ರೆಸ್ಪಾನ್ಸಿವ್ ಗವರ್ನೆನ್ಸ್ ಗೆ ʼಸಂಪೂರ್ಣʼ ಸಹಕಾರ
ಬೆಂಗಳೂರು: ತಾನು ಪ್ರಕಟಿಸಿರುವ ʼಆತ್ಮ ನಿರ್ಭರ ಗ್ರಾಮ ಪಂಚಾಯಿತಿʼ ಪುಸ್ತಕಗಳನ್ನು ಉಚಿತವಾಗಿ ಒದಗಿಸುವ
ಮೂಲಕ ನಗರದ ಸಂಪೂರ್ಣ ಸ್ವರಾಜ್ ಫೌಂಡೇಶನ್ ಸಂಸ್ಥೆಯು ದೆಹಲಿ ಮೂಲದ ರೆಸ್ ಗೌ (ಫೌಂಡೇಶನ್ ಫಾರ್
ರೆಸ್ಪಾನ್ಸಿವ್ ಗವರ್ನೆನ್ಸ್) ಸಂಸ್ಥೆಯ ಧನಾತ್ಮಕ ಕಾರ್ಯಕ್ಕೆ ಸಹಕಾರ ನೀಡಿದೆ.
ಪಂಚಾಯತ್
ರಾಜ್ ಸಚಿವಾಲಯದ ಹಿಂದಿನ ಕಾರ್ಯದರ್ಶಿ ಸುನೀಲ್ ಕುಮಾರ್ ಅವರು ನಿರ್ದೇಶಕರಾಗಿರುವ ದೆಹಲಿಯ ರೆಸ್
ಗೌ ಸಂಸ್ಥೆಯು ಸ್ಪಂದನಶೀಲ ಆಡಳಿತಕ್ಕಾಗಿ ದೇಶದ ವಿವಿಧ ರಾಜ್ಯಗಳಲ್ಲಿ ಕಾರ್ಯ ನಿರ್ವಹಿಸುತ್ತಿದೆ.
ಕರ್ನಾಟಕದಲ್ಲಿ
ಮೈಸೂರು ಜಿಲ್ಲೆಯ ಹೆಗ್ಗಡದೇವನ ಕೋಟೆ, ನಂಜನಗೂಡು, ಯಾದಗಿರಿ ತಾಲೂಕು ಮತ್ತು ಜಿಲ್ಲೆ, ಬಿಜಾಪುರ ತಾಲೂಕು
ಮತ್ತು ಜಿಲ್ಲೆಗಳಲ್ಲಿ ಚುನಾಯಿತ ಮಹಿಳಾ ಪ್ರತಿನಿಧಿಗಳಿಗೆ ಚಟುವಟಿಕೆ ಆಧಾರಿತ ಕಾರ್ಯಕ್ರಮಗಳನ್ನು
ಹಮ್ಮಿಕೊಳ್ಳಲು ಮಾರ್ಗದರ್ಶನ ಮಾಡುವ ಮೂಲಕ ಅವರ ಸಾಮರ್ಥ್ಯ ವೃದ್ಧಿಗೆ ರೆಸ್ ಗೌ ಶ್ರಮಿಸುತ್ತಿದೆ.
ಈ ವಿಚಾರವನ್ನು
ಅರಿತ ಸಂಪೂರ್ಣ ಸ್ವರಾಜ್ ಫೌಂಡೇಶನ್ ಈ ಜಿಲ್ಲೆಗಳ ಆಯ್ದ 60 ಮಂದಿ ಚುನಾಯಿತ ಮಹಿಳಾ ಪ್ರತಿನಿಧಿಗಳಿಗೆ
ತಾನು ಪ್ರಕಟಿಸಿದ ಡಾ. ಶಂಕರ ಕೆ ಪ್ರಸಾದ್ ಅವರ ʼಆತ್ಮ ನಿರ್ಭರ ಗ್ರಾಮ ಪಂಚಾಯಿತಿʼ ಪುಸ್ತಕಗಳನ್ನು ಉಚಿತವಾಗಿ ಒದಗಿಸಿದೆ.
ರೆಸ್ ಗೌ ಸಂಸ್ಥೆಯ ಹಿರಿಯ ರಾಜ್ಯ ಒಡನಾಡಿ ಶೈಲಜಾ ಎಸ್. ಮತ್ತು ಇತರರು ಪುಸ್ತಕಗಳನ್ನು ಚುನಾಯಿತ
ಮಹಿಳಾ ಸದಸ್ಯರು ಮತ್ತು ತರಬೇತಿದಾರರಿಗೆ ವಿತರಿಸಿದ್ದಾರೆ.
ದುರ್ಬಲ
ವರ್ಗದ ಜನರ ಸಾಮರ್ಥ್ಯ ವೃದ್ಧಿಗಾಗಿ ಕ್ರಿಯಾಶೀಲ ಮಾರ್ಗದರ್ಶನ, ಶಿಕ್ಷಣ ನೀಡುವುದು, ಸರ್ಕಾರದ ವಿವಿಧ
ಯೋಜನೆಗಳ ಅನುಷ್ಠಾನಗಳ ಕುರಿತು ಸಮೀಕ್ಷೆ ನಡೆಸಿ ಸ್ಪಂದನಶೀಲ ಆಡಳಿತಕ್ಕಾಗಿ ಶಿಫಾರಸು ಮಾಡುವುದು ಇತ್ಯಾದಿ
ಕಾರ್ಯಗಳನ್ನು ಮಾಡುತ್ತಿರುವ ರೆಸ್ ಗೌ, ಹಿಂದುಳಿದ ರಾಜ್ಯಗಳಾದ ಜಾರ್ಖಂಡ್, ಬಿಹಾರ, ಮೇಘಾಲಯ, ಮಧ್ಯಪ್ರದೇಶ
ಮತ್ತಿತರ ಕಡೆ ಕಾರ್ಯ ನಿರ್ವಹಿಸುತ್ತಿದೆ.
