ಶ್ರಿ ಬಾಲಾಜಿ ಕೃಪಾ ಬಡಾವಣೆಯಲ್ಲಿ ಸ್ವಾತಂತ್ರ್ಯೋತ್ಸವ
ಬೆಂಗಳೂರು: ಬೆಂಗಳೂರು ರಾಮಕೃಷ್ಣ ಹೆಗಡೆ ನಗರದ ಶ್ರೀ ಬಾಲಾಜಿ ಕೃಪಾ ಬಡಾವಣೆಯಲ್ಲಿ ಬಾಲಾಜಿ ಕೃಪಾ ಬಡಾವಣೆ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ 2021 ಆಗಸ್ಟ್ 15ರ ಭಾನುವಾರ ಸರಳವಾಗಿ 75ನೇ ಸ್ವಾತಂತ್ರ್ಯೋತ್ಸವವನ್ನು ಆಚರಿಸಲಾಯಿತು.
ಬಡಾವಣೆಯ ಹಿರಿಯ ಸದಸ್ಯ ಮೊಹಮ್ಮದ್ ಅಹ್ಮದ್ ಶರೀಫ್ ಅವರು ಧ್ವಜಾರೋಹಣ ನೆರವೇರಿಸಿ ಸ್ವಾತಂತ್ರ್ಯ ಲಭಿಸುವುದಕ್ಕೆ ಮುನ್ನ ಭಾರತದ ಸ್ಥಿತಿಗತಿ ಬಗ್ಗೆ ಮಾತನಾಡಿದರು. ಸಂಘದ ಅಧ್ಯಕ್ಷ ಶಿವಪ್ಪ ಶಾಂತಪ್ಪನವರ್ ಅವರು ಸ್ವಾತಂತ್ರ್ಯಾನಂತರದ ಭಾರತದ ಸಾಧನೆಯನ್ನು ವಿವರಿಸಿದರು.
ಸ್ವಾತಂತ್ರ್ಯೋತ್ಸವದ ಅಂಗವಾಗಿ ಬಡಾವಣೆಯ ಹಿರಿಯ ಸದಸ್ಯರಾದ ಶರೀಫ್, ಚೌಡ ರೆಡ್ಡಿ, ಎಚ್.ವಿ. ಉದಯಶಂಕರ್ ಹಾಗೂ ಅಧ್ಯಕ್ಷ ಶಿವಪ್ಪ ಶಾಂತಪ್ಪನವರ್ ಬಿದಿರಿನ ಗಿಡಗಳನ್ನು ಬಡಾವಣೆಯ ಉದ್ಯಾನದಲ್ಲಿ ನೆಟ್ಟರು. ಕಾರ್ಯದರ್ಶಿ ನೆತ್ರಕೆರೆ ಉದಯಶಂಕರ ಕಾರ್ಯಕ್ರಮ ನಿರ್ವಹಿಸಿದರು.
No comments:
Post a Comment