ಭವಿಷ್ಯ ನಿಧಿ ಪಿಂಚಣಿ ಪ್ರಕರಣ: ಆಗಸ್ಟ್ 10ಕ್ಕೆ ಮುಂದಿನ ವಿಚಾರಣೆ
ನವದೆಹಲಿ: ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ (ಇಪಿಎಫ್‌ಒ) ಸಲ್ಲಿಸಿದ್ದ ಮೇಲ್ಮನವಿ ಮತ್ತು 1995ರ ನೌಕರರ ಭವಿಷ್ಯ ನಿಧಿ ಕಾಯ್ದೆ ತಿದ್ದುಪಡಿಗೆ ಸಂಬಂಧಿಸಿದಂತೆ ಸಲ್ಲಿಕೆಯಾದ 67 ಅರ್ಜಿಗಳ ವಿಚಾರಣೆಯನ್ನು ಸುಪ್ರೀಂಕೋರ್ಟ್ 2022 ಆಗಸ್ಟ್ 05ರ ಶುಕ್ರವಾರ ಮುಂದೂಡಿದ್ದು, ಮುಂದಿನ ವಿಚಾರಣೆಯನ್ನು 2022 ಆಗಸ್ಟ್ 10ರ ಬುಧವಾರ ಮತ್ತೆ ಕೈಗೆತ್ತಿಕೊಳ್ಳಲಿದೆ.
ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳಾದ ಯು.ಯು. ಲಲಿತ್, ಅನಿರುದ್ಧ
ಬೋಸ್ ಮತ್ತು ಸುಧಾಂಶು ಧುಲಿಯಾ ಅವರನ್ನು ಒಳಗೊಂಡಿರುವ ತ್ರಿಸದಸ್ಯ ಪೀಠವು ಪ್ರಕರಣದ ವಿಚಾರಣೆ ನಡೆಸುತ್ತಿದ್ದು
ಇಪಿಎಫ್ ಒ ಮತ್ತು ಪಿಂಚಣಿದಾರರ ಪರ ವಕೀಲರ ವಾದಗಳನ್ನು ಈಗಾಗಲೇ ಆಲಿಸಿದೆ.
ಶುಕ್ರವಾರ ನಡೆಯಬೇಕಾಗಿದ್ದ ವಿಚಾರಣೆಯನ್ನು ಪೀಠವು ಬುಧವಾರಕ್ಕೆ ಮುಂದೂಡಿದೆ.
ನೌಕರರ ಭವಿಷ್ಯನಿಧಿ (ಇಪಿಎಸ್ 95) ಕಾಯ್ದೆಯ ಅಡಿ ಕಡಿಮೆ ಪಿಂಚಣಿ
ನೀಡಲಾಗಿದೆ ಎಂದು 2014ರಲ್ಲಿ ನಿವೃತ್ತ ನೌಕರ ಆರ್.ಸಿ. ಗುಪ್ತ ನ್ಯಾಯಾಲಯದ ಮೊರೆ ಹೋಗಿದ್ದರು. ಅವರ
ಅರ್ಜಿಯ ವಿಚಾರಣೆ ನಡೆಸಿದ್ದ ನ್ಯಾಯಾಲಯ ಗುಪ್ತ ಅವರಿಗೆ ಮಾಸಿಕ 28,000 ರೂಪಾಯಿ ಪಿಂಚಣಿ ನೀಡಬೇಕೆಂದು
2016ರಲ್ಲಿ ಆದೇಶ ನೀಡಿತ್ತು.
ಈ ಪ್ರಕರಣದ ಬಳಿಕ ಹಲವಾರು ಮಂದಿ ಪಿಂಚಣಿ ವಿಚಾರವಾಗಿ ಕೋರ್ಟ್ ಮೆಟ್ಟಲೇರಿದ್ದರು.
