ಬೆಂಗಳೂರು: ಕೊರೋನಾ ವೈರಸ್ಸಿನ ಒಂದನೇ ಅಲೆಯಾಯಿತು, ಎರಡನೇ ಅಲೆ ಕಾಡುತ್ತಿದೆ, ಬೆನ್ನಲ್ಲೇ, ಇದೀಗ ಮೂರನೇ ಅಲೆಯ ಭೀತಿ ಬೇರೆ ತಲೆದೋರುತ್ತಿದೆ. ಇಂತಹ ಹೊತ್ತಿನಲ್ಲಿ ಹೊಸ ಮಾದರಿಯ ಪರಿಣಾಮಕಾರಿ ಲಸಿಕೆ ತಯಾರಿಯತ್ತ ಬೆಂಗಳೂರಿನ ಮುಂಚೂಣಿಯ ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್ಸಿ) ಗಮನ ಹರಿಸಿದೆ.
ಕೋವಿಡ್-19 ವಿರುದ್ಧದ ಹೋರಾಟದ ಮೇಲೆ ಲಸಿಕೆಗಳ ಕೊರತೆಯು ಪರಿಣಾಮ ಬೀರುತ್ತಿರುವ ಹಿನ್ನೆಲೆಯಲ್ಲಿ ಭಾರತೀಯ ವಿಜ್ಞಾನ ಸಂಸ್ಥೆಯು ಭಾರತದ ಸ್ಥಿತಿಗತಿಗೆ ಹೊಂದಿಕೊಳ್ಳುವಂತಹ ಲಸಿಕೆಯನ್ನು ಪ್ರಯೋಗಾಲಯದಲ್ಲಿ ಅಭಿವೃದ್ಧಿ ಪಡಿಸುವ ಕಾರ್ಯಕ್ಕೆ ಕೈಹಾಕಿದೆ. ಇದು
ಹೆಚ್ಚು ಅಪಾಯಕಾರಿಯಾದ ಕೊರೋನಾವೈರಸ್ ರೂಪಾಂತರಗಳ ವಿರುದ್ಧ ಹೆಚ್ಚು ಪರಿಣಾಮಕಾರಿಯಾಗಬಲ್ಲುದು ಎಂಬ ವಿಶ್ವಾಸವನ್ನು ಸಂಸ್ಥೆಯ ವಿಜ್ಞಾನಿಗಳು ಹೊಂದಿದ್ದಾರೆ.
‘ಸಂಸ್ಥೆಯ ಆಣ್ವಿಕ ಜೀವ
ಭೌತಶಾಸ್ತ್ರ ಘಟಕದ (ಮಾಲೆಕ್ಯುಲರ್ ಬಯೋ
ಫಿಸಿಕ್ಸ್) ವಿಜ್ಞಾನಿಗಳು ಕೊರೋನಾವೈರಸ್ ಸಾಂಕ್ರಾಮಿಕ ರೋಗವನ್ನು ಎದುರಿಸಲು ಉಪಯುಕ್ತವಾಗಬಲ್ಲ ಅಣುಗಳನ್ನು ಗುರುತಿಸಿದ್ದಾರೆ.
ಈ ಅಣುಗಳು ಹಾಲಿ ಲಸಿಕೆಗಳಿಗಿಂತ ಹೆಚ್ಚಿನ ಪ್ರಮಾಣದಲ್ಲಿ ರೋಗಾಣುಗಳನ್ನು ಸ್ಥಗಿತಗೊಳಿಸಬಲ್ಲ
ಉನ್ನತ ಮಟ್ಟದ ಪ್ರತಿಕಾಯಗಳನ್ನು ದೇಹದಲ್ಲಿ ಉತ್ಪಾದಿಸುತ್ತವೆ’ ಎನ್ನುತ್ತಾರೆ ವಿಜ್ಞಾನಿಗಳು.
"ಇದು ತಟಸ್ಥಗೊಳಿಸುವ ಪ್ರತಿಕಾಯಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಉತ್ಪಾದಿಸುತ್ತದೆ. ಹೀಗೆ ಹೆಚ್ಚಿನ ಪ್ರಮಾಣದಲ್ಲಿ ಪ್ರತಿಕಾಯಗಳನ್ನು ಉತ್ಪಾದಿಸುವುದರಿಂದ ವೈರಸ್ಸಿನ ಬಲ ಕುಂದುತ್ತದೆ’ ಎನ್ನುತ್ತಾರೆ ಮಾಲೆಕ್ಯುಲರ್ ಬಯೋ ಫಿಸಿಕ್ಸ್ ಪ್ರಾಧ್ಯಾಪಕ ರಾಘವನ್ ವರದರಾಜನ್.
