Saturday, September 10, 2022

ಇಂದಿನ ಇತಿಹಾಸ History Today ಸೆಪ್ಟೆಂಬರ್‌ 10

 ಇಂದಿನ ಇತಿಹಾಸ History Today ಸೆಪ್ಟೆಂಬರ್‌ 10

2022: ಲಂಡನ್:‌ 96 ನೇ ವಯಸ್ಸಿನಲ್ಲಿ ನಿಧನರಾದ ತನ್ನ ತಾಯಿ ರಾಣಿ ಎರಡನೇ ಎಲಿಜಬೆತ್ ಅವರ ಉತ್ತರಾಧಿಕಾರಿಯಾಗಿ ಮೂರನೇ ಚಾರ್ಲ್ಸ್ ಅವರನ್ನು ಇಂಗ್ಲೆಂಡಿನ ರಾಜ ಎಂಬುದಾಗಿ ಲಂಡನ್ನಿನ ಸೇಂಟ್ ಜೇಮ್ಸ್ ಅರಮನೆಯಲ್ಲಿ ಈದಿನ ನಡೆದ ಐತಿಹಾಸಿಕ ಸಮಾರಂಭದಲ್ಲಿ ಔಪಚಾರಿಕವಾಗಿ ಘೋಷಿಸಲಾಯಿತು. ತಮ್ಮ ದಿವಂಗತ ತಾಯಿ ರಾಣಿ ಎರಡನೇ ಎಲಿಜಬೆತ್ ಅವರನ್ನು ಅನುಕರಿಸುವುದಾಗಿ ಚಾರ್ಲ್ಸ್‌ ಈ ಸಂದರ್ಭದಲ್ಲಿ ವಾಗ್ದಾನ ಮಾಡಿದರು. ರಾಣಿ ಎಲಿಜಬೆತ್ ಅವರ "ಸ್ಫೂರ್ತಿದಾಯಕ ಉದಾಹರಣೆ" ಯನ್ನು ಅನುಸರಿಸಲು ಪ್ರಯತ್ನಿಸುವುದಾಗಿ 73 ವರ್ಷದ ರಾಷ್ಟ್ರದ ಮುಖ್ಯಸ್ಥ ಚಾರ್ಲ್ಸ್‌ ವಚನ ನೀಡಿದರು. ಚಾರ್ಲ್ಸ್‌ ಅವರು ಗುರುವಾರ ಸ್ಕಾಟ್ಲೆಂಡ್‌ನ ಬಾಲ್ಮೋರಲ್ ಕ್ಯಾಸಲ್‌ನಲ್ಲಿ ಚಾರ್ಲ್ಸ್ ತನ್ನ ತಾಯಿಯ ಮರಣದ ನಂತರ ತಕ್ಷಣವೇ ಉತ್ತರಾಧಿಕಾರಿಯಾದರು. ಆದರೆ ಅವರನ್ನು ಉತ್ತರಾಧಿಕಾರಿಯಾಗಿ ವಿಧ್ಯುಕ್ತ ಘೋಷಣೆ ಮಾಡಲು ಉತ್ತರಾಧಿಕಾರಿ ಮಂಡಳಿಯು ಈದಿನ ಸಭೆ ನಡೆಸಿತು. ಚಾರ್ಲ್ಸ್‌ ಪುತ್ರ ವಿಲಿಯಂ, ಪತ್ನಿ ಕ್ಯಾಮಿಲ್ಲಾ ಮತ್ತು ಬ್ರಿಟನ್ನಿನ ಹೊಸ ಪ್ರಧಾನ ಮಂತ್ರಿ ಲಿಜ್ ಟ್ರಸ್ ಅವರು  ಘೋಷಣಾ ಪತ್ರಕ್ಕೆ ಸಹಿ ಹಾಕಿದರು.

