ಬಿರಡಹಳ್ಳಿಗೆ ಏಕೆ ರಾಷ್ಟ್ರ ಪ್ರಶಸ್ತಿ ಬಂತು?
ಕರ್ನಾಟಕದ ಹಾಸನ ಜಿಲ್ಲೆಯ ಸಕ್ಲೇಶಪುರ ಸುಂದರವಾದ ನಿಸರ್ಗದ ಮಡಿಲ ತಾಣ. ಇದು ಕಾಫಿ ತೋಟಗಳು, ಬೆಟ್ಟ ಗುಡ್ಡಗಳನ್ನು ಒಳಗೊಂಡಿರುವ ಸುಂದರವಾದ ಪಶ್ಚಿಮ ಘಟ್ಟದ ಹಚ್ಚ ಹಸಿರಿನ ಪ್ರದೇಶ. ಇಲ್ಲಿನ ಕಾಡೊಳಗೆ ಇರುವ ಪುಟ್ಟ ಗ್ರಾಮ ಬಿರಡಹಳ್ಳಿ. ಈ ಪುಟ್ಟ ಹಳ್ಳಿಯು ಭರವಸೆ ಮತ್ತು ದೃಢ ಸಂಕಲ್ಪದ ಬೆಳಕಾಗಿ ಸೂರ್ಯನಂತೆ ಕಂಗೊಳಿಸುತ್ತಿದೆ.
ದಟ್ಟ ಹಸಿರಿನ ಮಧ್ಯೆ ಇರುವ ಈ ಗ್ರಾಮ ಅಂಗಾರಾಮ್ಲ ಮುಕ್ತ ಪರಿಸರಕ್ಕಾಗಿ
ಹಲವಾರು ಕ್ರಮಗಳನ್ನು ಕೈಗೊಂಡಿದೆ.
ಗ್ರಾಮ ಪಂಚಾಯಿತಿ ಕಚೇರಿ ಛಾವಣಿ ಮೇಲೆ ಸೌರ ಫಲಕಗಳಿವೆ.ಇವು ಇಡೀ ಕಚೇರಿಗೆ ವಿದ್ಯುತ್ ಉತ್ಪಾದಿಸುತ್ತಿವೆ. ಅಲ್ಲದೆ ಸುತ್ತ ಮುತ್ತಲಿನ ಪ್ರದೇಶಕ್ಕೂ ʼಶೂನ್ಯ ಮಾಲಿನ್ಯ ಕಾರ್ಬನ್ ಚಿನ್ನʼವನ್ನು ಒದಗಿಸಿಕೊಡುತ್ತಿವೆ. ತೋಟದ ಬೇಲಿ, ಸಿಸಿಟಿವಿ ಕ್ಯಾಮರಾ, ಅಂಚೆ ಕಚೇರಿಗಳು ಕೂಡಾ ಈ ಸೌರ ವಿದ್ಯುತ್ತಿನಿಂದಲೇ ನಡೆಯುತ್ತಿವೆ. ರಸ್ತೆಗಳಲ್ಲಿ ಬೀದಿ ದೀಪಗಳಿಗಾಗಿ ಸೌರ ಫಲಕಗಳನ್ನು ಅಳವಡಿಸಲಾಗಿದೆ. ಸೌರಶಕ್ತಿಯ ೨೧ ಹೈ ಮಾಸ್ಕ್ ಬೀದಿ ದೀಪಗಳು ಮತ್ತು ೧೯೦ ಮಿನಿ ಸೋಲಾರ್ ದೀಪಗಳನ್ನು ಅಳವಡಿಸುವ ಮೂಲಕ ಬೀದಿ ದೀಪಗಳ ವಿದ್ಯುತ್ ವೆಚ್ಚವನ್ನು ನಿಯಂತ್ರಿಸಲಾಗಿದೆ.
ಗ್ರಾಮದ ಹಲವಾರು ಮನೆಗಳು ಸೌರ ಫಲಕಗಳನ್ನು ಅಳವಡಿಸಿಕೊಳ್ಳುವ ಮೂಲಕ
ವಿದ್ಯುತ್ ಸ್ವಾವಲಂಬನೆ ಸಾಧಿಸಿವೆ. ತೋಟಗಳಲ್ಲಿ ಕೂಡಾ ಸೌರ ಫಲಕಗಳು ತುಂತುರು ನೀರಾವರಿಗೆ ಮೋಟಾರು
ಚಲಾಯಿಸಲು ಬೇಕಾದ ವಿದ್ಯುತ್ತು ಉತ್ಪಾದಿಸುತ್ತಿವೆ.