ಇಲಿಗಳು ಮತ್ತು ಕಿರುಕಡಿಗಗಳು (ಹ್ಯಾಮ್ಸ್ಟರ್) ಇತ್ಯಾದಿ ಪ್ರಾಣಿಗಳ ಮೇಲೆ ನಡೆಸಿದ ಪ್ರಯೋಗಗಳಲ್ಲಿ, ಅಣುಗಳು ಪ್ರತಿಕಾಯಗಳ ಪ್ರಮಾಣವನ್ನು ಅಗಾಧ
ಮಟ್ಟದಲ್ಲಿ ಅಭಿವೃದ್ಧಿಪಡಿಸಿರುವುದು ಸಾಬೀತಾಗಿದೆ. ಇದು ಚೇತರಿಸಿಕೊಂಡಿರುವ ಕೋವಿಡ್ -19 ರೋಗಿಗಳಲ್ಲಿ ಅಭಿವೃದ್ಧಿಯಾಗಿರುವ ಪ್ರತಿಕಾಯಗಳ ಪ್ರಮಾಣಕ್ಕೆ ಹೋಲಿಸಿದರೆ 8 ಪಟ್ಟು
ಹೆಚ್ಚಿನದು.
“ವೈರಸ್ನ ಹೊಸ ರೂಪಾಂತರಗಳು ಇದ್ದಲ್ಲಿ, ಆಗಾಗ್ಗೆ ಸೋಂಕನ್ನು ತಡೆಗಟ್ಟಲು ತಟಸ್ಥಗೊಳಿಸುವ ಪ್ರತಿಕಾಯಗಳ ಸಾಮರ್ಥ್ಯವು ಕಡಿಮೆಯಾಗುತ್ತದೆ. ನಮ್ಮ ಲಸಿಕೆಯಲ್ಲಿ ಕೂಡಾ ಇದು
ಸಂಭವಿಸುತ್ತದೆ ಎಂದು ನನಗೆ ಖಾತ್ರಿಯಿದೆ. ಆದರೆ ಪ್ರಯೋಜನ ಏನೆಂದರೆ, ನೀವು ಪ್ರತಿಕಾಯಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಉತ್ಪಾದಿಸಿದರೆ, ಅವುಗಳ
ಸಾಮರ್ಥ್ಯ ಸ್ವಲ್ಪ ಕುಗ್ಗಿದರೂ, ತೀವ್ರವಾದ ಸೋಂಕು
ತಡೆಗಟ್ಟಲು ಅಗತ್ಯವಿರುವುದಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಈ ಪ್ರತಿಕಾಯಗಳು ಇರುತ್ತವೆ’ ಎನ್ನುತ್ತಾರೆ ವರದರಾಜನ್.
ಈ ಆಣ್ವಿಕ ಲಸಿಕೆ ಭಾರತೀಯ ಪರಿಸ್ಥಿತಿಗಳಿಗೆ ಹೆಚ್ಚು ಸೂಕ್ತವಾಗಿದೆ, ಏಕೆಂದರೆ ಇದು ‘ಬೆಚ್ಚಗಿನ’ ಲಸಿಕೆ, ಅಂದರೆ ಇದನ್ನು ಕೋಣೆಯ ಉಷ್ಣಾಂಶದಲ್ಲಿ ಸಂಗ್ರಹಿಸಿ ಇಡಬಹುದು. ಪ್ರಸ್ತುತ ಬಳಕೆಯಲ್ಲಿರುವ ಲಸಿಕೆಗಳಿಗೆ ವಿಸ್ತಾರವಾದ ಶೈತ್ಯಾಗಾರ ಸರಪಳಿಗಳು (ಕೋಲ್ಡ್ ಸ್ಟೋರೇಜ್ ಚೈನ್) ಬೇಕಾಗುತ್ತವೆ. ಶೈತ್ಯಾಗಾರ ಸವಲತ್ತು ಇಲ್ಲದೇ ಇದ್ದಲ್ಲಿ ಈ ಲಸಿಕೆಗಳು ವ್ಯರ್ಥವಾಗುತ್ತವೆ.
ವಾಸ್ತವವಾಗಿ, ಪ್ರೊಫೆಸರ್ ವರದರಾಜನ್ ಅವರ ಲ್ಯಾಬ್ ಕಳೆದ ನಾಲ್ಕು ವರ್ಷಗಳಿಂದ ಇನ್ಫ್ಲುಯೆನ್ಸ ಲಸಿಕೆಯನ್ನು ಅಭಿವೃದ್ಧಿಪಡಿಸುವತ್ತ ಗಮನ ಹರಿಸಿತ್ತು, ಆದರೆ ಜಗತ್ತು ಎದುರಿಸುತ್ತಿರುವ ಸಾಂಕ್ರಾಮಿಕ ರೋಗದ ವಿರುದ್ಧ ಲಸಿಕೆ ಕಂಡುಹಿಡಿಯಲು ಕಳೆದ ವರ್ಷ ಗಮನ ಹರಿಸಿತು.