2019: ಜಿನೀವಾನವದೆಹಲಿಜಮ್ಮು ಮತ್ತು ಕಾಶ್ಮೀರವು ಭಾರತದ ’ಆಂತರಿಕ ವಿಷಯ’ ಎಂಬುದಾಗಿ ಸ್ವಿಜರ್ಲೆಂಡಿನ ಜಿನೇವಾದ ವಿಶ್ವಸಂಸ್ಥೆ ಮಾನವ ಹಕ್ಕುಗಳ ಮಂಡಳಿಯ  (ಯುಎನ್ಎಚ್ಆರ್ಸಿಸಮಾವೇಶದಲ್ಲಿ ಪುನರುಚ್ಚರಿಸುವ ಮೂಲಕ ಭಾರತವು 2019 ಸೆಪ್ಟೆಂಬರ್  10ರ ಮಂಗಳವಾರ ಪಾಕಿಸ್ತಾನಕ್ಕೆ ಪ್ರಬಲ ಎದಿರೇಟು ನೀಡಿತುಮಂಡಳಿಯ ೪೨ನೇ ಅಧಿವೇಶನದಲ್ಲಿ ಪಾಕಿಸ್ತಾನದ ವಿದೇಶಾಂಗ ಸಚಿವ ಶಾ ಮಹಮೂದ್ ಖರೇಶಿ ಅವರು ಮಾಡಿದ ಪ್ರಸ್ತಾಪಕ್ಕೆ ಭಾರತದ ವಿದೇಶಾಂಗ ವ್ಯವಹಾರಗಳ ಕಾರ್ಯದರ್ಶಿ (ಪೂರ್ವವಿಜಯ್ ಠಾಕುರ್ ಸಿಂಗ್ ಅವರು  ಖಡಕ್ ಉತ್ತರ  ನೀಡಿದರುಭಾರತದ ವಿರುದ್ಧ ಮಾತನಾಡಲು ಯೋಜಿತರಾಗಿದ್ದ ಖರೇಶಿ ’ಕಾಶ್ಮೀರ ವಿಷಯವು ನೇರವಾಗಿ ಅಂತಾರಾಷ್ಟ್ರೀಯ ಕಳಕಳಿಯ ವಿಷಯಕೇವಲ ಭಾರತದ ಆಂತರಿಕ ವಿಷಯವಲ್ಲ’ ಎಂದು ಹೇಳಿದ್ದರು.  ಜಮ್ಮು ಮತ್ತು ಕಾಶ್ಮೀರದಲ್ಲಿ ಪ್ರಗತಿಪರ ನೀತಿಗಳನ್ನು ಪೂರ್ಣ ಪ್ರಮಾಣದಲ್ಲಿ ಅನುಷ್ಠಾನಗೊಳಿಸಲಾಗುತ್ತಿದೆಮಹಿಳಾ ಹಕ್ಕುಗಳನ್ನು ಅನುಷ್ಠಾನಗೊಳಿಸಲಾಗುವುದು’ ಎಂದು ವಿಜಯ್  ಠಾಕುರ್ ಸಿಂಗ್  ಹೇಳಿದರುಹಿಂದಿನ ಜಮ್ಮು -ಕಾಶ್ಮೀರ ರಾಜ್ಯದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತಿದೆ ಎಂಬ ಪಾಕಿಸ್ತಾನದ ಆಪಾದನೆಗಳು ತಪ್ಪು ಹಾಗೂ ಕಟ್ಟುಕಥೆಗಳು ಎಂದು ಹೇಳಿದ ವಿಜಯ್, ’ಭಾರತದ ಸಾರ್ವಭೌಮ ನಿರ್ಧಾರಗಳು ಸಂಪೂರ್ಣವಾಗಿ ಆಂತರಿಕ ವಿಷಯಗಳಾಗಿವೆ’ ಎಂದು ನುಡಿದರುವಿಶ್ವಸಂಸ್ಥೆ ಮಾನವ ಹಕ್ಕುಗಳ ಮಂಡಳಿಯು ೪೭ ಸದಸ್ಯರನ್ನು ಹೊಂದಿದ್ದು ಭಾರತ ಮತ್ತು ಪಾಕಿಸ್ತಾನ ಪ್ರಸ್ತುತ ಏಷ್ಯಾ ಫೆಸಿಫಿಕ್ ಸಮೂಹದ ಪಟ್ಟಿಯಲ್ಲಿವೆಭಾರತವು ೨೦೨೧ರವರೆಗೆ ಸದಸ್ಯನಾಗಿದ್ದರೆಪಾಕಿಸ್ತಾನದ ಸದಸ್ಯತ್ವವು ೨೦೨೦ಕ್ಕೆ ಮುಗಿಯಲಿದೆಪಾಕಿಸ್ತಾನವು ಜಾಗತಿಕ ಭಯೋತ್ಪಾದನೆಯ ಅಧಿಕೇಂದ್ರವಾಗಿದ್ದುಅದು ಮಾಡಿರುವ ಆಪಾದನೆಗಳು ತಪ್ಪು ಹಾಗೂ ಕಟ್ಟು ಕಥೆಗಳುಭಯೋತ್ಪಾದಕ ನಾಯಕರಿಗೆ ಆಶ್ರಯ ನೀಡಿದ ಜಾಗತಿಕ ಭಯೋತ್ಪಾದನೆಯ ಅಧಿಕೇಂದ್ರದಿಂದ  ತಪ್ಪುಕಟ್ಟುಕಥೆಗಳು ಬರುತ್ತಿವೆ ಎಂಬುದು ಇಡೀ ಜಗತ್ತಿದೆ ಗೊತ್ತಿದೆ’ ಎಂದು ವಿಜಯ್ ಠಾಕೂರ್ ಸಿಂಗ್ ನುಡಿದರು.

