ರಾಮಮಂದಿರದ ಪ್ರಬಲ ಬೆಂಬಲಿಗ ʼಕಾಶ್ʼ ಪಟೇಲ್ ಎಫ್ ಬಿಐ ಮುಖ್ಯಸ್ಥ
ಬೆಂಗಳೂರು: ವಿವೇಕ ರಾಮಸ್ವಾಮಿ ಮತ್ತು ತುಳಸಿ ಗಬ್ಬಾರ್ಡ್ ಅವರ ಬಳಿಕ
ಭಾರತ ಪರ ಅಭಿಪ್ರಾಯ ಹೊಂದಿರುವ ಮೂರನೇ ಪ್ರಬಲ ಹಾಗೂ ತಮ್ಮ ನಿಷ್ಠಾವಂತ ವ್ಯಕ್ತಿ ಕಶ್ಯಪ್ ಪಟೇಲ್
ಅವರನ್ನು ಫೆಡರಲ್ ಬ್ಯೂರೋ ಆಫ್ ಇನ್ ವೆಸ್ಟಿಗೇಶನ್ (ಎಫ್ ಬಿ ಐ) ಮುಖ್ಯಸ್ಥರಾಗಿ ಅಮೆರಿಕದ ನಿಯೋಜಿತ ಅಧ್ಯಕ್ಷ ಡೊನಾಲ್ಡ್
ಟ್ರಂಪ್ ಅವರು ನೇಮಕ ಮಾಡಿದ್ದಾರೆ.
ʼಕಾಶ್ʼ ಪಟೇಲ್ ಎಂಬುದಾಗಿಯೇ ಖ್ಯಾತಿ ಪಡೆದಿರುವ ಕಶ್ಯಪ್ ಪಟೇಲ್ ಅವರು ಟ್ರಂಪ್ ಕ್ಯಾಬಿನೆಟ್ ಗೆ ಸೇರಿರುವ
ಎರಡನೇ ಭಾರತೀಯ ಮೂಲದ ಅಮೆರಿಕನ್ ಆಗಿದ್ದಾರೆ. ವಿವೇಕ ರಾಮಸ್ವಾಮಿ ಮೊದಲ ಭಾರತೀಯ ಮೂಲದ ಅಮೆರಿಕನ್.
ತುಳಸಿ ಗಬ್ಬಾರ್ಡ್ ಭಾರತೀಯ ಮೂಲದವರಲ್ಲದಿದ್ದರೂ ಹಿಂದೂ ಧರ್ಮವನ್ನು ಪ್ರೀತಿಸಿ ಅಪ್ಪಿಕೊಂಡವರು.
ಕಾಶ್ ಪಟೇಲ್ ನೇಮಕಾತಿಯ ವಿಚಾರವನ್ನು ಟ್ರಂಪ್ ಅವರು ಸಾಮಾಜಿಕ ಜಾಲತಾಣ
ಸಂದೇಶದಲ್ಲಿ ಪ್ರಕಟಿಸಿದ್ದಾರೆ.
ʼಭಾರತೀಯ-ಅಮೆರಿಕನ್ ಕಾಶ್ ಅವರು ಗೌರವಾನ್ವಿತ ಅಟಾರ್ನಿ ಜನರಲ್ ಪಾಮ್ ಬೋಂಡಿ ಅವರ ನೇತೃತ್ವದಲ್ಲಿ ಎಫ್‌ಬಿಐಗೆ
ನಿಷ್ಠೆ, ಶೌರ್ಯ ಮತ್ತು ಸಮಗ್ರತೆಯನ್ನು
ಪುನಃಸ್ಥಾಪಿಸಲು ಕೆಲಸ ಮಾಡುತ್ತಾರೆʼ ಎಂದು ಹೇಳಿದ್ದಾರೆ.