ಸೆಪ್ಟೆಂಬರ್ನಲ್ಲಿ ಅವರು ಉತ್ತಮ ಲಸಿಕೆ ಅಭ್ಯರ್ಥಿಗಳನ್ನು ಗುರುತಿಸಿದ್ದರೂ, ಹಣದ ಕೊರತೆಯಿಂದಾಗಿ ಎಂಟು ತಿಂಗಳ ಕಾಲ ಅಭಿವೃದ್ಧಿ ಕೆಲಸ ಸ್ಥಗಿತಗೊಂಡಿತ್ತು - ಬಳಿಕ
ಬಹುಶಃ ಕೋವಿಡ್ -19ನ್ನು
ನಾವು ಜಯಿಸಿದ್ದೇವೆ ಎಂಬ
ಭಾವನೆ ಬಂದದ್ದರಿಂದ , ಮತ್ತೊಂದು ಲಸಿಕೆ ಅಭ್ಯರ್ಥಿಯ ಅಗತ್ಯತೆಯ ಬಗ್ಗೆ ಹೆಚ್ಚು ಯೋಚಿಸಿರಲಿಲ್ಲ. ಆದರೆ ಹೊಸ ಎರಡನೇ ಅಲೆಯ
ಅಬ್ಬರದೊಂದಿಗೆ
ಈ ನಿಟ್ಟಿನಲ್ಲಿ ಹೆಚ್ಚಿನ ಹಣ ತೊಡಗಿಸಲಾಗಿದೆ ಮತ್ತು ಕ್ಲಿನಿಕಲ್ ಅಭಿವೃದ್ಧಿ ಮತ್ತೆ ಪ್ರಾರಂಭವಾಗಿದೆ.
ಲಸಿಕೆಯ ಕ್ಲಿನಿಕಲ್ ಅಭಿವೃದ್ಧಿಗೆ ಕೇವಲ ಐದು-ಆರು ತಿಂಗಳುಗಳು ಸಾಕಾಗಬಹುದು. ಆದರೆ ಅದರ ನಂತರದ ಮಾನವ ಪ್ರಯೋಗಗಳು ಇನ್ನೂ ನಾಲ್ಕು ತಿಂಗಳುಗಳನ್ನು ತೆಗೆದುಕೊಳ್ಳಬಹುದು.
"ಈಗ ನಾವು ಲಸಿಕೆ ಅಭ್ಯರ್ಥಿಯನ್ನು ಸ್ಥಾಪಿಸಿದ್ದೇವೆ, ನಾವು ಪ್ರಕ್ರಿಯೆ ಅಭಿವೃದ್ಧಿ ಎಂದು ಕರೆಯುವದನ್ನು ಮಾಡಬೇಕು, ಅದನ್ನು ಹೊರಗುತ್ತಿಗೆ ನೀಡಬೇಕಾಗಿದೆ. ಆದ್ದರಿಂದ ಇದನ್ನು ಸ್ವಲ್ಪ ದೊಡ್ಡ ಪ್ರಮಾಣದಲ್ಲಿ ಉತ್ಪಾದಿಸಬೇಕಾಗಿದೆ, ಮತ್ತು ನಂತರ ಪ್ರಕ್ರಿಯೆಯ ಅಭಿವೃದ್ಧಿಯನ್ನು ಪೂರ್ಣಗೊಳಿಸಿದ ಆ ಸೂತ್ರೀಕರಣದೊಂದಿಗೆ, ನಾವು ಸಣ್ಣ ಪ್ರಾಣಿಗಳಲ್ಲಿ ಸುರಕ್ಷತೆ ಮತ್ತು ವಿಷತ್ವ ಅಧ್ಯಯನಗಳನ್ನು ಮಾಡಬೇಕು. ಬಳಿಕ ನಾವು ಮಾನವರ
ಮೇಲೆ ಕ್ಲಿನಿಕಲ್ ಟ್ರಯಲ್ (ಮಾನವರ ಮೇಲೆ) ಪ್ರಕ್ರಿಯೆಯನ್ನು ಪ್ರಾರಂಭಿಸಬೇಕು "ಎಂದು ಪ್ರೊ. ವರದರಾಜನ್ ಹೇಳಿದರು.
ಒಟ್ಟಾರೆಯಾಗಿ, ಈ ‘ಆಣ್ವಿಕ ಲಸಿಕೆ’ ಮಾರುಕಟ್ಟೆಯಲ್ಲಿ ಲಭ್ಯವಾಗಲು ಇನ್ನೂ ಒಂದು ವರ್ಷ ತೆಗೆದುಕೊಳ್ಳಬಹುದು.
No comments:
Post a Comment