2019: ನವದೆಹಲಿಜಿನೇವಾ: ವಿಶ್ವಸಂಸ್ಥೆ ಮಾನವ ಹಕ್ಕುಗಳ ಮಂಡಳಿಯ ೪೨ನೇ ಅಧಿವೇಶನದಲ್ಲಿ (ಯುಎನ್ಎಚ್ಆರ್ಸಿಕಾಶ್ಮೀರ ವಿಷಯವನ್ನು 2019 ಸೆಪ್ಟೆಂಬರ್ 10ರ ಮಂಗಳವಾರ ಪ್ರಸ್ತಾಪಿಸಿದ ಪಾಕಿಸ್ತಾನದ ವಿದೇಶಾಂಗ ಸಚಿವ ಶಾ ಮಹಮೂದ್ ಖುರೇಶಿ ಅವರು ’ಕಾಶ್ಮೀರವನ್ನು ಭಾರತೀಯ ರಾಜ್ಯ’ ಎಂಬುದಾಗಿ ಉಲ್ಲೇಖಿಸಿಜಮ್ಮುಕಾಶ್ಮೀರವು ’ಭಾರತದ ಅವಿಭಾಜ್ಯ ಅಂಗ’ ಎಂಬುದನ್ನು ಒಪ್ಪಿಕೊಂಡರುಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನವನ್ನು ಒದಗಿಸಿದ್ದ ಸಂವಿಧಾನದ ೩೭೦ನೇ ವಿಧಿಯನ್ನು ರದ್ದುಪಡಿಸಿ ರಾಜ್ಯವನ್ನು ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ವಿಭಜಿಸಿದ ಭಾರತ ಸರ್ಕಾರದ ಕ್ರಮವನ್ನು ವಿರೋಧಿಸುತ್ತಿರುವ ಪಾಕಿಸ್ತಾನವು ವಿಶ್ವಸಂಸ್ಥೆ ಭದ್ರತಾ ಮಂಡಳಿಯ ರಹಸ್ಯ ಸಭೆಯಲ್ಲಿ ಜಾಗತಿಕ ರಾಷ್ಟ್ರಗಳ ಬೆಂಬಲ ಪಡೆಯಲು ವಿಫಲ ಯತ್ನ ನಡೆಸಿದ ಬಳಿಕ ವಿಷಯನ್ನು ಮಂಗಳವಾರ ವಿಶ್ವಸಂಸ್ಥೆ ಮಾನವ ಹಕ್ಕುಗಳ ಮಂಡಳಿಗೆ (ಯುಎನ್ಎಚ್ಆರ್ಸಿಒಯ್ದಿತ್ತು. (ವಿವರಗಳಿಗೆ ಇಲ್ಲಿ ಕ್ಲಿಕ್ಕಿಸಿ)
2019: ನವದೆಹಲಿ: ಬಿಹಾರದ ಮೋತಿಹಾರಿ ಹಾಗೂ ನೇಪಾಳದ ಅಮ್ಲೆಖ್ ಗಂಜ್ ನಡುವಣ ೬೦ ಕಿಮೀ ಉದ್ದದ ಪೆಟ್ರೋಲಿಯಂ ಉತ್ಪನ್ನಗಳ ಚಾರಿತ್ರಿಕ ಕೊಳವೆಮಾರ್ಗವನ್ನು (ಪೈಪ್ ಲೈನ್ಭಾರತದ ಪ್ರಧಾನಿ ನರೇಂದ್ರ ಮೋದಿ ಹಾಗೂ ನೇಪಾಳದ ಪ್ರಧಾನಿ ಕೆ.