ಚೆಸ್ ಪಂದ್ಯ ಉದ್ಘಾಟನೆಗೆ ಸುಂದರ ಗೌರವ
ಮಹಾಬಲಿಪುರಂ, ಚೆನ್ನೈ (ತಮಿಳುನಾಡು): ೪೪ನೇ ಫಿಡೆ ಚೆಸ್ ಒಲಂಪಿಯಾಡನ್ನು (44th FIDE Chess Olympiad) ಜುಲೈ ೨೦೨೨ ಜುಲೈ ೨೮ರ ಗುರುವಾರ ತಮಿಳುನಾಡಿನ ಚೆನ್ನೈಗೆ ೬೦ ಕಿಮೀ ದಕ್ಷಿಣಕ್ಕೆ ಇರುವ ಮಹಾಬಲಿಪುರಂನ ನೆಹರೂ ಒಳಾಂಗಣ ಕ್ರೀಡಾಂಗಣದಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ, ತಮಿಳುನಾಡಿನ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಉಪಸ್ಥಿತಿಯಲ್ಲಿ ಸಂಭ್ರಮದೊಂದಿಗೆ ಉದ್ಘಾಟಿಸಲಾಯಿತು. ಪ್ರಮುಖ ತಂಡಗಳ ಪಥ ಸಂಚಲನ, ನೃತ್ಯ ಸಂಗೀತದ ಮೇಳೈಸುವಿಕೆ ಕಾರ್ಯಕ್ರಮಕ್ಕೆ ವಿಶೇಷ ಮೆರುಗು ನೀಡಿತು.
ಈ ಒಲಂಪಿಯಾಡಿನ ಓಪನ್ ವಿಭಾಗದಲ್ಲಿ ೧೮೭ ತಂಡಗಳು ಹ್ಯಾಮಿಲ್ಟನ್ -ರಸೆಲ್
ಕಪ್ ಗಾಗಿ ಹಾಗೂ ಮಹಿಳೆಯರ ವಿಭಾಗದ ೧೬೨ ತಂಡಗಳು ವೆರಾ ಮೆಂಚಿಕ್ ಕಪ್ ಸಲುವಾಗಿ ಸೆಣಸಲಿವೆ.
ಸುಮಾರು ಒಂದು ತಿಂಗಳ ಕಾಲ ನಡೆಯಲಿರುವ ಒಲಂಪಿಯಾಡಿಗೆ ಮಹಾಬಲಿಪುರಂನ ಜಿಲ್ಲಾಧಿಕಾರಿಯಾಗಿರುವ
(ಡಿಸ್ಟ್ರಿಕ್ಟ್ ಕಲೆಕ್ಟರ್) ಕವಿತಾ ರಾಮ್ ಸ್ವತಃ ಸುಂದರವಾದ ನೃತ್ಯ ಸಂಯೋಜನೆ ಮೂಲಕ ಗೌರವ ಸಲ್ಲಿಸುವ
ವ್ಯವಸ್ಥೆ ಮಾಡಿದ್ದರು.
ಆ ಸುಂದರವಾದ ನೃತ್ಯ ಸಂಯೋಜನೆಯ ತುಣಕು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಆ ಸುಂದರವಾದ ʼಚದುರಂಗದಾಟʼದ ಪುಟ್ಟ ವಿಡಿಯೋವನ್ನು ಕ್ಲಿಕ್ ಮಾಡಿ ಕೆಳಗೆ ನೋಡಿರಿ.
No comments:
Post a Comment