ಕಳೆದ ೫ ವರ್ಷಗಳಿಂದ ಪಂಪ್ ಓಡಿಸಲು ಸೌರ ವಿದ್ಯುತ್ ಬಳಸುತ್ತಿದ್ದೇವೆ.
ಇದು ಅತ್ಯಂತ ಉಪಯುಕ್ತ. ಲೈಟಿಂಗ್, ಫ್ರಿಡ್ಜ್, ೫ ಎಚ್ ಪಿಯ ನೀರೆತ್ತುವ ಮೋಟಾರು ಪಂಪ್ ಚಾಲನೆಗೂ
ಅನುಕೂಲವಾಗಿದೆ ಎನ್ನುತ್ತಾರೆ ಎನ್ನುತ್ತಾರೆ ಬಿರಡಹಳ್ಳಿಯ ನಿವಾಸಿ ಡಬ್ಲ್ಯೂ. ಕುಲಾಸೋ.
ಗ್ರಾಮದ ದುರ್ಬಲ ವರ್ಗಗಳಿಗೆ ಪಂಚಾಯಿತಿ ಸೌರ ದೀಪಗಳನ್ನು ಒದಗಿಸಿದೆ.
ಗ್ರಾಮದ ಇಡೀ ಸಮುದಾಯ ಈ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುತ್ತಿವೆ. ಹಲವು ಮನೆಗಳು ಸೌರ ದೀಪದ ವ್ಯವಸ್ಥೆ,
ನೀರು ಕಾಯಿಸಲು ಸೌರ ಆಧಾರಿತ ವ್ಯವಸ್ಥೆ ಮಾಡಿಕೊಂಡಿವೆ.
ಹಲವು ಮನೆಗಳು ಎಲ್ ಪಿಜಿ ಜೊತೆಗೆ ಜೈವಿಕ ಅನಿಲ ಉತ್ಪಾದನೆಯ ವ್ಯವಸ್ಥೆ
ಮಾಡಿಕೊಂಡು ಮಾಲಿನ್ಯವನ್ನು ನಿಯಂತ್ರಿಸುತ್ತಿವೆ. ಗ್ರಾಮ ಸಭೆ ಮತ್ತು ಇತರ ಸಭೆಗಳಲ್ಲಿ ಜನರಿಗೆ ಎಲೆಕ್ಟ್ರಿಕ್
ಕಾರು ಮತ್ತು ಬೈಕು ಇತ್ಯಾದಿಗಳ ಬಳಕೆ ಬಗ್ಗೆ, ಏಕ ಬಳಕೆಯ ಪ್ಲಾಸ್ಟಿಕ್ ನಿಷೇದದ ಬಗ್ಗೆ ಮಾಹಿತಿ ನೀಡಿ
ಶಿಕ್ಷಣ ನೀಡುವ ಕೆಲಸಗಳನ್ನೂ ಪಂಚಾಯಿತಿ ಮಾಡುತ್ತಿದೆ.
ಗ್ರಾಮದ ತ್ಯಾಜ್ಯ ವಿಲೇವಾರಿಗೂ ಪಂಚಾಯಿತಿಯೂ ತ್ಯಾಜ್ಯ ವಿಲೇವಾರಿ ಘಟಕವನ್ನು
ನಿರ್ಮಿಸಿಕೊಂಡಿದೆ.
ಸಭೆಗಳಲ್ಲಿ ಮಾಲಿನ್ಯ ಮುಕ್ತ ಪರಿಸರ ನಿರ್ಮಾಣಕ್ಕಾಗಿ ಪ್ರತಿಜ್ಞೆ ಸ್ವೀಕಾರ, ಮಕ್ಕಳಿಂದ ಸ್ವಚ್ಛತಾ ಹೀ ಸೇವಾ ಆಂದೋಲನ, ರಸ್ತೆ ಬದಿಗಳಲ್ಲಿ ಎಚ್ಚರಿಕೆಯ ಫಲಕ ಹಾಕುವ ಮೂಲಕವೂ ಪರಿಸರವನ್ನು ಸ್ವಚ್ಛವಾಗಿ ಇರಿಸಿಕೊಳ್ಳುವ ಜಾಗೃತಿ ಮೂಡಿಸಲಾಗುತ್ತಿದೆ.
ಮಹಾತ್ಮಾ ಗಾಂಧಿ ನರೇಗಾ ಯೋಜನೆಯ ಅಡಿಯಲ್ಲಿ ವನಮಹೋತ್ಸವ ಆಚರಣೆ ಮೂಲಕ
ಗಿಡಮರಗಳ ಬಗ್ಗೆ ಅರಿವು ಮೂಡಿಸಲಾಗುತ್ತಿದೆ. ವಿವಿಧ ತಳಿಗಳ ಒಂದು ಲಕ್ಷ ಸಸಿಗಳನ್ನು ಗ್ರಾಮ ಪಂಚಾಯಿತಿ
ಪ್ರದೇಶದಲ್ಲಿ ನೆಡಲಾಗಿದೆ.ಇದರಿಂದಾಗಿ ಸುತ್ತ ಮುತ್ತ ಹಸಿರಿನ ಛಾಯೆ ಎದ್ದು ಕಾಣುತ್ತದೆ. ತುಂತುರು
ಮತ್ತು ಹನಿ ನೀರಾವರಿಗೆ ಸೌರವಿದ್ಯುತ್ ನಿರಂತರ ಒದಗಿಸುವ ಮೂಲಕ ರೈತರಲ್ಲಿ ಹೊಸ ಭರವಸೆ ತುಂಬಲಾಗಿದೆ.
ಘನ ತ್ಯಾಜ್ಯ ಘಟಕವನ್ನು ಪಂಚಾಯಿತಿ ವತಿಯಿಂದಲೇ ನಿರ್ಮಿಸಿ ಅದಕ್ಕೆ
ಸ್ವಚ್ಛ ಸಂಕೀರ್ಣ ಎಂಬ ಹೆಸರು ಇಡಲಾಗಿದೆ. ಇಲ್ಲಿ ವೈಜ್ಞಾನಿಕವಾಗಿ ಹಸಿ ಕಸ, ಒಣ ಕಸಗಳನ್ನು ವಿಂಗಡಿಸಿ
ವಿಲೇವಾರಿ ಮಾಡುವ ವ್ಯವಸ್ಥೆ ಇದೆ.
ಗ್ರಾಮಗಳಲ್ಲಿ ಸ್ವಚ್ಚತೆಯನ್ನು ಕಾಪಾಡಲು ಮನೆಗಳಿಗೆ ಶೌಚಾಲಯ, ಹಿತ್ತಲ
ಕೈ ತೋಟಗಳನ್ನು ಮಾಡಲು ಹೇಳಿಕೊಡಲಾಗಿದೆ. ಪರಿಸರ ಸಂರಕ್ಷಣೆಯ ಇಂತಹ ಹತ್ತಾರು ಕಾರ್ಯಕ್ರಮಗಳಿಗಾಗಿ
ಜಿಲ್ಲೆ ಮತ್ತು ರಾಜ್ಯಮಟ್ಟದ ಹಲವಾರು ಪ್ರಶಸ್ತಿಗಳೂ ಬಿರಡಹಳ್ಳಿ ಗ್ರಾಮ ಪಂಚಾಯಿತಿಯ ಮುಡಿಗೇರಿವೆ.
ಪರಿಸರವನ್ನು ಹಸಿರಾಗಿಸಿ ಭೂಮಿಯ ರಕ್ಷಣೆಗಾಗಿ ನಿರಂತರ ಶ್ರಮಿಸುತ್ತಿರುವ
ಈ ಪಂಚಾಯಿತಿಯ ಈ ಸಾಧನೆಗೆ ಈಗ ಕೇಂದ್ರ ಸರ್ಕಾರದ ರಾಷ್ಟ್ರೀಯ ಪಂಚಾಯಿತಿ ಪ್ರಶಸ್ತಿಯೂ ಲಭಿಸಿದೆ.
ವಿಡಿಯೋ ನೋಡಲು ಕೆಳಗಿನ ಚಿತ್ರ ಕ್ಲಿಕ್ ಮಾಡಿ ಅಥವಾ ಯೂ ಟ್ಯೂಬ್ ಲಿಂಕ್ ಕ್ಲಿಕ್ ಮಾಡಿ.
ಇವುಗಳನ್ನೂ ಓದಿರಿ:
ಪರಿಸರ ರಕ್ಷಣೆ: ಬಿರಡಹಳ್ಳಿಗೆ ರಾಷ್ಟ್ರೀಯ ಪ್ರಶಸ್ತಿ ಕಿರೀಟ
ರೆಸ್ಪಾನ್ಸಿವ್ ಗವರ್ನೆನ್ಸ್ ಗೆ ʼಸಂಪೂರ್ಣʼ ಸಹಕಾರ
ಮುಂದಿನ ಬಜೆಟಿಗೆ ಎನ್‌ಎಲ್‌ಟಿ: ಗೃಹ ಸಚಿವ ಪರಮೇಶ್ವರ್ ಭರವಸೆ
ಭ್ರಷ್ಟಾಚಾರ, ಮಧ್ಯವರ್ತಿ ನಿವಾರಣೆಗೆ ತಂತ್ರಜ್ಞಾನ ಪರಿಹಾರ
ಗಾಂಧಿಗಿರಿಯ ʼಗುಲಾಬಿ ಗ್ಯಾಂಗ್ʼ ಕಥೆಗೆ ಇದೀಗ ಪುಸ್ತಕ ರೂಪ
ಏನಿದೆ ಈ ಪುಸ್ತಕಗಳಲ್ಲಿ?
ಪುಸ್ತಕಗಳ ಬಿಡುಗಡೆ ಸಮಾರಂಭ
ರೇಡಿಯೋ ಶಿವಮೊಗ್ಗದಲ್ಲಿ ʼಆತ್ಮ ನಿರ್ಭರ ಗ್ರಾಮ ಪಂಚಾಯಿತಿʼ
ಶಿವಮೊಗ್ಗ ಬಾನುಲಿಯಲ್ಲಿ ಬಂತು ʼಆತ್ಮ ನಿರ್ಭರ ಗ್ರಾಮ ಪಂಚಾಯಿತಿʼ
ಶಿವಮೊಗ್ಗ ಬಾನುಲಿಯಲ್ಲಿ ಬಂತು ʼಆತ್ಮ ನಿರ್ಭರ ಗ್ರಾಮ ಪಂಚಾಯಿತಿʼ ಕಂತು-2
ಸಾಮರ್ಥ್ಯ ವೃದ್ಧಿಗೆ ಡಿಜಿಟಲ್ ತಂತ್ರಜ್ಞಾನ ಬಳಕೆ ಹೇಗೆ?
ಇದೀಗ ಬಿಡುಗಡೆಯಾಗಿದೆ……
ಎನ್‌ಎಲ್‌ಟಿ ಬಳಕೆ: ಸಮಿತಿ ರಚನೆಗೆ ಸಚಿವ ಖರ್ಗೆ ನಿರ್ದೇಶನ
ಪಂಚಾಯಿತಿ ತರಬೇತಿಗೆ ದಿಕ್ಸೂಚಿ ಕಲಿಕಾ ತಂತ್ರಜ್ಞಾನ: ಕೇಂದ್ರ ಮನ್ನಣೆ
ದೇಶದಲ್ಲೇ ಮೊದಲು ಶಿವಮೊಗ್ಗದಲ್ಲಿ ದಿಕ್ಸೂಚಿ ಕಲಿಕಾ ತಂತ್ರಜ್ಞಾನ
ಗ್ರಾಮ ಪಂಚಾಯತಿಗಳಿಗೆ ತಂತ್ರಜ್ಞಾನ ಸಂಯೋಜನೆಗೆ ಇಸ್ರೋ ಆಸಕ್ತಿ
ಆತ್ಮ ನಿರ್ಭರ ಗ್ರಾಮ ಪಂಚಾಯ್ತಿ ಪುಸ್ತಕ ಮತ್ತು ಅದರ ಇಂಗ್ಲಿಷ್ ಆವೃತ್ತಿ ರಿಬೂಟಿಂಗ್ ಡೆಮಾಕ್ರಸಿ ಇನ್ ಗ್ರಾಮ ಪಂಚಾಯತ್ಸ್ ಪುಸ್ತಕದ ಡಿಜಿಟಲ್ ಆವೃತ್ತಿಯೂ ಇದೀಗ ಲಭ್ಯ. ಶೇಕಡಾ 50ರಷ್ಟು ದರ ಪಾವತಿಸಿ ಡಿಜಿಟಲ್ ಪುಸ್ತಕವನ್ನು ಪಡೆಯಬಹುದು. ಪುಸ್ತಕ ಪಡೆಯಲು ಸಂಪರ್ಕಿಸಿ: ಮೊಬೈಲ್ ನಂಬರ್ 9480215706 ಅಥವಾ 9845049970.
ಡಿಜಿಟಲ್ ಪುಸ್ತಕ ನೋಡಲು ಕೆಳಗಿನ ಚಿತ್ರಗಳನ್ನು ಕ್ಲಿಕ್ ಮಾಡಿರಿ:
No comments:
Post a Comment