ವಿಟ್ಲ ಜಾತ್ರೆ ಬಯ್ಯದ ಬಲಿ
ದಕ್ಷಿಣ ಕನ್ನಡ ಜಿಲ್ಲೆ ಬಂಟ್ವಾಳ ತಾಲೂಕಿನ ವಿಟ್ಲದ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಜಾತ್ರೆಯಲ್ಲಿ ಐದನೇ ದಿನ ವಿಶೇಷ. ಇಲ್ಲಿಯವರೆ ಸಣ್ಣ ತೇರಿನಲ್ಲಿ ದೇವರ ಉತ್ಸವ ನಡೆದರೆ ʼಬಯ್ಯದ ಬಲಿʼ ಎಂಬುದಾಗಿ ಕರೆಯಲಾಗುವ ಐದನೇ ದಿನ ದೇವರು ದೊಡ್ಡ ರಥವನ್ನು ಏರಿ ಸವಾರಿ ಮಾಡುವುದು ವಿಶೇಷ. ಈ ದಿನದ ಸಂಭ್ರಮ ಕೂಡಾ ಹಿಂದಿನ ನಾಲ್ಕು ದಿನಗಳ ಸಂಭ್ರಮಕ್ಕಿಂತ ಹೆಚ್ಚು.
ಈದಿನ ವಿಟ್ಲ ಸಮೀಪದ ಕೇಪುವಿನಿಂದ ಶ್ರೀ ಮಲರಾಯ ದೈವದ ಭಂಡಾರ ವಿಟ್ಲ ಶ್ರೀ ಪಂಚಲಿಂಗೇಶ್ವರ ದೇವಸ್ಥಾನಕ್ಕೆ ಬರುತ್ತದೆ. ವಿಟ್ಲದ ʼಬಯ್ಯದ ಬಲಿʼ ಉತ್ಸವ ಸಂಭ್ರಮ ಶ್ರೀ ಮಲರಾಯ ದೈವದ ಭಂಡಾರ ಆಗಮನದೊಂದಿಗೆ ಶುರುವಾಗುತ್ತದೆ.
ʼಬಯ್ಯದ ಬಲಿʼ ಸಂಭ್ರಮವನ್ನು ಈ ಕೆಳಗಿನ ವಿಡಿಯೋಗಳಲ್ಲಿ ನೋಡಿ. ಚಿತ್ರ ವಿಡಿಯೋ ಕೃಪೆ: ವಿಟ್ಲ ಸುದ್ದಿಗಳು ವಾಟ್ಸಪ್ ಗ್ರೂಪ್, ವಿಟಿವಿ.
ಕೇಪುವಿನಿಂದ ಶ್ರೀ ಮಲರಾಯ ದೈವದ ಭಂಡಾರ ಆಗಮನ ಮತ್ತು ಜಾತ್ರಾ ವೈಭವದ ವೀಕ್ಷಣೆಗೆ ಕೆಳಗಿನ ಚಿತ್ರ ಕ್ಲಿಕ್ ಮಾಡಿ.
ಜಾತ್ರೆಯ ಮೊದಲ ದಿನ ಅಂದರೆ ಲಕ್ಷ ದೀಪೋತ್ಸವದ ದಿನ ನಡೆದ ರುದ್ರಯಾಗ ಮತ್ತು ಜಾತ್ರೆಯ ವೈಭವದ ಇನ್ನೊಂದು ವಿಡಿಯೋ ಇಲ್ಲಿದೆ. ಕೃಪೆ: ನಮ್ಮ ನ್ಯೂಸ್
No comments:
Post a Comment