Monday, August 29, 2022

ಅರೆ ನಿಮಿಷದಲ್ಲಿ ಧರೆಗುರುಳಿದ ನೋಯ್ಡಾದ ಅವಳಿ ಕಟ್ಟಡ

 ಅರೆ ನಿಮಿಷದಲ್ಲಿ ಧರೆಗುರುಳಿದ ನೋಯ್ಡಾದ ಅವಳಿ ಕಟ್ಟಡ

ನವದೆಹಲಿ: ಸುಪ್ರೀಂಕೋರ್ಟಿನ ಆದೇಶದ ಮೇರೆ ನೋಯ್ಡಾದ ಸೂಪರ್‌ ಟೆಕ್‌ ಅವಳಿ ಕಟ್ಟಡಗಳು 2022 ಆಗಸ್ಟ್‌ 28ರ ಭಾನುವಾರ ಮಧ್ಯಾಹ್ನ ಕೇವಲ 20 ಸೆಕೆಂಡ್‌ ಗಳಲ್ಲಿ ಧರೆಗೆ ಉರುಳಿ ಬಿದ್ದವು. 100 ಮೀಟರ್‌ ಎತ್ತರದ ಅವಳಿಕಟ್ಟಡಗಳನ್ನು 3700 ಕಿಲೋ ಗ್ರಾಂ ಸ್ಫೋಟಕಗಳ ಮೂಲಕ ಕ್ಷಣಾರ್ಧದಲ್ಲಿ ಧರೆಗುರುಳಿಸಲಾಯಿತು. ಅತ್ಯಪರೂಪದ ಈ ದೃಶ್ಯವನ್ನು ನೋಯ್ಡಾದ ಸಹಸ್ರಾರು ಮಂದಿ ಕುತೂಹಲದೊಂದಿಗೆ ವೀಕ್ಷಿಸಿದರು.

ನಿಯಮಾವಳಿಗಳನ್ನು ಉಲ್ಲಂಘಿಸಿದ ಅಕ್ರಮವಾಗಿ ನಿರ್ಮಿಸಿದ್ದಕ್ಕಾಗಿ ಈ ಕಟ್ಟಡಗಳನ್ನು ಉರುಳಿಸುವಂತೆ ಸುಪ್ರೀಂಕೋರ್ಟ್‌ ವರ್ಷದ ಹಿಂದೆ ಆದೇಶ ನೀಡಿತ್ತು. 

ಕಟ್ಟಡ ಉರುಳಿದ ದೃಶ್ಯವನ್ನು ಇಲ್ಲಿ ನೋಡಿ:


No comments:

Advertisement