ಪಿಶರ್ಮ ಒಲಿ ವಿಡಿಯೋ ಕಾನ್ಪರೆನ್ಸ್ ಮೂಲಕ  2019 ಸೆಪ್ಟೆಂಬರ್ 10ರ ಮಂಗಳವಾರ ಜಂಟಿಯಾಗಿ ಉದ್ಘಾಟಿಸಿದರು ಪೈಪ್ ಲೈನ್ ದಕ್ಷಿಣ ಏಷ್ಯಾದ ಮೊತ್ತ ಮೊದಲ ಗಡಿಯಾಚೆಗಿನ ಪೆಟ್ರೋಲಿಯಂ ಉತ್ಪನ್ನಗಳ ಪೈಪ್ ಲೈನ್ ಎಂದು ಖ್ಯಾತಿ ಪಡೆದಿದೆ ಹಿಂದೆ ೧೯೭೩ರಿಂದ ಜಾರಿಯಲ್ಲಿರುವ ವ್ಯವಸ್ಥೆಯ ಒಂದು ಭಾಗವಾಗಿ ನೇಪಾಳಕ್ಕೆ ಭಾರತದಿಂದ ಟ್ಯಾಂಕರುಗಳ ಮೂಲಕ ಪೆಟ್ರೋಲಿಯಂ ಉತ್ಪನ್ನಗಳನ್ನು ಸಾಗಿಸಲಾಗುತ್ತಿತ್ತುಇದು ದುಬಾರಿಯಾಗಿದ್ದ ಕಾರಣ ಎರಡೂ ದೇಶಗಳು ಜಂಟಿಯಾಗಿ  ಯೋಜನೆಗೆ ಕೈ ಹಾಕಿದ್ದವು ಕುರಿತು ಸೋಮವಾರವೇ ಪ್ರಕಟಣೆಯೊಂದನ್ನು ಬಿಡುಗಡೆ ಮಾಡಿದ್ದ ಪ್ರಧಾನಿ ಸಚಿವಾಲಯಭಾರತ-ನೇಪಾಳ ಇಂಧನ ಸಹಕಾರ ಯೋಜನೆಯು ಎರಡೂ ದೇಶಗಳ ನಿಕಟ ದ್ವಿಪಕ್ಷೀಯ ಸಂಬಂಧಗಳ ಸಂಕೇತವಾಗಿದೆ ಯೋಜನೆ ಇಂಧನದ ಸುರಕ್ಷತೆಯನ್ನು ಹೆಚ್ಚಿಸಲು ಹಾಗೂ ಸಾರಿಗೆ ವೆಚ್ಚವನ್ನು ಗಣನೀಯ ಪ್ರಮಾಣದಲ್ಲಿ ಕಡಿತಗೊಳಿಸಲು ಸಹಕಾರಿಯಾಗಿದೆ ಎಂದು ತಿಳಿಸಿತ್ತು. (ವಿವರಗಳಿಗೆ ಇಲ್ಲಿ ಕ್ಲಿಕ್ಕಿಸಿ)
2019: ಮುಂಬೈ: ಬಾಲಿವುಡ್ ನಟಿ ಉರ್ಮಿಳಾ ಮಾತೋಂಡ್ಕರ್ ಕಾಂಗ್ರೆಸ್ ಪಕ್ಷದ ಜೊತೆಗಿನ ತಮ್ಮ ತನ್ನ ಅಲ್ಪ ಕಾಲದ ಸಖ್ಯಕ್ಕೆ 2019 ಸೆಪ್ಟೆಂಬರ್ 10ರ ಮಂಗಳವಾರ ವಿದಾಯ ಹೇಳಿದರುಕಳೆದ ಲೋಕಸಭಾ ಚುನಾವಣೆಯ ಕಾಲದಲ್ಲಿ ಕಾಂಗ್ರೆಸ್ ಸೇರಿದ್ದ ಉರ್ಮಿಳಾಐದು ತಿಂಗಳ ಕಾಂಗ್ರೆಸ್ ರಾಜಕಾರಣದ ನಂತರ ಹೊರನಡೆದರುಲೋಕಸಭಾ ಚುನಾವಣೆಯಲ್ಲಿ ಮುಂಬೈ ಉತ್ತರ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದ ಉರ್ಮಿಳಾ ಮಾತೋಂಡ್ಕರ್  ಬಿಜೆಪಿಯ ಗೋಪಾಲ್ ಶೆಟ್ಟಿ ವಿರುದ್ಧ ಭಾರಿ ಮತಗಳ ಅಂತರದಲ್ಲಿ ಪರಾಭವಗೊಂಡಿದ್ದರುಪಕ್ಷದ ಒಳ ರಾಜಕೀಯದಿಂದ ಸಂಪೂರ್ಣ ನಿರಾಶಳಾಗಿ ರಾಜೀನಾಮೆ ನೀಡುತ್ತಿದ್ದೇನೆ ಎಂದು ಉರ್ಮಿಳಾ ಮಾತೋಂಡ್ಕರ್ ಹೇಳಿದರು. (ವಿವರಗಳಿಗೆ ಇಲ್ಲಿ ಕ್ಲಿಕ್ಕಿಸಿ)
2019: ನವದೆಹಲಿ: ಚೀನಾ ಮತ್ತು ಪಾಕಿಸ್ತಾನ ವಾರಾಂತ್ಯದಲ್ಲಿ ನೀಡಿದ ಜಂಟಿ ಹೇಳಿಕೆಯೊಂದರಲ್ಲಿ ಕಾಶ್ಮೀರ ವಿಷಯವು ಇತಿಹಾಸದಿಂದ ಬಿಟ್ಟುಹೋಗಿರುವ ವಿವಾದ ಎಂಬುದಾಗಿ ಬಣ್ಣಿಸಿ ಮಾಡಿರುವ ಉಲ್ಲೇಖವನ್ನು ಭಾರತವು 2019 ಸೆಪ್ಟೆಂಬರ್ 10ರ ಮಂಗಳವಾರ ದೃಢವಾಗಿ ತಿರಸ್ಕರಿಸಿತು. ‘ಚೀನೀ ವಿದೇಶಾಂಗ ಸಚಿವರ ಇತ್ತೀಚಿನ ಭೇಟಿಯ ಬಳಿಕ ಚೀನಾ ಮತ್ತು ಪಾಕಿಸ್ತಾನವು ಬಿಡುಗಡೆ ಮಾಡಿರುವ ಜಂಟಿ ಹೇಳಿಕೆಯಲ್ಲಿ ಜಮ್ಮು ಮತ್ತು ಕಾಶ್ಮಿರದ ಬಗ್ಗೆ ಮಾಡಿರುವ ಉಲ್ಲೇಖವನ್ನು ನಾವು ತಿರಸ್ಕರಿಸುತ್ತೇವೆಜಮ್ಮು ಮತ್ತು ಕಾಶ್ಮೀರ ಭಾರತದ ಅವಿಭಾಜ್ಯ ಅಂಗ’ ಎಂದು ವಿದೇಶಾಂಗ ವ್ಯವಹಾರಗಳ ವಕ್ತಾರ ರವೀಶ ಕುಮಾರ್ ಮಂಗಳವಾರ ಇಲ್ಲಿ ತಿಳಿಸಿದರು.  ಪಾಕ್ ಆಕ್ರಮಿತ ಕಾಶ್ಮೀರದ ಮೂಲಕ ಹಾದುಹೋಗುವ ಚೀನಾ -ಪಾಕಿಸ್ತಾನ ಆರ್ಥಿಕ ಕಾರಿಡಾರ್ ಕೆಲಸವನ್ನು ಸ್ಥಗಿತಗೊಳಿಸಬೇಕು’ ಎಂದೂ ಭಾರತವು ಉಭಯ ರಾಷ್ಟ್ರಗಳಿಗೆ ಸೂಚಿಸಿತು. ’ಇಂತಹ ಚಟುವಟಿಕೆಗಳನ್ನು ತತ್ ಕ್ಷಣ ಸ್ಥಗಿತಗೊಳಿಸಬೇಕು ಎಂದು ನಾವು ಸಂಬಂಧಪಟ್ಟ ಎಲ್ಲರಿಗೂ ಸೂಚಿಸುತ್ತೇವೆ’ ಎಂದು ಕುಮಾರ್ ಹೇಳಿದರು. (ವಿವರಗಳಿಗೆ ಇಲ್ಲಿ ಕ್ಲಿಕ್ಕಿಸಿ)
