ʼಪ್ರಧಾನ ಮಂತ್ರಿ ಸೂರ್ಯೋದಯ ಯೋಜನೆʼ ಪ್ರಕಟಿಸಿದ ಪ್ರಧಾನಿ
ನವದೆಹಲಿ: "ಅಯೋಧ್ಯೆಯಿಂದ
ಹಿಂದಿರುಗಿದ ನಂತರ ಇದು ನನ್ನ
ಮೊದಲ ನಿರ್ಧಾರ" ಎಂಬುದಾಗಿ ಹೇಳಿದ ಪ್ರಧಾನಿ ನರೇಂದ್ರ ಮೋದಿ ಅವರು ಹೊಸ ʼಪ್ರಧಾನಮಂತ್ರಿ ಸೂರ್ಯೋದಯ ಯೋಜನೆʼಯನ್ನು 2024 ಜನವರಿ 22ರ ಸೋಮವಾರ
ಸಂಜೆ ಪ್ರಕಟಿಸಿದರು.
"ಪ್ರಧಾನಮಂತ್ರಿ
ಸೂರ್ಯೋದಯ ಯೋಜನೆ" ಯೋಜನೆಯು ಬಡ ಮತ್ತು ಮಧ್ಯಮ ವರ್ಗದವರ ವಿದ್ಯುತ್ ಬಿಲ್ಲನ್ನು ಕಡಿಮೆ ಮಾಡುವುದಲ್ಲದೆ, ಇಂಧನ ಕ್ಷೇತ್ರದಲ್ಲಿ ಭಾರತವನ್ನು ಸ್ವಾವಲಂಬಿಯನ್ನಾಗಿ ಮಾಡಲಿದೆ ಎಂದು ಪ್ರಧಾನಿ ಹೇಳಿದರು.
ಪ್ರಧಾನಿ ನರೇಂದ್ರ ಮೋದಿ ಅವರು ಅಯೋಧ್ಯೆಯಿಂದ
ಹಿಂದಿರುಗಿದ ನಂತರ, ಜನರು ತಮ್ಮ
ಮನೆಗಳಲ್ಲಿ ಸೌರ ಫಲಕಗಳನ್ನು ಸ್ಥಾಪಿಸಲು ಸಹಾಯ ಮಾಡುವ ಹೊಸ ಯೋಜನೆಯನ್ನು ಪ್ರಾರಂಭಿಸಲು ನಿರ್ಧರಿಸಲಾಗಿದೆ ಎಂದು ಹೇಳಿದರು. ಈ ನಿರ್ಧಾರವು
"ಜಗತ್ತಿನ ಎಲ್ಲಾ ಭಕ್ತರು ಸೂರ್ಯವಂಶಿ ಭಗವಾನ್ ಶ್ರೀರಾಮನ ಬೆಳಕಿನಿಂದ ಶಕ್ತಿಯನ್ನು
ಪಡೆಯುತ್ತಾರೆ" ಎಂಬ ಅರಿವಿನಿಂದ ಪ್ರೇರಿತವಾಗಿದೆ ಎಂದು ಅವರು ನುಡಿದರು.
"ಅಯೋಧ್ಯೆಯಿಂದ
ಹಿಂದಿರುಗಿದ ನಂತರ ನಾನು ತೆಗೆದುಕೊಂಡ ಮೊದಲ ನಿರ್ಧಾರವೆಂದರೆ ನಮ್ಮ ಸರ್ಕಾರವು
"ಪ್ರಧಾನಮಂತ್ರಿ ಸೂರ್ಯೋದಯ ಯೋಜನೆ" ಯನ್ನು 1 ಕೋಟಿ ಮನೆಗಳಿಗೆ ಮೇಲ್ಛಾವಣಿ ಸೌರ ಅಳವಡಿಸುವ ಗುರಿಯೊಂದಿಗೆ
ಪ್ರಾರಂಭಿಸುವುದುʼ ಎಂದು ಪ್ರಧಾನಿ ಮೋದಿ ಟ್ವಿಟರಿನಲ್ಲಿ
ಪೋಸ್ಟ್ ಮಾಡಿದರು.
"ಇದು ಬಡ
ಮತ್ತು ಮಧ್ಯಮ ವರ್ಗದವರ ವಿದ್ಯುತ್ ಬಿಲ್ ಅನ್ನು ಕಡಿಮೆ ಮಾಡುವುದಲ್ಲದೆ, ಇಂಧನ ಕ್ಷೇತ್ರದಲ್ಲಿ ಭಾರತವನ್ನು ಸ್ವಾವಲಂಬಿಯನ್ನಾಗಿ
ಮಾಡುತ್ತದೆ" ಎಂದು ಅವರು ಬರೆದರು.
ಅಯೋಧ್ಯೆಯಲ್ಲಿ ನಡೆದ
ಮಹಾಮಸ್ತಕಾಭಿಷೇಕದ ನೇತೃತ್ವ ವಹಿಸಿದ್ದ ಪ್ರಧಾನಿ ಮೋದಿ, ನಂತರ ತಮ್ಮ ಭಾಷಣದಲ್ಲಿ ಭಗವಾನ್ ರಾಮನು "ಶಕ್ತಿ" ಮತ್ತು
ಇಂದು "ಹೊಸ ಯುಗದ ಉದಯ" ಎಂದು ಹೇಳಿದರು.