ಪಂಚಾಯತ್
ರಾಜ್ ಸಚಿವಾಲಯದ ನಿವೃತ್ತ ಕಾರ್ಯದರ್ಶಿ, ಐಎಎಸ್ ಅಧಿಕಾರಿ ಸುನೀಲ್ ಕುಮಾರ್ ಅವರು ಸಂಪೂರ್ಣ ಸ್ವರಾಜ್
ಫೌಂಡೇಶನ್ ರೂಪಿಸಿದ ʼದಿಕ್ಸೂಚಿ
ಕಲಿಕಾ ತಂತ್ರಜ್ಞಾನʼವನ್ನು
(ನ್ಯಾವಿಗೇಟೆಡ್
ಲರ್ನಿಂಗ್ ಟೆಕ್ನಾಲಜಿ- ಎನ್ ಎಲ್ ಟಿ) ಮೆಚ್ಚಿಕೊಂಡು ಪಂಚಾಯಿತಿ ಸದಸ್ಯರಿಗೆ ತರಬೇತಿಗೆ ಅದನ್ನು
ಬಳಸಿಕೊಳ್ಳುವಂತೆ ಸಲಹೆ ಮಾಡಿದ್ದರು.
ಇವುಗಳನ್ನೂ ಓದಿರಿ:
ಮುಂದಿನ ಬಜೆಟಿಗೆ ಎನ್‌ಎಲ್‌ಟಿ:
ಗೃಹ ಸಚಿವ ಪರಮೇಶ್ವರ್ ಭರವಸೆ
ಭ್ರಷ್ಟಾಚಾರ, ಮಧ್ಯವರ್ತಿ
ನಿವಾರಣೆಗೆ ತಂತ್ರಜ್ಞಾನ ಪರಿಹಾರ
ಗಾಂಧಿಗಿರಿಯ ʼಗುಲಾಬಿ ಗ್ಯಾಂಗ್ʼ ಕಥೆಗೆ ಇದೀಗ ಪುಸ್ತಕ ರೂಪ
ಏನಿದೆ ಈ ಪುಸ್ತಕಗಳಲ್ಲಿ?
ಪುಸ್ತಕಗಳ ಬಿಡುಗಡೆ ಸಮಾರಂಭ
ರೇಡಿಯೋ ಶಿವಮೊಗ್ಗದಲ್ಲಿ ʼಆತ್ಮ ನಿರ್ಭರ ಗ್ರಾಮ ಪಂಚಾಯಿತಿʼ
ಶಿವಮೊಗ್ಗ ಬಾನುಲಿಯಲ್ಲಿ ಬಂತು ʼಆತ್ಮ ನಿರ್ಭರ ಗ್ರಾಮ ಪಂಚಾಯಿತಿʼ
ಶಿವಮೊಗ್ಗ ಬಾನುಲಿಯಲ್ಲಿ ಬಂತು ʼಆತ್ಮ ನಿರ್ಭರ ಗ್ರಾಮ ಪಂಚಾಯಿತಿʼ ಕಂತು-2
ಸಾಮರ್ಥ್ಯ ವೃದ್ಧಿಗೆ ಡಿಜಿಟಲ್
ತಂತ್ರಜ್ಞಾನ ಬಳಕೆ ಹೇಗೆ?
ಇದೀಗ ಬಿಡುಗಡೆಯಾಗಿದೆ……
ಎನ್‌ಎಲ್‌ಟಿ ಬಳಕೆ: ಸಮಿತಿ
ರಚನೆಗೆ ಸಚಿವ ಖರ್ಗೆ ನಿರ್ದೇಶನ
ಪಂಚಾಯಿತಿ ತರಬೇತಿಗೆ ದಿಕ್ಸೂಚಿ ಕಲಿಕಾ ತಂತ್ರಜ್ಞಾನ:
ಕೇಂದ್ರ ಮನ್ನಣೆ
ದೇಶದಲ್ಲೇ ಮೊದಲು ಶಿವಮೊಗ್ಗದಲ್ಲಿ ದಿಕ್ಸೂಚಿ ಕಲಿಕಾ
ತಂತ್ರಜ್ಞಾನ
ಗ್ರಾಮ ಪಂಚಾಯತಿಗಳಿಗೆ ತಂತ್ರಜ್ಞಾನ ಸಂಯೋಜನೆಗೆ ಇಸ್ರೋ
ಆಸಕ್ತಿ
ಆತ್ಮ ನಿರ್ಭರ ಗ್ರಾಮ ಪಂಚಾಯ್ತಿ ಪುಸ್ತಕದ ಡಿಜಿಟಲ್ ಆವೃತ್ತಿಯೂ ಇದೀಗ ಲಭ್ಯ. ಶೇಕಡಾ 50ರಷ್ಟು
ದರ ಪಾವತಿಸಿ ಡಿಜಿಟಲ್ ಪುಸ್ತಕವನ್ನು ಪಡೆಯಬಹುದು. ಪುಸ್ತಕ ಪಡೆಯಲು ಸಂಪರ್ಕಿಸಿ: ಮೊಬೈಲ್ ನಂಬರ್
9480215706 ಅಥವಾ 9845049970. ಡಿಜಿಟಲ್ ಪುಸ್ತಕ ನೋಡಲು ಕೆಳಗಿನ ಚಿತ್ರ ಕ್ಲಿಕ್ ಮಾಡಿರಿ:
No comments:
Post a Comment