ್ಮ ಜೋಗತಿ- ಕಲೆ
* ರಂಗಸ್ವಾಮಿ ಲಕ್ಷ್ಮಿನಾರಾಯಣ ಕಶ್ಯಪ್- ಸಾಹಿತ್ಯ ಮತ್ತು ಶಿಕ್ಷಣ
* ಕೆ. ವೈ. ವೆಂಕಟೇಶ್- ಕ್ರೀಡೆ
No comments:
Post a Comment