2019: ನವದೆಹಲಿ:  ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಅವರ ಪಾಕಿಸ್ತಾನ್ ತೆಹ್ರೀಕ್ ಇನ್ಸಾಫ್ (ಪಿಟಿಐಪಕ್ಷದ ಹಿಂದೂ ರಾಜಕಾರಣಿಮಾಜಿ ಶಾಸಕರೊಬ್ಬರು ಭಾರತದಲ್ಲಿ ರಾಜಕೀಯ ಆಶ್ರಯ ಕೋರಿದ್ದು ಪಾಕಿಸ್ತಾನದಲ್ಲಿ ಹಿಂದುಗಳು ಮತು ಮತ್ತು ಸಿಕ್ಖರು ಸೇರಿದಂತೆ ಅಲ್ಪಸಂಖ್ಯಾತರಿಗೆ ನಿರಂತರವಾಗಿ ಕಿರುಕುಳ ನೀಡಲಾಗುತ್ತದೆ ಎಂದು ಹೇಳಿದರು. ಪಾಕಿಸ್ತಾನವು ಜಿನೇವಾದಲ್ಲಿ ವಿಶ್ವಸಂಸ್ಥೆ ಮಾನವ ಹಕ್ಕುಗಳ ಪರಿಷತ್ತಿನಲ್ಲಿ (ಯುಎನ್ಎಚ್ಆರ್ಸಿಕಾಶ್ಮೀರದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತಿದೆ ಎಂಬ ಆಪಾದನೆಯ ವಿಷಯವನ್ನು ಪ್ರಸ್ತಾಪಿಸುವ  ಯತ್ನದಲ್ಲಿ ಇರುವಾಗಲೇ ಪಾಕ್ ಪ್ರಧಾನಿಯ ಪಾಕಿಸ್ತಾನ್ ತೆಹ್ರೀಕ್ ಇನ್ಸಾಫ್ (ಪಿಟಿಐಪಕ್ಷದ ಮಾಜಿ ಎಂಎಲ್ ಬಲದೇವ್ ಕುಮಾರ್ ಅವರು ಪಾಕಿಸ್ತಾನದಲ್ಲಿನ ಮಾನವ ಹಕ್ಕುಗಳ ಉಲ್ಲಂಘನೆಯ ಕರಾಳ ಮುಖ ತೆರೆದಿಟ್ಟು ಭಾರತದಲ್ಲಿ ರಾಜಕೀಯ ಆಶ್ರಯ ಕೋರಿದರು. ‘ಅಲ್ಪಸಂಖ್ಯಾತರಷ್ಟೇ ಅಲ್ಲಮುಸ್ಲಿಮರು ಕೂಡಾ ಅಲ್ಲಿ (ಪಾಕಿಸ್ತಾನಸುರಕ್ಷಿತರಲ್ಲನಾವು ಪಾಕಿಸ್ತಾನದಲ್ಲಿ ತೀವ್ರ ಸಂಕಷ್ಟಗಳೊಂದಿಗೆ ಬದುಕುತ್ತಿದ್ದೇವೆನನಗೆ ಇಲ್ಲಿ ಆಶ್ರಯ ನೀಡುವಂತೆ ನಾನು ಭಾರತ ಸರ್ಕಾರಕ್ಕೆ ಮನವಿ ಮಾಡುತ್ತೇನೆನಾನು ಪಾಕಿಸ್ತಾನಕ್ಕೆ ವಾಪಸಾಗುವುದಿಲ್ಲ’ ಎಂದು ಬಲದೇವ್ ಕುಮಾರ್ ಹೇಳಿರುವುದಾಗಿ ಸುದ್ದಿ ಸಂಸ್ಥೆಯೊಂದು ವರದಿ ಮಾಡಿತು. (ವಿವರಗಳಿಗೆ ಇಲ್ಲಿ ಕ್ಲಿಕ್ಕಿಸಿ)

No comments:

Advertisement