"ರಾಮನು
ಬೆಂಕಿಯಲ್ಲ, ಅವನು ಶಕ್ತಿ. ರಾಮನು
ವಿವಾದವಲ್ಲ, ಅವನು ಪರಿಹಾರ. ರಾಮನು
ನಮ್ಮವನಲ್ಲ, ಅವನು ಪ್ರತಿಯೊಬ್ಬರಿಗೂ ಸೇರಿದವನು" ಎಂದು ಪ್ರಧಾನಿ ಹೇಳಿದರು.
"ಇಂದು, ನಾವು ಕೇವಲ ರಾಮ ಲಲ್ಲಾ ಅವರ ವಿಗ್ರಹದ ಪ್ರಾಣ ಪ್ರತಿಷ್ಠೆಯನ್ನು ನೋಡಿದ್ದಲ್ಲ, ಭಾರತದ ಮುರಿಯಲಾಗದ ಏಕತೆಯ ಪ್ರಾಣ ಪ್ರತಿಷ್ಠೆಯನ್ನು ಸಹ ನೋಡಿದ್ದೇವೆ" ಎಂದು
ದೆಹಲಿಯ ಮನೆಯಲ್ಲಿ ಹಣತೆ ಬೆಳಗಿ ದೀಪಾವಳಿ ಆಚರಿಸುತ್ತಾ ಸಂಜೆ ಮೋದಿ
ಹೇಳಿದರು.
ರಾಮ ಜನ್ಮಭೂಮಿ ಮಂದಿರವು ಸಾಂಪ್ರದಾಯಿಕ ನಾಗರ ಶೈಲಿಯಲ್ಲಿ ರೂಪುಗೊಂಡಿದೆ, 392 ಸ್ತಂಭಗಳೂ ಮತ್ತು 44 ಬಾಗಿಲುಗಳನ್ನು ಹೊಂದಿದೆ. ಸ್ತಂಭಗಳು ಮತ್ತು ಗೋಡೆಗಳು ಹಿಂದೂ ದೇವತೆಗಳ ಕೆತ್ತನೆಯ ಚಿತ್ರಣಗಳನ್ನು ಪ್ರದರ್ಶಿಸಿವೆ.
ಭಕ್ತರಿಗೆ ರಾಮಲಲ್ಲಾ ದರ್ಶನ
ಅಯೋಧ್ಯೆಯ ರಾಮ ಮಂದಿರದಲ್ಲಿ ಜನವರಿ 23ರ ಮಂಗಳವಾರದಿಂದ ಭಕ್ತರಿಗೆ ಬಾಲರಾಮನ ದರ್ಶನ ಲಭಿಸಲಿದ್ದು ಬೆಳಗ್ಗೆ 7ರಿಂದ 10.30 ಮತ್ತು ಮಧ್ಯಾಹ್ನ 2 ಗಂಟೆಯಿಂದ ಸಂಜೆ 7 ಗಂಟೆಯವರೆಗೆ ದರ್ಶನ ಅವಕಾಶ ಒದಗಿಸಲಾಗಿದೆ ಎಂದು ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ತಿಳಿಸಿದೆ.
ನಿತ್ಯ ಸಂಜೆ 6.30ಕ್ಕೆ ವಿಶೇಷ ಭಜನೆ, ಶೃಂಗಾರ
ಆರತಿ ನಡೆಯಲಿದ್ದು ಭಕ್ತರು ಒಂದು ದಿನ ಮೊದಲೇ ತಮ್ಮ ಸ್ಥಾನ ಕಾಯ್ದಿರಿಸಿಕೊಳ್ಳಬೇಕು ಎಂದು ಟ್ರಸ್ಟ್
ಕಾರ್ಯದರ್ಶಿ ಚಂಪತ್ ರಾಯ್ ತಿಳಿಸಿದ್ದಾರೆ.
ಸಂಜೆ 7 ಗಂಟೆಗೆ ಬಾಲ ರಾಮನಿಗೆ ಆರತಿ ನಡೆಯಲಿದ್ದು,
ಆರತಿ ದರ್ಶನಕ್ಕೆ ಬರುವ ಭಕ್ತರು ಮುಂಚಿತವಾಗಿ ಟ್ರಸ್ಟ್ ಕಚೇರಿಯಿಂದ ಪಾಸ್ ಪಡೆದಿರಬೇಕು ಎಂದು ಹೇಳಿದರು.
ಬಾನಿನಿಂದ ರಾಮ ಮಂದಿರದ ವಿಡಿಯೋ
ಈ ಮಧ್ಯೆ ಹೆಲಿಕಾಪ್ಟರ್ ಮೂಲಕ ಇಂದು ಚಿತ್ರಿಸಲಾದ
ರಾಮ ಮಂದಿರ ಪ್ರಾಣ ಪ್ರತಿಷ್ಠಾ ಕಾರ್ಯಕ್ರಮ ಸಂದರ್ಭದ ವಿಡಿಯೋ ಒಂದು ವೈರಲ್ ಆಗಿದ್ದು ಅದನ್ನು
ನೋಡಲು ಕೆಳಗೆ ಕ್ಲಿಕ್ ಮಾಡಬಹುದು.
ಈ ಕೆಳಗಿನ ಸುದ್ದಿಗಳನ್ನೂ ಓದಿರಿ:
No comments:
Post a Comment