"ರಷ್ಯಾ, ರಷ್ಯಾ,
ರಷ್ಯಾ"
ಸುಳ್ಳನ್ನು
ಬಹಿರಂಗಪಡಿಸುವಲ್ಲಿ
ಅವರು ನಿರ್ಣಾಯಕ ಪಾತ್ರವನ್ನು ವಹಿಸಿದ್ದರು.
ಸತ್ಯ, ಹೊಣೆಗಾರಿಕೆ ಮತ್ತು ಸಂವಿಧಾನದ ಪರವಾಗಿ ಸ್ಥಿರವಾಗಿ ನಿಂತಿದ್ದಾರೆ.
ನನ್ನ ಮೊದಲ ಅವಧಿಯಲ್ಲಿ ಕಾಶ್ ಅವರು ರಕ್ಷಣಾ ಇಲಾಖೆಯಲ್ಲಿ ಸಿಬ್ಬಂದಿ ಮುಖ್ಯಸ್ಥರ ಸ್ಥಾನ
ಹೊಂದಿದ್ದರು. ರಾಷ್ಟ್ರೀಯ ಗುಪ್ತಚರ ವಿಭಾಗದ ಉಪ
ನಿರ್ದೇಶಕರು ಮತ್ತು ರಾಷ್ಟ್ರೀಯ ಭದ್ರತಾ ಮಂಡಳಿಯಲ್ಲಿ ಭಯೋತ್ಪಾದನೆ ನಿಗ್ರಹದ ಹಿರಿಯ ನಿರ್ದೇಶಕರಾಗಿದ್ದರು” ಎಂದು ಸಂದೇಶದಲ್ಲಿ ತಿಳಿಸಿದ್ದಾರೆ.
ಜಾಗತಿಕ ಮತ್ತು ದೇಶೀಯ ವಿಷಯಗಳ ಕುರಿತು ಕಾಶ್ ಪಟೇಲ್ ಅವರ ಅಭಿಪ್ರಾಯಗಳು ಅಮೆರಿಕದ ಮುಖ್ಯವಾಹಿನಿಯ ಮಾಧ್ಯಮದಿಂದ ಭಿನ್ನವಾಗಿರುವುದು ಎದ್ದು ಕಾಣುತ್ತದೆ. ಭಾರತೀಯ-ಅಮೆರಿಕನ್ ಮತ್ತು ಟ್ರಂಪ್
ನಿಷ್ಠಾವಂತರಾದ
ಪಟೇಲ್ ಅವರು ಅಯೋಧ್ಯೆಯ ರಾಮ ಮಂದಿರದ ಬೆಂಬಲದ ಪ್ರಬಲ ಧ್ವನಿಯಾಗಿದ್ದಾರೆ.
ಪಾಶ್ಚ್ಯಾತ್ಯ ಮಾಧ್ಯಮ ನಿರೂಪಣೆಗಳು ಐತಿಹಾಸಿಕ ಮಹತ್ವವನ್ನು ನಿರ್ಲಕ್ಷಿಸಿವೆ
ಎಂಬುದಾಗಿ ಕಾಶ್ ಪಟೇಲ್ ಹೇಳಿದ್ದರು.
ಪಾಶ್ಚ್ಯಾತ್ಯ ಮಾಧ್ಯಮಗಳ ಟೀಕೆಗಳು ಭಾರತ ಮತ್ತು ಪ್ರಧಾನಿ
ನರೇಂದ್ರ ಮೋದಿಯನ್ನು ಗುರಿಯಾಗಿಸಿಕೊಂಡ "ತಪ್ಪು ಪ್ರಚಾರ" ಎಂದು ಅವರು ವಿವರಿಸಿದ್ದರು.