ಕರ್ನಾಟಕ ಹೈಕೋರ್ಟ್ ಕೂಡ ಪಿಂಚಣಿದಾರರ ಪರವಾಗಿ ತೀರ್ಪು ನೀಡಿತ್ತು. ಅನೇಕ ಪ್ರಕರಣಗಳಲ್ಲಿ ಪಿಂಚಣಿದಾರರ
ಪರವಾಗಿ ಆದೇಶಗಳು ಬಂದಿದ್ದ ಹಿನ್ನೆಲೆಯಲ್ಲಿ ನೌಕರರ ಭವಿಷ್ಯನಿಧಿ ಸಂಸ್ಥೆ ಸುಪ್ರೀಂಕೋರ್ಟಿಗೆ ಮೇಲ್ಮನವಿ
ಸಲ್ಲಿಸಿದ್ದು, ಕೋರ್ಟ್ ತೀರ್ಪುಗಳ ಅನುಷ್ಠಾನಕ್ಕಾಗಿ ಪಿಂಚಣಿದಾರರು ನ್ಯಾಯಾಲಯಗಳ ಮೆಟ್ಟಿಲೇರಿದ್ದರು.
ಇದು ಸೂಕ್ಷ್ಮ ಪ್ರಕರಣವಾಗಿರುವುದರಿಂದ ವ್ಯಾಪಕ ಚರ್ಚೆಯ ಅಗತ್ಯವಿದ್ದು,
ವಿಸ್ತೃತ ಪೀಠಕ್ಕೆ ಪ್ರಕರಣವನ್ನು ವರ್ಗಾಯಿಸಬೇಕು ಎಂದು ಸುಪ್ರೀಂಕೋರ್ಟ್ ದ್ವಿಸದಸ್ಯ ಪೀಠ ತಿಳಿಸಿತ್ತು.
ತ್ರಿಸದಸ್ಯ ಪೀಠ ರಚನೆಯಾದ ಬಳಿಕ 2022 ಆಗಸ್ಟ್ 03ರಿಂದ ವಿಚಾರಣೆ
ಆರಂಭವಾಗಿತ್ತು. ದೇಶದಲ್ಲಿ ಸುಮಾರು 78 ಲಕ್ಷಕ್ಕೂ ಅಧಿಕ ಮಂದಿ ಕಡಿಮೆ ಪಿಂಚಣಿ ಪಡೆಯುತ್ತಿದ್ದಾರೆ.
ಇಪಿಎಸ್ 1995 ಕಾಯ್ದೆಯಿಂದ ಅನ್ಯಾಯವಾಗಿದ್ದು, ಪಿಂಚಣಿ ಸೌಲಭ್ಯ ಹೆಚ್ಚಿಸಬೇಕೆಂದು ಪಿಂಚಣಿದಾರರು
ರಾಷ್ಟ್ರವ್ಯಾಪಿ ಒತ್ತಾಯಗಳನ್ನು ಮಾಡುತ್ತಿದ್ದಾರೆ.
ತ್ರಿಸದಸ್ಯ ಪೀಠವು ಮೂರು ದಿನಗಳ ಅವಧಿಯ ವಿಚಾರಣೆಯನ್ನು ನಿಗದಿ ಪಡಿಸಿದ್ದು
ಬಳಿಕ ತನ್ನ ತೀರ್ಪನ್ನು ಪ್ರಕಟಿಸಲಿದೆ.
ಪ್ರಕರಣ: ಇಪಿಎಫ್ ಒ ವಿರುದ್ಧ ಸುನಿಲ್ ಕುಮಾರ್ ಮತ್ತು ಇತರರು.
ಹಿಂದಿನ ವಿಚಾರಣೆಗಳ ವರದಿಗಳಿಗೆ ಕೆಳಗೆ ಕ್ಲಿಕ್ ಮಾಡಿರಿ
ಇಪಿಎಫ್ ಪಿಂಚಣಿ ಪ್ರಕರಣ: ಭವಿಷ್ಯ ನಿಧಿಸದಸ್ಯರು ಇಪಿಎಸ್ ಅಡಿಯಲ್ಲಿ
ಸ್ವಯಂಚಾಲಿತವಾಗಿ ಅರ್ಹರಾಗುವುದಿಲ್ಲ
ಸಬ್ಸಿಡಿ, ಹಣಕಾಸಿನ ಹೊರೆಯ
ವಿವರ ತೋರಿಸಿ: ಕೇಂದ್ರ, ಇಪಿಎಫ್‌ಒಗೆ ಸುಪ್ರಿಂ ಕೋರ್ಟ್ ನಿರ್ದೇಶನ
No comments:
Post a Comment