ವಿವಿಧ ಭಾರತಿಯಲ್ಲಿ ಆತ್ಮನಿರ್ಭರ ಗ್ರಾಮ ಪಂಚಾಯಿತಿ
ಬೆಂಗಳೂರು: ʼಆತ್ಮ ನಿರ್ಭರ ಗ್ರಾಮ ಪಂಚಾಯಿತಿʼ ಕುರಿತು ಬೆಂಗಳೂರಿನ ಸಂಪೂರ್ಣ ಸ್ವರಾಜ್ ಫೌಂಡೇಷನ್ ಸಂಸ್ಥಾಪಕ ಡಾ. ಶಂಕರ ಕೆ. ಪ್ರಸಾದ್ ಅವರ ಬಾನುಲಿ ಕಾರ್ಯಕ್ರಮವು 2024 ಮಾರ್ಚ್ 21ರ ಗುರುವಾರ ರಾತ್ರಿ 8 ಗಂಟೆಗೆ ವಿವಿಧ ಭಾರತಿಯಲ್ಲಿ (ತರಂಗಾಂತರ 102.9೯ ಎಫ್ ಎಂ) ಪ್ರಸಾರವಾಗಲಿದೆ ಎಂದು ಸಂಪೂರ್ಣ ಸ್ವರಾಜ್ ಫೌಂಡೇಷನ್ ಪತ್ರಿಕಾ ಪ್ರಕಟಣೆ ತಿಳಿಸಿದೆ.
ಡಾ. ಪ್ರಸಾದ್
ಅವರು ಗ್ರಾಮ ಪಂಚಾಯಿತಿಗಳನ್ನು ಸ್ವಾವಲಂಬಿಯಾಗಿಸಲು ಸೀಮಾತೀತ ತಂತ್ರಜ್ಞಾನಗಳನ್ನು ಬಳಸುವ ಬಗ್ಗೆ
ಕನ್ನಡ ಹಾಗೂ ಇಂಗ್ಲಿಷಿನಲ್ಲಿ ಪುಸ್ತಕಗಳನ್ನು ಬರೆದಿದ್ದು ಈ ಪುಸ್ತಕದಲ್ಲಿನ ವಿಷಯಗಳ ಬಗ್ಗೆ ಮಾತನಾಡಲಿದ್ದಾರೆ
ಎಂದು ಹೇಳಿಕೆ ತಿಳಿಸಿದೆ.
ಇವುಗಳನ್ನೂ ನೋಡಿ:
No comments:
Post a Comment