ಭಾರತಕ್ಕೆ ಮತ್ತೆ ಭುವನ ಸುಂದರಿ ಪಟ್ಟ:
ನವದೆಹಲಿ: 21 ವರ್ಷಗಳ ನಂತರ 2021ರ ಡಿಸೆಂಬರ್ 13ರ
ಸೋಮವಾರ ಭಾರತಕ್ಕೆ
ಭುವನ ಸುಂದರಿ ಪಟ್ಟ ಪುನಃ ಒಲಿಯಿತು. ಪಂಜಾಬ್ ಮೂಲದ 21ರ ಹರೆಯದ ಸುಂದರಿ ಹರ್ನಾಜ್ ಕೌರ್ ಸಂಧು, 70ನೇ 'ಮಿಸ್ ಯುನಿವರ್ಸ್' ಕಿರೀಟ ಮುಡಿಗೇರಿಸಿಕೊಂಡರು.
ಈ ಹಿಂದೆ ಎರಡು ಬಾರಿ ಭಾರತಕ್ಕೆ ಭುವನ ಸುಂದರಿ ಪಟ್ಟ ಒಲಿದಿತ್ತು. 2000ನೇ ಇಸವಿಯಲ್ಲಿ ಲಾರಾ ದತ್ತ ಮತ್ತು 1994ರಲ್ಲಿ ಸುಶ್ಮಿತಾ ಸೆನ್ ಭುವನ ಸುಂದರಿ
ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದರು.
70ನೇ ಮಿಸ್ ಯುನಿವರ್ಸ್ ಸ್ಪರ್ಧೆಯನ್ನು ಇಸ್ರೇಲ್ನ ಇಲಾಟ್ನಲ್ಲಿ ಆಯೋಜಿಸಲಾಗಿತ್ತು..
ಪಂಜಾಬಿನ ಚಂಡೀಗಡ ಮೂಲದ ರೂಪದರ್ಶಿ ಹರ್ನಾಜ್, ಸಾರ್ವಜನಿಕ ಆಡಳಿತದಲ್ಲಿ ಸ್ನಾತಕೋತ್ತರ ಪದವಿ ವಿದ್ಯಾರ್ಥಿನಿಯಾಗಿದ್ದಾರೆ.
ವಿಡಿಯೋ ವೀಕ್ಷಿಸಲು ಕೆಳಗೆ ಕ್ಲಿಕ್ ಮಾಡಿರಿ:
No comments:
Post a Comment