Friday, February 5, 2021

ರೈತ ಪ್ರತಿಭಟನೆಯ ‘ಟೂಲ್ ಕಿಟ್’ ಹಿಂದೆ ಖಲಿಸ್ತಾನಿ.. !

 ರೈತ ಪ್ರತಿಭಟನೆಯ ‘ಟೂಲ್ ಕಿಟ್’ ಹಿಂದೆ ಖಲಿಸ್ತಾನಿ.. !

ನವದೆಹಲಿ: ಹದಿಹರೆಯದ ಸ್ವೀಡಿಷ್ ಪರಿಸರ ಕಾರ್ಯಕರ್ತೆ ಗ್ರೆಟಾ ಥನ್ಬರ್ಗ್ ಅವರು ಟ್ವೀಟ್ ಮಾಡಿ ನಂತರ ಅಳಿಸಿರುವ ರೈತರ ಪ್ರತಿಭಟನೆಯ ವಿವಾದಾತ್ಮಕ ಟೂಲ್ಕಿಟ್ ನ ಸೃಷ್ಟಿಕರ್ತನನ್ನು ಮೊ ಧಲಿವಾಲ್ ಎಂದು ಗುರುತಿಸಲಾಗಿದೆ ಎಂದು ವರದಿಗಳು ತಿಳಿಸಿವೆ.

ಮೂಲಗಳ ಪ್ರಕಾರ, ಧಲಿವಾಲ್ ಸ್ಥಾಪಿಸಿದ ಪೊಯೆಟಿಕ್ ಜಸ್ಟೀಸ್ ಫೌಂಡೇಶನ್, ಗ್ರೇಟಾ ಥನ್ಬರ್ಗ್ಗಾಗಿ ರೈತರ ಪ್ರತಿಭಟನೆಯ ಕುರಿತು ಟೂಲ್ಕಿಟ್ ರಚಿಸಿತ್ತು.

ಮೊ ಧಲಿವಾಲ್, ಸ್ಕೈರಾಕೆಟ್ ಎಂಬ ವ್ಯಾಂಕೋವರ್ ಮೂಲದ ಡಿಜಿಟಲ್ ಬ್ರ್ಯಾಂಡಿಂಗ್ ಸೃಜನಶೀಲ ಏಜೆನ್ಸಿಯ ಕಾರ್ಯತಂತ್ರದ ಸ್ಥಾಪಕ ಮತ್ತು ನಿರ್ದೇಶಕ. ಅವರ ಸಾಮಾಜಿಕ ಮಾಧ್ಯಮ ಪ್ರೊಫೈಲ್ಗಳ ಪ್ರಕಾರ, ಅವರು ಬ್ರಿಟಿಷ್ ಕೊಲಂಬಿಯಾದ ಫ್ರೇಸರ್ ವ್ಯಾಲಿ ವಿಶ್ವವಿದ್ಯಾಲಯದ ಹಳೆಯ ವಿದ್ಯಾರ್ಥಿಯಾಗಿದ್ದು, ಅಲ್ಲಿಂದ ತಮ್ಮ ಎರಡು ವರ್ಷಗಳ ಬಿಸಿನೆಸ್ ಅಡ್ಮಿನಿಸ್ಟ್ರೇಷನ್ ಡಿಪ್ಲೊಮಾ ಕೋರ್ಸ್ ಮಾಡಿದ್ದರು.

ವಾರದ ಆರಂಭದಲ್ಲಿ ಗ್ರೇಟಾ ತನ್ನ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡ ವಿವಾದಾತ್ಮಕಟೂಲ್ಕಿಟ್ನ್ನು ರಚಿಸಿದ ಆರೋಪಕ್ಕೆ ಗುರಿಯಾಗಿರುವ  ಪೊಯೆಟಿಕ್ ಜಸ್ಟೀಸ್ ಫೌಂಡೇಶನ್ನಿನ  ಸಹ-ಸಂಸ್ಥಾಪಕ ಧಲಿವಾಲ್.

ಧಲಿವಾಲ್ ಈ ರೀತಿ ಸುದ್ದಿಯಾಗಿರುವುದು ಇದೇ ಮೊದಲಲ್ಲ. ಜಗ್ಮೀತ್ ಸಿಂಗ್ ಅವರ ೨೦೧೭ ಹೊಸ ಡೆಮಾಕ್ರಟಿಕ್ ಪಕ್ಷದ ನಾಯಕತ್ವ ಅಭಿಯಾನಕ್ಕಾಗಿಪ್ರೀತಿ ಮತ್ತು ಧೈರ್ಯಎಂಬ ಘೋಷಣೆಯೊಂದಿಗೆ ಬಂದಾಗ ಕೆನಡಾದಲ್ಲಿ ಧಲಿವಾಲ್ ಹೆಸರು ಅದರ ಹಿಂದೆ ಕೇಳಿ ಬಂದಿತ್ತು.

ಇದಕ್ಕೂ ಮುನ್ನ ೨೦೨೦ ಸೆಪ್ಟೆಂಬರಿನಲ್ಲಿ ಧಲಿವಾಲ್ ತಮ್ಮ ಫೇಸ್ಬುಕ್ ಖಾತೆಯಲ್ಲಿ  ‘ನಾನು ಖಲಿಸ್ತಾನಿ. ನನ್ನ ಬಗ್ಗೆ ಇದು ನಿಮಗೆ ತಿಳಿಯದಿರಬಹುದು.  ಏಕೆಂದರೆ ಖಲಿಸ್ತಾನ್ ಒಂದು ಕಲ್ಪನೆ. ಖಲಿಸ್ತಾನ್ ಒಂದು ಜೀವಂತ, ಉಸಿರಿರುವ ಚಳುವಳಿಯಾಗಿದೆಎಂದು ಬರೆದಿದ್ದರು.೨೦೨೦ ಸೆಪ್ಟೆಂಬರ್ ೧೭ ರಂದು ಒಟ್ಟಾವಾ ಮೂಲದ ಸಾರ್ವಜನಿಕ ನೀತಿ ಥಿಂಕ್-ಟ್ಯಾಂಕ್ ಮ್ಯಾಕ್ಡೊನಾಲ್ಡ್-ಲಾರಿಯರ್ ಇನ್ಸ್ಟಿಟ್ಯೂಟ್ ವಿರುದ್ಧಖಲಿಸ್ತಾನ್:ಪಾಕಿಸ್ತಾನಕ್ಕಾಗಿ ಒಂದು ಯೋಜನೆ’(ಖಲಿಸ್ತಾನ್; ಎ ಪ್ರೊಜೆಕ್ಟ್ ಫಾರ್ ಪಾಕಿಸ್ತಾನ್’ ಎಂಬ ಶೀರ್ಷಿಕೆಯ ವರದಿಯನ್ನು ಪ್ರಕಟಿಸಲು ಅರ್ಜಿಗೆ ಸಹಿ ಹಾಕುವಂತೆ ಜನರನ್ನು ಒತ್ತಾಯಿಸಿದ್ದ ಮೊ ಧಲಿವಾಲ್ ಫೇಸ್ ಬುಕ್ ನಲ್ಲಿ ಬರೆದುಕೊಂಡಿದ್ದ ಮಾತುಗಳು ಮೇಲಿನವು ಎಂದು ವರದಿ ತಿಳಿಸಿದೆ.

No comments:

Advertisement