ರಾಮ ಮಂದಿರದ ಪ್ರತಿಷ್ಠಾಪನೆಯ ಸಮಯದಲ್ಲಿ, ʼರಾಮ ಮಂದಿರ ನಿರ್ಮಾಣದಿಂದ ತಮಗೆ ತೊಂದರೆಯಾಗಿದೆʼ ಎಂದು ʼವಾಯ್ಸ್ ಆಫ್ ಅಮೇರಿಕʼ ಕ್ಕೆ ಹೇಳುವ ಮೂಲಕ ಯುಎಸ್ ಕಮಿಷನ್ ಆನ್ ಇಂಟರ್ನ್ಯಾಷನಲ್ ರಿಲಿಜಿಯಸ್ ಫ್ರೀಡಂ (USCIRF) ಕಳವಳ ವ್ಯಕ್ತಪಡಿಸಿತ್ತು. ಅದೇ ರೀತಿ, ದಿ ನ್ಯೂಯಾರ್ಕ್ ಟೈಮ್ಸ್ ಇದನ್ನು "ಹಿಂದೂ-ಫಸ್ಟ್ ಇಂಡಿಯಾ ಕಡೆಗೆ ವಿಜಯೋತ್ಸವ" ಎಂದು ಕರೆದಿತ್ತು. "ಅಯೋಧ್ಯೆ ರಾಮಮಂದಿರ: ಭಾರತದ ಪ್ರಧಾನಿ ಮೋದಿ ಧ್ವಂಸಗೊಂಡ ಬಾಬರಿ ಮಸೀದಿ ಸ್ಥಳದಲ್ಲಿ ಹಿಂದೂ ದೇವಾಲಯವನ್ನು ಉದ್ಘಾಟಿಸಿದರು." ಎಂದು ಸಿಎನ್ ಎನ್ ವರದಿ ಮಾಡಿತ್ತು. ಇವುಗಳನ್ನು ಟೀಕಿಸಿದ್ದ ಕಾಶ್ ಪಟೇಲ್ ʼಅಮೆರಿಕದ ಮಾಧ್ಯಮವು ದೇವಾಲಯದ ಐತಿಹಾಸಿಕ ಬೇರುಗಳನ್ನು ನಿರ್ಲಕ್ಷಿಸಿ, ಕಳೆದ 50 ವರ್ಷಗಳ ಮೇಲೆ ಗಮನ ಕೇಂದ್ರೀಕರಿಸಿದೆʼ ಎಂದು ಆಪಾದಿಸಿದ್ದರು.
"ನೀವು ಹಿಂದೂ ಅಥವಾ ಮುಸ್ಲಿಮ್ ಆಗಿರಲಿ ಅಥವಾ ಇಲ್ಲದಿರಲಿ ಈ ವಿಚಾರ ಸತ್ಯ. 1500 ವರ್ಷಗಳ ಹಿಂದೆ ಹಿಂದೂ ಪಂಥೀಯರ ಸರ್ವೋತ್ಕೃಷ್ಟ ದೇವರುಗಳಲ್ಲಿ ಒಂದಕ್ಕೆ ಹಿಂದೂ
ದೇವಾಲಯವಿತ್ತು, ಅದನ್ನು ಉರುಳಿಸಲಾಯಿತು ಮತ್ತು ಅದನ್ನು ಮರಳಿ ಪಡೆಯಲು ಅವರು 500 ವರ್ಷಗಳಿಂದ ಪ್ರಯತ್ನಿಸುತ್ತಿದ್ದಾರೆ. ವಾಷಿಂಗ್ಟನ್ ಸಂಸ್ಥೆಗಳು
ಇತಿಹಾಸದ ಈ ಭಾಗವನ್ನು ತಮ್ಮ ಜಾಣತನಕ್ಕೆ ತಕ್ಕಂತೆ ಮರೆತಿವೆ ”ಎಂದು ಕಾಶ್ ಪಟೇಲ್ ಕಳೆದ ಫೆಬ್ರುವರಿಯಲ್ಲಿ ಹೇಳಿದ್ದರು.
ವಿಡಿಯೋ ನೋಡಲು ಕೆಳಗಿನ ಚಿತ್ರ ಕ್ಲಿಕ್ ಮಾಡಿರಿ: