ಯಕ್ಷಗಾನ / ತಾಳಮದ್ದಳೆ
ಒಂದು ವಿನೂತನ ಪ್ರಯೋಗ
ಇತ್ತೀಚೆಗೆ ಉಡುಪಿ ಜಿಲ್ಲೆಯ ಅಜೆಕಾರು ಸಮೀಪದ ಅಂಡಾರಿನಲ್ಲಿ ಪೂಕಳ
ಗೋಪಾಲ ಕೃಷ್ಣ ಭಟ್- ಲೀಲಾವತಿ ದಂಪತಿ ತಾವು ನಿರ್ಮಿಸಿದ ʼಸಮುದ್ಯತಾʼ ಮನೆಯ ಗೃಹ
ಪ್ರವೇಶವನ್ನು ಪುತ್ರ ಅಮೃತ ಕಿರಣ ಭಟ್, ಸೊಸೆ ಅನುಷಾ ಭಟ್ ನೆತ್ರಕೆರೆ, ಪುತ್ರಿ ಚೈತ್ರಿಕಾ ಮತ್ತು
ಬಂಧು ಬಾಂಧವರೊಡಗೂಡಿ ವಿಧಿಯುಕ್ತವಾಗಿ ನೆರವೇರಿಸಿದರು.
ಈ ಸಂದರ್ಭದಲ್ಲಿ ಅಲ್ಲಿಗೆ ಅತಿಥಿಗಳಾಗಿ ಬಂದಿದ್ದ
ಕೆಲವು ಯಕ್ಷಗಾನ ಪ್ರಿಯರಿಗೆ ತಾಳಮದ್ದಳೆಯೊಂದನ್ನು ಆಯೋಜಿಸಿದರೆ ಹೇಗೆ ಎಂಬ ಯೋಚನೆ ಬಂತು. ಪೂರ್ಲುಪಾಡಿ
ಈಶ್ವರ್ ಭಟ್ ಅವರು ಈ ಬಗ್ಗೆ ಪೂಕಳ ಶ್ರೀಕೃಷ್ಣ ಭಟ್ ಅವರ ಜೊತೆಗೆ ಮಾತನಾಡಿದರು.
ಯಕ್ಷಗಾನ ಎಂದರೆ ಕುಣಿದಾಡುವ ಶ್ರೀಕೃಷ್ಣ ಭಟ್ ಸೈ ಎಂದರು. ಮೊದಲೇ
ಗೊತ್ತಾಗಿದ್ದರೆ ಇನ್ನೊಂದು ಆಸಕ್ತರನ್ನು ಕರೆಸಬಹುದಿತ್ತು ಎಂದರು. ಇತ್ತೀಚೆಗೆ ಭಾಗವತಿಕೆಯನ್ನು ಕಲಿತುಕೊಂಡಿದ್ದ ಶ್ಯಾಮ ಸುಂದರ ನೆತ್ರಕೆರೆ
ಮೊದಲೇ ಹೇಳಿದ್ದರೆ ಭಾಗವತಿಕೆಗೆ ಅಗತ್ಯ ಸಿದ್ಧತೆಗಳೊಂದಿಗೆ ಬರುತ್ತಿದ್ದೆ ಎಂದರು. ಅಷ್ಟರಲ್ಲಾಗಲೇ
ಈಶ್ವರ ಭಟ್ ಅವರು ತಮ್ಮ ಮಿತ್ರ ಮೋನಪ್ಪ ಸೇರಾಜೆ ಅವರನ್ನು ಸಂಪರ್ಕಿಸಿ ಚರ್ಚಿಸಿದ್ದರು.
ಮೋನಪ್ಪ ಅವರು ಮನೆಯಲ್ಲೇ ಕುಳಿತು ಭಾಗತಿಕೆಯ ಕೆಲವು ಪದಗಳನ್ನು ಹಾಡಿ
ಮೊಬೈಲಿನಲ್ಲೇ ದಾಖಲಿಸಿ ಕಳುಹಿಸಿದರು. ಆಧುನಿಕ ತಂತ್ರಜ್ಞಾನ ಸಾಧನವಾದ ಮೊಬೈಲನ್ನೇ ಬಳಸಿಕೊಂಡು ಯಕ್ಷಗಾನ ತಾಳಮದ್ದಳೆ ಮಾಡೋಣ ಎಂಬ ತೀರ್ಮಾನವಾಯಿತು.
ಕಡೆಗೂ ಸುಮಾರು ೩೦-೪೦ ನಿಮಿಷಗಳ ತಾಳಮದ್ದಳೆ ನಡೆಸಲು ಅವರೆಲ್ಲ ಸಜ್ಜಾದರು.
ಶ್ಯಾಮ ಸುಂದರ ನೆತ್ರಕೆರೆ ಭಾಗವತಿಕೆಯ ನೇತೃತ್ವ ವಹಿಸಿ ಸ್ವತಃ ಹಾಡುವುದರ ಜೊತೆಗೆ, ಮೊಬೈಲ್ ಮೂಲಕ ದಾಖಲಿಸಲಾದ ಹಾಡುಗಳನ್ನು ಧ್ವನಿವರ್ಧಕದ ಮುಂದೆ ಹಿಡಿದು ಮೋನಪ್ಪ ಸೇರಾಜೆ ಭಾಗವತಿಕೆ ಹಾಡುಗಳನ್ನು ಸಭೆಗೆ ಕೇಳಿಸಿದರು.
ಈಶ್ವರ ಭಟ್ ಪೂರ್ಲುಪಾಡಿ, ಶ್ರೀಕೃಷ್ಣ ಭಟ್ ಪೂಕಳ, ನೆತ್ರಕೆರೆ ಉದಯಶಂಕರ
ನಾರಾಯಣ ಭಟ್ ಅರ್ಥಗಾರಿಕೆಯನ್ನು ಮಾಡಿದರು. ತಾಳ ಮದ್ದಳೆಯನ್ನು ಅಮೃತ ಕಿರಣ ಭಟ್ ಪೂಕಳ ಮತ್ತು ಅನುಷಾ
ಭಟ್ ನೆತ್ರಕೆರೆ ಸಿನೀಮೀಯವಾಗಿ ಸೆರೆ ಹಿಡಿದರು.
ಆಧುನಿಕ ತಂತ್ರಜ್ಞಾನ ಬಳಸಿಕೊಂಡು ನಡೆಸಿದ ಈ ಯಕ್ಷಗಾನ ತಾಳಮದ್ದಳೆ
ಕಂತು ಕಂತುಗಳಾಗಿ ಈ ಪುಟದಲ್ಲಿ ಮೂಡಿ ಬರಲಿವೆ. ಚಿತ್ರಗಳನ್ನು ಕ್ಲಿಕ್ ಮಾಡುವ ಮೂಲಕ ಅಥವಾ ಯು ಟ್ಯೂಬ್
ವಿಡಿಯೋ ಲಿಂಕ್ ಕ್ಲಿಕ್ ಮಾಡುವ ಮೂಲಕ ಅವುಗಳನ್ನು ಇಲ್ಲಿ ನೋಡಬಹುದು- ಆಲಿಸಬಹುದು.
ಮೊದಲ ಭಾಗ ವೀಕ್ಷಿಸಲು ಮೇಲಿನ ಚಿತ್ರ ಕ್ಲಿಕ್ ಮಾಡಿ ಅಥವಾ ಈ ಯೂ ಟ್ಯೂಬ್ ವಿಡಿಯೋ ಲಿಂಕ್ ಕ್ಲಿಕ್ ಮಾಡಿರಿ:
No comments:
Post a Comment